ನೋಡು ಅಲ್ಲಿ ದೂರದಲ್ಲಿ
ಕೆಸರು ನೀರಗದ್ದೆಯಲ್ಲಿ
ರೈತ ತನ್ನ ಗದ್ದೆಯನ್ನ
ಹೂಡುತಾನೆ
ಓss ಎಂದು ಹೊಲವನಿಂದು
ಹೂಡುತಾನೆ

ಎತ್ತುಗಳಿಗೆ ನೊಗವ ಕಟ್ಟಿ
ನೇಗಿಲಿಟ್ಟು ಹಗ್ಗ ಸುತ್ತಿ
ಹಿಡಿಕೆ ಹಿಡಿದು ಮುಂದೆ ನಡೆದು
ಹೂಡುತಾನೆ
“ಹೈ”ಯೆಂದು ಹೊಲವನಿಂದು
ಹೂಡುತಾನೆ

ಬಲದ ಕೈಲಿ ಇರುವ ಬೆತ್ತ
ಹಿಡಿದು ಎತ್ತಿ ತೋರಿಸುತ್ತ
ರೈತನಿವನು ಹೊಲವ ತಾನು
ಹೂಡುತಾನೆ
ಹೂಡುವವನು ತನಗೆ ತಾನು
ಹಾಡುತಾನೆ