ಮನೆಯ ಬಿಟ್ಟು ಬಂದ ಕಿಟ್ಟು
ಕಡಲೆ ಕೊಂಡು ಕಾಸು ಕೊಟ್ಟು
ತಾನೆ ಎಲ್ಲ ತಿನಲು ಮೆಲ್ಲ
ಮರೆಗೆ ಓಡಿದ

ಆಗ ಒಂದು ಕಾಗೆ ಬಂದು
ಬಿದ್ದ ತುಂಡು ರೊಟ್ಟಿ ಕಂಡು
ಗೆಲವಿನಿಂದ ಹಂಚಿ ತಿಂದ
ಕಡೆಗೆ ನೋಡಿದ

ಒಡನೆ ಇಂದು ಕಾಗೆ ಬಂದು
ಹಂಚಿ ತಿಂದು ಪಾಠವೊಂದು
ಕಲಿಸಿತೆಂದು ಕಿಟ್ಟು ಅಂದು
ಮನದಿ ತಿಳಿದನು

ಬಳಿಕ ಚಿಣ್ಣ ಗೆಳೆಯ ರನ್ನ
ಕರೆದು ತನ್ನ ಕಡಲೆಯನ್ನ
ಹಂಚಿ ಕೊಟ್ಟು ತಿಂದು ಕಿಟ್ಟು
ನಕ್ಕು ನಲಿದನು