ಹಕ್ಕಿಯಾಗ ಬೇಕು ನಾನು
ಹಕ್ಕಿಯಾಗ ಬೇ-ಕು

ನಾನು ಹಕ್ಕಿ ಆಗಬೇಕು
ನನಗೆ ಜೋಡು ರೆಕ್ಕೆ ಬೇಕು
ಕೊಕ್ಕು ಪುಕ್ಕ ಇರಲು ಬೇಕು
ಎರಡು ಕಾಲು ಸಾಕೆ ಸಾಕು…….

ಹಕ್ಕಿ ನಾನು ಹಾರಬೇಕು
ಮೇಲೆ ಮೇಲೆ ಏರಬೇಕು
ದೂರ ದೂರ ಸೇರಬೇಕು
ನೂರು ಹೊಸತು ಕಾಣಬೇಕು….

ಗುಡ್ಡ ಬೆಟ್ಟ ಹತ್ತಬೇಕು
ಗದ್ದೆ ತೋಟ ಸುತ್ತಬೇಕು
ಹಣ್ಣು ಕಾಳು ತಿನ್ನಬೇಕು
ಹಾಡಿ ಕುಣಿದು ತಣಿಯಬೇಕು……