ತಿಂದ ಹಣ್ಣ ಸಿಪ್ಪೆಯನ್ನ
ಹಾದಿಗೆಸೆದ ಕಿ-ಟ್ಟು
ದಾರಿ ಬೇಗ ಸಾಗುವಾಗ
ಜಾರಿ ಬಿದ್ದ ಪು-ಟ್ಟು

ಬಿದ್ದ ಪುಟ್ಟು ಎದ್ದು ಬಿಟ್ಟು
ಕಿಟ್ಟನೆಡೆಗೆ ಬಂ-ದು
ಹಿಡಿದು ಜುಟ್ಟು-ಬಗ್ಗಿಸಿಟ್ಟು
ಕೊಟ್ಟ ಗುದ್ದು ಒಂ-ದು

ಗುದ್ದು ತಿಂದ ನೋವಿನಿಂದ
ಕಿಟ್ಟು ಕೂಗಿ ಕೊಂ-ಡ
ಬಿದ್ದ ಬೇನೆಯಿಂದ ತಾನೆ
ಪುಟ್ಟು ಅಳುತ ನಿಂ-ದ

ದಾರಿಯಲ್ಲಿ ಸಿಪ್ಪೆ ಚೆಲ್ಲಿ
ಪೆಟ್ಟು ತಿಂದ ಕಿ-ಟ್ಟು
ಗಮನವಿರದೆ ಹಾದಿ ನಡೆದ
ನೋವುಗೊಂಡ ಪು-ಟ್ಟು