ಹಳ್ಳಿಯ ನೆಲದ
ಕೆಸರಿನ ಹೊಲದ
ಒಳ್ಳೆಯ ಅಣ್ಣ ರೈತಣ್ಣ

ಹಗಲಿರುಳೆಲ್ಲ
ದುಡಿಯಲು ಬಲ್ಲ
ಕೆಲಸದ ಅಣ್ಣ ರೈತಣ್ಣ

ಬಗೆ ಬಗೆ ಬೆಳೆಯ
ಬೆಳೆಸುವ ಗೆಳೆಯ
ಈತನೆ ತಿಳಿಯ-ರೈತಣ್ಣ

ನಾಡಿಗೆ ಅನ್ನ
ನೀಡುವ ಅಣ್ಣ
ಬೇರಾರಣ್ಣ – ರೈತಣ್ಣ