ಕಚ್ಚೆ ಹಾಕಿ ಸೀರೆಯುಟ್ಟು
ಕಾಲುಗಳಲಿ ಗೆಜ್ಜೆ ತೊಟ್ಟು
ಚೆಲುವೆ ಇವಳು ನರ್ತಿಸುವಳು
ಥಕ್ಕ ಥಕ್ಕ ಥೈ
ತಾಳ ಹಾಕಿದಂತೆ ಗೆಜ್ಜೆ
ಹಾಡು ಸಾಗಿದಂತೆ ಹೆಜ್ಜೆ
ಇಡುತ ಇವಳು ನರ್ತಿಸುವಳು
ಥಕಿಟ ತೋನ್ನ ಥೈ
ಬಾಗಿ ಬಳುಕಿ ಬಳ್ಳಿಯಂತೆ
ಬೆಳಕಿನಲ್ಲಿ ಬೆಳ್ಳಿಯಂತೆ
ಮಿನುಗಿ ಇವಳಲು ನರ್ತಿಸುವ ಳು
ಧಿಮ್ಮಿ ಥಕ್ಕ ಥೈ
ಮೋರೆಯಲ್ಲೆ ನೂರು ನೋಟ
ಕಣ್ಣಿನಲ್ಲೆ ಬೊಂಬೆಯಾಟ
ತೋರಿ ಇವಳು ನರ್ತಿಸುವಳು
ಥಕಿಟ ಧಿಕಿಟ ಥೈ
Leave A Comment