ಬೆಕ್ಕಮ್ಮನನು ಮನೆಯಲೆ ಬಿಟ್ಟು
ಸಿನಿಮಕೆ ಹೋದನು ಬೆಕ್ಕಪ್ಪ
ಚಿತ್ರವ ನೋಡುತ ಬಲು ಖುಷಿ ಪಟ್ಟನು
ಸುತ್ತಲು ಕತ್ತಲು ಇತ್ತಪ್ಪ

ಆಗಲೆ ಕೇಳಿತು ಕಿಚಿ ಕಿಚಿ ಸದ್ದು
ಅಡಗಿದ ಇಲಿಯನು ಅವ ಕಂಡ
ಹಿಡಿದನು ಕೊಂದನು ತಿಂದನು ಮನೆ ಕಡೆ
ಬಂದನು ಬೆಕ್ಕಮ್ಮನ ಗಂಡ

ಗಂಡನ ಕಂಡಳು ಹೆಂಡತಿ ಎಂದಳು
‘ಇಂದಿನ ಸಿನಿಮಾ ಹೇಗಿತ್ತು?’
ಥಟ್ಟನೆ ಆತನು ಉತ್ತರ ಕೊಟ್ಟನು
‘ತಿಂದುದು ನಿಜಕೂ ರುಚಿಯಿತ್ತು’