ಅಂದದ ನವಿಲೇ
ಚಂದದ ನವಿಲೇ
ಬಣ್ಣದ ನವಿಲೇ ಕುಣಿದಾಡು

ಗುಡುಗಿನ ಸದ್ದು
ಕೇಳುತ ಎದ್ದು
ಜತೆಯನು ಕೂಡುತ ನಲಿದಾಡು

ಭಾರಿ ವಿಚಿತ್ರ
ಗರಿಗಳ ಛತ್ರಗಳ
ಅರಳಿಸಿ ಥಕ ಥೈ ಕುಣಿದಾಡು

ನಿನ್ನು ಕಂಡು
ಸಂತಸಗೊಂಡು
ಜನಮನ ತಣಿಯಲಿ ನಲಿದಾಡು