ಉಣಿಸು ಉಣಿಸಿ ತಿನಿಸು ತಿನಿಸಿ
ನಲಿಸುವವಳು ಅ-ಮ್ಮ
ಉಡುಗೆ ಉಡಿಸಿ ತೊಡಿಗೆ ತೊಡಿಸಿ
ನಗಿಸುವವಳು ಅ-ಮ್ಮ
ನೀರು ಕಾಸಿ ಎಣ್ಣೆ ಪೂಸಿ
ಮೀಸುವವಳು ಅ-ಮ್ಮ
ಬಟ್ಟೆ ಬರೆಯ ಧೂಳು ಕೊಳೆಯ
ತೊಳೆಯುವವಳು ಅ-ಮ್ಮ
ಹಾಸು ಹಾಸಿ ಹೊದಿಕೆ ಹೊದೆಸಿ
ಮಲಗಿಸುವಳು ಅ-ಮ್ಮ
ಬೇನೆ ಬರಲು ಮದ್ದು ಕೊಡಲು
ಮರೆಯದವಳು ಅ-ಮ್ಮ
ಮಾತು ಕಲಿಸಿ ನೀತಿ ತಿಳಿಸಿ
ನಡೆಸುವವಳು ಅ-ಮ್ಮ
ಚಿನ್ನ ರನ್ನ ಎಂದು ನನ್ನ
ಮುದ್ದಿಸುವಳು ಅ-ಮ್ಮ
Leave A Comment