“ಗಿಡುಗಾ ಗಿಡುಗಾ ಗಿಡುಗಾ
ಎಲ್ಲಿಗೆ ಹಾರುವೆ ತುಡುಗಾ
ಕೇಳುವೆ ನಾನೇ ಈಗ
ಹೇಳೋ ನೀನೇ ಬೇಗ”
“ಹುಡುಗಾ ಹುಡುಗಾ ಹುಡುಗಾ
ನಾನೇ ಬಾನಿನ ಹಡಗಾ
ಗಾಳಿಗೆ ಮೇಲಕೆ ಹಾರಿ
ಮಾಡುವೆ ಮೋಡ ಸವಾರಿ”
“ಏರಿರೆ ಮೋಡದ ಪೀಠ
ಕಾಣುವ ಚಂದದ ನೋಟ
ಯಾವುದು ಹೇಳುವಿಯೇನು
ತಿಳಿಯಲು ಬಯಸುವೆ ನಾನು”
ಏರಿದ ಮೇಲೆ ಮೋಡ
ನೋಡಿದರೂನೂ ಕೂಡ
ಕಾಣುವುದೊಂದೇ-ಕೊಳ್ಳೆ
ರೈತನ ಕೋಳಿಯ ಪಿಳ್ಳೆ
Leave A Comment