ಜಟ್ಟಿಗಳಿಬ್ರು ಹೋರಾಡ್ತಿದ್ರು
ತೊಡೆ ತೋಳುಗಳನು ತಟ್ಟಿ
ಕೆಡವಿ ನಿಲ್ಲಲಿಕೆ ಸೆಣಸಾಡ್ತಿದ್ರು
ಎದುರಾಳಿಯ ಎದೆ ಮೆಟ್ಟ
ಭಾರೀ ಸಂಖ್ಯೆಯ ಜನ ಸೇರಿದ್ರು
ತುಂಬಿತು ಸುತ್ತಣ ಜಾಗ
ಚಪ್ಪಳೆ ತಟ್ಟುತ ಸಿಳ್ಳೆಯ ಹೊಡೆದು
ಹುರಿದುಂಬಿಸಿದರು ಬೇಗ
ಚಟ್ಟಗ ಚತುರನು ಎತ್ತಿ ಬಿಸಾಡಲು
ಬಿದ್ದನು ಒಬ್ಬನು ಮಲ್ಲ
ಬಿದ್ದವ ಏಳುತ ನುಡಿದನು ಮೆಲ್ಲ-
‘ಮೀಸೆಗೆ ಮಣ್ಣಾಗಲಿಲ್ಲ’
Leave A Comment