ಹಾರುತ ಹಾರುತ ಬಾರೆಲೆ ಚಿಟ್ಟೆ
ನೀ ನೆನ್ನಯ ಬಳಿಗೆ

ನಿನ್ನ ಮನೋಹರ ಮೂರ್ತಿಯ ನೋಡು
ನಿಲ್ಲೊಂದರೆ ಘಳಿಗೆ

ಕಾಮನ ಬಿಲ್ಲಿನ ಬಣ್ಣಗಳೆಲ್ಲವು
ನಿನ್ನೊಳು ಸೆರೆ ಸಿಕ್ಕಿ

ರೆಕ್ಕೆಯ ಕಪ್ಪೂ ನೀಲಿಯ ಒಪ್ಪೂ
ಬಿಳಿ ಹಳದಿಯ ಚುಕ್ಕಿ

ಹೂವಿಂದ ಹೂವಿಗೆ ಹಾರುತ ಹಾರುತ
ಹೀರುವೆ ಮಕರಂದ

ಹೂವಿನ ಬಾಳಿನ ನಿನಗಾ ಹೂಗಳ
ಒಡನಾಟವೆ ಚಂದ

ನಿನ್ನಯ ಜೀವನ ಬಲು ಕಿರಿದಾದರು
ಸುಖವಿದೆ ಹೆಚ್ಚಿನದು

ಬಣ್ಣದ ಬೆಡಗಿನ ರೂಪವು ನಿಜಕೂ
ಲೋಕದ ಮೆಚ್ಚಿನದು