ಮನೆಯೆ ಮನೆ ನಮ್ಮ ಮನೆ
ಬೇರೆ ಮನೆಯೆ ಸುಮ್ಮನೆ

ಅಪ್ಪ ಅಮ್ಮ ಇರುವ ಮನೆ
ಅಕ್ಕ ಅಣ್ಣ ಕರೆವ ಮನೆ
ತಂಗಿ ತಮ್ಮ ನಲಿವ ಮನೆ
ಇದುವೆ ನಮ್ಮ ನೆಲೆಯ ಮನೆ . . .

ಹುಟ್ಟಿ ನಾವು ಬೆಳೆವ ಮನೆ
ನಗುತ ಕಾಲ ಕಳೆವ ಮನೆ
ಓಡಿ ಆಡಿ ಕುಣಿವ ಮನೆ
ಹಾಡು ಹಾಡಿ ತಣಿವ ಮನೆ . . .

ನಾವು ಮಾತು ಕಲಿವ ಮನೆ
ಉಂಡು ಉಟ್ಟು ನಲಿವ ಮನೆ
ಕಷ್ಟದಲ್ಲಿ ಕರೆವ ಮನೆ
ಕನಸಿನಲ್ಲಿ ಬರುವ ಮನೆ . . .