ಚಾಕಲೇಟು ಚಾಕಲೇಟು
ಬೇಕೆ ನಿಮಗೆ ಹೇಳಿರಿ
ಚಾಕಲೇಟು ಬೇಕು ಎಷ್ಟು
ಕೊಡುವೆ ಅಷ್ಟು ಕೇಳಿರಿ

ಜೇನು-ಬೆಲ್ಲಕ್ಕಿಂತ ಎಲ್ಲ
ಇದರ ಸವಿಯು ಹೆಚ್ಚಿದೆ
ಚಂದ ಹೊದಿಕೆ ಇರುವ ಇದಕೆ
ಪರಿಮಳವನು ಹೆಚ್ಚಿದೆ

ಮಕ್ಕಳೀಗ ಬನ್ನಿ ಬೇಗ
ಕಾಸು ಗೀಸು ತನ್ನಿರಿ
ಕಾಸು ಕೊಟ್ಟು ಚಾಕಲೇಟು
ಕೊಂಡು ತಂದು ತಿನ್ನಿರಿ