ಮಣ್ಣಿನ ಹೆಂಟೆಯು ಒಂದೆಡೆ ಇತ್ತು
ಮುತ್ತುಗ ದೊಂದೆಲೆ ಬಳಿಯಲೆ ಬಿತ್ತು
ಒಂದನು ಒಂದು ನೋಡಿದವು
ತಮ್ಮಲೆ ಗೆಳೆತನ ಮಾಡಿದವು

ಜಡಿಮಳೆ ಸುರಿಯಲು ತೊಡಗಿರುವಾಗ
ಆ ಎಲೆ ಹತ್ತಿರ ಓಡುತ ಬೇಗ
ಹೆಂಟೆಯೆ ಮುಚ್ಚಿಯೆ ಬಿಟ್ಟಿತ್ತು
ಹೆಂಟೆಗೆ ರಕ್ಷಣೆ ಕೊಟ್ಟಿತುತು

ಎಲೆಯನು ಎತ್ತಿ ಬಿಸಾಡುವೆನೆಂದು
ಸುಂಟರ ಗಾಳಿಯು ಬೆದರಿಸಿದಂದು
ಎಲೆಯಲೆ ಹೆಂಟೆಯು ಕೂಡಿತ್ತು
ಗೆಳೆಯನ ರಕ್ಷಣೆ ಮಾಡಿತ್ತು

ಸಂಕಟ ಸಮಯದಿ ಒಂದಕೆ ಒಂದು
ನೆರವನು ನೀಡುತ ಅವು ಇರುವಂದು
ಜೀವನದಲಿ ಬಲು ಸೊಗಸಿತ್ತು
ಸುಖವೂ ಶಾಂತಿಯು ನೆಲೆಸಿತ್ತು