ಕೈ ಬಾಯಿ ಕಾಲುಗಳು
ಸೇರಿ ಸಭೆ ಮಾಡಿ
ಬೆಳೆದ ಹೊಟ್ಟೆಯ ನೋಡಿ
ಸಿಟ್ಟಿನಲಿ ಕೂಡಿ

‘ಆಹಾರ ದೊರಕಿಸಲು
ದುಡಿದುಡಿದು ಸೋತು
ನಾವಿರಲು ಈ ಹೊಟ್ಟೆ
ತಿನ್ನುವುದು ಕೂತು’

ಎನುತ ದುಡಿಯದೆ ಇದ್ದು
ಗೊಣಗುತಿರೆ ಮೆಲ್ಲ
ಹೊಟ್ಟೆಯೊಡನೆಯೆ ಸೊರಗಿ
ಸಣ್ಣಾದುವೆಲ್ಲ

ಸತ್ಯ ಹೊಳೆಯಿತು ಕೊನೆಗೆ
ತಿಳಿದವೋ ತಾವು
‘ಒಬ್ಬನೊಬ್ಬನ ಹೊಂದಿ
ಇದ್ದೇವೆ ನಾವು’