ದೇವ ತಾನು ಜಗದ ತಂದೆ
ಅವನೆ ಸರುವ ಶಕ್ತನು
ತನ್ನ ಮನೆಗೆ ಬರುವೆನೆಂದು
ಕಾದು ಕುಳಿತ ಭಕ್ತನು-

ಚಳಿಗೆ ಮಳೆಗೆ ದುಡಿಯುತಿದ್ದ
ಬಡವನನ್ನು ಕಂಡನು
ತುತ್ತು ಅನ್ನ ಅವಗೆ ನೀಡಿ
ಬಳಿಕ ತಾನು ಉಂಡನು

ರೋಗದಿಂದ ನರಳುತಿದ್ದ
ಮುದುಕಿ ಅತ್ತ ಸಾಗಲು
ಹಾಲು ಹಣ್ಣು ಕೊಟ್ಟನವನು
ಅವಳ ಹಸಿವು ನೀಗಲು

ಅಂದು ರಾತ್ರಿ ಕನಸಿನಲ್ಲಿ
ಕಾಣಿಸಿದನು ದೇವನು
ಅಪ್ಪಿ ಹಿಡಿದು ಬಕಲುತನಲ್ಲಿ
ನುಡಿದನಿಂತು ಕಾವನು

“ಪ್ರೀತಿ ಕರುಣೆಯಿರುವುದೆಲ್ಲಿ
ನಾನು ಅಲ್ಲೆ ಇರುವೆನು
ಜನಕೆ ಸೇವೆ ಸಲುವುದೆಲ್ಲಿ
ಓಡಿ ಅಲ್ಲಿ ಬರುವೆನು”