ಕಪಿಲವಸ್ತು ಎನುವ ಪುರದ
ರಾಯ ಗುವರ ನಾ-ಗಿ
ಪುಟ್ಟ ಬಳೆದ ಮಹಿಮ ನಿನಗೆ
ವಂದಿಸುವೆನು ಬಾ-ಗಿ

ಎಳವೆಯಲ್ಲಿ ಸಕಲ ವಿಧದ
ಸ್ವರ್ಗ ಸುಖವ ನುಂ-ಡೆ
ಅಲ್ಲಿ-ಇಲ್ಲಿ ಎಲ್ಲೊ ಕೆಲವು
ಸಾವು-ನೋವು ಕಂ-ಡೆ

ನಿನ್ನ ಎದೆಯು ಕರಗಿ ಹೋಗಿ
ಮನದಿ ಮರುಕ ಪ-ಟ್ಟೆ
ಜಗದ ನಿತ್ಯ ಸುಖದ ಹಾದಿ
ಕಾಂಬ ಪಣವ ತೊ-ಟ್ಟೆ

ಬಂಧು-ಬಳಗ ರಾಜ್ಯ ಭೋಗ
ಸರ್ವ ಸುಖವು ತ್ಯಾ-ಜ್ಯ
ಎಂದು ಜ್ಞಾನ ಚಿಂತನೆಯಲೆ
ಅಲೆದೆ ರಾಜ್ಯ ರಾ-ಜ್ಯ

ಹಲವು ಕಾಲ ಗೈದ ತಪದ
ಪುಣ್ಯ ಫಲವು ಮಾ-ಗಿ
ನಿನ್ನ ಮನದ ಮನೆಗೆ ಬಂತು
ದಿವ್ಯ ಜ್ಞಾನ ವಾ-ಗಿ

ರಾಜಯೋಗಿ ಬುದ್ಧನಾಗಿ
ಧರೆಯ ಜನಕೆ ನಿ-ನ್ನ
ಧರ್ಮ ತತ್ವಗಳನು ಸಾರಿ
ಬೆಳಕೆ ನಿತ್ತೆಯ-ಣ್ಣ

‘ಪ್ರಾಣಿ ಹಿಂಸೆ ಗೆಳಸ ಬೇಡಿ
ಸತ್ಯ ನುಡಿಯಿರೆ-ಲ್ಲ
ವಿನಯ ಮೀರಿ ನಡೆಯಬೇಡಿ
ಸ್ವಾರ್ಥದೆಣಿಕೆ ಸ-ಲ್ಲ

ಒಂದೆ? ಎರಡೆ? ಲೆಕ್ಕವಿಲ್ಲ
ನಿನ್ನ ನುಡಿಯ ಮು-ತ್ತು
ಕೇಳಿ ಪಡೆದು ಲೋಕವೆಲ್ಲ
ಧನ್ಯ ಎನ್ನಿಸಿ-ತ್ತು