ಮೇವಾಡದ ಓ ರಾಣಾಪ್ರತಾಪನೆ
ರಜಪುತ ರಾಜ ಶಿಖಾಮಣಿಯೆ
ಧೈರ್ಯೋತ್ಸಾಹದ ಚಿಮ್ಮುವ ಚಿಲುಮೆಯೆ
ವಂದಿಸುವೆನು ವೀರಾಗ್ರಣಿಯೆ

ಕಣ ಕಣದೊಳಗೂ ದೇಶಪ್ರೇಮವ
ಸೂಸುವ ರಕುತದ ಗುಂಡಿಗೆಯು
ಸಿಡಿಲೇ ಎರಗಲಿ ಗುಂಡೇ ಸಿಡಿಯಲಿ
ಬೆದರದು ನಿನ್ನಯ ಗಂಡೆದೆಯು

ಅಕಬರನೊಡನೆಯೇ ಸೆಣಸಿದ ಸಾಹಸಿ
ಕುಂದದ ಶೌರ್ಯದ ಮೂರುತಿಯು
ಸುಖ-ಸೌಭಾಗ್ಯಗಳಿಗೆ ಎರವಾದರು
ಸೋಲಿಗೆ ಸೋಲದ ಕೀರುತಿಯು

ಧರ್ಮಕೆ ಮಣಿಯುವ ಸೇವೆಗೆ ತಣಿಯುವ
ನಿರ್ಮಲ ಹೃದಯದ ಗಣನೀಯ
ಅಭಿಮಾನದ ರಣವೀರನೆ ಧೀರನೆ
ಬಾಗುವೆ ನಿನಗಿದೊ ಮಹನೀಯ