ವಿಶ್ವವಂದ್ಯ ಗಾಂಧಿ ತಾತ೫
ನಮ್ಮ ನಾಡ ಜ್ಯೋತಿಯು
ಪೂರ್ಣಚಂದ್ರನಂತೆ ನಗುವ
ಹಿರಿಯ ವಿನಯ ಮೂರ್ತಿಯು

ಅವನೆ ನಮ್ಮ ಹುಟ್ಟುನಾಡ
ಪಾರತಂತ್ಯ್ರ ಕಳೆದನು
ದೇಶಕ್ಕಾಗಿ ತನ್ನ ಬಾಳ
ಮೀಸಲಿಟ್ಟು ದುಡಿದನು

ಸತ್ಯ ಶಾಂತಿ ಎಂಬುದವನ
ದಿವ್ಯ ಶಕ್ತಿ ಮಂತ್ರವು
ಆಸೆಯಿರದ ಪ್ರೀತಿ ಅವನ
ಜಗವ ಗೆಲಿದ ತಂತ್ರವು

ದೀನ ದಲಿತ ಜನರ ಸೇವೆ
ಅವನ ದೇವ ಪೂಜೆಯು
ಜಗದ ಸೊಗಕೆ ದುಡಿಯಿರೆಂದೆ
ಅವನ ಧರ್ಮ ಬೋಧೆಯು

ಬನ್ನಿರಣ್ಣ ಬಾಪು ಜೀಯ
ಪುಣ್ಯ ನಾಮ ನೆನೆಯುವ
ಅವನ ಸತ್ಯ ಮಾರ್ಗದಲ್ಲೆ
ಮುಂದೆ ಮುಂದೆ ನಡೆಯುವ