ಹೈದರ ಆಲಿಯ ವೀರ ಕುಮಾರನೆ
ತಲೆ ಬಾಗುವೆ ಟಿಪ್ಪು
‘ಮೈಸೂರಿನ ಹುಲಿ’ ಎನ್ನುವ ಕೀರುತಿ
ನಿನಗದು ಬಲು ಒಪ್ಪು

ದೇಶವ ನುಂಗಲು ಹಂಚಿಕೆ ಹೂಡಿದ
ಬಿಳಿಯರ ಹೊಡೆದಟ್ಟ-
ಸಾಹಸದಿಂದಲೆ ಸರ್ವ ಸ್ವತಂತ್ರದ
ಭಾರತವನು ಕಟ್ಟಿ-

ಮೆರೆಸುವ ಬಾಳಿನ ಬಯಕೆಯ ಸಲಿಸಲು
ಜೀವದ ಪಣವಿಟ್ಟೆ
ನಾಡಿನ ದೇವಿಗೆ ದೇಹದ ನೆತ್ತರ
ತರ್ಪಣವನು ಕೊಟ್ಟೆ

ಕನ್ನಡ ರಾಜ್ಯದ ಪೌರವ ನಿನ್ನಯ
ನಾಮವು ಪಾವನವು
ದೇಶದ ರಕ್ಷಣೆಗಾಗಿಯೆ ಸಂದಿದೆ
ಸಾರ್ಥಕ ಜೀವನವು