ಭಾರತಾಂಬೆಯುದರದಲ್ಲಿ
ಜನಿಸಿ ಬಂದ ಹಿರಿಯನೆ
ಲೋಕಮಾನ್ಯ ನೆಹರು ನಿನಗೆ
ವಂದಿಸುವೆನು ಮಹಿಮನೆ

ಇದ್ದ ಭೋಗ ಭಾಗ್ಯವನ್ನು
ದೇಶಕ್ಕಾಗಿ ತ್ಯಜಿಸಿದೆ
ಪಾರತಂತ್ಯ್ರ ತೊಲಗುವಂತೆ
ಬಿಳಿಯರೆದುರು ಸೆಣಸಿದೆ

ರಾಜ್ಯ ಸೂತ್ರ ವಹಿಸಿ ಮತ್ತೆ
ಜನರ ಹಿತಕೆ ಹೆಣಗಿದೆ
ಒಳಿತಿನೆಡೆಗೆ ನಡೆಸಿ ನಾಡ
ಕೀರುತಿಯನು ಬೆಳಗಿದೆ

ಸತ್ಯದೆದುರು ಬಾಗಿ ನಡೆವ
ಶಾಂತಿ ತತ್ವಸಾಧಕ
ಅನ್ನೆಯಕ್ಕೆ ಮಣಿಯದಿರುವ
ಧೀರ ವೀರ ನಾಯಕ

ಭರತಮಾತೆ ನಿನ್ನ ತೆರದ
ಮಕ್ಕಳನ್ನೆ ಹಡೆಯಲಿ
ಶ್ರಮದ ನಮ್ಮ ದುಡಿಮೆಯಿಂದ
ದೇಶ ಏಳ್ಗೆ ಪಡೆಯಲಿ