ಚೆನ್ನು ದೇಶವು ನಮ್ಮ ದೇಶವು
ಗಣ್ಯ ದೇಶವು ಭಾರತ
ತೀರ್ಥ ಹರಿಯುವ ಕ್ಷೇತ್ರ ಮೆರೆಯುವ
ಪುಣ್ಯ ದೇಶವು ಭಾರತ
ಗುಡ್ಡ ಬೆಟ್ಟದ ಹಳ್ಳ ಕೊಳ್ಳದ
ನಾಡು ನಮ್ಮದು ಭಾರತ
ಬನದ ಹಸುರಿನ ಹೊಲದ ಪೈರಿನ
ಕಳೆಯ ದೇಶವು ಭಾರತ
ಯೋಗಿ ಯತಿಗಳ ಶಿಲ್ಪಿ ಕವಿಗಳ
ಹುಟ್ಟು ನಾಡಿದು ಭಾರತ
ರಾಜ ರಾಜರು ಧೀರ ವೀರರು
ಬಳೆದ ಬೀಡಿದು ಭಾರತ
ರಾಮಕೃಷ್ಣರ ಜಿನರ ಬುದ್ಧರ
ಜನ್ಮ ಭೂಮಿಯು ಭಾರತ
ತಿಲಕ ಗಾಂಧೀ ನೆಹರು ಮುಖ್ಯರ
ದೇಶ ನಮ್ಮದು ಭಾರತ
ಜಗಕೆ ಜ್ಞಾನದ ಬೆಳಕು ಬೀರಿದ
ನಾಡು ನಮ್ಮದು ಭಾರತ
ಸತ್ಯ ಶಾಂತಿಯ ದಯೆಯ ಧರ್ಮದ
ದೇಶ ನಮ್ಮದು ಭಾರತ
Leave A Comment