ಜಗದ ಪುಣ್ಯ ಭೂಮಿಯಲ್ಲಿ
ಭಾರತಾಂಬೆಯುದರದಲ್ಲಿ
ಮನುಜರಾಗಿ ಜನುಮ ತಳೆದ
ನಾವು ಭಾಗ್ಯವಂತರು
ನಾವೆ ಭಾಗ್ಯವಂಥರು

ಪಾರತಂತ್ಯ್ರ ತೊಲಗಿ ಹೋಗಿ
ನಮ್ಮ ದೇಶ ನಮ್ಮದಾಗಿ
ಮೆರೆವ ಸುದಿನ ಹುಟ್ಟಿ ಬಳೆದ
ನಾವು ಭಾಗ್ಯವಂತರು
ನಾವೆ ಭಾಗ್ಯವಂತರು

ಗಳಿಸಿದೀ ಸ್ವತಂತ್ರತೆಯೆನು
ಉಳಿಸಿಕೊಳುವ ಹಿರಿ ಹೊಣೆಯನು
ಜಾಣತನದಿ ನಿರ್ವಹಿಸಲು
ನಾವು ಭಾಗ್ಯವಂತರು
ನಾವೆ ಭಾಗ್ಯವಂತರು

ನಮ್ಮ ಸೇವೆಗೊಂಡು ದೇಶ
ಬೆಳಗಿ ನಿಂದು ಜಗಕೆ ತೋಷ
ನೀಡುವಂದು ಹೇಳಲೇನು
ನಾವು ಭಾಗ್ಯವಂತರು
ನಾವೆ ಭಾಗ್ಯವಂತರು

ont-s��1.`�[ ��Y family:Tunga;mso-ascii-font-family:”Times New Roman”; mso-hansi-font-family:”Times New Roman”‘>ನೆಹರು ಮುಖ್ಯರ
ದೇಶ ನಮ್ಮದು ಭಾರತ

 

ಜಗಕೆ ಜ್ಞಾನದ ಬೆಳಕು ಬೀರಿದ
ನಾಡು ನಮ್ಮದು ಭಾರತ
ಸತ್ಯ ಶಾಂತಿಯ ದಯೆಯ ಧರ್ಮದ
ದೇಶ ನಮ್ಮದು ಭಾರತ