ನಮ್ಮ ದೇಶ ಭಾರತ
ಹೇಳಿರಣ್ಣ ಹಿಗ್ಗುತ

ಭೇದ ಬುದ್ಧಿ ಬಿಟ್ಟು ಬಂದು
ರಾಷ್ಟ್ರ ಧ್ವಜವ ಹಿಡಿದು ನಿಂದು
ಸತ್ಯ ಶಾಂತಿ ಬಿಡದೆ ಇಂದು
ಹೆಜ್ಜೆ ಹೆಜ್ಜೆ ನಡೆವ ಮುಂದು . . .

ನೂರು ಕಷ್ಟ ನುಗ್ಗಿ ಬಂದು
ಸೋಲು ತಾನೆ ಅಡ್ಡ ನಿಂದು
ತಡೆದರೇನು – ನಿಲ್ಲೆವೆಂದು
ಹೆಜ್ಜೆ ಹೆಜ್ಜೆ ನಡೆವ ಮುಂದು . . .

ಹಾರದಿರುವ ಹಕ್ಕಿ ಬಂದು
ಗುರಿಯನೆಂದು ಸೇರದೆಂದು
ತಿಳಿದು ಒಳಿತಿನೆಡೆಗೆ ಯಿಂದು
ಹೆಜ್ಜೆ ಹೆಜ್ಜೆ ನಡೆವ ಮುಂದು . . .