ಭಾರತಾಂಬೆ ನನ್ನ ತಾಯಿ
ತಿಳಿದೆಯೇನು ನೀ -ನು
ಹೆಮ್ಮೆಯಿಂದ ಹೇಳುತ್ತೇನೆ
ಭಾರತೀಯ ನಾ-ನು

ಸೃಷ್ಟಿ ಸೊಬಗ ಸೀರೆಯುಟ್ಟ
ನಾಡ ದೇವಿ ತ-ನ್ನ
ಹೊಟ್ಟೆಯೆನುವ ಪೆಟ್ಟಿಯೊಳಗೆ
ಇಟ್ಟಿದಾಳೆ ಚಿ-ನ್ನ

ಧರ್ಮ ಎನುವ ಅಮೃತ ಸುರಿವ
ದೇಶ ಮಾತೆ ತಾ-ನು
ಸತ್ಯ ಶಾಂತಿಗಳನು ಮೆರೆದ
ಮಹಿಮಳಲ್ಲ ವೇ-ನು?

ಜಗಕೆ ಬೆಳಕು ಬೀರಿದವಳು
ಭರತ ಮಾತೆ ನ-ಮ್ಮ
ದೇವರಂಥ ಮಕ್ಕಳನ್ನು
ಪಡೆದು ಬೆಳಗಿ ದ-ಮ್ಮ

ಅಂದು ಇಂದು ಮುಂದು ನನಗೆ
ಅವಳೆ ತಾಯಿ ಸತ್ಯ
ಸೇವೆ ಮಾಡಿ ಅವಳ ಹಾಡಿ
ಹೊಗಳುತೇನೆ ನಿ-ತ್ಯ