ನಮ್ಮ ವೀರ ಚಿಣ್ಣರೆಲ್ಲ
ಓಡಿ ಬಂದು ಕೂಡಿರಿ
ರಾಷ್ಟ್ರ ಧ್ವಜವನೆತ್ತಿ ಹಿಡಿದು
ಮುಂದೆ ಮುಂದೆ ನಡೆಯಿರಿ

ನಮ್ಮ ದೇಶ ಮೆರೆಯಬೇಕು
ಪಾರತಂತ್ಯ್ರ ತೊಲಗಿದೆ
ನಾಡಿಗಾಗಿ ದುಡಿಯಬೇಕು
ಹಿರಿಯ ಹೊಣೆಯು ನಮಗಿದೆ

ಭೇದ ಭಾವ ದೂರವಿರಲಿ
ನಾವು ಐಕ್ಯಗೊಳ್ಳುವ
ಸ್ವಾರ್ಥದೆಣಿಕೆ ಮೆಟ್ಟಿ ನಿಂತು
ದೇಶ ಸೇವೆ ಗೈಯುವ

ಗಾಂಧಿ ಮಂತ್ರ ಜಪಿಸಿ ನಿತ್ಯ
ಕೆಚ್ಚಿನಿಂದ ನಡೆಯುವ
ದೇಶ ಹಿತಕೆ ದುಡಿದು ಮಡಿದು
ಅಮರರೆನಿಸಿಕೊಳ್ಳುವ