ಭಾರತ ವೀರರು ನಾವೆಲ್ಲಾ
ದೇಶವೆ ದೇವರು ನಮಗೆಲ್ಲಾ
ನಾವೆಲ್ಲವರೂ ಹುಟ್ಟಿದುದಿಲ್ಲಿ
ನಮ್ಮಯ ಹಿರಿಯರು ಬಾಳಿದುದಿಲ್ಲಿ
ಮಹಿಮರು ಮಾನ್ಯರು ಬೆಳಗಿದುದಿಲ್ಲಿ
ಕುಂದದ ಕೀರುತಿ ಹೊಂದಿದುದಿಲ್ಲಿ
ತೀರ್ಥದ ನದಿಗಳು ಹರಿಯುವುದಿಲ್ಲಿ
ಪುಣ್ಯ ಸ್ಥಳಗಳು ಮೆರೆಯುವುದಿಲ್ಲಿ
ಸೃಷ್ಟಿಯ ಚೆಲುವಿಕೆ ಕೂಡಿದುದಿಲ್ಲಿ
ಸಾವಿರ ಕಲೆಗಳು ಮೂಡಿದುದಿಲ್ಲಿ
ತಿಳಿವಿನ ದೀಪವು ಬೆಳಗಿದುದಿಲ್ಲಲಿ
ಸುಖವೂ ಶಾಂತಿಯು ನೆಲೆಸಿದುದಿಲ್ಲಿ
ತುಂಬಿದ ನೂರಾರ್ ವಿವಿಧತೆಯಲ್ಲಿ
ಕೂಡಿಯೆ ಬಂದಿದೆ ಏಕತೆಯಿಲ್ಲಿ
ನಮ್ಮಯ ಜೀವನ ಅರಳುವುದಿಲ್ಲಿ
ಬದುಕಿಗೆ ಆಸರೆ ದೊರೆಯುವುದಿಲ್ಲಿ
ಧರ್ಮವು ಕರ್ಮವು ನಡೆಯುವುದಿಲ್ಲಿ
ಜನುಮವು ಸಫಲತೆ ಪಡೆಯುವುದಿಲ್ಲಿ
Leave A Comment