ತಾಯಿಯಂತೆ ಜನ್ಮ ಕೊಟ್ಟ
ನಾಡು ನಮ್ಮ ಕನ್ನಡ
ತಂದೆಯಂತೆ ಅನ್ನವಿಟ್ಟ
ನಮ್ಮ ಬೀಡು ಕನ್ನಡ

ಗುರುವಿನಂತೆ ಬೆಳಕನಿತ್ತು
ಪೊರೆವ ನಾಡು ಕನ್ನಡ
ಗೆಳೆಯನಂತೆ ಗೆಲವು ನೀಡಿ
ಮೆರೆವ ನಾಡು ಕನ್ನಡ

ಬಳಗದಂತೆ ನಮಗೆ ಹಿತವ
ತರುವ ನಾಡು ಕನ್ನಡ
ತವರಿನಂತೆ ಕಷ್ಟದಲ್ಲಿ
ಕರೆವ ನಾಡು ಕನ್ನಡ

ತಂದೆ, ತಾಯಿ, ಬಂಧು, ಬಳಗ
ನಮ್ಮ ಭಾಗ್ಯ ಕನ್ನಡ
ನಾಡು, ಬೀಡು, ನುಡಿಯು, ಗುಡಿಯು
ನಮ್ಮದೆಲ್ಲ ಕನ್ನಡ