ಯಾವ ರಾಜ್ಯದಲ್ಲಿ ನಾನು
ಜೀವಿಸಿದ್ದ ರೇ-ನು?
ಭಾರತಾಂಬೆ ನನ್ನ ತಾಯಿ
ಭಾರತೀಯ ನಾ-ನು

ಯಾವ ಭಾಷೆಯನ್ನು ನಾನು
ಆಡುತ್ತಿದ್ದರೇ – ನು?
ಭಾರತಾಂಬೆ ನನ್ನ ತಾಯಿ
ಭಾರತೀಯ ನಾ-ನು

ಯಾವ ಧರ್ಮವನ್ನು ನಾನು
ನಂಬಿ ನಡೆದರೇ-ನು?
ಭಾರತಾಂಬೆ ನನ್ನ ತಾಯಿ
ಭಾರತೀಯ ನಾ-ನು

ಧನಿಕನೇನು? ಬಡವನೇನು?
ಸುಖಿಯೆ-ದುಃಖಿಯೇ-ನು?
ಭಾರತಾಂಬೆ ನನ್ನ ತಾಯಿ
ಭಾರತೀಯ ನಾ-ನು