ಭಾರತ ದೇಶದಿ ಹುಟ್ಟಿದ ನಾವು
ಈ ನೆಲದಲ್ಲಿಯೆ ಬದುಕುವ ನಾವು
ಸರುವರು ಒಂದೇ ಬಳ್ಳಿಯ ಮಿಡಿಗಳು
ನಾವೆಲ್ಲರು ಒಂದೇ
ಭಾರತಮಾತೆಯ ಕರುಳಿನ ಕುಡಿಗಳು
ನಾವೆಲ್ಲರು ಒಂದೇ

ತಮಿಳನೊ ತೆಲುಗನೊ ಭೇದವೆ ಬೇಡ
ನಮ್ಮವನೇ ಕಾಶ್ಮೀರಿಯು ಕೂಡ
ಒಗ್ಗಟ್ಟೇ ಬಲ ಯೋಚಿಸಿ ನೋಡ
ನಾವೆಲ್ಲರು ಒಂದೇ
ಕೂಡಿಯೆ ಬಾಳಲು ಮನವನು ಮಾಡ
ನಾವೆಲ್ಲರು ಒಂದೇ

ದೇವನೆ ಪ್ರೀತಿಯ ತಂದೆಯು ನಮಗೆ
ಭಾರತ ಮಾತೆಯೆ ತಾಯಿಯು ನಮಗೆ
ಬಂಧುವು ಬಳಗವು ಜನವರ್ಗ
ನಾವೆಲ್ಲರು ಒಂದೇ
ಕೂಡಿಯೆ ದುಡಿದರೆ ಭೂಮಿಯೆ ಸ್ವರ್ಗ
ನಾವೆಲ್ಲರು ಒಂದೇ