ಭರತ ಭೂಮಿ ಜನ್ಮ ಭೂಮಿ
ತಾಯಿ ಭಾರತಾಂಬೆಯು
ಹೊಟ್ಟೆಯೊಳಗೆ ನಮ್ಮನಿರಿಸಿ
ಪೊರೆದ ಜನುಮ ದಾತೆಯು

ಅವಳ ಮಗಳೆ ಕನ್ನಡಮ್ಮ
ಅನ್ನ ಬಟ್ಟೆಯಿತ್ತಳು
ಅವಳೆ ನಮ್ಮ ಸಾಕು ತಾಯಿ
ವಿದ್ಯೆ ಬುದ್ಧಿ ಕೊಟ್ಟಳು

ದೇಶ ಮಾತೆ ನಾಡ ದೇವಿ
ನಮಗೆ ಪೂಜ್ಯರಿಬ್ಬರೂ
ಮರೆತು ನಡೆವ ಮಕ್ಕಳನ್ನು
ಕ್ಷಮಿಸರವರು ಒಬ್ಬರೂ

ರಾಷ್ಟ್ರವಳಿಯೆ ರಾಜ್ಯವೆಲ್ಲಿ?
ದೇಶ ಮಾತೆ ಹಿರಿಯಳು
ಅವಳ ಅಡಿಗೆ ಮೊದಲು ನಮಿಸೆ
ಮುನಿವಳಲ್ಲ ಕಿರಿಯಳು

ರಾಷ್ಟ್ರ-ರಾಜ್ಯಗಳಲಿ ವ್ಯಾಜ್ಯ
ನಮ್ಮ ಹಿತಕೆ ಬಾಧಕ
ನೆಚ್ಚಿ ಮೆಚ್ಚಿ ನಡೆವ ಬದುಕು
ಶಾಂತಿ ಸುಖಕೆ ಸಾಧಕ