ಒಂದೇ ಜನಗಣ ನಾವೆಲ್ಲಾ
ಒಂದೇ ಭಾರತ ನಮಗೆಲ್ಲಾ

ಹರಿಯನೊ ಹರನನೊ ದೇವರು ಎಂದು
ನಂಬುತ ಪೂಜಿಸುವೆವು ನಾವಿಂದು
ನಮ್ಮನೆ ಹಿಂದೂಗಳೆನ್ನುವರೆಲ್ಲ
ತಾಯಿಯೆ ಭಾರತಿ ನಿಜ ನಮಗೆಲ್ಲ . . .

ಅಲ್ಲಾಹು ಒಬ್ಬನೆ ದೇವರು ಎಂದು
ಬಕುತಿಯ ತೋರುವ ನಮ್ಮನು ಇಂದು
ಮುಸಲಿಮ ರೆನ್ನುತ ಕರೆವರು ನೋಡ
ದೇಶವು ಭಾರತ ನಮ್ಮದು ಕೂಡ . . .

ಏಸುವಿನಲ್ಲಿಯೆ ದೇವನ ಕಂಡು
ಪ್ರೀತಿಯೊಳೆಲ್ಲರ ಜೊತೆಯಲಿ ಉಂಡು
ಬಾಳುವ ಕ್ರೈಸ್ತರು ನಾವೇ ತಮ್ಮ
ಭಾರತ ಮಾತೆಯು ನಮಗೂ ಅಮ್ಮ .  . .

ಬೌದ್ಧರು ಜೈನರು ಸಿಕ್ಖರು ಮತ್ತು
ಎಲ್ಲರು ತಿಂದೆವು ಇಲ್ಲಿನ ತುತ್ತು
ಪೂಜ್ಯವು ನಮಗಿದು ಹುಟ್ಟಿದ ದೇಶ
ಮರೆತರೆ ನಮ್ಮನು ಮೆಚ್ಚನು ಈಶ .  . .

ಭಾರತ ಮಾತೆಯ ಮಕ್ಕಳು ಕೋಟ
ಒಂದಾಗಿರೆ ನಮಗಿಲ್ಲವು ಸಾಟಿ
ದುಡಿಯುತ ಮುಂದಕೆ ನಡೆಯಲಿ ಜಾಥಾ
ಎಲ್ಲೆಡೆ ಮೊಳಗಲಿ ‘ಜಯಹಿಂದ್‌’ ಗೀತ