ನಮ್ಮ ದೇಶ ಭಾರತ
ಎನ್ನಿರೆಲ್ಲ ಹಿಗ್ಗುತ

ಹುಟ್ಟಿ ನಾವು ಬಳೆದುದಿಲ್ಲಿ
ನಡೆಯ ನುಡಿಯ ತಿಳಿದುದಿಲ್ಲಿ
ವಿದ್ಯೆ ಬುದ್ಧಿ ಕಲಿತುದಿಲ್ಲಿ
ಹಾಡಿ ಆಡಿ ನಲಿದುದಿಲ್ಲಿ . . .

ಇದುವೆ ನಮ್ಮ ಪಡೆದ ನೆಲವು
ತಿನುವ ಅನ್ನ ಇದರ ಫಲವು
ಕುಡಿವುದಿದರ ಪುಣ್ಯ ಜಲವು
ನಮ್ಮದೆಲ್ಲ ಒಂದೆ ಕುಲವು . . .

ಜಾತಿ ಮತವು ಬೇರೆ ಇರಲಿ
ಭಾಷೆ ಬಣ್ಣ ಭೇದ ತರಲಿ
ಕಷ್ಟ ಸುಖವು ಏನೆ ಬರಲಿ
ಒಂದೆ ಮನವು ನಮ್ಮದಿರಲಿ . . .

ದೇಶ ನಮಗೆ ದೇವರೆಂದು
ನಂಬಿ ಒಂದುಗೂಡಿ ನಿಂದು
ಜನದ ಹಿತವ ಬಯಸಿ ಇಂದು
ದುಡಿದು ನಾವು ನಡೆವ ಮುಂದು . . .