ಮಕ್ಕಳಿಗೆ ತಾವು ಓದುತ್ತಿರುವ ಸಾಹಿತ್ಯದ ಮೂಲಕ ಭಾವವಿಕಾಸ-ಜ್ಞಾನವಿಕಾಸ ಆಗಬೇಕು. ಮಕ್ಕಳ ಕಥೆಗಳು ಪರಿಸರದ ಕುರಿತು, ಪ್ರಾಣಿ-ಪಕ್ಷಿಗಳ ಕುರಿತಾಗಿರಬೇಕು. ಸದ್ಭಾವನೆಯನ್ನು ಹೊಂದಿರುವ, ಸತ್ಕ್ರಿಂಯಲ್ಲಿ  ತೊಡಗಿಸಿಕೊಂಡ, ಸುಂದರ ಆರೋಗ್ಯಕರ ವ್ಯಕ್ತಿತ್ವವುಳ್ಳ ವ್ಯಕ್ತಿಗಳ ನಿಜವಾದ ಜೀವನ ಚರಿತ್ರೆಗಳು ಶಿಶುಸಾಹಿತ್ಯವಾಗಬಹುದು. ನಿಜವಾದ ಜೀವನ ಕತೆಗಳು ವ್ಯಕ್ತಿಪೂಜಾ ಮನೋಭಾವವನ್ನು ಬೆಳೆಸುವಂಥವಾಗಿರಬಾರದು. ಫ್ಯಾಂಟಸಿಯದರೆ ಅದು ಮುದ ನೀಡುವ ಶುದ್ಧ ಫ್ಯಾಂಟಸಿಂ ಆಗಿರಬೇಕು. ಅದು ಬೋಧಪ್ರದವಾಗಿದ್ದರೆ ಅಡ್ಡಿಯಿಲ್ಲ.  ಆದರೆ ಹಿಮಲಯಕ್ಕೆ ಹೋಗಿ ತಪಸ್ಸು ಮಡಿದರೆ ದೇವರು ಕಾಣಿಸುತ್ತಾನೆ, ಇಷ್ಟಾರ್ಥ ಸಿದ್ಧಿ ಮಡಿಕೊಳ್ಳಬಹುದಾದ ಶಕ್ತಿ ಲಬಿsಸುತ್ತದೆ ಎನ್ನುವ ಅಪಕಲ್ಪನೆಗಳನ್ನು ಸೃಷ್ಟಿಸಬಾರದು. ದೇವರು ವರಗಳನ್ನು ಕೊಡುತ್ತಾನೆ, ಶಾಪಗಳನ್ನು ಕೊಡುತ್ತಾನೆ ಇತ್ಯಾದಿ ತಪ್ಪು ಕಲ್ಪನೆಗಳನ್ನುಂಟುಮಡಬಾರದು. ತಾವು ಪಾಪಿಗಳು, ಶಾಪಗ್ರಸ್ತರು ಎಂಬ ಭಾವನೆ ಮಕ್ಕಳಲ್ಲಿ  ಉಂಟಾಗಬಾರದು. ಹಾಗಾದರೆ ಅವರಲ್ಲಿ ಕೀಳರಿಮೆ ಉಂಟಾಗುತ್ತದೆ. ಅವರ ಆತ್ಮಸ್ಥೆರ್ಯ ಕುಂದುತ್ತ್ತದೆ. ಅದಕ್ಕೆ ಪ್ರತಿರೋಧವಾಗಿ ಕೆಟ್ಟ ಧೈರ್ಯ, ಅಪರಾಧೀ ಮನೋಭಾವ ಉಂಟಾಗುತ್ತದೆ. ಅದು ಅವರ ವ್ಯಕ್ತಿತ್ವದಲ್ಲಿ ಮುಂದೆ ಅದೃಷ್ಟವಾದವಾಗಿ, ನಿರಾಶಾವಾದವಾಗಿ ಬೆಳೆಯುತ್ತದೆ.

ಮಕ್ಕಳಿಗೆಂದೇ ಬರೆಯಲ್ಪಟ್ಟ ಕತೆಗಳಲ್ಲಿ ಯವುದೇ ಕೀರ್ತನೆಯ ಸ್ವರೂಪದಲ್ಲಿರುವ ಅಥವಾ ಯವುದೇ ರೀತಿಯಲ್ಲಿ ಮತೀಯ ಅಥವಾ ಆಧ್ಯಾತ್ಮಿಕ ವಿಚಾರಗಳನ್ನು ಬೋದಿsಸುವಂಥ  ಕಥೆ ಅಥವಾ ಹಾಡುಗಳನ್ನು ಮಕ್ಕಳ ಸಾಹಿತ್ಯ ಎಂದು ಪರಿಗಣಿಸಬಾರದು. ಮಕ್ಕಳ ಕಥೆಗಳಲ್ಲಿ ನೇರವಾದ ನೀತಿಬೋಧೆ ಇರಬಾರದು. ಹೇಗೆ ದೊಡ್ಡವರು ನೀತಿಬೋಧೆಯನ್ನು ಮೆಚ್ಚುವುದಿಲ್ಲವೋ ಹಾಗೆಂ ಮಕ್ಕಳು ಕೂಡ -ಮೆಚ್ಚುವುದಿಲ್ಲ. ನೀತಿ ಕಥೆಯಲ್ಲಿ ಅನೀತಿಯ ಪ್ರಸ್ತಾಪ ಇದ್ದೇ ಇರುತ್ತದೆ. ಇಲ್ಲದಿದ್ದರೆ, ಅದು ನೀತಿ ಕಥೆಯಗುವುದಿಲ್ಲ. ಅನೀತಿ ಎಂಬುದಿಲ್ಲ್ಲದಿದ್ದರೆ ಬಹುಶ: ಕತೆಂ ಇಲ್ಲ! ಇದು ರಾಮಯಣ ಮತ್ತು ಮಹಾಭಾರತದ ಕಥೆಯ ವಿಚಾರದಲ್ಲಿಯೂ ಸತ್ಯ. ಸರಿ ತಪ್ಪು ಏನೆಂಬುದು ಕಥೆಂಳಗೇ ಇರಬೇಕಲ್ಲದೆ, ಕಥಾಕರ್ತೃಅಥವಾ ಕಥೆ ಅದನ್ನು ಹೇಳಬಾರದು.

ಮಕ್ಕಳ ಸಾಹಿತ್ಯವೆಂದರೆ ಕೇವಲ ಕಥೆಗಳು, ಹಾಡುಗಳು ಮತ್ತು ನಾಟಕಗಳು ಎಂದು ತಿಳಿದುಕೊಳ್ಳಬಾರದು. ಮಕ್ಕಳಿಗೆ ಅರ್ಥವಾಗುವ ಭಾಷೆ ಮತ್ತು ಶೈಲಿಯಲ್ಲಿರುವ, ಅವರ ಜ್ಞಾನಾರ್ಜನೆ ಮತ್ತು ಭಾವವಿಕಾಸಕ್ಕೆ ಅವಕಾಶ ನೀಡುವ ವಿಜ್ಞಾನದ ಬರಹಗಳು ಸಹ ಶಿಶುಸಾಹಿತ್ಯವೇ ಆಗಿದೆ. ವಿಚಾರ ಪ್ರಚೋದಕವಾಗಿರುವ, ವೈಜ್ಞಾನಿಕ ಚಿಂತನೆಗೆ ಪ್ರೇರಣೆ ನೀಡುವ ಕಟ್ಟುಕತೆಗಳನ್ನು ಶಿಶುಸಾಹಿತ್ಯವೆಂದು ಒಪ್ಪಿಕೊಳ್ಳಬಹುದು. ಆದರೆ ಕಪೋಲಕಲ್ಪಿತ ಕತೆಗಳಾದ ಭಯನಕ ಸಯನ್ಸ್ ಪಿsಕ್ಷನ್, ಹೊರರ್ ಸ್ಟೋರೀಸ್ ಮತ್ತು ಮಟ ಮಂತ್ರದ ಕಥೆಗಳನ್ನು ಶಿಶುಸಾಹಿತ್ಯವೆಂದು ಪರಿಗಣಿಸಲಾಗದು.

ಮಕ್ಕಳ ಸಾಹಿತ್ಯದಲ್ಲಿ ಪೌರಾಣಿಕ ಕಥೆಗಳಿಗೆ ಮತ್ತು ಐತಿಹ್ಯ (ಲಿಜೆಂಡ್)ಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಧಾನ್ಯವನ್ನು ನೀಡಲಾಗಿದೆ. ಈ ವರ್ಗದ ಬಹಳ ಕಥೆಗಳಲ್ಲಿ ಪ್ರತಿಗಾಮಿ ಚಿಂತನೆಯಿರುತ್ತದೆ. ಅವುಗಳಲ್ಲಿ  ಮಕ್ಕಳಿಗೆ ಬೇಕಾದ ಏನು ಒಳ್ಳೆಯ ಅಂಶಗಳಿರುತ್ತವೆ ಎಂಬ ಂಚನೆಗಳಿಲ್ಲದೇನೆ ಅವುಗಳನ್ನು ಶಿಶುಸಾಹಿತ್ಯ ಎಂಬ ಲೇಬಲ್ ಹಚ್ಚಿ ನೀಡಲಾಗುತ್ತದೆ. ಭಾಷಾ ಪಠ್ಯಪುಸ್ತಗಳಲ್ಲಿ  ಇತಿಹಾಸ ಎನ್ನಬಹುದಾದ ಕಥೆಗಳನ್ನು ತುರುಕುವ ಹುನ್ನಾರ ಸಹ ಯವಾಗಲೂ ನಡೆಯುತ್ತದೆ. ಇದರಲ್ಲಿ ಬಹ್ವಂಶ ವ್ಯಕ್ತಿ ಚಿತ್ರಗಳು ಮತ್ತು ವ್ಯಕ್ತಿಪೂಜೆಯನ್ನು ಬಯಸುವಂಥವುಗಳು ಆಗಿರುತ್ತವೆ. ಈ ಮೂಲಕ ಮಕ್ಕಳಲ್ಲಿ  ದೇಶಭಕ್ತಿಯನ್ನು ತುಂಬುವ ಇರಾದೆಯಿದ್ದರೆ, ಅಥವಾ ಹಿಂದಿನ ಯುಗದ ರಾಷ್ಟ್ರನಾಯಕರ ಮೇಲೆ ಭಯ ಭಕ್ತಿ ಹುಟ್ಟಿಸಿ ಇಂದಿನ ರಾಜಕಾರಣಿಗಳನ್ನು ಗೌರವಭಾವದಿಂದ ಕಾಣುವ ಭಾವವನ್ನು ಹುಟ್ಟಿಸಬೇಕೆಂಬ ಉದ್ದೇಶವಿದ್ದರೆ ಅದು ಸಫಲವಾಗುವುದಿಲ್ಲ. ಯಕೆಂದರೆ, ಮಕ್ಕಳು ಸಾಮನ್ಯವಾಗಿ ಈ ಬಗೆಯ ಆರಾಧನೆಯನ್ನು ಅಪೇಕ್ಷಿಸುವ ಪಾಠಗಳನ್ನು ಮನಸಾ ಸ್ವೀಕರಿಸುವುದಿಲ್ಲ. ಭಾವುಕತೆಯ ಮೇಲೆ ಹೆಚ್ಚು ಒತ್ತು ಹಾಕುವ ಇಂಥ ಇಮೋಷನಲ್ ಸಾಮಗ್ರಿ ಅವರ ಮನದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.

ಪರಿಚಯಿಸುವ ನೆಲೆಯಲ್ಲಿ, ಒಂದು ಮಿತಿಯಲ್ಲಿ, ನಿಜವಾದ ಇತಿಹಾಸವನ್ನು ಮತ್ತು ಜಾನಪದ ಸಾಹಿತ್ಯವನ್ನು ನೀಡಬಹುದು. ಆದರೆ ಇದು ಒಳ್ಳೆಯ ಭಾಷೆಯಲ್ಲಿರಬೇಕು. ಆಕರ್ಷಕವಾದ ಶೈಲಿಯಲ್ಲಿರಬೇಕು. ಒಳ್ಳೆಯ ಗುಣಗಳನ್ನು  ಎತ್ತಿ ತೋರಿಸುವಂಥವಾಗಿರಬೇಕು.  ಮುದನೀಡುವುದರ ಜೊತೆಗೆ ವೈಚಾರಿಕ ನಿಲುವುಳ್ಳವಾಗಿರಬೇಕು. ಮಕ್ಕಳಿಗೆ  ಎಂಥ ಕಥೆಗಳನ್ನು ಒದಗಿಸಬೇಕು ಎಂದು  ನಿರ್ಧರಿಸುವುದು ತಾಯಿತಂದೆಯರ ಜವಾಬ್ದಾರಿ. ನೀತಿ ಕಥೆಗಳು, ಆಧ್ಯಾತ್ಮಿಕ ಕಥೆಗಳು, ಮಹಾಪುರುಷರ ಕಥೆಗಳು ಎಂಬುದಾಗಿ ಗುರುತಿಸುವ ಕಥೆಗಳು ಸಾರಾಸಗಟಾಗಿ ಒಳ್ಳೆಯವು ಎಂಬ ತಿಮನಕ್ಕೆ ಬರುವುದು ಸರಿಯಲ್ಲ. ದೊಡ್ಡವರ ಬೌದ್ಧಿಕ ಮಟ್ಟಕ್ಕೂ ಮಗುವಿನ ಬೌದ್ಧಿಕ ಮಟ್ಟಕ್ಕೂ ಅಪಾರ ಅಂತರವಿದೆ. ಅಷ್ಟೇ ಅಲ್ಲ, ಯವುದನ್ನು ದೊಡ್ಡವರು ಜೀವನಮಲ್ಯಗಳು ಎಂದು ಬಲವಂತವಾಗಿ ಹೇರುತ್ತಾರೋ ಅವು ಮಲ್ಯಗಳಲ್ಲ  ಎಂದು ಮಕ್ಕಳಿಗನಿಸುವ ಸಂಭವವೂ ಇಲ್ಲದಿಲ್ಲ!

ಮಕ್ಕಳ ಕಥೆಗಳು, ಪದ್ಯಗಳು ಮಕ್ಕಳಿಗೆ ತಟ್ಟನೆ ಅರ್ಥವಾಗುವ ಅತ್ಯಂತ ಸರಳವಾದ ಭಾಷೆಯಲ್ಲಿರಬೇಕು. ಅವರ ವಯಸ್ಸಿಗೆ ಮೀರಿದ ಜೀವನ ಮಲ್ಯಗಳ ವಿಚಾರ ಅದರಲ್ಲಿರಬಾರದು. ವಾಸ್ತವದಲ್ಲಿ ನೀತಿ ಎನ್ನುವುದು ‘ಹೇಗೆ’ ಎಂದು ನಮ್ಮ ನಡೆನುಡಿ ಮತ್ತು ಒಟ್ಟು ಬದುಕಿನ ಮೂಲಕ ಪ್ರಕಟವಾಗುವ ವಿಚಾರವಾಗಿರುತ್ತದೆ. ಅದು ‘ಏನು’ ಎಂದು ಮತಿನ ಮೂಲಕ ಹೇಳಿ ತಿಳಿಸುವ ವಿಚಾರವಲ್ಲ. ಹೇಳಿದರೂ ಕೂಡ ಅದನ್ನು ಹೇಳುವ ವ್ಯಕ್ತಿಯ ಬದುಕಿನಲ್ಲಿ  ‘ಹೇಗೆ’ ಎಂಬುದು ಪ್ರಕಟವಾದರೆ ಮತ್ರ ಹೇಳುವುದು ಅರ್ಥಪೂರ್ಣವಾಗಿರುತ್ತದೆ. ಮಕ್ಕಳ ಕಥೆಗಳು , ಹಾಡುಗಳು ಮತ್ತು ನಾಟಕಗಳಲ್ಲಿ ಮುಖ್ಯವಾಗಿ ಇರಬೇಕಾದ್ದು ರಂಜನೆಂನೋ ನಿಜ. ಆದರೆ ರಂಜನೆಯ ಜೊತೆಯಲ್ಲಿ ಅಷ್ಟೇ ಮುಖ್ಯವಾದದ್ದು ಮಕ್ಕಳ ವಿಚಾರ ಶಕ್ತಿ ಮತ್ತು  ಸೃಜನಶೀಲ  ಶಕ್ತಿಯ ಬೆಳವಣಿಗೆ.

ಮಕ್ಕಳಿಂದಲೇ ಮಕ್ಕಳ ಸಾಹಿತ್ಯ 

‘ಇದು ಮಕ್ಕಳ ಸಾಹಿತ್ಯ’ ಎಂದು ಹೇಳಿ ದೊಡ್ಡವರು ಬರೆದುಕೊಟ್ಟುದನ್ನೇ ಮಕ್ಕಳು ತಮ್ಮ ಸಾಹಿತ್ಯವೆಂದು ಒಪ್ಪಿಕೊಳ್ಳಬೇಕೆ, ಮಕ್ಕಳು ತಮ್ಮ ಸಾಹಿತ್ಯವನ್ನು ತಾವೇ ನಿರ್ಮಿಸಿಕೊಳ್ಳಲಾರರೇ ಎಂಬ ಮಹತ್ವದ ಪ್ರಶ್ನೆಯನ್ನು ನಾವು  ಇಂದು ಎತ್ತಬೇಕು. ಮಕ್ಕಳ ಸಾಹಿತ್ಯದ ಪರ್ಸನಲ್ಸೆ ಸೇಶನ್ ಬಗ್ಗೆ  ಂಚಿಸಬೇಕು. ಮಗುವನ್ನು ಪ್ಯಾಸಿವ್ ಲರ್ನರ್ ಸ್ಥಿತಿಯಿಂದ ಆಕ್ಟಿವ್ ಲರ್ನರ್ ಮಡಲು ಮಗುವೇ ತನ್ನ ಸಾಹಿತ್ಯವನ್ನು ನಿರ್ಮಿಸಿಕೊಳ್ಳಲು ಹೇಳಿಕೊಡುವುದು ಒಂದು ಶ್ರೇಷ್ಠವಾದ ವಿಧಾನವಾಗಬಹುದು.

ಮಕ್ಕಳಲ್ಲಿ ಬಹಳ ಸೃಜನಶೀಲ ಶಕ್ತಿಯಿರುತ್ತದೆ. ಏಳು-ಎಂಟು-ಒಂಬತ್ತು-ಹತ್ತು ಈ ನಾಲ್ಕು ತರಗತಿಗಳ ಮಕ್ಕಳಿಗೆ ಒಂದಷ್ಟು ಮಕ್ಕಳ ಕಥೆಗಳು, ಹಾಡುಗಳು ಮತ್ತು ನಾಟಕಗಳನ್ನು ಓದುವ-ಬರೆಯುವ ಕಮ್ಮಟಗಳನ್ನು ನಡೆಸಿದರೆ, ಅವರಲ್ಲಿ ಬಹಳ ಮಕ್ಕಳು ತಾವು ಕೂಡ ಕವನಗಳನ್ನು ಮತ್ತು ಕಥೆಗಳನ್ನು ಬರೆಯಬಲ್ಲವೆಂಬುದನ್ನು ತೋರಿಸಿಕೊಡುತ್ತಾರೆ. ಇಷ್ಟಕ್ಕೂ ನಾವು  ಮಕ್ಕಳಿಗೆ ಶಿಶು ಸಾಹಿತ್ಯವೆಂದು ಏನನ್ನಾದರೂ ಕೊಡುವ ಉದ್ದೇಶವಾದರೂ ಏನು? ಕೇವಲ ಓದಿ ಹಾಡಿ ಸಂತೋಷಪಡಲಿ ಎಂದಷ್ಟೇ ಅಲ್ಲವಲ್ಲ? ಅವರಲ್ಲಿ  ವಿಚಾರಶೀಲತೆ, ಸೃಜನಶೀಲತೆ, ಕಲ್ಪನಾಶಕ್ತಿ  ಬೆಳೆಯಬೇಕು ಎನ್ನುವುದು ನಮ್ಮ ಉದ್ದೇಶ ತಾನೆ? ಅದಕ್ಕೆ ನಾವು ಅವರಿಗೆ ಕ್ರಿಯಶೀಲ ವಿಧಾನವನ್ನು ತೋರಿಸಿಕೊಡಬೇಕು. ಪುಸ್ತಕಗಳಲ್ಲಿ ಮುದ್ರಿತವಾಗಿ ದೊರೆಯುವುದಷ್ಟೇ ಶಿಶುಸಾಹಿತ್ಯ ಎಂಬ ನಂಬಿಕೆಯನ್ನು ತೊರೆಯಬೇಕು.  ಇವತ್ತು ಮಕ್ಕಳಲ್ಲಿರುವ ವಿಚಾರಶೀಲತೆ, ಸೃಜನಶೀಲತೆ, ಕಲ್ಪನಾಶಕ್ತಿ ಬೆಳೆಯದಿದ್ದರೆ, ಅದಕ್ಕೆ ಕಾರಣ ಅದನ್ನು ಬೆಳೆಯದಂತೆ ಹತ್ತಿಕ್ಕುವ ತಾಯಿತಂದೆಯರೇ ಎಂದು ತಿಳಿಯಬೇಕಾಗುತ್ತದೆ. ಮಕ್ಕಳು ಇಂಜಿನಿಯರಾಗುವಲ್ಲಿ ಇದು ಅಡ್ಡಿಯಗಹುದು ಎಂಬ ಭಯ ಬಹಳ ಮಂದಿಗೆ. ಈ ಭಯ ಎಷ್ಟ ಬಲವಾಗಿರುತ್ತದೆ ಎಂದರೆ, ಮಗು ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ತೋರಿದರೂ ತಾಯಿತಂದೆಯರಿಗೆ ಭಯವಾಗುತ್ತದೆ!  ಇಂಜಿನಿಯರ್ ಎಂದರೆ ಬಹಳ ಮಂದಿ ತಿಳಿದುಕೊಂಡಿರುವುದು ಕೇವಲ ಟೆಕ್ನೀಶಿಯನ್ ಎಂದು, ಸೈಂಟಿಸ್ಟ್ ಎಂದು ಅಲ್ಲ!

ಇಂಜಿನಿಯರಾಗಬೇಕಾದವರು ಇಂಜಿನಿಯರಾಗಲಿ. ಆದರೆ ಅವರದು ಬರಡು ವ್ಯಕ್ತಿತ್ವವಾಗದಿರಲಿ. ಶಾಲೆಯಲ್ಲಿ ಓದುವ ಕಾಲಕ್ಕೆ ಹಾಡುತ್ತಿದ್ದ, ಕಥೆ ಕವನ ಬರೆಯುತ್ತಿದ್ದ ಮನಸ್ಸುಗಳು ಮುಂದೆ ‘ಕೇವಲ ಇಂಜಿನಿಯರ್’, ಆಗಿ,  ವರ್ಷಗಳ ಬಳಿಕ,  ತಾವು ಬಹಳ ಸಂದರವಾದುದೇನನ್ನೋ ಕಳೆದುಕೊಂಡೆವಲ್ಲ ಎಂದು ಪರಿತಪಿಸುವಂತಾಗದಿರಲಿ.

ಇವತ್ತು ಸುಮರು ಮೂರು ವರ್ಷ ಪ್ರಾಯವಾಗುವುದಕ್ಕೂ ಮೊದಲೇ ಮಗು ಟೀವಿಯ ಮೇಲೆ ಕಾರ್ಟೂನ್ ಮಲಿಕೆಗಳನ್ನು ನೋಡತೊಡಗುತ್ತದೆ.  ಈ ಕಾರ್ಟೂನ್ ಚಿತ್ರಗಳನ್ನು ಒಂದರ್ಥದಲ್ಲಿ  ‘ಅಪ್ರಬುದ್ಧ ಮಕ್ಕಳ ದೃಶ್ಯ ಸಾಹಿತ್ಯ’ ಎನ್ನುವುದಾದರೆ ಇದರಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮವನ್ನು  ಹೋಗಲಾಡಿಸುವಂತಹ ಬೇರೆ ಸಾಹಿತ್ಯವನ್ನು ನೀಡಬೇಕಾದ ಅಗತ್ಯವಿದೆ. ಇಲ್ಲವಾದರೆ ಮಕ್ಕಳಲ್ಲಿ ಪ್ರಬುದ್ಧ ಚಿಂತನೆ ಮೂಡದೆ ಇರಬಹುದು!

ಮಕ್ಕಳಲ್ಲಿ ನವಿರು ಭಾವನೆಗಳನ್ನು  ಬೆಳೆಸಬೇಕು.  ಆದರೆ ಕ್ರೌರ್ಯಭರಿತ ‘ದೃಶ್ಯ ಸಾಹಿತ್ಯ’ ಮಕ್ಕಳ ಮೃದು ಮನಸ್ಸಿನ ಮೇಲೆ ಎಂಥ ಪರಿಣಾಮವನ್ನುಂಟುಮಡುತ್ತದೆ ಎಂಬ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು. ಈ ಕಾರ್ಟೂನ್ ಚಿತ್ರಗಳಲ್ಲಿ  ಕಾಣಿಸುವಂಥ ಮೂಳೆ ಮುರಿಯುವ, ರಕ್ತ ಚೆಲ್ಲುವ ಗುಂಡಿಕ್ಕಿ ಕೊಲ್ಲುವ ಮನುಷ್ಯನಾಗಿ ಮಗು ಬೆಳೆಯಲಿಕ್ಕಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಅದರಿಂದಾಗಿ ಮಂದೆ ವ್ಯಕ್ತಿಯಲ್ಲಿ ಇತರರ ಕಡೆಗೆ,  ಸಮಜದ ಕಡೆಗೆ, ದೇಶದ ಕಡೆಗೆ  ಪೊಸಿಟಿವ್ ಧೋರಣೆಯ ಬದಲು ನೆಗೆಟಿವ್ ಭಾವನೆಗಳು ಬೆಳೆಯುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾದೀತೆ?  ಯರಿಗೇನಾದರಾಗಲಿ, ದಾರಿ ಸರಿಯಿರಲಿ ತಪ್ಪಿರಲಿ ತಾನು ಬಲಶಾಲಿಯಗಬೇಕು, ಶ್ರೀಮಂತನಾಗಬೇಕು ಎಂಬ ಭಾವನೆ ಎಷ್ಟೋ ಮಕ್ಕಳಲ್ಲಿ ಈಗಲೇ ತುಂಬಿಕೊಂಡಿರುವುದನ್ನು ಕಾಣಬಹದು. ಇದರ ಹಿಂದೆ ಕಾರ್ಟೂನು ಸೇರಿದಂತೆ ಇತರ ದೃಶ್ಯ ಸಾಹಿತ್ಯದ ಪ್ರಭಾವ ಇಲ್ಲವೆ? ಕೆಲವೇ ದಿನಗಳ ಬ್ರೈನ್‌ವಾಶಿಂಗ್ ಮೂಲಕ ಒಬ್ಬ ಭಂತ್ಪಾದಕನನ್ನು ಸೃಷ್ಟಿಸಬಹುದಾದರೆ, ವರ್ಷವರ್ಷಗಳ ಕಾಲ ಟೀವೀಯ ಮೇಲೆ ಕ್ರೌರ್ಯವನ್ನು ನೋಡುವುದರ ಪರಿಣಾಮವಾಗಿ ಮನಸ್ಸು  ಸುಪ್ತವಾದ ಕ್ರಿಮಿನಲ್ ಮನಸ್ಸಾಗಿ  ರೂಪುಗೊಳ್ಳಬಹುದು ಎಂದು ತರ್ಕಿಸುವುದು ತಪ್ಪೆ?

ಮಕ್ಕಳು ಸೃಷ್ಟಿಸುವ ಸಾಹಿತ್ಯ  ಕಥೆ ಕವಿತೆಗಳೇ ಆಗಬೇಕೆಂದಿಲ್ಲ. ಅವರು ಯೋಚಿಸಿ ಬರೆಯುವ ಎಲ್ಲವನ್ನೂ  ಮಕ್ಕಳ ಸಾಹಿತ್ಯವೆಂದು ಪರಿಭಾವಿಸಬಹುದು. ಅವರು ಗಿಡ ಮರಗಳ ಬಗ್ಗೆ ಮೃಗಪಕ್ಷಿಗಳ ಬಗ್ಗೆ ಸೂರ್ಯ ಚಂದ್ರರ ಬಗ್ಗೆ , ತಾವು ಕಂಡುದರ ಬಗ್ಗೆ, ಕೇಳಿದ್ದರ ಬಗ್ಗೆ ಪದ್ಯ ಬರೆಯಲಿ, ಕಥೆ ಬರೆಯಲಿ, ನಾಟಕ ಬರೆಯಲಿ, ಪ್ರಬಂಧ ಬರೆಯಲಿ; ಅದನ್ನು ನಾವು ಕ್ರಿಂಯಗಿ ರೂಪಾಂತರಗೊಂಡ ಸಾಹಿತ್ಯ ‘ಜೀವಂತ ಸಾಹಿತ್ಯ’ ಎಂದು ಪರಿಭಾವಿಸಬಹುದು. ನಾವು ಅದಕ್ಕಾಗಿ ಒದಗಿಸಬೇಕಾದ್ದು ಅಂಥ ಕ್ರಿಯಶೀಲತೆಗೆ ಪ್ರೇರಣೆ ನೀಡುವಂಥ ಮಕ್ಕಳ ಸಾಹಿತ್ಯವನ್ನು.  ಅದು ಎಂಥದಾಗಿರಬೇಕೆಂದರೆ, ಅದು ಮನಸ್ಸನ್ನು  ಅರಳಿಸಿ ಸಕಾರಾತ್ಮಕವಾಗಿ  ಬೆಳೆಸುವ ಗುಣವುಳ್ಳದಾಗಿರಬೇಕು.