ಹೆಸರು: ಶೃತಿ
ಊರು: ವಿರದೇವಪುರ

 

ಪ್ರಶ್ನೆ: ಮೈಸೂರು ಆಕಾಶವಾಣಿ ನಿಲಯದ ನಮ್ಮ ಮನೆಯ ಮಲ್ಲಿಗೆ ಕಾರ್ಯಕ್ರಮಕ್ಕೆ ಸ್ವಾಗತ ಹಾಗೂ ಸಂದರ್ಶಕರಾದ ಸುಬ್ರಹ್ಮಣ್ಯರವರಿಗೂ, ವೈದ್ಯರಾದ ಡಾ.ಶರತ್ ಕುಮಾರ್ ಅವರಿಗೂ ನನ್ನ ನಮಸ್ಕಾರಗಳು. ನಮ್ಮ ಮನೆಯ ಮಲ್ಲಿಗೆ ಕಾರ್ಯಕ್ರಮ ಇನ್ನು ಮುಂದೆಯು ಹೀಗೆಯೇ ನಿರಂತರವಾಗಿ ನಡೆಯಲಿ. ನನಗೆ ಕೆಳಗೆ ಕೇಳಿರುವ ಪ್ರಶ್ನೆ ಅನುಮಾನವಾಗಿರುವ ಪ್ರಶ್ನೆಗೆ ಉತ್ತರ ಕೊಡುವಿರೆಂದು ತಿಳಿದು ಬರೆದಿದ್ದೇನೆ.

. ಹಳ್ಳಿಗಳಲ್ಲಿ ಹೇಳುತ್ತಾರೆ, ಗಂಡ ಹೆಂಡತಿ ಇಬ್ಬರು ಕಪ್ಪಾಗಿದ್ದರೆ ಮಗು ಸಹ ಕಪ್ಪಾಗಿ ಹುಟ್ಟುತ್ತದೆ. ಆದ್ದರಿಂದ ಮೆಡಿಕಲ್ ಸ್ಟೋರನಲ್ಲಿ ಕೇಸರಿ ಎಂದು ಸಿಗುತ್ತದೆ. ಅದನ್ನು ಹಾಲಿಗೆ ಹಾಕಿ ಕುಡಿದರೆ ಮಗು ಸಹ ಕೆಂಪಾಗಿ ಚೆನ್ನಾಗಿ ಹುಟ್ಟುತ್ತದೆ ಎಂದು. ಇದು ನಿಜವೇ?

. ಗಂಡನಿಗೆ ಸಿಹಿ ಮುತ್ರ ರೋಗವಿದ್ದು. ಹೆಂಡತಿ ಆರೋಗ್ಯವಾಗಿದ್ದಾಗ ಸಂಭೋಗದಿಂದಾಗಿ ಗಂಡನ ಸಿಹಿಮುತ್ರ ಕಾಯಿಲೆ ಹೆಂಡತಿಗೆ ಬರುವ ಸಾಧ್ಯತೆಗಳು ಇದೆಯೇ ಹಾಗೂ ಹುಟ್ಟುವ ಮಕ್ಕಳಿಗೆ ಸಹ ಕಾಯಿಲೆ ಬರಬಹುದಾ?

. ಹೆಂಗಸರಿಗೆ ಮಕ್ಕಳು ಸಾಕೆಂದು ಆಪರೇಷನ್ ಮಾಡಿಸಲು ಹೋದಾಗ ಹೆಣ್ಣು ಅಂಡಾಣು ಉತ್ಪತ್ತಿ ಆಗಿ ಗರ್ಭಚೀಲಕ್ಕೆ ಬರುವ ನರವನವನ್ನು ಕತ್ತರಿಸುತ್ತೇವೆಂದು ವೈದ್ಯರು ಹೇಳುತ್ತಾರೆ. ಹಾಗೆ ಕತ್ತರಿಸಿದ ನಮತರ ಉತ್ಪತ್ತಿ ಆದ ಹೆಣ್ಣು ಅಂಡಾಣು ನಂತರ ಏನಾಗುತ್ತದೆ?

ಉತ್ತರ: . ಇದು ಖಂಡಿತಾ ಸುಳ್ಳು, ಕೇಸರಿ ತಿನ್ನುವುದರಿಂದ ಹುಟ್ಟುವ ಮಗುವಿನ ಬಣ್ಣ ಬದಲಾಗುವುದಿಲ್ಲ. ಮಗುವಿನ ಬಣ್ಣ ತಂದೆ, ತಾಯಿಯರ ಅಥವಾ ವಂಶದವರ ಬಣ್ಣದ ಮೇಲೆ ಅವಲಂಬಿತವಾಗಿರುತ್ತದೆ. ಹುಟ್ಟಿದ ನಂತರ ಪರಿಸರದ ಮೇಲೆ ಅವಲಂಬಿತವಾಗುತ್ತದೆ.

೨. ಖಂಡಿತಾ ಇಲ್ಲ. ಹುಟ್ಟುವ ಮಕ್ಕಳಿಗೆ ಇದು ವಂಶಪಾರಂಪರಿಕವಾಗಿ ಬರಬಹುದು.

೩. ಅಂಡಾಣು ಕೇವಲ ೮ ರಿಂದ ೧೨ ಗಂಟೆ ಮಾತ್ರ ಬದುಕಿರುತ್ತದೆ. ನಂತರ ಸತ್ತು ಹೋಗುತ್ತದೆ. ಸತ್ತು ಹೋದ ಅಂಡಾಣುವನ್ನು ರಕ್ತದಲ್ಲಿರುವ ಪ್ಯಾಗೋಸೈಟಿಸ್ (Phagocytes) ನುಂಗಿಹಾಕಿ ಜೀರ್ಣಿಸಿಕೊಳ್ಳುತ್ತದೆ.