(೧೯೩೬ರ ೪ನೇ ಅಧಿನಿಯಮ)

ಕೆಲಸ ವರ್ಗದ ನಿಯೋಜಿತ ವ್ಯಕ್ತಿಗಳಿಗೆ (ಉದ್ಯೋಗಿಗಳಿಗೆ) ಅನ್ವಯವಾಗುವ ಮಜೂರಿ ಸಂದಾಯ ನಿಯಂತ್ರಣ ಅಧಿನಿಯಮ.

ಕೆಲವು ವರ್ಗದ ನಿಯೋಜಿತ ವ್ಯಕ್ತಿಗಳಿಗೆ (ಉದ್ಯೋಗಿಗಳಿಗೆ) ಸಂದಾಯ ಮಾಡುವ ಮಜೂರಿಯನ್ನು ನಿಯಂತ್ರಿಸುವುದು ಸಮಯೋಚಿತವೆಂದು ಕಂಡು ಬಂದಿದ್ದು, ಈ ಕೆಳಕಂಡಂತೆ ಅಧಿನಿಯಮಿಸಲಾಗಿದೆ.

೧. ಸಂಕ್ಷಿಪ್ತ ಶೀರ್ಷಿಕೆ, ವ್ಯಾಪ್ತಿ, ಪ್ರಾರಂಭ ಮತ್ತು ಅನ್ವಯ (೧) ಈ ಅಧಿನಿಯಮವನ್ನು ಮಜೂರಿ ಸಂದಾಯ ಅಧಿನಿಯಮವೆಂದು ಕರೆಯಲಾಗಿದೆ.

೨. ಇದು ಇಡೀ ಭಾರತ ದೇಶಕ್ಕೆ ಅನ್ವಯಿಸುತ್ತದೆ.

೩. ಇದು ಕೇಂದ್ರ ಸರಕಾರವು ಅಧಿಕೃತ ರಾಜಪತ್ರದಲ್ಲಿ ಅಧಿಸೂಚನೆ ಹೊರಡಿಸಿ ನಿಗದಿ ಮಾಡಿದ ದಿನದಿಂದ ಜಾರಿಗೆ ಬರತಕ್ಕದ್ದು.

೪. ಇದು ಪ್ರಥಮವಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುವ, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಮತ್ತು ರೈಲ್ವೆ ಇಲಾಖೆಯಲ್ಲಿ ಒಳಗುತ್ತಿಗೆದಾರರ ಆಗಿ ಕೆಲಸ ಮಾಡುವ ಎಲ್ಲಾ ವರ್ಗದ ನೌಕರರಿಗೆ ಸಂದಾಯ ಮಾಡುವ ಮಜೂರಿ ಮತ್ತು ಕೇಂದ್ರ ಸರಕಾರವು ಕಲಂ ೨ ಉಪಖಂಡ (ಊ) ಖಂಡ (೧೧)ರ ಮೇರೆಗೆ ಸೂಚಿಸುವ ಔದ್ಯೋಗಿಕ ಸಂಸ್ಥೆ ಅಥವಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

೫. ರಾಜ್ಯ ಸರಕಾರವು ಸಹ ಮೂರು ತಿಂಗಳ ತಿಳುವಳಿಕೆ ಪತ್ರವನ್ನು ನೀಡುವುದರ ಮೂಲಕ ಉದ್ದೇಶಿತ ಕೆಲವು ವರ್ಗದ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಕಲಂ ೨ ಖಂಡ (೧೧) ಉಪಖಂಡ (ಊ) ಪ್ರಕಾರ ಗುರುತಿಸಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಈ ಕಾಯಿದೆಯನ್ನು ಇಲ್ಲವೆ ಕಾಯಿದೆಯ ಕೆಲವು ಕಲಂಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸುವುದರ ಮೂಲಕ ವಿಸ್ತರಿಸಬಹುದು.

ಆದರೆ ಹಾಗೆ ವಿಸ್ತರಿಸುವಾಗ ಕೇಂದ್ರ ಸರಕಾರದ ಅಧೀನದಲ್ಲಿರುವ ಕೇಂದ್ರ ಸಾರ್ವಜನಿಕ ಕಾರ್ಖಾನೆಗಳಿಗೆ ಕೇಂದ್ರ ಸರಕಾರದ ಒಪ್ಪಿಗೆ ಪಡೆಯದೆ  ಅಧಿಸೂಚನಾ ಪ್ರಕಟಣೆಯನ್ನು ನೀಡುವ ಹಾಗಿಲ್ಲ.

೬. ಈ ಅಧಿನಿಯಮದ ಕಾಲಮಿತಿಯು ತಿಂಗಳಿಗೆ ಸರಾಸರಿ ಒಂದು ಸಾವಿರದ ಆರು ನೂರು ಮತ್ತು ಮೇಲ್ಪಟ್ಟು ಪಡೆಯುವ ಮಜೂರಿ ಸಂದಾಯಕ್ಕೆ ಅನ್ವಯಿಸುವುದಿಲ್ಲ.

ರಾಜ್ಯಗಳ ತಿದ್ದುಪಡಿ

೧. ಕಲಂ ೧ ಉಪ ಕಲಂ (ಅ), ತಿದ್ದುಪಡಿಯ ಪ್ರಕಾರ ಪಶ್ಚಿಮ ಬಂಗಾಲಕ್ಕೆ ಅನ್ವಯಿಸುವುದಿಲ್ಲ.

೨. ಪರಿಭಾಷೆ : ಈ ಅಧಿನಿಯಮದಲ್ಲಿ ಯಾವುದೇ ವಿಷಯ ಅಥವಾ ಸಾಂದರ್ಭಿಕವಾಗಿ ವಿರುದ್ಧವಾದ ಅರ್ಥ ಬರದ ಹೊರತು :

ಅ. ನಿಯೋಜಿತ ವ್ಯಕ್ತಿ (ಉದ್ಯೋಗಿ) ಎಂದರೆ ದಿವಂಗತ ನಿಯೋಜಿತ ವ್ಯಕ್ತಿಯ (ಉದ್ಯೋಗಿಯ) ಕಾನೂನು ಸಮ್ಮತ ಪ್ರತಿನಿಧಿಯೂ ಸೇರುತ್ತಾನೆ.

ಆ. “ಮಾಲೀಕ” ಅಂದರೆ ದಿವಂಗತ ಮಾಲೀಕನ ಕಾನೂನು ಸಮ್ಮತ ಪ್ರತಿನಿಧಿಯೂ ಸೇರುತ್ತಾನೆ.

ಇ. “ಕಾರ್ಖಾನೆ” ಅಂದರೆ ಕಾರ್ಖಾನೆ ಅಧಿನಿಯಮದ, ೧೯೪೮ರ ಖಂಡ (ಮ) ಕಲಂ (೨)ರಲ್ಲಿ ವಿವರಿಸಿರುವಂತೆ, (೬೩ನೇ ೧೯೪೮) ಮತ್ತು ಈ ಕಾಯಿದೆಯ ಕಲಂ (೮೫) ಉಪ ಕಲಂ (೧) ರ ಪ್ರಕಾರ ಅನ್ವಯಿಸುವ ಉಪಖಂಡದ ವ್ಯಾಪ್ತಿಯೊಳಗೆ ಸೇರುವ ಎಲ್ಲಾ ಸ್ಥಳಗಳು ಸೇರುತ್ತವೆ.

ಈ. “ಕೈಗಾರಿಕೆ ಅಥವಾ ಇತರೆ ಸಾರ್ವಜನಿಕ ಸಂಸ್ಥೆಗಳು” ಅಂದರೆ ಕಬ್ಬಿಣದ ಹಗ್ಗಗಳ ಮೇಲೆ ಹರಿದಾಡುವ ಸೇವಾ ಸೌಲಭ್ಯ ಅಥವಾ ಪ್ರಯಾಣಿಕರು ಅಥವಾ ಸಾಮಗ್ರಿ ಅಥವಾ ಎರಡೂ ಸೇರಿ ರಸ್ತೆಯಲ್ಲಿ ಓಡಾಡುವ ವಾಹನ ವ್ಯವಸ್ಥೆ.

ಉ. “ವಿಮಾನಯಾನ ಸೇವೆ” ಎಂದರೆ ಪ್ರತ್ಯೇಕವಾಗಿ ಭಾರತ ಸರಕಾರದ ಸೈನಿಕ, ನೌಕಾದಳ ಅಥವಾ ವಾಯುದಳಗಳಿಗೆ ಸೇರಿದವುಗಳನ್ನು ಬಿಟ್ಟು.

ಊ. ಹಡಗುಕಟ್ಟೆ, ಬಂದರುಕಟ್ಟೆ ಅಥವಾ ಬಂದರು

ಋ. ಯಾಂತ್ರಿಕವಾಗಿ ನಡೆಸುವ ದೇಶಿಯಾ ನೌಕೆ

ೠ. ಗಣಿ ಮತ್ತು ತೈಲ ಪ್ರದೇಶ ಮತ್ತು ಬಂಡನೆಲೆ

ಎ. ತೋಪು

ಏ. ಕಾರ್ಯಗಾರ ಅಥವಾ ವಸ್ತುಗಳನ್ನು ಉತ್ಪಾದಿಸುವ ಅಳವಡಿಸುವ ಅಥವಾ ತಯಾರು  ಮಾಡಿಸಿ ಅವುಗಳನ್ನು ಉಪಯೋಗಿಸುವ, ಸಾಗಿಸುವ ಅಥವಾ ವ್ಯಾಪಾರ ಮಾಡುವ ಇತರೆ ಸಾರ್ವಜನಿಕ ಸಂಸ್ಥೆಗಳು.

ಐ. ಯಾವುದೇ ಸಾರ್ವಜನಿಕ ಸಂಸ್ಥೆಯು ನೌಕಯಾನ, ನೀರಾವರಿ ಅಥವಾ ನೀರು ಸರಬರಾಜು ಅಥವಾ ವಿದ್ಯುಚ್ಛಕ್ತಿ ಉತ್ಪಾದನೆ, ಸಾಗಣೆ ಮತ್ತು ವಿತರಣೆ ಅಥವಾ ಅದೇ ರೀತಿಯ ಇನ್ನಾವುದೇ ಕೆಲಸಕ್ಕೆ ಸಂಬಂಧಪಟ್ಟು ಕಟ್ಟಡಗಳ, ರಸ್ತೆಗಳ, ಸೇತುವೆಗಳ ಅಥವಾ ಕಾಲುವೆಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಪಾಡುವಿಕೆಯಲ್ಲಿ ನಿರಂತರವಾಗಿರುವ ಸಾರ್ವಜನಿಕ ಸಂಸ್ಥೆಗಳು.

ಅಂ. “ಗಣಿ” ಕಾಯಿದೆ ೧೯೫೨ರ ಕಲಂ ೨ ಉಪ ಕಲಂ (೧) ಖಂಡ (೧) ರಲ್ಲಿ ವಿವರಿಸುವಂತೆ ರಾಕ್ಯ ಕೆಲಸಗಾರರ ಹಿತರಕ್ಷಣೆಯನ್ನು ಕಾಪಾಡುವ ದೃಷ್ಟಿಯಿಂದ, ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಅಧಿಕೃತ ರಾಜಪತ್ರದಲ್ಲಿ ಅಧಿಸೂಚಿಸುವ ಸಂಸ್ಥೆಗಳು.

ಅಂ. “ಗಣಿ” ಕಾಯಿದೆ ೧೯೫೨ರ ಕಲಂ ೨ ಉಪ ಕಲಂ (೧) ಖಂಡ (೧) ರಲ್ಲಿ ವಿವರಿಸುವಂತೆ.

ಕ. “ತೋಪು” ತೋಪು ಕಾರ್ಮಿಕ ಕಾಯಿದೆ ೧೯೫೧ರ (೧೯೫೧ರ ೬೯) ಕಲಂ (೨) ಖಂಡ (ಎಫ್) ಪ್ರಕಾರ ವಿವರಿಸಿರುವಂತೆ.

ಖ. ನಿಯಮಿಸಿದ ಅಂದರೆ ಈ ಅಧಿನಿಯಮದ ನಿಯಮಗಳ ಪ್ರಕಾರ ನಿಯಮಿಸಿದವುಗಳು :

ಗ. “ರೈಲ್ವೆ ಆಡಳಿತ” ಅಂದರೆ ಭಾರತೀಯ ರೈಲ್ವೆ ಕಾಯಿದೆ (೧೮೯೦) (೧೮೯೦ ರ ೯) ಕಲಂ ೯ ಖಂಡ (೬)ರ ಪ್ರಕಾರ ವಿವರಿಸಿರುವಂತೆ

ಘ. “ಮಜೂರಿ” ಅಂದರೆ ಎಲ್ಲಾ ವಿಧವಾದ ಪರಿಶ್ರಮ ಧನ (ವೇತನ ಅಥವಾ ತುಟ್ಟಿಭತ್ಯ ಅಥವಾ ಬೇರೆ ಯಾವುದೇ ವ್ಯಕ್ತಪಡಿಸಿದ ಹಣ ಅಥವಾ ಉದ್ಯೋಗಕ್ಕೆ ವ್ಯಕ್ತಪಡಿಸಲಾದ ಅಥವಾ ಅರ್ಥೈಸಲಾದ) ಸಂಬಂಧಿಸಿದಂತೆ ನಿಯೋಜಿತ ವ್ಯಕ್ತಿಗೆ, ಅವನ ಕೆಲಸಕ್ಕೆ ತಕ್ಕಂತೆ ಅಥವಾ ಮಾಡಿದ ಕೆಲಸಕ್ಕೆ ನೀಡಬಹುದಾದ ಧನ, ಅಂದರೆ ಈ ಕೆಳಗಿನವೂ ಸೇರಿ.

೧. ಯಾವುದೇ ನ್ಯಾಯಾಲಯದ ತೀರ್ಪು, ನಿರ್ಣಯ ಮತ್ತು ಪಂಗಡಗಳ ಮಧ್ಯೆ ಆದ ಒಪ್ಪಂದದ ಪ್ರಕಾರ ನೀಡಬಹುದಾದ ಪರಿಶ್ರಮ ಧನ.

೨. ಯಾವುದೇ (ಉದ್ಯೋಗಿ) ನಿಯೋಜಿತ ವ್ಯಕ್ತಿಗೆ ಹೆಚ್ಚುವರಿ ಕೆಲಸ ಅಥವಾ ರಜಾ ದಿನಗಳು ಅಥವಾ ರಜಾ ಅವಧಿಗೆ ನೀಡಬೇಕಾದ ಪರಿಶ್ರಮ ಧನ.

೩. ಬೇರೆ ಯಾವುದೇ ಹೆಚ್ಚುವರಿ ಪರಿಶ್ರಮ ಧನ, ಉದ್ಯೋಗ, ನಿಬಂಧನೆಗಳಿಗೆ ಸಂಬಂಧಿಸಿದಂತೆ ನೀಡಬೇಕಾದ (ಬೋನಸ್ಸು ಅಥವಾ ಇನ್ನಾವುದೇ ರೀತಿಯಲ್ಲಿ ಕರೆಯಬಹುದಾದ ಉಚಿತಾರ್ಥ ಹಣ).

೪. ಯಾವುದೇ ಮೊತ್ತ ನಿಯೋಜಿತ ವ್ಯಕ್ತಿಗೆ (ಉದ್ಯೋಗಿಗೆ) ಉದ್ಯೋಗ ಅಂತ್ಯ ಗೊಂಡಾಗ ಕಾನೂನು ಪ್ರಕಾರ, ಒಪ್ಪಂದ ಕರಾರು ಪ್ರಕಾರ ಅಥವಾ ಪತ್ರಗಳ ಪ್ರಕಾರ ಬಾಕಿ ಮುರಿದುಕೊಂಡು ಅಥವಾ ಮುರಿಯದೆ ಕೊಡಬೇಕಾದ ಮೊತ್ತ. ಆದರೆ ಇದು ಸಂದಾಯ ಅವಧಿಗೆ ಅನ್ವಯಿಸುವುದಿಲ್ಲ.

೫. ಯಾವುದೇ ಮೊತ್ತ ನಿಯೋಜಿತ ವ್ಯಕ್ತಿಯು (ಉದ್ಯೋಗಿಯು) ಸದ್ಯಕ್ಕೆ ಜಾರಿಯಲ್ಲಿರುವ ಕಾನೂನು ಪ್ರಕಾರ ನಿಯೋಜಿಸಿದ ಯಾವುದೇ ಯೋಜನೆಯ ಪ್ರಕಾರ ಪಡೆಯಬಹುದಾದ ಹಣ. ಆದರೆ ಈ ಕೆಳಕಂಡವುಗಳನ್ನು ಬಿಟ್ಟು.

ಅ. ಯಾವುದೇ ಬೋನಸ್ಸು (ಲಾಭಾಂಶ ಹಂಚಿಕೆ ಬೋನಸ್ಸು ಯೋಜನೆ ಪ್ರಕಾರ ಅಥವಾ ಇನ್ನಾವುದೇ (ಉದ್ಯೋಗಿಗೆ) ನಿಯೋಜಿತ ವ್ಯಕ್ತಿಗೆ ಉದ್ಯೋಗ ನಿಬಂಧನೆಗಳ ಪ್ರಕಾರ ನೀಡಬೇಕಾದ ಪರಿಶ್ರಮಧ ಧನದಲ್ಲಿ ಸೇರಿದ ಅಥವಾ ಯಾವುದೇ ನಿರ್ಣಯ ಅಥವಾ ಪಕ್ಷಗಳ ಒಪ್ಪಂದದ ಪ್ರಕಾರ ಅಥವಾ ನ್ಯಾಯಾಲಯದ ತೀರ್ಮಾನ ಪ್ರಕಾರ ನೀಡಬಾರದ ಧನ.

ಅ. ಮನೆ ಭತ್ಯೆ ಅಥವಾ ನೀರು, ವಿದ್ಯುಚ್ಛಕ್ತಿ, ವೈದ್ಯಕೀಯ ಅಥವಾ ಯಾವುದೇ ಸೌಲಭ್ಯ ಅಥವಾ ಸರಕಾರದ ನಿರ್ದಿಷ್ಟ ಆದೇಶದ ಪ್ರಕಾರ ನೀಡಬೇಕಾದ ಭತ್ಯೆಗಳು.

ಇ. ಯಾವುದೇ ಪ್ರಯಾಣ ಭತ್ಯೆ ಅಥವಾ ಪ್ರಮಾಣ ವೆಚ್ಚದಲ್ಲಿ ನೀಡಬಹುದಾದ ರಿಯಾಯಿತಿ.

ಉ. ಯಾವುದೇ ಮೊತ್ತ, ಮಾಲೀಕನು ನಿಯೋಜಿತ ವ್ಯಕ್ತಿಗೆ (ಉದ್ಯೋಗಿಗೆ) ವಿಶೇಷ ಸಂದರ್ಭದಲ್ಲಿ ಮಾಡಿದ ವೆಚ್ಚಗಳನ್ನು ಭರಿಸುವಂತಹವುಗಳು.

ಊ. ಯಾವುದೇ ಪ್ರೋತ್ಸಾಹ ದ್ರವ್ಯ, ಉದ್ಯೋಗ ಅಂತ್ಯಗೊಂಡಾಗ ನೀಡಬಹುದಾದ ಧನ, ಆದರೆ ಉಪ ಕಲಂ (೪)ರ ಪ್ರಕಾರ ನೀಡಬಹುದಾದುದನ್ನು ಬಿಟ್ಟು.

ರಾಜ್ಯ ತಿದ್ದು ಪಡಿಗಳು
ಗುಜರಾತ-ಮಹಾರಾಷ್ಟ್ರದ ಪ್ರಕಾರ

ಜಮ್ಮು ಮತ್ತು ಕಾಶ್ಮೀರ : ಕಲಂ ೨ ಖಂಡ (೧೧) ಉಪಖಂಡ (ಋ) ನಂತರ ಹೊಸ ಉಪಖಂಡವನ್ನು ಸೇರಿಸಲಾಗಿದೆ. ಅಂದರೆ, (ಅಂ) “ಅರಣ್ಯ”ದಲ್ಲಿ ಸರಕಾರ ಅಥವಾ ಗುತ್ತಿಗೆದಾರರು ಕಾರ್ಮಿಕರನ್ನು ನೇಮಕ ಮಾಡಿಕೊಂಡು ಮರಮುಟ್ಟುಗಳ ಉತ್ಪಾದನೆ ಅಥವಾ ಸೌದೆ ಅಥವಾ ಅರಣ್ಯಾಭಿವೃದ್ಧಿ ಕೆಲಸದಲ್ಲಿ ತೊಡಗಿರುವುದು.

ಮಧ್ಯಪ್ರದೇಶ : ಕಲಂ ೨ ಖಂಡ (೧೧)ರ ನಂತರ ಈ ಕೆಳಕಂಡವನ್ನು ಸೇರಿಸಲಾಗಿದೆ, ಅಂದರೆ, (ಅ) “ಕೈಗಾರಿಕಾ ನ್ಯಾಯಾಲಯ ಅಂದರೆ ಮಧ್ಯಪ್ರದೇಶದ ಕೈಗಾರಿಕಾ ಸೌಹಾರ್ದ ಕಾಯಿದೆ, ೧೯೬೦ (೧೯೬೦ರ ೨೭) ಕಲಂ ೯ರ ಪ್ರಕಾರ ರಚಿಸಿರುವ ಕೈಗಾರಿಕಾ ನ್ಯಾಯಾಲಯ ಮತ್ತು

ಆ. ಖಂಡ (೧೧)ರ ನಂತರ, ಈ ಕೆಳಕಂಡ ಖಂಡವನ್ನು ಸೇರಿಸಲಾಗಿದೆ. ಅಂದರೆ, (೧೧ ಅ) ಕಾನೂನು ಸಮ್ಮತ ಪ್ರತಿನಿಧಿ, ಅಂದರೆ ಯಾರು ಕಾನೂನು ಪ್ರಕಾರ ದಿವಂಗತ ನಿಯೋಜಿತ ವ್ಯಕ್ತಿಯನ್ನು ಪ್ರತಿನಿಧಿಸಬಲ್ಲರೋ ಅವನು.

ಮಹಾರಾಷ್ಟ್ರ: ಆ. ಖಂಡ (೧೧)ರ ನಂತರ, ಈ ಕೆಳಕಂಡ ಖಂಡವನ್ನು ಸೇರಿಸಲಾಗಿದೆ. ಅಂದರೆ, (೧೧ ಅ) ಕಾನೂನು ಸಮ್ಮತ ಪ್ರತಿನಿಧಿ, ಅಂದರೆ ಯಾರು ಕಾನೂನು ಪ್ರಕಾರ ದಿವಂಗತ ನಿಯೋಜಿತ ವ್ಯಕ್ತಿಯನ್ನು ಪ್ರತಿನಿಧಿಸಬಲ್ಲರೋ ಅವರು.

ಆ. ಖಂಡ (೧೧) ರಲ್ಲಿ ಈ ಕೆಳಕಂಡ ಖಂಡವನ್ನು ಬದಲಿಸಲಾಗಿದೆ. (ಇ) “ತೋಪು” ಅಂದರೆ  (ಅ) ಸಿಂಕೋನ, ರಬ್ಬರ್, ಕಾಫಿ ಅಥವಾ ಟೀ ಬೆಳೆಯಲು ಉಪಯೋಗಿಸುವ ಸಂಪದ.

ಈ. “ಯಾವುದೇ ಕೃಷಿ ಕ್ಷೇತ್ರ ” ಕಬ್ಬನ್ನು ಬೆಳೆಯಲು ಉಪಯೋಗಿಸುವ ಹೊಲ ಅಥವಾ ಸಕ್ಕರೆಯನ್ನು ಉತ್ಪಾದಿಸುವ ಕಾರ್ಖಾನೆಗೆ ಸೇರಿದ ಕೃಷಿ ಕ್ಷೇತ್ರ.

ಆದರೆ, ಆ ಸಂಪದ ಅಥವಾ ಕೃಷಿ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಇಪ್ಪತ್ತೈದು ಅಥವಾ ಮೇಲ್ಪಟ್ಟ ವ್ಯಕ್ತಿಗಳು ಕೆಲಸ ಮಾಡುತ್ತಿರಬೇಕು.

ತಮಿಳುನಾಡು ಕಲಂ : ಕಲಂ ೨ ಖಂಡ (೧೧) ಅಂಶ (ಋ) ನಂತರ ಈ ಕೆಳಕಂಡ ಅಂಶವನ್ನು ಅಳವಡಿಸಲಾಗಿದೆ. (ಅಂ) “ಕಾರ್ಯ ಸಂಸ್ಥೆ ಅಥವಾ ಉದ್ದಿಮೆ” : ಯಾವುದನ್ನು ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆ ಮೂಲಕ ಈ ಕಾಯಿದೆಗೋಸ್ಕರ ಘೋಷಿಸುತ್ತದೆಯೋ ಆ ಸಂಸ್ಥೆ.

ವ್ಯಾಖ್ಯಾನ

ಮಜೂರಿ ಅರ್ಥ: ಕಾಯಿದೆಯ ಕಲಂ ೨ (ಘ)ದ ವಿವರಣೆಯ ಪ್ರಕಾರ ಮಜೂರಿ ಎಂದರೆ. ಬೋನಸ್ಸು ಸಹ ಸೇರುತ್ತದೆ. ಕಾರಣ ಇದನ್ನು ಭತ್ಯೆ ರೂಪದಲ್ಲಿ ಕೊಡಬೇಕು ಇಲ್ಲವೆ ಬೇರೆ ರೀತಿಯಲ್ಲಿ ನೀಡಲಿ, ಇದು ಪರಿಶ್ರಮ ಧನವಾಗಿರುತ್ತದೆ ಮತ್ತು ಹಣದ ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ. ಆದ್ದರಿಂದ ನೌಕರನು ತನಗೆ ಪಾವತಿ ಮಾಡಿದ ಬೋನಸ್ಸಿಗೆ ತನ್ನ ಹಕ್ಕು ಸಾಧಿಸಬಹುದು.

ಕೈಗಾರಿಕಾ ಸ್ಥಾವರ ಅರ್ಥ

ಮಜೂರಿ ಸಂದಾಯ ಕಾಯಿದೆಯು ಕಾರ್ಖಾನೆಗಳಿಗಲ್ಲದೆ ಸರಕಾರವು ಅಧಿಸೂಚನೆಯ ಮೂಲಕ ವಿಸ್ತರಿಸಿದ ಎಲ್ಲಾ ಕಾರ್ಯ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಅಧಿಸೂಚನೆಯ ಪ್ರಕಾರ ವಿಸ್ತರಿಸಿದ ಕಾರ್ಯಾಗಾರ ಅಥವಾ ಬೇರೆ ಕಾರ್ಯ ಸಂಸ್ಥೆ, ಎಲ್ಲಾ ವಸ್ತುಗಳನ್ನು ಉಪಯೋಗಿಸಲು, ಸಾಗಣೆ ಅಥವಾ ಮಾರಾಟದ ಉದ್ದೇಶದಿಂದ ಉತ್ಪತ್ತಿ ಮಾಡಲಾಗುತ್ತದೊ ವ್ಯವಸ್ಥೆ ಮಾಡಲಾಗುತ್ತದೊ ಅಥವಾ ತಯಾರು ಮಾಡಲಾಗುತ್ತದೊ, ಅವುಗಳಿಗೆ ಈ ಕಾಯಿದೆಯು ಅನ್ವಯಿಸುತ್ತದೆ.

ಲೋಕೋಪಯೋಗಿ ಇಲಾಖೆಯು ಕೈಗಾರಿಕಾ ಸ್ಥಾವರ: ಅಂದಿನ ಮದ್ರಾಸ್ ಉಚ್ಚನ್ಯಾಯಾಲಯವು ತನ್ನ ತೀರ್ಪು “ಎಕ್ಸಿಕ್ಯೂಟೀವ್ ಇಂಜಿನಿಯರ್ ಪಿ.ಡಬ್ಲ್ಯೂ ಡಿ.,: ವಿರುದ್ಧ” ನಾರ್ದರ್ನ್ ಪ್ರೆಸಿಡೆನ್ಸಿ ವಿಭಾಗ ಮದ್ರಾಸ್ ವಿ.ಕೆ.ರಾಮದಾಸ್”ನಲ್ಲಿ ಕಾಯಿದೆ ಪ್ರಕಾರ ಲೋಕೋಪಯೋಗಿ ಇಲಾಖೆಯ ಕೈಗಾರಿಕಾ ಸ್ಥಾವರದ ವ್ಯಾಪ್ತಿಯೊಳಗೆ ಬರುತ್ತದೆಯೆಂದು ಹೇಳಿದೆ. ಇದರ ಸರಿಯಾದ ಅರ್ಥವನ್ನು ತಿಳಿದುಕೊಳ್ಳಲು, ಎಲ್ಲಿ ಸರಿಯಾದ ವಿವರಣೆ ಇಲ್ಲವೋ, ಅಲ್ಲಿ ಶಬ್ದಕೋಶದ ಅರ್ಥವನ್ನಾಧರಿಸುವುದು ಯಾವಾಗಲೂ ಕ್ಷೇಮವಲ್ಲ.

ಕಲಂ ೨ (ಹೆಚ್) (ಘ) ಕೈಗಾರಿಕೋದ್ಯಮ ಅಧಿನಿಯಮ (೧೯೪೭ರ ೧೪) ಕಲಂ ೨ (ಆರ್ ಆರ್)- ಕೈಗಾರಿಕೆ ಉದ್ಯಮವನ್ನು ಸ್ಥಳಾಂತರಿಸುವುದು-ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ೧೯೬೬ ಎಸ್ ಸಿಸಿ ಪುಟ ೭೫೦. ಕಾರ್ಮಿಕರಿಗೆ, ಮಾಡಿದ ಮಜೂರಿ ಸಂದಾಯವನ್ನು “ಸ್ಥಳಾಂತರ ಬೋನಸ್ಸು” ಎಂದು ಕರೆಯಲಾಗಿದೆ ಒಂದು ವರ್ಷದ ಮಜೂರಿಗೆ ಸಮ-ಮಜೂರಿಯನ್ನು ಮಜೂರಿ ಸಂದಾಯ ಅಧಿನಿಯಮದ ಪ್ರಕಾರ ಲೆಕ್ಕ ಹಾಕಬೇಕು-ಕೈಗಾರಿಕೋದ್ಯಮದ ಅಧಿನಿಯಮದ ಪ್ರಕಾರ ಅಲ್ಲ. ಎಂ.ಸಿ ಮೆಹ್ತ “ವಿ” ಕೇಂದ್ರ ಸರಕಾರ, ಇಂಡಿಯಾ ೨೦೦೦ (೮) ಎಸ್.ಸಿ.ಸಿ.ಪುಟ ೫೩.೫.

೩. ಮಜೂರಿ ಸಂದಾಯದ ಜವಾಬ್ದಾರಿ: ಈ ಕಾಯಿದೆ ಪ್ರಕಾರ ಮಾಲೀಕನು ತಾನು ನೇಮಕ ಮಾಡಿಕೊಂಡರುವ ವ್ಯಕ್ತಿಗಳಿಗೆ ಮಜೂರಿ ಸಂದಾಯ ಮಾಡಲು ಜವಾಬ್ದಾರನಾಗಿರುತ್ತಾನೆ. ಆದರೆ, ಎಲ್ಲಿ ವ್ಯಕ್ತಿಗಳು ನಿಯೋಜಿಸಲ್ಪಟ್ಟಿದ್ದಾರೋ (ಗುತ್ತಿಗೆದಾರನಿಂದ ನಿಯೋಜಿತರಾದವರನ್ನು ಹೊರತುಪಸಿ) ಅಂದರೆ:

ಅ. ಕಾರ್ಖಾನೆಗಳಲ್ಲಿ, ಒಬ್ಬ ವ್ಯಕ್ತಿಯನ್ನು ೧೯೪೮ (೬೩ರ ೧೯೪೮)ರ ಕಾರ್ಖಾನೆ ಕಾಯಿದೆ ೭, ಉಪ ಕಲಂ (೧) ಖಂಡ (ಎಫ್) ಪ್ರಕಾರ ವ್ಯವಸ್ಥಾಪಕನೆಂದು ಹೆಸರಿಸಿದ್ದರೆ;

ಆ. ಕೈಗಾರಿಕೆ ಅಥವಾ ಬೇರೆ ಕಾರ್ಯ ಸಂಸ್ಥೆಯ ಮೇಲ್ವಿಚಾರಣೆ ಮತ್ತು ಹತೋಟಿಯಲ್ಲಿಟ್ಟುಕೊಂಡಿರುವ ವ್ಯಕ್ತಿಯಾಗಿದ್ದರೆ (ಹತೋಟಿ ಹೊಂದಿದ).

ಇ. ರೈಲ್ವೆ ವಿಷಯದಲ್ಲಿ (ಕಾರ್ಖಾನೆಗಳಲ್ಲದ) ಮಾಲೀಕನು ರೈಲ್ವೆ ಆಡಳಿತವಾಗಿದ್ದರೆ ಮತ್ತು ರೈಲ್ವೆ ಆಡಳಿತವು ಒಬ್ಬ ವ್ಯಕ್ತಿಯನ್ನು ತನ್ನ ಪರವಾಗಿ ಸ್ಥಳೀಯ ಪ್ರದೇಶಕ್ಕೋಸ್ಕರ ನೇಮಕ ಮಾಡಿದ್ದರೆ, ಆ ರೀತಿ ನೇಮಕಗೊಂಡವನು ಮಜೂರಿ ಸಂದಾಯಕ್ಕೆ ಜವಾಬ್ದಾರನಾಗಿರುತ್ತಾನೆ.

ರಾಜ್ಯ ತಿದ್ದುಪಡಿಗಳು

ಗುಜರಾತ: ಪ್ರಧಾನ ಕಾಯಿದೆಯ ೩ರಲ್ಲಿ, ಅಭಿಸಂದಿಗಾಗಿ ಈ ಕೆಳಕಂಡವುಗಳನ್ನು ಬದಲಿಸಲಾಗಿದೆ. ಅಂದರೆ, ಪರಂತು ನಿಯೋಜಿತ ವ್ಯಕ್ತಿಗಳ ವಿಷಯದಲ್ಲಿ (ಗುತ್ತಿಗೆದಾರರನ್ನು ಹೊರತುಪಡಿಸಿ)

ಅ. ಕಾರ್ಖಾನೆಗಳಲ್ಲಿ ಒಬ್ಬ ವ್ಯಕ್ತಿಯನ್ನು ಮೇಲ್ವಿಚಾರಕನೆಂದು ಕಾರ್ಖಾನೆ ಅಧಿನಿಯಮ ೧೯೪೮ (ಕಲಂ ೭ ಉಪ ಕಲಂ (೧) ಖಂಡ (ಎಫ್) ಪ್ರಕಾರ ೧೯೪೮ರ ೪೩) ಆ ರೀತಿ ನೇಮಿಸಿದ ಮತ್ತು ಮಾಲೀಕ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ

ಆ. ಕೈಗಾರಿಕಾ ಸ್ಥಾವರದಲ್ಲಿ, ಮಾಲೀಕನಿಗೆ, ಕೈಗಾರಿಕಾ ಸ್ಥಾವರದ ಮೇಲ್ವಿಚಾರಣೆ ರಕ್ಷಣೆ ಮತ್ತು ಹತೋಟಿ ವಿಷಯದಲ್ಲಿ ಜವಾಬ್ದಾರನಾಗಿರುವವನು ಮತ್ತು ಮಾಲೀಕ ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ

ಇ. ರೈಲ್ವೆ ವಿಷಯದಲ್ಲಿ (ಕಾರ್ಖಾನೆಗಳಲ್ಲದ) ಮಾಲೀಕರು ರೈಲ್ವೆ ಆಡಳಿತವೇ ಆಗಿದ್ದರೆ ಮತ್ತು ರೈಲ್ವೆ ಆಡಳಿತವು ಸ್ಥಳೀಯ ಕೆಲಸಕ್ಕೋಸ್ಕರ ಬೇರೊಬ್ಬರನ್ನು ನೇಮಿಸಿದ್ದರೆ, ಆ ರೀತಿ ನೇಮಿಸಲ್ಪಟ್ಟವನು ಮಜೂರಿ ಸಂದಾಯಕ್ಕೆ ಜವಾಬ್ದಾರನಾಗಿರುತ್ತಾನೆ.

ಮಧ್ಯ ಪ್ರದೇಶ : ಗುಜರಾತಿನ ರೀತಿಯಲ್ಲಿ ಇರುತ್ತದೆ.

ಮಹಾರಾಷ್ಟ್ರ : ಗುಜರಾತಿನ ರೀತಿಯಲ್ಲಿ ಇರುತ್ತದೆ.

ವ್ಯಾಖ್ಯಾನ

ಈ ಉಪಖಂಡವು ಕಡ್ಡಾಯವೊ ಅಥವಾ ಆದೇಶ ಪೂರಕವೊ ನಿರ್ಧರಿಸತಕ್ಕ ಅಂಶಗಳು: ದಾಲ್ ಚಂದ್ “ವಿ” ಮುನಿಸಿಪಲ್ ಕಾರ್ಪೋರೇಷನ್ ಭೂಪಾಲ್ ೧೯೮೩ ಕ್ರಿ.ಲಾ.ಜ. ಪುಟ ೪೪೮, ೪೪೯ (ಎಫ್.ಸಿ) : ಮಾಧಪನೆ ಸಿಲ್ಲ್ಯೆ “ವಿ” ಎಸ್.ಎಸ್.ಎಫ್ ಕಾಲೇಜು ಎ ಮಲಂಕಾರ, ೧೯೯೨ ಲ್ಯಾಬ್ ಐ.ಸಿ. ೫೦ ಪುಟ ೫೫ (ಕೆ): ಟಿ.ಎ. ಉಸ್ಮಾನ್ “ವಿ” ಫುಡ್ ಇನ್ಸ್ ಪೆಕ್ಟರ್ ೧೯೯೪ ಎಸ್.ಸಿ.ಕ್ರ. ರಿ ೫೦೨: ಸ್ಟೇಟ್ ಆಫ್ ಪಂಜಾಬ್ “ವಿ” ಬಲ್ಬೀರ್ ಸಿಂಗ್, ೧೯೯೪ ಸೆಕ್ಷನ್ (ಕ್ರ) ೬೨೪ ಪು ೬೫೦, ಕೇಸಿನಲ್ಲಿ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

“ಈ ಉಪಖಂಡವು ಕಡ್ಡಾಯವೋ ಅಥವಾ ಆದೇಶವೋ ಎಂದು ತೀರ್ಮಾನಿಸಲು ಯಾವುದೇ ಹಾಲಿ ಪ್ರಯೋಗ ಅಥವಾ ಬದಲಾಗದ ಸೂತ್ರಗಳೇನಿಲ್ಲ. ವಿಶಾಲವಾದ ಅರ್ಥವುಳ್ಳ ಶಾಸನ ಮುಖ್ಯ. ಸಂಬಂಧಪಟ್ಟ ಉಪಖಂಡದ ಮುಖ್ಯ ಉದ್ದೇಶವೇನೆಂಬುದನ್ನು ತಿಳಿಯುವುದು ಅಗತ್ಯ. ಈ ಎರಡರ ಸಂಬಂಧ ಬಹಳ ಮುಖ್ಯ. ಈ ಉಪಖಂಡಗಳನ್ನು ಕಡ್ಡಾಯವಾದ ಅಥವ ಆದೇಶಪೂರಕವಾಗಿ ಅರ್ಥೈಸುವುದರಿಂದ ಉಂಟಾಗಬಹುದಾದಂತಹ ಪರಿಣಾಮಗಳನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಅವುಗಳ ಕಡ್ಡಾಯ ಪೂರಕವೋ ಅಥವಾ ಆದೇಶ ಪೂರಕವೋ ಎಂದು ತಿಳಿಯಬೇಕಾಗುತ್ತದೆ. ಶಾಸನದ ಉದ್ದೇಶವು, ಸಾರ್ವಜನಿಕವಾಗಿ ಆಗುವ ಹಾನಿಯನ್ನು ತಪ್ಪಿಸುವುದು ಅಥವಾ ಹೋಗಲಾಡಿಸುವುದು. ಆದರೆ ಸಂಬಂಧಪಟ್ಟ ಉಪಖಂಡವನ್ನು ಅದರ ನಿಜವಾದ ಅರ್ಥಕ್ಕನುಗುಣವಾಗಿ ಜಾರಿಗೆ ತರುವುದರಿಂದ ಶಾಸನದ ಉದ್ದೇಶವನ್ನು ವಿಫಲಗೊಳಿಸುವದೊ ಎಂಬುದನ್ನು ತಿಳಿಯುವುದು ಮುಖ್ಯ, ಅದು ಆದೇಶಪೂರಕ. ಏಕೆಂದರೆ, ಸಂಬಂಧಪಟ್ಟ ಉಪಖಂಡವನ್ನು ಜಾರಿಗೆ ತರದೇ ಇರುವುದರಿಂದ ಅಥವಾ ತಪ್ಪಿಸುವುದರಿಂದ ಸಾರ್ವಜನಿಕವಾಗಿ ಆಗುವ ಅನಾಹುತವನ್ನು ತಪ್ಪಿಸುವುದು ಈ ಕಾನೂನಿನ ಉದ್ದೇಶವಾಗಿರುವುದರಿಂದ, ಇದನ್ನು ಆದೇಶಪೂರಕ ನೀಡದವರು ಅದಕ್ಕೆ ಸಕಾರಣವನ್ನು ನೀಡಬೇಕಾಗುತ್ತದೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ಸಾಮಾನ್ಯವಾಗಿ ಕೆಲವು ನಿಯಮಗಳನ್ನು ಅವುಗಳ ನಿಜವಾದ ಅರ್ಥಕ್ಕೆ ವಿರುದ್ಧವಾಗಿ, ಅದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿಗೊಳಿಸಬೇಕಾದವರೂ ಪಾಲಿಸುವುದಿಲ್ಲ. ಈ ಶಾಸನಗಳನ್ನು ಜಾರಿಗೆ ತರಬೇಕಾದ ಜವಾಬ್ದಾರಿಯುಳ್ಳವರು, ಇದನ್ನು ತಪ್ಪಿಸುವುದರಿಂದ ಅಥವಾ ಬೇಜವಾಬ್ದಾರಿಯಿಂದ ಜಾರಿ ತರದೆ ಇರುವುದರಿಂದ ಸಾರ್ವಜನಿಕರಿಗೆ ಆಗಬಹುದಾದ ಅನಾಹುತವನ್ನು ತಪ್ಪಿಸುವುದು ಇದರ ಉದ್ದೇಶ. ಅಲ್ಲದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ; ಈ ನಿಯಮಗಳನ್ನು ನಿಗಧಿಪಡಿಸಿದ ಅವಧಿಯೊಳಗೆ ಜಾರಿಗೊಳಿಸಬೇಕು, ಇಲ್ಲದಿದ್ದರೆ ಇದರಿಂದ ಉಂಟಾಗಬಹುದಾದ ಪರಿಣಾಮಕ್ಕೆ ಗುರಿಯಾಗಬೇಕಾಗುತ್ತದೆ.

ಉಪಬಂಧ:೧. ಅಬ್ದುಲ್ಲ ಜಬ್ಬಾರ್ ಬಟ್ “ವಿ” ಜಮ್ಮು ಮತ್ತು ಕಾಶ್ಮೀರ ರಾಜ್ಯ ಈ ಉಪಬಂಧವನ್ನು ಕೇಸಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾಯಿದೆಯ ಮುಖ್ಯ ಉದ್ದೇಶಗಳಿಗನುಗುಣವಾಗಿ ಗಣನೆಗೆ ತೆಗೆದುಕೊಳ್ಳಬೇಕೆಂದು ತಿಳಿಸಿದೆ. ೨. ದಿಲೀಪ್ “ವಿ” ಸ್ಟೇಟ್ ಆಫ್ ಕೇರಳದಲ್ಲಿ, ಕೇರಳ ಉಚ್ಚ ನ್ಯಾಯಾಲಯವು ಈ ಕೆಳಕಂಡಂತೆ ಅಭಿಪ್ರಾಯಪಟ್ಟಿದೆ.

ಈಗಾಗಲೇ ಶಾಸನಗಳ ನಿಯಮಗಳನ್ನು ಅರ್ಥೈಸಿ ನಿರ್ಧರಿಸಲಾಗಿರುವಂತೆ ಉಪಬಂಧದ ವಿವರಣೆಗಳು ಕಾಯಿದೆಯ ಮುಖ್ಯ ಕಲಂನ ಅರ್ಥಕ್ಕನುಗುಣವಾಗಿರಬೇಕೇ ಹೊರತು ಅದಕ್ಕೆ ವಿರುದ್ಧವಾದ ಅಥವಾ ಸ್ವತಂತ್ರವಾದ ಅಭಿಪ್ರಾಯ ನೀಡುವಂತೆ ಉಪಬಂಧಗಳನ್ನು ಅರ್ಥೈಸಬಾರದೆಂದು ಹೇಳಿದೆ.

೪. ಮಜೂರಿ ಕಾಲಾವಾಧಿಯನ್ನು ನಿಗದಿಪಡಿಸುವುದು: ಮಜೂರಿಯನ್ನು ಸಂದಾಯ ಮಾಡುವ ಜವಾಬ್ದಾರಿಯುಳ್ಳ ಪ್ರತಿಯೊಬ್ಬ ವ್ಯಕ್ತಿಯು, ಮಜೂರಿ ಸಂದಾಯದ ಕಾಲವನ್ನು ನಿಗದಿಪಡಿಸಬೇಕು (ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಮಜೂರಿ ಕಾಲಾವಧಿ) ಅದಕ್ಕನುಗುಣವಾಗಿ ಮಜೂರಿ ಸಂದಾಯ ಮಾಡಬೇಕು.

೫. ಮಜೂರಿ ಸಂದಾಯ ವೇಳೆ: ೧. ನಿಯೋಜಿತ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಬ್ಬ ಉದ್ಯೋಗಿಯ ಮಜೂರಿಯನ್ನು

ಅ. ಯಾವುದೇ ರೈಲ್ವೆ, ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಇತರೆ ಕಾರ್ಯ ಸಂಸ್ಥೆಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ವ್ಯಕ್ತಿಗಳು ನಿಯೋಜಿತರಾಗಿದ್ದರೆ, ಅವರಿಗೆ ತಿಂಗಳ ಏಳನೆ ದಿನದೊಳಗಾಗಿ ಕೊಡಬೇಕು.

ಆ. ಬೇರೆ ಯಾವುದೇ ರೈಲ್ವೆ ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಕಾರ್ಯ ಸ್ಥಂಸ್ಥೆಗಳು ತಿಂಗಳ ಹತ್ತನೇ ದಿನಿದೊಳಗಾಗಿ ಕೊಡಬೇಕು.

ಮೇಲೆ ತಿಳಿಸಿದ ಮಜೂರಿ ಸಂದಾಯದ ಕೊನೆ ದಿನದ ನಂತರ ಮಜೂರಿ ಸಂದಾಯ ಮಾಡಬಹುದಾದವುಗಳೆಂದರೆ:

ಹಡಗು ನಿಲ್ದಾಣ, ಹಡಗು ಕಟ್ಟೆ ಅಥವಾ ಗಣಿಗಳಲ್ಲಿ ವ್ಯಕ್ತಿಗಳು ನಿಯೋಜಿತರಾಗಿದ್ದಾರೆ, ಹಡಗುಗಳಿಗೆ ತುಂಬುವ ಅಥವಾ ಹಡಗುಗಳಿಂದ ಇಳಿಸುವ ಅಥವಾ ತುಂಬುವ ಕೆಲಸ ಅಂತಿಮವಾಗಿ ಮುಗಿದಂದಿನಿಂದ ನೀಡಬಹುದಾದ ಮಜೂರಿಯನ್ನು, ಆ ಕೆಲಸ ಮುಗಿದ ಏಳನೇ ದಿನಿದೊಳಗೆ ನೀಡತಕ್ಕದ್ದು.

೨. ಯಾವುದೇ ನಿಯೋಜಿತ ವ್ಯಕ್ತಿಯನ್ನು ಮಾಲೀಕನು ಅಥವಾ ಮಾಲೀಕರ ಪರವಾಗಿ ಬೇರೆಯವರು ವಜಾ ಮಾಡಿದ್ದರೆ, ಆ ವ್ಯಕ್ತಿಯ ದುಡಿಮೆಯ ಹಣವನ್ನು, ಅವನನ್ನು ವಜಾ ಮಾಡಿದ ದಿನದ ಎರಡನೇ ಕೆಲಸದ ದಿನದಂದು ಪಾವತಿ ಮಾಡಬೇಕು, ಅಂದರೆ ಯಾವುದೇ ನಿಯೋಜಿತ ವ್ಯಕ್ತಿಯನ್ನು, ಕಾರ್ಯ ಸಂಸ್ಥೆಯಿಂದ ವಾರದ ರಜಾ ಅಥವಾ ಅಧಿಕೃತ ರಜಾ ದಿನವಲ್ಲದೆ, ಬೇರೆ ದಿನದಂದು ಕಾರ್ಯ ಸಂಸ್ಥೆ ಮುಚ್ಚಿದ್ದಾಗ ತೆಗೆದಿದ್ದರೆ ತೆಗೆದ ದಿನದ ಎರಡನೇ ದಿನದಂದು, ಆ ವ್ಯಕ್ತಿಯ ದುಡಿಮೆಯ ಹಣವನ್ನು ಕೊಡತಕ್ಕದ್ದು.

೩. ರಾಜ್ಯ ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೂಲಕ. ಆ ಆಜ್ಞೆಯಲ್ಲಿ ಸೂಚಿಸಿರುವಂತೆ ಕಾಲಮಿತಿ ಮತ್ತು ನಿರ್ಬಂಧಗಳಿಗನುಗುಣವಾಗಿ, ಮಜೂರಿ ನೀಡುವ ಬಗ್ಗೆ ಮಜೂರಿ ಸಂದಾಯ ಮಾಡಬಹುದಾದ ವ್ಯಕ್ತಿಗೆ ರಿಯಾಯಿತಿ ನೀಡಿ, ರೈಲ್ವೆಯಲ್ಲಾಗಲಿ, ಕಾರ್ಖಾನೆ ಹೊರತುಪಡಿಸಿ, ದಿನಕೂಲಿ ಆಧಾರದ ಮೇಲೆ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರಕ್ಕೆ ಒಳಪಟ್ಟ ಕಾಮಗಾರಿ ಇಲಾಖೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಜೂರಿ ಸಂದಾಯದ ಅಧಿನಿಯಮದಿಂದ ರಿಯಾಯಿತಿ ನೀಡಬಹುದು. ಆದರೆ, ದಿನಕೂಲಿ ಮೇಲೆ ಕೆಲಸ ಮಾಡುವ ಕೆಲಸಗಾರರಿಗೆ ಸಂದಾಯ ಮಾಡಬೇಕಾದ ಮಜೂರಿ ಬಗ್ಗೆ ಕೇಂದ್ರ ಸರಕಾರದೊಡನೆ ಸಮಾಲೋಚಿಸದೆ, ಈ ಬಗ್ಗೆ ರಾಜ್ಯ ಸರಕಾರವು ಆಜ್ಞೆ ಹೊರಡಿಸಬಾರದು.

೪) ಉಪ ಕಲಂ (೨) ರಲ್ಲಿ ತಿಳಿಸಿರುವುದನ್ನು ಹೊರತುಪಡಿಸಿ, ಎಲ್ಲಾ ಮಜೂರಿ ಸಂದಾಯವನ್ನು ಕೆಲಸದ ದಿನದಿಂದಲೇ ಮಾಡಬೇಕು.

ರಾಜ್ಯ ತಿದ್ದುಪಡಿಗಳು

ಅಂಡಮಾನ್ ಮತ್ತು ನಿಕೋಬಾರ್ : ಕಲಂ ೫ ಉಪ ಕಲಂ (೧) ರಲ್ಲಿ ಈ ಕೆಳಕಂಡಂತೆ ಬದಲಿಸಲಾಗಿದೆ. ಆದರೆ, “ಪ್ರತಿಯೊಬ್ಬ ವ್ಯಕ್ತಿಯ ಮಜೂರಿಯನ್ನು ಅವನು ನಿಯೋಜಿತನಾಗಿರುವ ಯಾವುದೇ ರೈಲ್ವೆ ಅಥವಾ ಕಾರ್ಖಾನೆ ಅಥವಾ ಕೈಗಾರಿಕೆ ಸಂಸ್ಥೆಗಳಾಗಿರಲಿ, ಸರಕಾರವು ಹೊರಡಿಸುವ ಸಾಮಾನ್ಯ ಅಥವಾ ವಿಶೇಷ ಆಜ್ಞೆಗಳಲ್ಲಿ ಸೂಚಿಸುವ ದಿನಗಳೊಳಗಾಗಿ ಮತ್ತು ಯಾವುದೇ ರೀತಿಯಲ್ಲೂ ಆ ರೀತಿ ಗೊತ್ತು ಮಾಡಿದ ದಿನಗಳು ನಿಗದಿತ ಮಜೂರಿ ಸಂದಾಯ ಕಾಲಮಿತಿಯನ್ನು ಮೀರದಂತೆ ಇರಬೇಕು.”

ಲಕ್ಷದ್ವೀಪ: ಕಲಂ ೫ ಉಪ ಕಲಂ (೧)ರಲ್ಲಿ ಕೆಳಕಂಡಂತೆ ಬದಲಿಸಲಾಗಿದೆ. ಅಂದರೆ, ೧. ಪ್ರತಿಯೊಬ್ಬ ವ್ಯಕ್ತಿಯ ಮಜೂರಿಯನ್ನು ಅವನು ಕಾರ್ಖಾನೆಯಲ್ಲಿರಲಿ ಅಥವಾ ಕೈಗಾರಿಕಾ ಸಂಸ್ಥೆಗಳಲ್ಲಿರುವ ಅವನ ಮಜೂರಿಯನ್ನು ನಿಗದಿತ ಮಜೂರಿ ಸಂದಾಯ ಕಾಲಾಮಿತಿ ಮೀರುವ ಮುನ್ನ ಕೊಡತಕ್ಕದ್ದು. ಕಾಲಾಮಿತಿ ಮುಗಿದ ಮೇಲೆ ಮಜೂರಿ ಕೊಡತಕ್ಕ ಸಂದರ್ಭಗಳಲ್ಲಿ ರಾಜ್ಯ ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆಗಳ ಮೂಲಕ ಬೇರೆ ಬೇರೆ ದಿನಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ನಿಗದಿಪಡಿಸಬಹುದು. ಹಾಗೆ ನಿಗದಿಪಡಿಸಿದ ದಿನಗಳು ಮೂಲ ಕಾಲಾಮಿತಿ ಅವಧಿಗೆ, ನಿಗದಿತ ಕಾಲಮಿತಿಯ ಅಂತಿಮ ದಿನಕ್ಕಿಂತ ಮೀರದಂತೆ ಇರಬೇಕು: ಇರತಕ್ಕದ್ದು.

೬. ಮಜೂರಿಯನ್ನು ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳ ಮೂಲಕ ಮಾಡಬೇಕು: ಎಲ್ಲಾ ಮಜೂರಿಯನ್ನು ಚಾಲ್ತಿಯಲ್ಲಿರುವ ನಾಣ್ಯ, ಅಥವಾ ನೋಟುಗಳ ಮೂಲಕ ಅಥವಾ ಎರಡೂ ಸೇರಿ ಮಾಡತಕ್ಕದ್ದು. ಆದರೆ, ಮಾಲೀಕರು ಸಂಬಂಧಪಟ್ಟ ನೌಕರರಿಂದ ಲಿಖಿತ ಅಧಿಕಾರ ಪಡೆದು ಚೆಕ್ ಮೂಲಕವಾಗಲಿ ಇಲ್ಲವೆ ಅವರ ಬ್ಯಾಂಕಿನ ಖಾತೆಗೆ ಜಮಾ ಮಾಡುವುದರ ಮೂಲಕ ಮಜೂರಿಯನ್ನು ಕೊಡಬಹುದು.

ರಾಜ್ಯ ತಿದ್ದುಪಡಿಗಳು

ಆಂಧ್ರಪ್ರದೇಶ: ಕಲಂ ೬ರಲ್ಲಿ ಈ ಕೆಳಕಂಡ ಅಭಿಸಂಧಿಯನ್ನು ಈಗಿರುವ ಅಭಿಸಂಧಿಯ ನಂತರ ಅಳವಡಿಸಲಾಗಿದೆ. ಅಂದರೆ, “ರಾಜ್ಯ ಸರಕಾರವು ಆಂಧ್ರಪ್ರದೇಶದ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ಕೈಗಾರಿಕಾ ಸಂಸ್ಥೆಗಳನ್ನು ನಿರ್ದಿಷ್ಟಪಡಿಸಬಹುದು. ಆ ಸಂಸ್ಥೆಯ ಮಾಲೀಕರು ಸಂಸ್ಥೆಯಲ್ಲಿ ನಿಯೋಜಿಸಲ್ಪಟ್ಟ ವ್ಯಕ್ತಿಗಳಿಗೆ ಮಜೂರಿಯನ್ನು ಚೆಕ್ ಮೂಲಕ ಅಥವಾ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದರ ಮೂಲಕ ನೀಡಬಹುದು.

ಅಸ್ಸಾಂ: ಕಲಂ ೬ರಲ್ಲಿ ಈ ಕೆಳಕಂಡ ಅಭಿಸಂಧಿಯನ್ನು ಮತ್ತು ವಿವರಣೆಯನ್ನು ಬದಲಿಸಲಾಗಿದೆ. ಆದರೆ, ಪರಂತು ಬೋನಸ್ಸು ಸಂದಾಯ ಕಾಯಿದೆ ೧೯೬೫ರಲ್ಲಿರುವ ಯಾವುದಕ್ಕೂ ಧಕ್ಕೆಯಾಗದಂತೆ ಪ್ರತಿಯೊಬ್ಬ ನಿಯೋಜಿತ ವ್ಯಕ್ತಿಗೆ, ಆ ವರ್ಷದಲ್ಲಿ ಸಂದಾಯ ಮಾಡಬೇಕಾದ ಬೋನಸ್ ನ ನಲವತ್ತು ರೂಪಾಯಿಗೂ ಮೇಲ್ಪಟ್ಟು ಹಣದಲ್ಲಿ ಮೂರನೆ ಒಂದು ಭಾಗದಷ್ಟು ಹಣವನ್ನು ರಾಷ್ಟ್ರೀಯ ರಕ್ಷಣಾನಿಧಿ ಅಥವಾ ರಾಷ್ಟ್ರೀಯ ಉಳಿತಾಯ ನಿಧಿಯಲ್ಲಿ ತೊಡಗಿಸಬಹುದು. ಆದರೆ ನಿಯೋಜಿತ ವ್ಯಕ್ತಿಯು ಒಪ್ಪಿ ನಿಗದಿತ ಪತ್ರದಲ್ಲಿ ತನ್ನ ಮಾಲೀಕನಿಗೆ ಇದಕ್ಕೆ ತನ್ನ ಅಭ್ಯಂತರವಿಲ್ಲವೆಂದು ಒಪ್ಪಿಗೆಯನ್ನು ಸೂಚಿಸಿದರೆ ಮಾತ್ರ.

ವಿವರಣೆ: ಈ ಕಲಂ ದೃಷ್ಟಿಯಿಂದ, ವ್ಯಕ್ತಪಡಿಸುವುದೇನೆಂದರೆ,

೧. ಮಜೂರಿ ಅಂದರೆ ಯಾವುದೇ ರೀತಿಯ ಬೋನಸ್ಸು ಕಾಯಿದೆ ಕಲಂ ೨ ಖಂಡ (|||) ಉಪಖಂಡ (೧) ರಲ್ಲಿರುವಂತೆ ೨. ಬೋನಸ್ಸು ಅಂದರೆ ನಿಯೋಜಿತ ವ್ಯಕ್ತಿಗೆ ನಿಯೋಜನೆಯ ಷರತ್ತುಗಳ ಪ್ರಕಾರ ಕೊಡಬೇಕಾದ ಅಥವಾ ಯಾವುದೇ ಐತೀರ್ಪು ಅಥವಾ ಒಪ್ಪಂದ ಅಥವಾ ನ್ಯಾಯಾಲಯದ ಆಜ್ಞೆ ಮತ್ತು ಸಹ ಯಾವುದೇ ಬೋನಸ್ಸು ಕಲಂ (೨) ಖಂಡ (೧೧) ಉಪಖಂಡ (೧)ರಲ್ಲಿ ಏರ್ಪಡಿಸಿರುವಂತೆ.

ಬಿಹಾರ: ಮಜೂರಿ ಸಂದಾಯ ಅಧಿನಿಯಮದ ೧೯೩೬, ಕಲಂ ೬ ಕ್ಕೆ ಕೆಳಕಂಡ ಅಭಿಸಂಧಿಯನ್ನು ಸೇರಿಸುವುದು ಆದರೆ:

ಪರಂತು ನಿಯೋಜಿತ ವ್ಯಕ್ತಿಗೆ ನಿಯೋಜನೆಯ ಷರತ್ತು ಅಥವಾ ಯಾವುದೇ ಐತೀರ್ಪು ಅಥವಾ ಒಪ್ಪಂದ ಅಥವಾ ನ್ಯಾಯಾಲಯ ಆಜ್ಞೆ ಪ್ರಕಾರ ಸಂದಾಯವಾಗಬೇಕಾದ ಬೋನಸ್ಸು, ಅವನ ವಾರ್ಷಿಕ ಒಟ್ಟು ದುಡಿಮೆಯ ಹಣಕ್ಕಿಂತ (ತಟ್ಟಿ ಭತ್ಯೆ ಬಿಟ್ಟು) ಆ ವರ್ಷ ನಾಲ್ಕನೇ ಒಂದರಷ್ಟು ಹೆಚ್ಚಾಗಿದ್ದರೆ, ಹೆಚ್ಚಿನಂಶವನ್ನು ಅವನಿಗೆ ಕೊಡತಕ್ಕದ್ದು ಅಥವಾ ಅವನ ಪರವಾಗಿ ಕಾನೂನಿನ ಪ್ರಕಾರ ತೊಡಗಿಸಬಹುದು.

ಮಜೂರಿ ಸಂದಾಯದ ಕಾಯಿದೆ ೧೯೩೬ರ ಕಲಂ ೬ರ ಅಭಿಸಂಧಿಯಲ್ಲಿ ಬಿಹಾರ ರಾಜ್ಯಕ್ಕೆ ಅನ್ವಯಿಸಿದಂತೆ (ಇನ್ನು ಮುಂದೆ ಉಲ್ಲೇಖಿಸುವ ಪ್ರಧಾನ ಕಾಯಿದೆ) ಸಂದಾಯ ಮಾಡಬೇಕಾದ ಯಾವುದೇ ಬೋನಸ್ಸು ಪದಗಳಿಗೆ ಬದಲಾಗಿ ಆ ವರ್ಷದಲ್ಲಿ ಸಂದಾಯ ಮಾಡಬೇಕಾದ ಪೂರ್ಣ ಬೋನಸ್ಸು ಎಂಬ ಪದಗಳನ್ನು ಮತ್ತು ಯಾವ ವರ್ಷಕ್ಕೆ ಬೋನಸ್ಸು ಸಂಬಂಧಿಸಿದ್ದು, ಪದಗಳಿಗೆ ಆ ವರ್ಷಕ್ಕೆ ಎಂಬ ಪದಗಳನ್ನು ಬದಲಿಸಬೇಕು.

ಗುಜರಾತ್: ೧೯೩೬ ಮಜೂರಿ ಸಂದಾಯ ಕಾಯಿದೆ, ಗುಜರಾತ್ ರಾಜ್ಯಕ್ಕೆ ಅನ್ವಯವಾಗುವಂತೆ, (ಇನ್ನು ಮುಂದೆ ಕರೆಯಲಾಗುವ ಪ್ರಧಾನ ಕಾಯಿದೆ) ಕಲಂ ೬ರಲ್ಲಿ ಈ ಕೆಳಕಂಡಂತೆ ಬದಲಿಸುವುದು, ಅಂದರೆ, ಆ ಮಜೂರಿಯನ್ನು ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳ ಮೂಲಕ ಮಾಡತಕ್ಕದ್ದು. ಬದಲಾಗಿ ಎಲ್ಲಾ ಮಜೂರಿಯನ್ನು ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳ ಅಥವಾ ಎರಡೂ ಸೇರಿ ಮಾಡತಕ್ಕದ್ದು.

ಪರಂತು, ಯಾವ ವರ್ಷದಲ್ಲಿ ನಿಯೋಜಿತ ವ್ಯಕ್ತಿಗೆ ನೀಡಬಹುದಾದ ಬೋನಸ್ಸು, ಆ ವರ್ಷದ ಅವನ ಒಟ್ಟು ದುಡಿಮೆಯ (ತುಟ್ಟಿಭತ್ಯೆ ಕಳೆದು) ನಾಲ್ಕನೆ ಒಂದು ಭಾಗಕ್ಕಿಂತ ಹೆಚ್ಚಾದರೆ, ಆ ಹೆಚ್ಚುವರಿಯನ್ನು ಕೊಡತಕ್ಕದ್ದು, ಅಥವಾ ನಿಗದಿತ ರೀತಿಯಲ್ಲಿ ತೊಡಗಿಸತಕ್ಕದ್ದು.

ಸಮಜಾಯಿಸಿ: ವಿವರಣೆ: ಈ ಕಲಂನ ದೃಷ್ಟಿಯಿಂದ ವ್ಯಕ್ತಪಡಿಸುವ ೧) ಮಜೂರಿ ಎಂದರೆ ಕಲಂ ೨ ಖಂಡ (೧೧೧೧) ಉಪಖಂಡ (೧)ರಲ್ಲಿ ಉಲ್ಲೇಖಿಸಿರುವ ಬೋನಸ್ಸು ಸೇರುವುದು. ೨. ಬೋನಸ್ಸು ಎಂದರೆ, ನಿಯೋಜಿತ ವ್ಯಕ್ತಿಗೆ ನಿಯೋಜನೆಯ ಷರತ್ತು ಪ್ರಕಾರ ಅಥವಾ ಐತೀರ್ಪು ಅಥವಾ ಒಪ್ಪಂದ ಅಥವಾ ನ್ಯಾಯಾಲಯದ ಆಜ್ಞೆ ಪ್ರಕಾರ ಕೊಡಬೇಕಾದ ಕಲಂ೨ ಖಂಡ (೫) ಉಪಖಂಡ (೧) ರ ಪ್ರಕಾರ ವಿವರಣೆಯ ಬೋನಸ್ಸು ಸೇರುತ್ತದೆ.

ಮಹಾರಾಷ್ಟ್ರ:೧೯೩೬ರ ಮಜೂರಿ ಸಂದಾಯ ಕಾಯಿದೆ ೧೯೩೬ರ ೪ನೆಯ ಮಹಾರಾಷ್ಟ್ರ ರಾಜ್ಯಕ್ಕೆ ಅನ್ವಯಿಸಿದಂತೆ (ಇನ್ನು ಮುಂದೆ ಉಲ್ಲೇಖಿಸುವ ಪ್ರಧಾನ ಕಾಯಿದೆ) ೬ರಲ್ಲಿ ಈ ಕೆಳಕಂಡದನ್ನು ಬದಲಿಸುವುದು, ಅಂದರೆ ಮಜೂರಿಯನ್ನು ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳ ಮೂಲಕ ನೀಡತಕ್ಕದ್ದು.

ಪರಂತು ಎಲ್ಲಾ ನಿಯೋಜಿತ ವ್ಯಕ್ತಿಗೆ (ಉದ್ಯೋಗಿಗೆ ಸಂದಾಯ ಮಾಡಬೇಕಾದ ಬೋನಸ್ಸು ಆ ವರ್ಷದ ಒಟ್ಟು ಅವನ ಮಜೂರಿಯ ಒಂದನೇ ನಾಲ್ಕರಷ್ಟಕ್ಕಿಂತ ಹೆಚ್ಚಾದರೆ (ತುಟ್ಟಿಭತ್ಯೆ ಹೊರತುಪಡಿಸಿ) ಅಷ್ಟು ಹೆಚ್ಚುವರಿಯನ್ನು ಕೊಡತಕ್ಕದ್ದು ಅಥವಾ ನಿಗದಿತ ರೀತಿಯಲ್ಲಿ ಬಂಡವಾಳವಾಗಿ ತೊಡಗಿಸುವುದು.

ವಿವರಣೆ: ಈ ಕಲಂಗಾಗಿ ಅಭಿವ್ಯಕ್ತಿ, ಮಜೂರಿ ಅಂದರೆ ಕಲಂ ೨ರಲ್ಲಿ ಖಂಡ (೬) ಉಪಖಂಡ (೧) ರಲ್ಲಿ ವಿವರಿಸಿರುವ ಬೋನಸ್ಸು ಹಣವೂ ಸೇರುತ್ತದೆ. ೨. ಬೋನಸ್ಸು ಅಂದರೆ ಉದ್ಯೋಗಿಗೆ, ಉದ್ಯೋಗದಿಂದ ಬರುವ ಅಥವಾ ತೀರ್ಪು ಅಥವಾ ಒಪ್ಪಂದ ಅಥವಾ ನ್ಯಾಯಾಲಯದ ಆಜ್ಞೆ ಮತ್ತು ಕಲಂ ೨ ಖಂಡ (೬) ರ ಪ್ರಕಾರ ಕೊಡಬೇಕಾದ ಹಣ.

ಒರಿಸ್ಸಾ: ೧೯೩೬ರ ಮಜೂರಿ ಸಂದಾಯ ಕಾಯಿದೆಯ ಕಲಂ ೬ಕ್ಕೆ ಈ ಕೆಳಕಂಡ ಅಭಿಸಂಧಿಯನ್ನು ಸೇರಿಸುವುದು; ಅಂದರೆ, ಪರಂತು ಎಲ್ಲಾ ಉದ್ಯೋಗಿಗಳಿಗೆ ಸಂದಾಯ ಮಾಡಬೇಕಾದ ಬೋನಸ್ಸು ಅವನ ಆ ವರ್ಷದ ಒಟ್ಟು ಮಜೂರಿ ಒಂದನೇ ನಾಲ್ಕರಷ್ಟಕ್ಕಿಂತ ಹೆಚ್ಚಾದರೆ (ತುಟ್ಟಿಭತ್ಯೆ ಬಿಟ್ಟು) ಅಷ್ಟು ಹೆಚ್ಚುವರಿ ಹಣವನ್ನು ಕೊಡತಕ್ಕದ್ದು ಅಥವಾ ನಿಗದಿತ ರೀತಿಯಲ್ಲಿ ಬಂಡವಾಳವಾಗಿ ತೊಡಗಿಸುವುದು.