ರಾಜ್ಯ ತಿದ್ದುಪಡಿಗಳು

ಆಂಧ್ರಪ್ರದೇಶ : ಕಲಂ ೧೫ರ ನಂತರ, ಈ ಕೆಳಕಂಡ ಕಲಂನ್ನು ಅಳವಡಿಸತಕ್ಕದ್ದು ಅಂದರೆ, “೧೫-ಅ, ಕಲಂ ೧೫ರ ಕೆಳಗಿನ ನಡವಳಿಕೆಗಳಿಗೆ ನ್ಯಾಯಾಲಯ ಶುಲ್ಕವನ್ನು ವಿನಾಯಿತಿ ಮಾಡುವುದು: ೧. ಕಲಂ ೧೫ರ ಕೆಳಗಿನ ನಡವಳಿಕೆಗಳಿಗೆ ಅರ್ಜಿದಾರನು ಪ್ರೋಸಸ್ ರವಾನೆ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಕೊಡಬೇಕಾಗಿಲ್ಲ. ಪರಂತು ಕಲಂ ೧೫ (೧)ರ ಕೆಳಗೆ ನೇಮಕ ಮಾಡಿದ ಅಧಿಕಾರಿಯ ಅನುಮತಿಯ ಮೇರೆಗೆ ನಿರೀಕ್ಷಣಾಧಿಕಾರಿ ಅಥವಾ ಇನ್ನಾವುದೇ ವ್ಯಕ್ತಿಯು ಪ್ರೋಸಸ್ ರವಾನೆ ಶುಲ್ಕವನ್ನು ಸಹ ಕೊಡುವ ಹಾಗಿಲ್ಲ.

೨. ಅರ್ಜಿದಾರನು ಇಂಥ ನಡುವಳಿಕೆಗಳಲ್ಲಿ ಯಶಸ್ವಿಯಾದರೆ, ಅರ್ಜಿ ವಿಚಾರಣೆಯನ್ನು ನಡೆಸಿದ ಅಧಿಕಾರಿಯು ಅರ್ಜಿದಾರನು ಕೊಡಬೇಕಾಗಿದ್ದಂತಹ ನ್ಯಾಯಾಲಯ ಶುಲ್ಕವನ್ನು ಉಪ ಕಲಂ (೧)ರ ಹೊರತು ನಿಗದಿತ ರೀತಿಯಲ್ಲಿ ಲೆಕ್ಕ ಹಾಕಿ ಮಾಲೀಕನಿಗೆ ಅಥವಾ ಕಲಂ ೩. ಪ್ರಕಾರ ಮಂಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ವ್ಯಕ್ತಿಗೆ ರಾಜ್ಯ ಸರಕಾರಕ್ಕೆ ಸಂದಾಯ ಮಾಡುವಂತೆ ಆದೇಶಿಸುವುದು. ಆ ಮೊತ್ತವನ್ನು ಕೊಡದೇ ಇದ್ದ ಪಕ್ಷದಲ್ಲಿ ಅದನ್ನು ಬೇರೆ ಯಾವುದೇ ರೀತಿಯ ವಸೂಲಾತಿ ಕ್ರಮಕ್ಕೆ ಧಕ್ಕೆಯಾಗದ ರೀತಿಯಲ್ಲಿ ಭೂಕಂದಾಯ ಬಾಕಿ ಹಣವೆಂದು ಪರಿಗಣಿಸಿ ವಸೂಲಿ ಮಾಡುವುದು.

ಬೆಳಗಾಂವ್ ಪ್ರದೇಶ : ಮುಂಬಯಿ ಅಧಿನಿಯಮದ ತಿದ್ದುಪಡಿ ೧೯೫೯ರ ೬೨೧೯೫೪ರ ೭೦ ಮತ್ತು ೧೯೫೫ರ ೪೮ ಪ್ರಕಾರ ಈ ಪ್ರದೇಶದಲ್ಲಿ ಜಾರಿಯಲ್ಲಿದ್ದದನ್ನು ರದ್ದು ಮಾಡಲಾಗಿದೆ.

ಗುಜರಾತ್ : ಮಹಾರಾಷ್ಟ್ರದಲ್ಲಿದಂತೆ

ಹರಿಯಾಣ : ಕಲಂ ೧೫ (೧) ಅಭಿಸಂಧಿ ನಂತರ, ಈ ಕೆಳಕಂಡ ಅಭಿಸಂಧಿಯನ್ನು ಅಳವಡಿಸತಕ್ಕದ್ದು ಅಂದರೆ :-

ಪರಂತು ರಾಜ್ಯ ಸರಕಾರವು ಯಾವುದೇ ವಿಷಯವನ್ನು ಒಂದು ಪ್ರಾಧಿಕಾರದಿಂದ ಮತ್ತೊಂದು ಪ್ರಾಧಿಕಾರಕ್ಕೆ ವರ್ಗಾಯಿಸಬಹುದು.

೧. ವೇತನ ದಂಡಾಧಿಕಾರಿ ಎಂಬ ಪದಗಳಿಗೆ ಬದಲಾಗಿ ನ್ಯಾಯಾಧಿತ ದಂಡಾಧಿಕಾರಿ ಎಂದು ಅಳವಡಿಸಬೇಕು.

೨. ಉಪ ಕಲಂ (೨)ರಲ್ಲಿ “ಉಪ ಕಲಂ (೩) ಆವರಣ ಮತ್ತು ಅಂಕಗಳು ಎಂಬ ಪದಗಳ ನಂತರ ಈ ಕೆಳಕಂಡದ್ದನ್ನು ಅಳವಡಿಸತಕ್ಕದ್ದು, ಅಂದರೆ,

“ಉದ್ಯೋಗಿಯು ಮರಣ ಹೊಂದಿದಲ್ಲಿ ಅವರ ವಾರಸುದಾರರು ಸೂಕ್ತ ಆದೇಶಕ್ಕೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ.

೩. ಉಪ ಕಲಂ (೫)ಕ್ಕೆ ಈ ಕೆಳಕಂಡದ್ದನ್ನು ಬದಲಾಗಿ ಸೇರಿಸತಕ್ಕದ್ದು. ಅಂದರೆ,

೪. ಈ ಕಲಂ ಕೆಳಗೆ ಯಾವುದೇ ಮೊತ್ತವನ್ನು ಸಂದಾಯ ಮಾಡಬೇಕೆಂದು ಆದೇಶಿಸಲ್ಪಟ್ಟಿದ್ದರೆ ಅದನ್ನು ಭೂಕಂದಾಯದ ಬಾಕಿ ಎಂಬಂತೆ ವಸೂಲಿ ಮಾಡಬಹುದು. ಅಂತಹ ಅಧಿಕಾರಿಯನ್ನು ಈ ಉದ್ದೇಶದಿಂದ ಕಂದಾಯ ವಸೂಲಿ ಅಧಿನಿಯಮ, ೧೮೯೦ರ ಕಲಂ (೫)ರ ಪ್ರಕಾರ ಸಾರ್ವಜನಿಕ ಅಧಿಕಾರಿಯೆಂದು ಪರಿಗಣಿಸುವುದು. ಪ್ರಧಾನ ಅಧಿನಿಯಮದ ಕಲಂ (೧೫)ರ, ನಂತರ, ಈ ಕೆಳಕಂಡ ಕಲಂನ್ನು ಅಳವಡಿಸತಕ್ಕದ್ದು. ಅಂದರೆ, “೧೫ಎ ನ್ಯಾಯಾಲಯ ಶುಲ್ಕ ಸಂದಾಯ ಹೊಣೆಗಾರಿಕೆ” (೧) ಕಲಂ ೧೫ರ ಕೆಳಗೆ ಅರ್ಜಿದಾರನು ಯಾವುದೇ ನ್ಯಾಯಾಲಯ ಶುಲ್ಕ ನೀಡುವ ಹಾಗಿಲ್ಲ (ಈ ನಡುವಳಿಕೆಯ ಪ್ರೋಸಸ್ ರವಾನೆ ಶುಲ್ಕ ಸಂದಾಯ ಮಾಡುವುದರ ಹೊರತು ಪಡಿಸಿ).

ಪರಂತು, ಪರಿವೀಕ್ಷಕನು ಅರ್ಜಿಯನ್ನು ಸಲ್ಲಿಸಿದರೆ, ಅವನು ಪ್ರೋಸೆಸ್ ರವಾನೆ ಶುಲ್ಕವನ್ನು ಸಹ ಕೊಡುವ ಹಾಗಿಲ್ಲ. (೩) ಇಂತಹ ನಡುವಳಿಕೆಗಳಲ್ಲಿ ಅರ್ಜಿದಾರನು ಯಶಸ್ವಿಯಾದರೆ, ಅರ್ಜಿ ವಿಚಾರಣೆಯನ್ನು ನಡೆಸಿದ ಅಧಿಕಾರಿಯು, ಅರ್ಜಿದಾರನು ಕೊಡಬೇಕಾಗಿದ್ದಂತಹ ನ್ಯಾಯಾಲಯ ಶುಲ್ಕವನ್ನು ಉಪ ಕಲಂ (೧)ರ ಹೊರತು, ನಿಗದಿತ ರೀತಿಯಲ್ಲಿ ಮಾಲೀಕನಿಗೆ ಅಥವಾ ಕಲಂ ೩ರ ಪ್ರಕಾರ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ಬೇರೆ ವ್ಯಕ್ತಿಗೆ, ರಾಜ್ಯ ಸರಕಾರಕ್ಕೆ ಸಂದಾಯ ಮಾಡುವಂತೆ ಆದೇಶಿಸಬಹುದು. ಆ ಹಣವನ್ನು ಕೊಡದೇ ಇದ್ದ ಪಕ್ಕದಲ್ಲಿ, ಅದನ್ನು ಬೇರೆ ಯಾವುದೇ ರೀತಿಯ ವಸೂಲಾತಿ ಕ್ರಮಕ್ಕೆ ಧಕ್ಕೆಯಾಗದ ರೀತಿಯಲ್ಲಿ ಭೂಕಂದಾಯ ಬಾಕಿ ಹಣವೆಂದು ಪರಿಗಣಿಸಿ ವಸೂಲಿ ಮಾಡುವುದು.

೫. ಕಲಂ (೧೫)ರ ಕೆಳಗೆ ಅರ್ಜಿ ಹಾಕಿದವನು, ಕಲಂ (೧೭)ರ ಕೆಳಗೆ ಮೇಲ್ಮನವಿ ಸಲ್ಲಿಸಿದರೆ ಉಪ ಕಲಂ (೧) ಮತ್ತು (೨)ರ ಉಪ ಸಂಧಿಗಳನ್ನು ಉಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸುವುದು. ಜೊತೆಗೆ ತಕ್ಕ ಮಾರ್ಪಾಡಿನೊಂದಿಗೆ ಪರಿವೀಕ್ಷಕರನ್ನು ಹೊರತುಪಡಿಸಿ ಆ ವ್ಯಕ್ತಿಯು ಐದು ರೂಪಾಯಿ ನ್ಯಾಯಾಲಯ ಶುಲ್ಕವನ್ನು ಕೊಡಬೇಕು. ಆದರೆ ಮೇಲ್ಮನವಿಯಲ್ಲಿ ಯಶಸ್ವಿಯಾದರೆ ಆ ಮೊತ್ತವನ್ನು ಅವನಿಗೆ ಹಿಂದಿರುಗಿಸತಕ್ಕದ್ದು.

ಮಧ್ಯಪ್ರದೇಶ :– ಕಲಂ ೧೫ (೧) ಉಪ ಕಲಂ (೧)ರಲ್ಲಿ “ಯಾವುದೇ ಕಾರ್ಮಿಕ ಪರಿಹಾರ ಆಯುಕ್ತರ ಅಥವಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಅನುಭವವುಳ್ಳ ಯಾವುದೇ ಅಧಿಕಾರಿ ಅಥವಾ ವೇತನ ಪಡೆದ ದಂಡಾಧಿಕಾರಿಯು ಅಧಿಕಾರಿಯಾಗಿರಬೇಕು ಎಂಬ ಪದಗಳಿಗೆ ಬದಲಾಗಿ “ಒಬ್ಬ” ಅಥವಾ ಒಬ್ಬರಿಗಿಂತ ಹೆಚ್ಚಿನ ಅಧಿಕಾರಿ ಅಥವಾ ಅಧಿಕಾರಿಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು. (೨) ಉಪ ಕಲಂ (೧)ರ ನಂತರ, ಈ ಕೆಳಕಂಡ ಉಪ ಕಲಂಗಳನ್ನು ಅಳವಡಿಸತಕ್ಕದ್ದು, ಅಂದರೆ, “(೧-ಅ) ಈ ಅಧಿನಿಯಮದ ಕೆಳಗೆ ಯಾವುದೇ ವ್ಯಕ್ತಿಯು ಅವನು ಕಾರ್ಮಿಕ ಪರಿಹಾರ ಆಯುಕ್ತ ಅಥವಾ ಸಿವಿಲ್ ನ್ಯಾಯಾಲಯದ ಅಥವಾ ಮಧ್ಯಪ್ರದೇಶದ ಕೈಗಾರಿಕಾ ನ್ಯಾಯಾಲಯದ ನ್ಯಾಯಾಧೀಶರಾದ ಹೊರತು, ಅಧಿಕಾರಿಯಾಗಿ ನೇಮಕಗೊಳ್ಳಲು ಅರ್ಹನಲ್ಲ.

(೧-ಆ) ಉಪ ಕಲಂ (೧)ರ ಕೆಳಗೆ ಎಲ್ಲಿ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ನೇಮಕ ಮಾಡಿದ್ದರೆ, ರಾಜ್ಯ ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೂಲಕ ತನಗೆ ಸೂಕ್ತವೆಂದು ಕಂಡಂತೆ ಈ ರೀತಿ ನೇಮಿಸಲ್ಪಟ್ಟ ಅಧಿಕಾರಿಗಳೊಳಗೆ ಕೆಲಸವನ್ನು ಹಂಚತಕ್ಕದ್ದು.

೩) ಉಪ ಕಲಂ (೨)ರಲ್ಲಿ  (ಆ) “ಅವನ ಪರವಾಗಿ ಕಾರ್ಯನಿರ್ವಹಿಸು” ಪದಗಳ ನಂತರ, ಅಥವಾ ಮಧ್ಯಪ್ರದೇಶ ಕೈಗಾರಿಕಾ ಬಾಂಧವ್ಯ ಅಧಿನಿಯಮ ೧೯೬೦ (೧೯೬೦ರ ೨೭)ರ ಕೆಳಗೆ ಪ್ರಾತಿನಿಧಿಕ ಸಂಘವೆಂದು ಮಾನ್ಯತೆ ಪಡೆದ ಸಂಸ್ಥೆ, ಪದಗಳು, ಅಂಕಗಳು ಆವರಣಗಳನ್ನು ಅಳವಡಿಸತಕ್ಕದ್ದು.

ಆ) “ಉಪ ಕಲಂತ್ (೩) ಎಂಬ ಪದಗಳು, ಅಂಕಗಳು ಆವರಣಗಳ ನಂತರ ಮತ್ತು ಉದ್ಯೋಗಿಯು ಮರಣ ಹೊಂದಿದರೆ ಅವರ ವಾರಸುದಾರರು ಕಾನೂನುಬದ್ಧವಾಗಿ ಅವರಿಗೆ ಬೇಕಾದ ಆದೇಶ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ” ಎಂಬ ಪದಗಳನ್ನು ಅಳವಡಿಸತಕ್ಕದ್ದು.

(೪) ಉಪ ಕಲಂ (೩)ರಲ್ಲಿ “ನಿಯೋಜಿತ ವ್ಯಕ್ತಿ ಎಂಬ ಪದಗಳ ನಂತರ ಅಥವಾ ಸಂದರ್ಭಾನುಸಾರ ಅವನ ವಾರಸುದಾರರು” ಪದಗಳನ್ನು ಅಳವಡಿಸುವುದು.

(ಆ) “ಅಂತಿಮ ಹತ್ತು ರೂಪಾಯಿಗಳು” ಪದಗಳಿಗೆ ಅಂತಿಮದ ಪ್ರಕರಣದಲ್ಲಿ ಇಪ್ಪತ್ತು ರೂಪಾಯಿಗಳು ಮತ್ತು ಅಧಿಕಾರಿಯು ಎಷ್ಟು ಮೊತ್ತವನ್ನು ಸಂದಾಯ ಮಾಡಬೇಕೆಂದು ಆದೇಶಿಸುತ್ತಾರೊ ಅಂದರೆ ಕಡಿತ ಮಾಡಿದ ಮೊತ್ತ ಅಥವಾ ಮಾಲೀಕನು ತಡವಾಗಿ ಉದ್ಯೋಗಿಗೆ ಕೊಟ್ಟ ಮಜೂರಿ ಅಥವಾ ಅವನ ವಾರಸುದಾರರ ಅರ್ಜಿಯನ್ನು ವಿಲೇವಾರಿ ಮಾಡುವ ಮುನ್ನ ಸಂದಾಯ ಮಾಡಿದ ಮೊತ್ತ ಎಂಬ ಪದಗಳನ್ನು ಬದಲಾಗಿ ಸೇರಿಸತಕ್ಕದ್ದು.

ಇ). ಅಭಿಸಂಧಿಯಲ್ಲಿ “ನಿಯೋಜಿತ ವ್ಯಕ್ತಿ” ಎಂಬ ಪದಗಳ ನಂತರ ಅಥವಾ ಅವನ ವಾರಸುದಾರು ಎಂಬ ಪದಗಳನ್ನು ಅಳವಡಿಸುವುದು ಮತ್ತು

(೫) ಉಪ ಕಲಂ (೪)ಕ್ಕೆ ಈ ಕೆಳಕಂಡ ಉಪ ಕಲಂಗಳನ್ನು ಬದಲಾಗಿ ಸೇರಿಸುವುದು ಅಂದರೆ,

(೪). ಈ ಕಲಂ ಕೆಳಗೆ ಯಾವುದೇ ಅರ್ಜಿ ವಿಚಾರಣೆ ನಡೆಸುವ ಅಧಿಕಾರಿಗೆ ಸಮಾಧಾನವಾದರೆ

ಸಮಾಧಾನವಾದರೆ:-

೧. ಅರ್ಜಿಯು ದುರುದ್ದೇಶದಿಂದ ಅಥವಾ ಕಿರುಕುಳ ಕೊಡುವ ಉದ್ದೇಶದಿಂದ ಕೂಡಿದ್ದಾಗಿದ್ದರೆ ಆ ಅಧಿಕಾರಿಯು ಮಾಲೀಕನಿಗೆ ಅಥವಾ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ವ್ಯಕ್ತಿಗೆ ಐವತ್ತು ರೂಪಾಯಿಗೆ ಮೀರದಂತೆ ದಂಡವನ್ನು ಕೊಡುವಂತೆ ಅರ್ಜಿದಾರನಿಗೆ ಆದೇಶಿಸಬಹುದು ಅಥವಾ

೨. ಬೇರೆ ಇನ್ನಾವುದೇ ಸಂದರ್ಭದಲ್ಲಿ ಕಲಂ (೩)ರ ಕೆಳಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಒತ್ತಾಯಿಸದೆ, ಅಧಿಕಾರಿಯು ಪರಿಹಾರದ ಜೊತೆಗೆ ಐವತ್ತು ರೂಪಾಯಿಗೆ ಮೀರದಂತೆ ದಂಡವನ್ನು ಕೊಡುವಂತೆ ಮಾಲೀಕರು ಅಥವಾ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ಯಾವುದೇ ವ್ಯಕ್ತಿಗೆ ಆದೇಶಿಸುವುದು. ಅದನ್ನು ಕೊಟ್ಟಾಗ ಅಥವಾ ವಸೂಲಿ ಮಾಡಿದಾಗ ರಾಜ್ಯ ಸರಕಾರಕ್ಕೆ ಜಮಾ ಮಾಡಬೇಕು.

(೪-ಅ) ಎಲ್ಲಿ ಯಾವುದೇ ವ್ಯಕ್ತಿಯು ದಿವಂಗತ ಉದ್ಯೋಗಿಯ ವಾರಸುದಾರನೋ ಅಲ್ಲವೋ ಎಂಬ ಪ್ರಶ್ನೆ ಉದ್ಭವಿಸಿದರೆ, ಆ ಪ್ರಶ್ನೆಯನ್ನು ಕಲಂ (೧)ರ ಕೆಳಗೆ ನೇಮಕ ಮಾಡಲ್ಪಟ್ಟ ಅಧಿಕಾರಿಯೇ ತೀರ್ಮಾನಿಸತಕ್ಕದ್ದು ಮತ್ತು ಆ ತೀರ್ಮಾನವು ಅಂತಿಮವಾದದ್ದು.(೪-ಆ) ಈ ಕಲಂ ಕೆಳಗೆ ಉದ್ಯೋಗಿಗೆ ಅಥವಾ ಅವನ ವಾರಸುದಾರರಿಗೆ ಸಂದರ್ಭನುಸಾರ ಮೊತ್ತವನ್ನು ಎಲ್ಲಾ ಜವಾಬ್ದಾರಿಯಿಂದ ಪೂರ್ಣವಾಗಿ ಬಿಡುಗಡೆಯಾದಂತೆ ಈ ಬಗ್ಗೆ ಮತ್ತು ಯಾವುದೇ ಹಕ್ಕು ಮಾಲೀಕನ ವಿರುದ್ಧ ನಿಲ್ಲತಕ್ಕದ್ದಲ್ಲ.

ಮಹಾರಾಷ್ಟ್ರ :– ಕಲಂ ೧೫ (೧)ರಲ್ಲಿ “ಯಾತನ್ನೇ ನೇಮಕ” ಎಂಬ ಪದಗಳಿಂದ ಪ್ರಾರಂಭವಾಗಿ ಅಧಿಕಾರಿಯಾಗಿರತಕ್ಕದ್ದು ಎಂಬ ಪದಗಳ ಕೊನೆಗೊಳ್ಳುವ ಪದಗಳು ಮತ್ತು ಅಂಕಿಗಳಿಗೆ “ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳನ್ನು ಅಧಿಕಾರಿ ಅಥವಾ ಅಧಿಕಾರಿಗಳಾಗಿ ನೇಮಕ ಮಾಡುವುದು” ಎಂಬ ಪದಗಳನ್ನು ಬದಲಾಗಿ ಸೇರಿಸುವುದು (ಬೊಂಬಾಯಿ ರಾಜ್ಯ ಎಂಬುದನ್ನು ಗುಜರಾತ ಮತ್ತು ಮಹಾರಾಷ್ಟ್ರ ಎಂದು ಮಾರ್ಪಾಡು ಮಾಡಲಾಗಿದೆ. ಎ.ಎಲ್.ಬಿ.೧೯೬೦).

(ಅ) ಉಪ ಕಲಂ (೧)ರ ನಂತರ, ಈ ಕೆಳಕಂಡ ಹೊಸ ಉಪ ಕಲಂಗಳನ್ನು ಅಳವಡಿಸತಕ್ಕದ್ದು. ಅಂದರೆ, “(೧-ಅ) ಈ ಅಧಿನಿಯಮದ ಕೆಳಗೆ ಒಬ್ಬ ವ್ಯಕ್ತಿಯನ್ನು ಅಧಿಕಾರಿಯಾಗಿ ನೇಮಕ ಮಾಡಲು ಅವನು ಕಾರ್ಮಿಕರ ಪರಿಹಾರ ಆಯುಕ್ತ ಅಥವಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶನಾಗಿ ಅನುಭವ ಅಥವಾ ನ್ಯಾಯಾಲಯದ ವೇತನ ಪಡೆಯುವ ದಂಡಾಧಿಕಾರಿ ಅಥವಾ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಅಥವಾ ಮುಂಬಯಿ ಕೈಗಾರಿಕಾ ಬಾಂಧವ್ಯ ಅಧಿನಿಯಮ ೧೯೪೬ರ ಕೆಳಗೆ ರಚಿಸಿರುವ ಕೈಗಾರಿಕಾ ನ್ಯಾಯಾಲಯದ ನ್ಯಾಯಾಧೀಶ ಸದಸ್ಯ ಅಥವಾ ಕೈಗಾರಿಕಾ ನ್ಯಾಯಾಧಿಕರಣ ಅನುಭವ ಇದರ ಹೊರತು ಅರ್ಹನಲ್ಲ.”

(೧-ಆ) ಉಪ ಕಲಂ (೧)ರ ಕೆಳಗೆ ಎಲ್ಲಿ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ನೇಮಕ ಮಾಡಿದ್ದರೆ, ರಾಜ್ಯ ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೂಲಕ ತನಗೆ ಸೂಕ್ತವೆಂದು ಕಂಡಂತೆ, ಈ ರೀತಿ ನೇಮಿಸಲ್ಪಟ್ಟ ಅಧಿಕಾರಿಗಳಿಗೆ ಕೆಲಸವನ್ನು ಹಂಚಬಹುದು.

(ಇ) ಉಪ ಕಲಂ (೨)ರಲ್ಲಿ (೧) “ಅವನ ಪರವಾಗಿ ಕಾರ್ಯನಿರ್ವಹಿಸು” ಪದಗಳ ನಂತರ “ಅಥವಾ ಮುಂಬಯಿ ಕೈಗಾರಿಕಾ ಬಾಂಧವ್ಯ ಅಧಿನಿಯಮ ೧೯೪೬ರ ಕೆಳಗೆ ಪ್ರಾತಿನಿಧಿಕ ಸಂಘವೆಂದು ಮಾನ್ಯತೆ ಪಡೆದ ಸಂಸ್ಥೆ” ಎಂಬ ಪದಗಳು ಮತ್ತು ಅಂಕಗಳನ್ನು ಅಳವಡಿಸಲಾಗಿದೆ.

(೧೧) ಉಪ ಕಲಂ (೩) ಪದ ಆವರಣಗಳು ಮತ್ತು ಅಂಕಿಗಳ ನಂತರ, ಈ ಕೆಳಕಂಡವುಗಳನ್ನು ಅಳವಡಿಸಲಾಗಿದೆ. ಅಂದರೆ, ಮತ್ತು ಉದ್ಯೋಗಿಯು ಮರಣ ಹೊಂದಿದ್ದರೆ ಅವನ ವಾರಸುದಾರರು ಅವರಿಗೆ ಬೇಕಾದ ಆದೇಶಕ್ಕೆ ಅರ್ಜಿ ಹಾಕಿಕೊಳ್ಳಲು ಕಾನೂನು ಪ್ರಕಾರ ಅರ್ಹರಾಗಿರುತ್ತಾರೆ. (೧೧೧) ಎರಡೂ ಉಪಸಂಧಿಗಳಲ್ಲಿ “ಆರು ತಿಂಗಳು” ಪದಗಳಿಗೆ “ಒಂದು ವರುಷ” ಪದಗಳನ್ನು ಬದಲಿಸಲಾಗಿದೆ.

(ಈ) ಉಪ ಕಲಂ (೩)ರಲ್ಲಿ

(೧) “ಉದ್ಯೋಗಿಗೆ ಮರುಪಾವತಿಸುವುದು” ಎಂಬ ಪದಗಳಿಗೆ ಸಂದರ್ಭಕ್ಕನುಗುಣವಾಗಿ ಉದ್ಯೋಗಿಗೆ ಅಥವಾ “ಅವರ ವಾರಸುದಾರರಿಗೆ ಪದಗಳನ್ನು ಬದಲಿಸಿ ಸೇರಿಸಲಾಗಿದೆ. ೧೧) “ಇಪ್ಪತ್ತೈದು ರೂಪಾಯಿಗಳು ದ್ವಿತೀಯದಲ್ಲಿನ” ಎಂಬ ಪದಗಳಿಗೆ ಈ ಕೆಳಕಂಡ ಪದಗಳನ್ನು ಅಳವಡಿಸಲಾಗಿದೆ. ಅದೇನೆಂದರೆ, ಮತ್ತು ಅಧಿಕಾರಿಯು ಎಲ್ಲ ಮೊಬಲಗನ್ನು ಕಡಿತ ಮಾಡಲಾಗಿದೆ ಅಥವಾ ಮಾಲೀಕನು ಉದ್ಯೋಗಿಗೆ ಅಥವಾ ಅವನ ವಾರಸುದಾರರಿಗೆ ತಡವಾಗಿ ಮಜೂರಿಯನ್ನು ಸಂದಾಯ ಮಾಡಿದ ಬಗ್ಗೆ ಇಷ್ಟು ಪರಿಹಾರವನ್ನು ಕೊಡಬೇಕೆಂದು ಅರ್ಜಿಯನ್ನು ವಿಲೇವಾರಿ ಮಾಡಲು ಸಂದಾಯ ಮಾಡುವಂತೆ ಆದೇಶಿಸಬಹುದು. (೧೧೧) ಅಭಿಸಂಧಿಯಲ್ಲಿ “ನಿಯೋಜಿತ ವ್ಯಕ್ತಿ ಎರಡೂ ಸ್ಥಳಗಳು ಎಲ್ಲಿ ಬರುತ್ತವೊ ಅಲ್ಲಿ” ಪದಗಳ ನಂತರ “ಅಥವಾ ಅವನ ವಾರಸುದಾರರು” ಪದಗಳನ್ನು ಅಳವಡಿಸಲಾಗಿದೆ. (ಈ) ಉಪ ಕಲಂ (೪)ಕ್ಕೆ, ಈ ಕೆಳಕಂಡ ಉಪ ಕಲಂನ್ನು ಬದಲಾಗಿ ಸೇರಿಸಲಾಗಿದೆ. ಅದೇನೆಂದರೆ, (೪) ಈ ಕಲಂ ಕೆಳಗೆ ಯಾವುದೇ, ಅರ್ಜಿಯನ್ನು ವಿಚಾರಣೆ ನಡೆಸುವ ಅಧಿಕಾರಿಗೆ ಮನದಟ್ಟಾದರೆ, (೧) ಅರ್ಜಿಯು ದುರುದ್ದೇಶ ಅಥವಾ ತೊಂದರೆ ಕೊಡುವ ದೃಷ್ಟಿಯಿಂದ ಕೂಡಿದ್ದರೆ, ಆಗ ಅಧಿಕಾರಿಯು ಐವತ್ತು ರೂಪಾಯಿಗಳಿಗೆ ಮೀರದಂತೆ ದಂಡವನ್ನು ಮಾಲೀಕನಿಗೆ ಅಥವಾ ಮಜೂರಿ ಸಂದಾಯ ಮಾಡುವ ಅಧಿಕಾರವುಳ್ಳ ಯಾವುದೇ ವ್ಯಕ್ತಿಗೆ ಅರ್ಜಿದಾರನು ಕೊಡಬೇಕೆಂದು ಆದೇಶಿಸಬಹುದು ಅಥವಾ (೧೧) ಅಲ್ಲದೆ, ಯಾವುದೇ ಕಾರಣಕ್ಕೂ. ಈ ಕಲಂ (೩)ರ ಕೆಳಗೆ ಪರಿಹಾರವನ್ನು ಕೊಡಬೇಕೆಂದು ಆದೇಶಿಸಿದ್ದರೆ ಹಾಗೂ ಅರ್ಜಿದಾರನು ಈ ಕಲಂ ಕೆಳಗೆ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ಕೇಳುವ ಅವಕಾಶವಿರಲಿಲ್ಲವೆಂದು ಗೊತ್ತಾದರೆ, ಆಗ ಅಧಿಕಾರಿಯು ಐವತ್ತು ರೂಪಾಯಿಗಳಿಗೆ ಮೀರದಂತೆ ದಂಡವನ್ನು ಕೊಡಬೇಕೆಂದು ಮಾಲೀಕನಿಗೆ ಅಥವಾ ಮಜೂರಿ ಸಂದಾಯ ಮಾಡುವ ಅಧಿಕಾರವುಳ್ಳ ಯಾವುದೇ ವ್ಯಕ್ತಿಗೆ ಆದೇಶ ನೀಡಬಹುದು. ಆ ದಂಡದ ಮೊತ್ತವನ್ನು ಕೊಟ್ಟರೆ ಅಥವಾ ವಸೂಲಿ ಮಾಡಿದರೆ, ಅದನ್ನು ಸರಕಾರಕ್ಕೆ ಜಮಾ ಮಾಡತಕ್ಕದ್ದು.

(ಉ) ಉಪಕಲಂ (೫)ಕ್ಕೆ ಈ ಕೆಳಕಂಡದ್ದನ್ನು ಬದಲಿಸಲಾಗಿದೆ. ಅದೇನೆಂದರೆ, (೫) ಈ ಕಲಂ ಕೆಳಗೆ ಕೊಡಬೇಕೆಂದು ಅಧಿಕಾರಿಯು ಆದೇಶಿಸಲ್ಪಟ್ಟಿರುವ ಯಾವುದೇ ಮೊತ್ತವನ್ನು ಆ ಅಧಿಕಾರಿಯು ಇದನ್ನು ಕಂದಾಯ ಬಾಕಿ ಹಣವೆಂದು ವಸೂಲಿ ಮಾಡಬಹುದು ಮತ್ತು ಆ ಅಧಿಕಾರಿಯನ್ನು ಕಂದಾಯ ವಸೂಲಾತಿ ಅಧಿನಿಯಮ ೧೮೯೦ (೫)ರ ಕೆಳಗೆ ಸಾರ್ವಜನಿಕ ಅಧಿಕಾರಿಯೆಂದು ಈ ವಿಷಯದಲ್ಲಿ ತಿಳಿಯತಕ್ಕದ್ದು. (ಊ) ಉಪ ಕಲಂ (೫)ರ ನಂತರ ಈ ಕೆಳಕಂಡ ಉಪ ಕಲಂನ್ನು ಸೇರಿಸಲಾಗಿದೆ. ಅದೇನೆಂದರೆ (೫) ಎಲ್ಲಿ ಯಾವುದೇ ವ್ಯಕ್ತಿಯು ದಿವಂಗತ ಉದ್ಯೋಗಿಯ ವಾರಸುದಾರನೋ ಅಥವಾ ಅಲ್ಲವೋ ಎಂಬ ಪ್ರಶ್ನೆ ಉದ್ಭವಿಸುತ್ತದೆಯೋ, ಆಗ ಅಧಿಕಾರಿ ಅಂಥ ಪ್ರಶ್ನೆಯನ್ನು ತೀರ್ಮಾನಿಸತಕ್ಕದ್ದು ಮತ್ತು ಆ ತೀರ್ಮಾನವು ಆಂತಿಮವಾದದ್ದು.

ಕಲಂ ೧೫ನ್ನು ಮುಂಬಯಿ ಅಧಿನಿಯಮ ಸಂಖ್ಯೆ ೧೯೫೩ರ ೪೨ರ ಪ್ರಕಾರ ಸೇರಿಸಲಾಗಿದೆ.

“೧೫-ಅ, ನ್ಯಾಯಾಲಯ ಶುಲ್ಕ ಸಂದಾಯ ಹೊಣೆಗಾರಿಕೆ (೧) ಕಲಂ (೧೫)ರ ಕೆಳಗಿನ ಯಾವುದೇ ನಡವಳಿಕೆಯಲ್ಲಿ ಅರ್ಜಿದಾರನು ನ್ಯಾಯಾಲಯ ಶುಲ್ಕವನ್ನು (ಪ್ರೋಸೆಸ್) ಕಳುಹಿಸಲು ಸಂದಾಯ ಮಾಡಬೇಕಾದ (ಶುಲ್ಕ ಹೊರತು ಪಡಿಸಿ) ಆ ನಡವಳಿಕೆ ಬಗ್ಗೆ ಕೊಡಬೇಕಾಗಿಲ್ಲ” ಪರಂತು ಪರಿವೀಕ್ಷಕನು ಅರ್ಜಿಯನ್ನು ಸಲ್ಲಿಸಿದಾಗ ಪ್ರೊಸೆಸ್ ಶುಲ್ಕವನ್ನು ಸಹ ಕೊಡಬೇಕಾಗಿಲ್ಲ.

(೨) ಈ ನಡವಳಿಕೆಗಳಲ್ಲಿ ಅರ್ಜಿದಾರನು ಯಶಸ್ವಿಯಾದರೆ, ಅಧಿಕಾರಿಯು ಅರ್ಜಿದಾರನು ಉಪ ಕಲಂ (೧)ರ ಹೊರತು ಕೊಡಬೇಕಾಗಿದ್ದ ನ್ಯಾಯಾಲಯ ಶುಲ್ಕವನ್ನು ಲೆಕ್ಕಹಾಕಿ, ಆ ಮೊತ್ತವನ್ನು ಮಾಲೀಕ ಅಥವಾ ಕಲಂ (೩) ರ ಕೆಳಗೆ ಮಜೂರಿ ಸಂದಾಯ ಮಾಡುವ ಅಧಿಕಾರವುಳ್ಳ ವ್ಯಕ್ತಿಯು ರಾಜ್ಯ ಸರಕಾರಕ್ಕೆ ಕೊಡುವಂತೆ ಆದೇಶಿಸಬಹುದು ಆ ಮೊತ್ತವೆಂಬಂತೆ ಬೇರೆ ವಸೂಲಾತಿ ನಿಯಮಗಳಿಗೆ ಧಕ್ಕೆಯಾಗದಂತೆ ಕಂದಾಯ ಬಾಕಿ ಮೊತ್ತವೆಂಬಂತೆ ವಸೂಲಿ ಮಾಡಬಹುದು.

ರಾಜಸ್ಥಾನ :- ಕಲಂ ೨೫ರ ಉಪ ಕಲಂ (೧)ರಲ್ಲಿ ವೇತನಾಧಾರಿತ ದಂಡಾಧಿಕಾರಿಗಳು ಪದಗಳ ನಂತರ “ಅಥವಾ ರಾಜಾಸ್ಥಾನ ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್ ಅಧಿನಿಯಮ ೧೯೫೯ (ರಾಜಾ ಅಧಿ ೧೯೫೯ರ ೩೭)ರ ಕೆಳಗೆ ನೇಮಿಸಲ್ಪಟ್ಟ ವಿಕಾಸ ಅಧಿಕಾರಿ” ಎಂಬ ಪದಗಳನ್ನು ಅಳವಡಿಸತಕ್ಕದ್ದು. ೧೫ನೇ ಕಲಂ ನಂತರ, ಈ ಕೆಳಕಂಡ ಕಲಂನ್ನು ಸೇರಿಸುವುದು. ೧೫-ಅ ನ್ಯಾಯಾಲಯ ಶುಲ್ಕ ಸಂದಾಯದ ಹೊಣೆಗಾರಿಕೆ :

(೧) ೧೫ನೇ ಕಲಂ ಕೆಳಗಿನ ಯಾವುದೇ ನಡವಳಿಕೆಯಲ್ಲಿ (ಪ್ರೋಸೆಸ್ ಕಳುಹಿಸಲು ಸಂದಾಯ ಮಾಡಬೇಕಾದ ಶುಲ್ಕ ಹೊರತು ಪಡಿಸಿ) ಯಾವುದೇ ನ್ಯಾಯಾಲಯ ಶುಲ್ಕವನ್ನು ಕೊಡಬೇಕಾಗಿಲ್ಲ. ಪರಂತು ಅರ್ಜಿಯನ್ನು ಪರಿವೀಕ್ಷಕರು ಸಲ್ಲಿಸಿದರೆ, ಅದಕ್ಕೆ ಪ್ರೋಸೆಸ್ ಸಂದಾಯ ಶುಲ್ಕವನ್ನು ಸಹ ಕೊಡಬೇಕಾಗಿಲ್ಲ.

(ಮಹಾರಾಷ್ಟ್ರದಂತೆ)

ತಮಿಳುನಾಡು:- ಕಲಂ ೧೫ರಲ್ಲಿ ಉಪ ಕಲಂ (೫)ಕ್ಕೆ ಬದಲಾಗಿ ಈ ಕೆಳಕಂಡ ಉಪ ಕಲಂ ಬದಲಿಸಲಾಗಿದೆ. ಅದೇನೆಂದರೆ,

“೫ ಯಾವುದೇ ಮೊತ್ತವನ್ನು ಕೊಡಬೇಕೆಂದು ಈ ಕಲಂ ಕೆಳಗೆ ಅರ್ಹ ವ್ಯಕ್ತಿಗೆ ಕಲಂ (೩) ರ ಪ್ರಕಾರ ಮಾಲೀಕನಾಗಲಿ ಅಥವಾ ಮಜೂರಿ ಕೊಡುವ ಜವಾಬ್ದಾರಿಯುಳ್ಳ ವ್ಯಕ್ತಿಯು ಕೊಡಬೇಕೆಂದು ಆದೇಶಿಸಿದ್ದರೆ, ಆ ವ್ಯಕ್ತಿಯು ಅರ್ಜಿಯನ್ನು ತಾನೇ ಹಾಕಿಕೊಂಡರೆ ಅಥವಾ ಯಾವುದೇ ನ್ಯಾಯವಾದಿ ಅಥವಾ ಲಿಖಿತ ಅಧಿಕಾರ ಪಡೆದ ನೋಂದಾಯಿತ ಕಾರ್ಮಿಕ ಸಂಘದ ಪದಾಧಿಕಾರಿ ಅಥವಾ ಈ ಅಧಿನಿಯಮಕ್ಕೊಳಪಟ್ಟ ಯಾವುದೇ ಪರಿವೀಕ್ಷಕ ಅರ್ಜಿಯನ್ನು ಹಾಕಿದರೆ, ಅಧಿಕಾರಿಯು ಆ ಹಣಕ್ಕೆ ಅರ್ಹತಾ ಪತ್ರವನ್ನು ಕಲೆಕ್ಟರ್ ಗೆ ನೀಡಿದರೆ, ಅವರು ಅದನ್ನು ಕಂದಾಯ ಬಾಕಿಯಂತೆ ವಸೂಲಿ ಮಾಡಿ ಅರ್ಹ ವ್ಯಕ್ತಿಗೆ ಕೊಡುವುದು.

ವ್ಯಾಖ್ಯಾನ

ಕಲಂ ೧೫ರ ಕೆಳಗೆ ಅಧಿಕಾರಿಯ ಅಧಿಕಾರ ವ್ಯಾಪ್ತಿ :- ಮಜೂರಿ ಸಂದಾಯ ಅಧಿನಿಯಮ ಕಲಂ ೧೫ರ ಕೆಳಗೆ ಅಧಿಕಾರಿಗೆ ಮಜೂರಿಯನ್ನು ತಡವಾಗಿ ಕೊಟ್ಟಿದ್ದರ ಬಗ್ಗೆ ಮತ್ತು ಕಡಿತ ಮಾಡಿದ್ದರ ಬಗ್ಗೆ ಅರ್ಜಿಯನ್ನು ಸ್ವೀಕರಿಸುವ ಅಧಿಕಾರವನ್ನು ಕೊಡಲಾಗಿದೆ ಎಂದು ಹೇಳಲಾಗಿದೆ. ಇದನ್ನು ವಿಲೇವಾರಿ ಮಾಡುವಾಗ ಅಧಿಕಾರಿಯು ಕಡಿತ ಕ್ರಮಬದ್ಧವಾಗಿಯೇ ಮತ್ತು ಕಾನೂನುಬದ್ಧವಾಗಿಯೇ ಎಂಬುದನ್ನು ತೀರ್ಮಾನಿಸಬೇಕು. ತುಂಬಾ ಗುರುತರವಾದ ಕಾನೂನು ಪ್ರಶ್ನೆ ಉದ್ಭವಿಸಿದಾಗ ಈ ಪ್ರಶ್ನೆ ಅಧಿಕಾರಿಯ ವ್ಯಾಪ್ತಿಯನ್ನು ಮೀರಿದ್ದು ಎಂದು ಹೇಳಲಾಗದು ಅಥವಾ ಈ ಕಡಿತವನ್ನು ಅರ್ಹ ಅಧಿಕಾರಿಯು ಅನುಮೋದಿಸಿದ್ದು ಅಧಿಕೃತವಾದದ್ದು, ಆದ್ದರಿಂದ ಅದನ್ನು ಪ್ರಶ್ನಿಸುವ ಹಾಗಿಲ್ಲ ಎಂದು ಹೇಳಲಾಗುವುದು.

೧) ಜನರಲ್ ಮ್ಯಾನೇಜರ್ ಪಂಜಾಬ್ ರೋಡ್ ವೇಸ್, ಹೋಸಿಯಾರ್ ಪುರ “ವಿರುದ್ಧ” ಅಜಿತ್ ಸಿಂಗ್ ೧೯೯೯ (೫) ಎಸ್.ಎಲ್.ಆರ್. ೬೫೭ ಪುಟ ೬೫೭ (ಪ ಮತ್ತು ಹ) ಈ ಕೇಸಿನಲ್ಲಿ ನೌಕರರು ನಮ್ಮ ಮಜೂರಿಯಲ್ಲಿ ಕಾನೂನಿಗೆ ವಿರುದ್ಧವಾಗಿ ಮಾಲೀಕರು ಮೊದಲಿಗೆ ಕಡಿತವನ್ನೇ ಮಾಡಿಲ್ಲವೆಂದೂ ಮತ್ತು ಕಡಿತವನ್ನು ಮಾಡಿದ್ದರೂ ಅದು ಅರ್ಹ ಅಧಿಕಾರಿಯಿಂದ ಅನುಮೋದಿಸಲ್ಪಟ್ಟ ಅಧಿಕೃತ ಕಡಿತವಾಗಿದೆ. ಈ ಎರಡು ಪ್ರಶ್ನೆಗಳನ್ನು ಮಜೂರಿ ಕಾನೂನು ಪ್ರಶ್ನೆ ಇದರಲ್ಲಿ ಅಡಕವಾಗಿದೆಯೆಂದು ಅಧಿಕಾರಿಯ ವ್ಯಾಪ್ತಿಗೆ ಬರುವುದಿಲ್ಲವೆಂದು ತಳ್ಳಿ ಹಾಕುವಂತಿಲ್ಲ.

೨. ಕರ್ನಾಟಕ ಸ್ಟೇಟ್ ರೋಡ್ ಕಾರ್ಪೋರೇಷನ್, ಬೆಂಗಳೂರು, ವಿರುದ್ಧ ಶಿವಶಂಕರಪ್ಪ ಕಲ್ಲಪ್ಪ ಇಜೆರಿ ೨೦೦೦ (೧) ಎಲ್.ಎಲ್.ಜೆ. ೬೪೪ರಲ್ಲಿ ಪುಟ ೬೪೯ (ಕರ್ನಾಟಕ) ಈ ಕೇಸಿನಲ್ಲಿ ಅರ್ಜಿದಾರನು ಈ ವಿಚಾರಣೆ ನ್ಯಾಯಾಲಯಕ್ಕೆ ಉದ್ಯೋಗಿಗಳ ಅರ್ಜಿಯನ್ನು ಸ್ವೀಕರಿಸಲು ಮತ್ತು ಅದರ ವಿಚಾರಣೆ ನಡೆಸಲು ಅಧಿನಿಯಮ ಕಲಂ ೧೫೦ರ ಕೆಳಗೆ ಎತ್ತಿದ ತಕರಾರು ಪೂರ್ಣವಾಗಿ ಕಾನೂನು ಬದ್ಧವಲ್ಲ ಮತ್ತು ಈ ಕೇಸಿನ ವಿಷಯ ಮತ್ತು ಪರಿಸ್ಥಿತಿಯ ದೃಷ್ಟಿಯಿಂದ ನೋಡಿದರೆ, ಅರ್ಜಿದಾರರು ಇಂತಹ ಆಧಾರರಹಿತ ಮತ್ತು ಕ್ಷುಲ್ಲಕ ತಕರಾರುಗಳನ್ನು ಎತ್ತಬಾರದಿತ್ತು ಮತ್ತು ಸತತವಾಗಿ ಕಾನೂನು ನಡುವಳಿಕೆಗಳನ್ನು ತಡಮಾಡುವುದರ ಮೂಲಕ ಅವರ ತೊಂದರೆಯನ್ನು ಉಲ್ಬಣಿಸುವ ದೃಷ್ಟಿಯಿಂದ ಕೂಡಿದೆಯೆಂದು ಅರ್ಥೈಸಲಾಗಿದೆ.

ಮಜೂರಿ ಸಂದಾಯ ಅಧಿನಿಯಮದ ಕೆಳಗೆ ಕಾಲ ಮೀರಿದ ಅರ್ಜಿಯನ್ನು ಸ್ವೀಕರಿಸುವುದು ಸಾಕಷ್ಟು ಕಾರಣದೊಡನೆ ಸಮಜಾಯಿಸಿ ನೀಡುವುದು.

ಡೆಲ್ಲಿ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ “ವಿರುದ್ಧ” ಡಿ.ಡಿ. ಗುಪ್ತ, ೧೯೯೭ (೧) ಆರ್.ಎಸ್.ಜೆ.ಪು ೩೭೪ (ಡೆಲ್ಲಿ) ಈ ಕೇಸಿನಲ್ಲಿ ಸಂಬಂಧಪಟ್ಟ ಕಾರ್ಮಿಕನ ಹಕ್ಕು ಸಾಧನೆಯ ಮಜೂರಿ ಸಂದಾಯ ಅಧಿನಿಯಮದ ಅಧಿಕಾರಿಯ ಮುಂದೆ ಮಂಡಿಸಿದಾಗ ತುಂಬಾ ಕಾಲ ಮೀರಿದ್ದಾಗಿದೆ ಎಂದು ವಾದ ಮಾಡಲಾಯಿತು. ಆದರೆ ಕಾನೂನನ್ನು ಯಾವುದೇ ರೀತಿಯಲ್ಲಿ ಬದಲಾಯಿಸಲಾಗುದು. ಯಾವುದೇ ಪರಿಸ್ಥಿತಿಯಲ್ಲೂ, ಅರ್ಜಿದಾರನು ಮಜೂರಿ ಸಂದಾಯ ಅಧಿಕಾರಿಯ ಮುಂದೆ ತಡವಾಗಿ ಕಾಲವನ್ನು ಮನ್ನಾ ಮಾಡಬೇಕೆಂದು ಕೇಳಿಕೊಳ್ಳಬಹುದು. ಅರ್ಜಿ ತಡವಾಗಿ ಹಾಕಿದ್ದುದಕ್ಕೆ ಸಕಾರಣವಿದೆಯೆಂದು ಮನದಟ್ಟಾದರೆ, ಆ ಅರ್ಜಿಯನ್ನು ಅಧಿಕಾರಿಯು ಪರಿಗಣಿಸಬಹುದು.

ಮಜೂರಿಯ ಎಲ್ಲಾ ಹಕ್ಕು ಸಾಧನೆಯನ್ನು ಸ್ವೀಕರಿಸಬಹುದೇ?

ಜಿಲ್ಲಾ ಸಹಕಾರಿ ಕೇಂದ್ರಿಯ ಬ್ಯಾಂಕ್ “ವಿರುದ್ಧ” ಲೇಬರ್ ಕೋರ್ಟ್ ೧೯೯೩ (೧) ಎಲ್.ಎಲ್.ಜೆ. ೧೮ (ಎಂ. ( ): ಕರೀಂನಗರ್ ಮುನಿಸಿಪಾಲಿಟಿ ವಿರುದ್ಧ ಅಥಾರಿಟಿ ಅಂಡರ್ ಪಿ.ಡಬ್ಲೂ. ಆಕ್ಟ್ ೧೯೯೪ ಎಫ್.ಎಲ್.ಆರ್. ೧೪೧ ಪು ೧೪೨ (ಆಂಧ್ರ ಪ್ರದೇಶ) ಕೇಸುಗಳ ತೀರ್ಪಿನ ಪ್ರಕಾರ : ಕಾರ್ಮಿಕನ ಹಕ್ಕು ಸಾಧನೆಯ ಕೆಲವು ಮೊಬಲಗು ಮಜೂರಿ ಸಂದಾಯ ಅಧಿನಿಯಮದ ವಿವರಣೆಯೊಳಗೆ ಬರಬಹುದಾದರೂ ಅದಕ್ಕೆ ಸಂಬಂಧಪಟ್ಟ ಮೊಬಲಗಿನ ಹಕ್ಕು ಸಾಧನೆಯನ್ನು ಮಜೂರಿ ಸಂದಾಯದ ಅಧಿನಿಯಮದ ಕೆಳಗೆ ಅಧಿಕಾರಿಯು ಪರಿಗಣಿಸಲಾಗುವುದಿಲ್ಲ. ಆದುದರಿಂದ ಮಜೂರಿ ಸಂದಾಯ ಅಧಿನಿಯಮದ ಕಲಂ ೧೫ರ ಕೆಳಗೆ ಮಜೂರಿಯ ಎಲ್ಲಾ ಹಕ್ಕು ಸಾಧನೆಗಳನ್ನು ಪರಿಗಣಿಸುವ ಹಾಗಿಲ್ಲವೆಂಬುದು ಸರ್ವವಿದಿತ.

ಎಲ್ಲಾ ಹಕ್ಕು ಸಾಧನೆಯು ಅಧಿನಿಯಮದ ಅರ್ಥ ವಿವರಣೆಯೊಳಗೆ ಬರುತ್ತದೆಯೋ :-

ಗುರುಬಕ್ಸ್ ಸಿಂಗ್ “ವಿರುದ್ಧ” ಎಕ್ಸಿಕ್ಯೂಟೀವ್ ಇಂಜಿನಿಯರ್ ರೋಹಟಕ್ ವಿಭಾಗ, ಸಿರ್ ಹಿಂದ್ ಕೆನಲ್, ರೋಪಾರ : ೧೯೯೯ (೧) ಎಲ್.ಎ.ಎನ್. ೫೬೩ ಪು ೫೬೫:೧೯೯೯ (೨) ಎಲ್.ಎಲ್.ಜೆ. ೧೩೨೭ ಪು ೧೩೨೯ (ಪ ಮತ್ತು ಹ). ಈ ಕೇಸುಗಳ ತೀರ್ಮಾನದ ಪ್ರಕಾರ, ನಿಯಮಗಳ ಪ್ರಕಾರ ಸಮವಸ್ತ್ರಗಳು ಹಕ್ಕಿಲ್ಲದೇ ಇರುವ ನೌಕರರು ಮಾಲೀಕರನ್ನು ನಿಯಮಗಳ ಪ್ರಕಾರ ಸಮವಸ್ತ್ರಗಳು ಇತ್ಯಾದಿ ಒದಗಿಸಬೇಕೆಂದು ಕೇಳುವ ಹಕ್ಕು ಅವರಿಗಿರುವುದಿಲ್ಲ. ಇಲ್ಲಿ ಅರ್ಜಿದಾರರು ತಾವೇ ತಿಳಿದಂತೆ ಮೂರನೆ ದರ್ಜೆ ನೌಕರರಿಗೆ ನಿಯಮಗಳ ಪ್ರಕಾರ ಅವರಿಗೆ ಸಮವಸ್ತ್ರಗಳು ಇತ್ಯಾದಿ ಕೊಡಬೇಕೆಂಬ ಉಪಬಂಧವಿಲ್ಲ. ಮೊದಲು ಅವರಿಗೆ ಸಮವಸ್ತ್ರಗಳನ್ನು ಕೊಡಬೇಕೆಂದು ಹೇಳುವ ವಾದದಲ್ಲಿ ತಿರುಳಿಲ್ಲ ಎಂದು ನ್ಯಾಯಾಲಯ ಹೇಳುವುದರಿಂದ ಈ ಅಧಿನಿಯಮದ ವ್ಯಾಪ್ತಿಯೊಳಗೆ ಇವರು ಹಕ್ಕು ಸಾಧಿಸಲು ಬರುವುದಿಲ್ಲ.

೩. ಮಜೂರಿ ಸಂದಾಯ ಅಧಿನಿಯಮ (೧೯೩೬ರ ೪) ಕಲಂ ೧೫(೩) ಉಪ ಕಲಂ ೨-ಬೋನಸ್ ಸಂದಾಯ ಅಧಿನಿಯಮ (೬೫ರ ೨೧) ಕಲಂ ೧೦, ಮಜೂರಿ ಕನಿಷ್ಠ ಬೋನಸ್ ಒದಗಿಸಿರುವುದು ಬೋನಸ್ಸ್ ಸಂದಾಯ ಅಧಿನಿಯಮ ಕಲಂ ೧೦ ಕೆಳಗೆ-ಮಜೂರಿ ಸಂದಾಯದ ಅಧಿನಿಯಮದ ವ್ಯಾಪ್ತಿಯೊಳಗೆ “ಮಜೂರಿ”ಯು ಬರುತ್ತದೆಯೆ :

ನ್ಯಾಯಾಲಯವು ಈ ಮೇಲ್ಕಂಡ ವಿಷಯದ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದರನ್ನ ಅಭಿಪ್ರಾಯ ತಿಳಿಸಲು ನಿರಾಕರಿಸಿತು. ಕಾರಣ ಬೋನಸ್ ಕೇಳಿದ ವ್ಯಕ್ತಿಯು ಕೈಗಾರಿಕಾ ಘಟಕವನ್ನು ಮುಚ್ಚಿದುದರಿಂದ ಕೆಲಸವನ್ನು ಕಳೆದುಕೊಂಡಿದ್ದಾನೆ ಮತ್ತು ಅವನು ಕೇಳಿರುವ ಬೋನಸ್ಸಿನ ಮೊತ್ತವು ಕೇವಲ ೩, ೮೬೦-೦೦ ಮಾತ್ರ. ಈ ಬಗ್ಗೆ ಕಾನೂನಿನ ವಿಷಯವನ್ನು ತೆರೆದಿಟ್ಟು, ಬೋನಸ್ಸ್ ನ್ನು ಸಂದಾಯ ಮಾಡಬೇಕೆಂದು ಆದೇಶ ನೀಡಿತು.

ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯವು ಅರ್ಜಿದಾರನು ಬೋನಸ್ ಸ್ವೀಕರಿಸಿದ ನಂತರ ಮತ್ತೊಮ್ಮೆ ಅದೇ ಹೆಸರಿನಲ್ಲಿ ಅರ್ಜಿ ಹಾಕಲು ಅವಕಾಶ ಕೊಡುವುದಿಲ್ಲ. ಅರ್ಜಿದಾರನ ಪರವಾಗಿ ಕಾನೂನಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರೆ, ಅರ್ಜಿದಾರನಿಗೆ ಮಜೂರಿ ಸಂದಾಯ ಅಧಿನಿಯಮದ ಕಲಂ ೧೫ (೩)ರ ಪ್ರಕಾರ ಹತ್ತುಪಟ್ಟು ಹೆಚ್ಚು ಬೋನಸ್ಸ್ ನ್ನು ಕೊಡಬೇಕಾಗುತ್ತದೆಂಬ ವಾದದಲ್ಲಿ ತಿರುಳಿಲ್ಲ.

೧೬. ಮಜೂರಿ ಸಂದಾಯವಾಗದಿರುವ ಗುಂಪಿನಿಂದ ಮಜೂರಿ ಕೋರಿ ಒಂದೇ ಅರ್ಜಿಯನ್ನು ನೀಡುವ ಬಗ್ಗೆ

೧. ಮಜೂರಿ ಪಡೆಯದ ಗುಂಪಿನ ಉದ್ಯೋಗಿಗಳು ಒಂದೇ ಔದ್ಯೋಗೀಕರಣದಲ್ಲಿದ್ದರೆ ಮತ್ತು ಅವರ ಮಜೂರಿಯಿಂದ ಮಾಡಿದ ಕಡಿತಗಳು ಕಾಯಿದೆಗೆ ವಿರುದ್ಧವಾಗಿದ್ದು, ಒಂದೇ ಕಾರಣದ ಮೇಲೆ ಮತ್ತು ಮಜೂರಿ ಅವಧಿಗಳು ಒಂದೇ ಆಗಿದ್ದು, ಹಾಗೂ ಸಂದಾಯವಾಗದ ಮಜೂರಿಯನ್ನು ಕಲಂ ೫ರಲ್ಲಿ ಗೊತ್ತು ಮಾಡಿದ ಅವಧಿ ಮೀರಿದ್ದರೂ ನೀಡದೇ ಇದ್ದರೆ,

೨. ಏಕೈಕ ಅರ್ಜಿಯನ್ನು ಸಂಬಂಧಪಟ್ಟ ಎಲ್ಲಾ ಉದ್ಯೋಗಿಗಳೂ ಸೇರಿ ಕಲಂ ೧೫ರ ಕೆಳಗೆ ನೀಡಬಹುದು ಅಥವಾ ಅಂತಹ ಗುಂಪಿಗೆ ಸೇರಿದ ಎಷ್ಟು ಉದ್ಯೋಗಿಗಳಿದ್ದರೂ ಅವರ ಪರವಾಗಿ ನೀಡಬಹುದು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಯಾರ ಪರವಾಗಿ ಅರ್ಜಿಯನ್ನು ಸಲ್ಲಿಸಲಾಗಿದೆಯೋ ಅವರಿಗೆ ಗರಿಷ್ಠ ಪರಿಹಾರವನ್ನು ಉಪ ಕಲಂ (೨) ಕ ಪ್ರಕಾರ ಪರಿಶೀಲಿಸಿ ತೀರ್ಮಾನಿಸುವುದು.

೩. ಅಧಿಕಾರಿಯು ಕಲಂ ೧೫ರ ಕೆಳಗೆ ಈ ರೀತಿ ಬಾಕಿ ಇರುವ ಮತ್ತು ಮಜೂರಿ ಕೊಡದೇ ಇರುವ ಉದ್ಯೋಗಿಗಳ ಪರವಾಗಿ ಏಕೈಕ ಅರ್ಜಿಯನ್ನು ಉಪ ಕಲಂ (೨)ರ  ಪ್ರಕಾರ ಪರಿಶೀಲಿಸಿ ತೀರ್ಮಾನಿಸಬಹುದು.

ವ್ಯಾಖ್ಯಾನ

(೧೯೯೨) ೬೪ ಎಫ್.ಎಲ್.ಆರ್. ೩೦೨ನೇ ಪುಟದ ರಹಮತ್ ಹುಸೇನ್ “ವಿರುದ್ಧ” ೩ನೇ ಅಡಿಸನಲ್ ಜಿಲ್ಲಾ ನ್ಯಾಯಾಧೀಶರು ಮತ್ತಿತರ ಕೇಸಿನ ತೀರ್ಪಿನ ಪ್ರಕಾರ, ಸಂಬಂಧಪಟ್ಟ ಅಧಿಕಾರಿಯು ಇಂತಹ ಅರ್ಜಿಗಳನ್ನು ಹನ್ನೆರಡು ತಿಂಗಳು ಕಳೆದು ನಂತರ ಬಂದವುಗಳನ್ನೂ ಸ್ವೀಕರಿಸಿ ವಿಲೇವಾರಿ ಮಾಡಲು ಅಧಿಕಾರವುಳ್ಳವನಾಗಿರುತ್ತಾನೆ.

೧೭. ಮೇಲ್ಮನವಿ

೧. ಕಲಂ ೧೫ ಉಪ ಕಲಂ (೨) ರ ಕೆಳಗೆ ಅರ್ಜಿಯನ್ನು ಪೂರ್ಣವಾಗಿ ಇಲ್ಲವೆ ಭಾಗಶಹ ವಜಾ ಮಾಡಿದುದರ ಅಥವಾ ಉಪ ಕಲಂ ೩ ಅಥವಾ ೪ರ ಕೆಳಗೆ ಆದೇಶ ನೀಡಿ ಮಾಡಿದ ಆಜ್ಞೆ ವಿರುದ್ಧ ಆಜ್ಞೆ ಮಾಡಿದ ದಿನಾಂಕದಿಂದ ೩೦ ದಿನಗಳೊಳಗೆ ನಗರ ವ್ಯಾಪ್ತಿಯಲ್ಲಿ ಲಘು ನ್ಯಾಯಾಲಯ ಇಲ್ಲವೆ ಬೇರೆ ಪ್ರದೇಶದಲ್ಲಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಅ. ಮಾಲೀಕನಿಂದ ಅಥವಾ ಕಲಂ ೩ರ ಪ್ರಕಾರ ಮಜೂರಿ ನೀಡುವ ಜವಾಬ್ದಾರಿಯುಳ್ಳ ಯಾವುದೇ ವ್ಯಕ್ತಿಯು ಆದೇಶಿಸಲ್ಪಟ್ಟ ಮಜೂರಿ ಮತ್ತು ಪರಿಗಾರವು ಮುನ್ನೂರು ರೂಪಾಯಿಗಳಿಗಿಂತ ಹೆಚ್ಚಾಗಿದ್ದರೆ ಅಥವಾ ಆದೇಶವು ಮಾಲೀಕನ ಮೇಲೆ ಅಥವಾ ಹಣ ಪಾವತಿ ಮಾಡುವ ಜವಾಬ್ದಾರಿಯುಳ್ಳ ಯಾವುದೇ ವ್ಯಕ್ತಿಯ ಮೇಲೆ ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣಕಾಸಿನ ಹೊರೆ ಅವರ ಮೇಲೆ ಬೀಳುವ ಪಕ್ಷದಲ್ಲಿ ಅಥವಾ

ಆ. ಉದ್ಯೋಗಿಯಿಂದ ಅಥವಾ ಯಾವುದೇ ವಕೀಲ ಅಥವಾ ಮಾನ್ಯತೆ ಪಡೆದ ಕಾರ್ಮಿಕ ಸಂಘದ ಯಾವುದೇ ಪದಾಧಿಕಾರಿ ಬರವಣಿಗೆ ಮೂಲಕ ಅಧಿಕಾರ ಪಡೆದವನಾಗಿದ್ದರೆ ಅಥವಾ ಈ ಅಧಿನಿಯಮದ ಪ್ರಕಾರ ಯಾವುದೇ ನಿರೀಕ್ಷಣಾಧಿಕಾರಿ ಅಥವಾ ಅಧಿಕಾರಿಯಿಂದ ನಿಯೋಜಿಸಲ್ಪಟ್ತ ಯಾವುದೇ ವ್ಯಕ್ತಿಯ ಉಪ ಕಲಂ (೨) ಕಲಂ (೧೫)ರ ಕೆಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಉದ್ಯೋಗಿಯ ತಡೆಹಿಡಿಯಲಾಗಿದೆಯೆಂಬ ಮೊತ್ತ ಇಪ್ಪತ್ತು ರೂಪಾಯಿಗಳಿಗಿಂತಲೂ ಹೆಚ್ಚಾಗಿದ್ದರೆ ಮಾತ್ರ ಅಥವಾ

ಇ. ಕಲಂ ೧೫ ಉಪ ಕಲಂ (೪)ರ ಕೆಳಗೆ ದಂಡ ಕೊಡಲು ಆದೇಶಿಸಲ್ಪಟ್ಟ ಯಾವುದೇ ವ್ಯಕ್ತಿ ಮೇಲ್ಮನವಿ ಸಲ್ಲಿಸಬಹುದು.

(೧ಅ) ಉಪ ಕಲಂ (೧) ಖಂಡ (ಅ) ಕೆಳಗೆ ಮೇಲ್ಮನವಿ ಸಲ್ಲಿಸುವಾಗ ಮೇಲ್ಮನವಿ ಬಿನ್ನವತ್ತಳೆ ಜೊತೆಗೆ ಆದೇಶಾನುಸಾರ ಕೊಡಬೇಕಾದ ಮೊತ್ತವನ್ನು ಠೇವಣಿ ಇಟ್ಟಿದ್ದಕ್ಕೆ ಅರ್ಹತಾ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಯಿಂದ ಪಡೆದು ಲಗತ್ತಿಸದ ಹೊರತು ಮೇಲ್ಮನವಿ ಸಲ್ಲಿಸುವ ಹಾಗಿಲ್ಲ.

(೨) ಉಪ ಕಲಂ (೧) ರಲ್ಲಿ ಉಪ ಬಂಧಿಸಿದುದನ್ನುಳಿದು ಕಲಂ ೧೫ ಉಪ ಕಲಂ (೨)ರ ಕೆಳಗೆ ಮಾಡಿದ ಅರ್ಜಿಯ ಮೇಲೆ ಉಪ ಕಲಂ ೩ ಅಥವಾ ೪ರ ಕೆಳಗೆ ಅರ್ಜಿಯನ್ನು ಪೂರ್ಣವಾಗಿ ಅಥವಾ ಭಾಗಶಃ ವಜಾ ಮಾಡಿದ ಆಜ್ಞೆಯೂ ಅಂತಿಮವಾದದ್ದು.

(೩) ಈ ಕಲಂ ಕೆಳಗೆ ಮಾಲೀಕನು ಮೇಲ್ಮನವಿ ಹಾಕಿದರೆ; ಯಾವ ಅಧಿಕಾರಿಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆಯೋ, ಆ ಅಧಿಕಾರಿ ಉಪ ಕಲಂ (೧)ರ ರೀತಿ ಆದೇಶಿಸಲ್ಪಟ್ಟರೆ, ಮೇಲ್ಮನವಿ ಅಂತಿಮವಾಗಿ ತೀರ್ಮಾನವಾಗುವವರೆವಿಗೂ ತನ್ನಲ್ಲಿ ಠೇವಣಿ ಇಟ್ಟಿರುವ ಹಣ ನೀಡುವುದನ್ನು ತಡೆಹಿಡಿಯತಕ್ಕದ್ದು.

(೪) ಉಪ ಕಲಂ (೧)ರಲ್ಲಿ ಉಲ್ಲೇಖಿಸಿರುವಂತೆ ನ್ಯಾಯಾಲಯವು ಅದಕ್ಕೆ ಸರಿ ಕಂಡರೆ, ಕಾನೂನಿಗೆ ಸಂಬಂಧಪಟ್ಟ ಯಾವುದೇ ಪ್ರಶ್ನೆಯನ್ನು ಉಚ್ಚ ನ್ಯಾಯಾಲಯದ ತೀರ್ಪಿಗೆ ಬಿಡಬಹುದು. ಹಾಗೆ ಬಿಟ್ಟಾಗ ಆ ನ್ಯಾಯಾಲಯದ ತೀರ್ಮಾನದ ಪ್ರಕಾರ ವಿಷಯವನ್ನು ನಿರ್ಣಯಿಸಬೇಕು.