೧೯೩೭

ಮಜೂರಿ ಸಂದಾಯ ಅಧಿನಿಯಮ ೧೯೩೬ (೪ರ ೧೯೩೬) ಕಲಂ ೨೬ ಉಪ ಕಲಂ (೧)ರಲ್ಲಿ ಪದದತ್ವವಾದ ಅಧಿಕಾರದ ಜೊತೆಗೆ ಸಾಮಾನ್ಯ ಉಪಖಂಡಗಳ ಅಧಿನಿಯಮ ೧೯೮೭ (೧೦ರ ೧೮೯೭), ಪರಿಷತ್ತಿನ ಪ್ರಧಾನ ರಾಜ್ಯಪಾಲರು, ಈ ಕೆಳಕಂಡ ನಿಯಮಗಳನ್ನು ಮಾಡಲು ಹರ್ಷಿಸುತ್ತಾರೆ. ಇದೇ ನಿಯಮಗಳನ್ನು ಅಧಿನಿಯಮ ಕಲಂ ೨೬, ಉಪಕಲಂ (೫)ರ ಪ್ರಕಾರ ಹಿಂದೆ ಪ್ರಕಟಪಡಿಸಿದ್ದು, ಅಂದರೆ,

ನಿಯಮಗಳು

೧. ಸಂಕ್ಷಿಪ್ತ ಶೀರ್ಷಿಕೆ:

೧. ಈ ನಿಯಮಗಳನ್ನು ಮಜೂರಿ ಸಂದಾಯ (ಪ್ರಕ್ರಿಯೆ) ನಿಯಮಗಳು, ೧೯೩೭ ಎಂದು ಕರೆಯಬಹುದು.

೨. ಅವು ಇಂಡಿಯಾ ಪೂರ್ತಿ ಅನ್ವಯಿಸುತ್ತವೆ, ಜಮ್ಮು ಕಾಶ್ಮೀರ ಹೊರತುಪಡಿಸಿ.

 

೨. ಪರಿಭಾಷೆಗಳು

ಈ ನಿಯಮಗಳಲ್ಲಿ ವಿಷಯ  ಸಂದರ್ಭಾನುಸಾರ ವಿರುದ್ಧ ಅರ್ಥ ಬರೆದಿದ್ದರೆ,

(ಅ) “ಅಧಿನಿಯಮ” ಅಂದರೆ, ಮಜೂರಿ ಸಂದಾಯ ಅಧಿನಿಯಮ (೧೯೩೬ರ ೪)

(ಆ) “ಮೇಲ್ಮನವಿ” ಅಂದರೆ, ಕಲಂ ೧೭ರ ಕೆಳಗೆ ಮೇಲ್ಮನವಿ.

(ಇ) “ಪ್ರಾಧಿಕಾರ : ಅಧಿಕಾರಿ” ಅಂದರೆ, ಕಲಂ (೧) ಉಪಕಲಂ (೧) ಕೆಳಗೆ ನೇಮಿಸಲ್ಪಟ್ಟ : ರಚಿಸಲ್ಪಟ್ಟ ಅಧಿಕಾರಿ : ಪ್ರಾಧಿಕಾರ.

(ಈ) “ನ್ಯಾಯಾಲಯ” ಅಂದರೆ ಕಲಂ ೧೭ ಉಪಕಲಂ (೧) ತಿಳಿಸಲ್ಪಟ್ಟ ನ್ಯಾಯಾಲಯ.

(ಉ) “ಮಾಲೀಕ” ಕಲಂ ೧೫ರ ಕೆಳಗೆ ಮಜೂರಿ ಸಂದಾಯ ಮಾಡುವವನು.

(ಊ) “ಕಲಂ” ಅಂದರೆ ಅಧಿನಿಯಮದಲ್ಲಿನ ಕಲಂ

(ಋ) “ಆಜ್ಞೆಯ” ದಾಖಲೆ ಅಥವಾ ಆದೇಶ” ಅಂದರೆ, ಕಲಂ ೧೫ ಉಪಕಲಂ (೨) ಕೆಳಗೆ ಹಾಕಿದ ಅರ್ಜಿಯನ್ನು ಪೂರ್ಣವಾಗಿ ಅಥವಾ ಭಾಗಶಃ ವಜಾ ಮಾಡಿದ ಆಜ್ಞೆಯ ದಾಖಲು ಅಥವಾ ಉಪ ಕಲಂ ೩ ಅಥವಾ ೪ರ ಮೇಲ್ಕಂಡ ಕಲಂನಲ್ಲಿ ನಮೂನೆ (ಎಫ್)ನಲ್ಲಿ ನಮೂದಿಸಿದ ಆದೇಶ.

(ಅಂ) ಪದಗಳು ಮತ್ತು ಹೇಳಿಕೆಗಳು ಈ ಅಧಿನಿಯಮದಲ್ಲಿ ಪರಿಭಾಷಿಸಿರುವ ಪ್ರಕಾರ ಈ ಅಧಿನಿಯಮದ ಅರ್ಥಕ್ಕನುಗುಣವಾಗಿ ಪರಿಭಾಷಿಸಿರುವಂತೆ ತಿಳಿಯತಕ್ಕದ್ದು.

೩. ಅರ್ಜಿ ನಮೂನೆ

ಕಲಂ ೧೫ ಉಪಕಲಂ ೨ ಕೆಳಗೆ ಉದ್ಯೋಗಿಯಿಂದ ಅಥವಾ ಉದ್ಯೋಗಿಯ ಪರವಾಗಿ ಅಥವಾ ಉದ್ಯೋಗಿಗಳ ಗುಂಪಿನ ಪರವಾಗಿ ಹಾಕುವ ಅರ್ಜಿ, ನಮೂನೆ ಎ, ನಮೂನೆ ಬಿ, ಅಥವಾ ನಮೂನೆ ಸಿ, ಪ್ರಕಾರ ಇರಬೇಕು ಹೇಗಿದ್ದರೆ. ಹಾಗೆ ಒಂದು ನಕಲಿನಲ್ಲಿ ನ್ಯಾಯಾಲಯ ಶುಲ್ಕವನ್ನು ನಿಗದಿಪಡಿಸಿದಂತೆ ಇರಬೇಕು.

೪. ಅಧಿಕರಿಸುವುದು

ಕಲಂ ೧೫ರ ಪ್ರಕಾರ ಉದ್ಯೋಗಿಯ ಅಥವಾ ಉದ್ಯೋಗಿಗಳ ಪರವಾಗಿ ವರ್ತಿಸಲು ನಮೂನೆ “ಡಿ” ಪ್ರಕಾರ ಅರ್ಹತಾಪತ್ರವನ್ನು ನೀಡಬೇಕು, ಅದನ್ನು ಅರ್ಜಿಯನ್ನು ವಿಚಾರಣೆ ಮಾಡುವ ಅಧಿಕಾರಿಗೆ ನೀಡಬೇಕು ಮತ್ತು ಅದು ದಾಖಲೆಯ ಒಂದು ಭಾಗವಾಗಬೇಕು.

೫. ಹಾಜರಾಗಲು ಅನುಮತಿ

ಯಾವುದೇ ವ್ಯಕ್ತಿ ಉದ್ಯೋಗಿಯ ಅಥವಾ ಉದ್ಯೋಗಿಗಳ ಪರವಾಗಿ ವರ್ತಿಸಲು ಅನುಮತಿಯನ್ನು ಪಡೆಯಲಿಚ್ಚಿಸುವ ವ್ಯಕ್ತಿಯು, ಲಿಖಿತ ಮೂಲಕ ತನ್ನ ಆಸಕ್ತಿಯ ಬಗ್ಗೆ ಅಧಿಕಾರಿಗೆ ತಿಳಿಸಬೇಕು. ಅಧಿಕಾರಿಯು, ಆ ಲಿಖಿತ ಪ್ರತದ ಬಗ್ಗೆ ತನ್ನ ಆಜ್ಞೆಯನ್ನು ಮಾಡಬೇಕು. ತಿರಸ್ಕರಿಸಿದರೆ ಅದಕ್ಕೆ ಸಕಾರಣವನ್ನು ನೀಡಬೇಕು ಹಾಗೂ ಅದನ್ನು ದಾಖಲೆಯಲ್ಲಿ ದಾಖಲಿಸಬೇಕು.

೬. ದಾಖಲೆಗಳ ಮಂಡನೆ

೧. ಅರ್ಜಿಗಳು ಅಥವಾ ಇತರೆ ಅರ್ಜಿಗೆ ಅವಶ್ಯಕವಾದ ದಾಖಲೆಗಳನ್ನು ಅಧಿಕಾರಿಗೆ ವೈಯಕ್ತಿಕವಾಗಿ ಅಥವಾ ನೋಂದಣಿ ಅಂಚೆ ಮೂಲಕ ತಲುಪಿಸುವುದು.

೨. ಅಧಿಕಾರಿಯು ತನಗೆ ನೀಡಿದ ಅಥವಾ ತಾನು ಸ್ವೀಕರಿಸಿದ ದಾಖಲೆಗಳಿಗೆ ಹಿಂಬರಹವನ್ನು ನೀಡುವುದು ಇಲ್ಲವೆ ನೀಡಲು ಏರ್ಪಾಡು ಮಾಡುವುದು.

೭. ಅರ್ಜಿ ಸ್ವೀಕರಿಸಲು ನಿರಾಕರಿಸುವುದು

೧. ನಿಯಮ ೬ರ ಕೆಳಗೆ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಬಹುದು. ಆದರೆ, ಅರ್ಜಿದಾರನಿಗೆ ಅರ್ಜಿಯ ಬಗ್ಗೆ ಏನಾದರೂ ಇದ್ದರೆ ಹೇಳಲು ಅವಕಾಶಕೊಟ್ಟು, ವಿಚಾರಣೆ ಮಾಡಿ ಈ ಕೆಳಕಂಡ ಕಾರಣಗಳಿಗಾಗಿ ಅರ್ಜಿಯ ಬಗ್ಗೆ ತನಗೆ ಸರಿಯೆನಿಸಿದರೆ :-

(ಅ) ಅರ್ಜಿದಾರನಿಗೆ ಅರ್ಜಿಯನ್ನು ನೀಡಲು ಅರ್ಹ ಅರ್ಹತೆಯಿರುವುದಿಲ್ಲ ಅಥವಾ

(ಆ) ಅರ್ಜಿಯು ಕಲಂ ೧೫ರ ಉಪಕಲಂ (೨) ರಲ್ಲಿ ನಮೂದಿಸಿರುವ ಉಪಬಂಧಗಳಲ್ಲಿರುವ ಷರತ್ತುಗಳಿಂದಾಗಿ ಅರ್ಹವಲ್ಲವಾದರೆ ಅಥವಾ

(ಇ) ಕಲಂ ೧೫ರ ಪ್ರಕಾರ ಆದೇಶ ನೀಡಲು ಸಕಾರವನ್ನು ಅರ್ಜಿದಾರನು ಕೇಳಿಲ್ಲದ ಕಾರಣ.

೨. ಅಧಿಕಾರಿಯು ಅರ್ಜಿಯು ಸಾಕಷ್ಟು ನ್ಯಾಯಾಲಯ ಶುಲ್ಕವನ್ನು ಹೊಂದಿಲ್ಲದಿದ್ದರೆ ಅಥವಾ ಬೇರೆ ಕಾರಣದಿಂದ ಅಪೂರ್ಣವಾಗಿದ್ದರೆ; ಅಂಥ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಬಹುದು. ಆ ರೀತಿ ನಿರಾಕರಿಸಿದರೆ ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಮತ್ತೆ ನೀಡಿದರೆ, ಅರ್ಜಿಯನ್ನು ಪ್ರತಿಪಾದಿಸಿದರೆ ದಿನಾಂಕವನ್ನೇ ಅರ್ಜಿಯನ್ನು ನೀಡಿದ ದಿನಾಂಕವೆಂದು ಕಲಂ ೧೫ ಉಪಕಲಂ (೨)ರ ಷರತ್ತುಗಳ ಪ್ರಕಾರ ಪರಿಗಣಿಸತಕ್ಕದ್ದು.

೮. ಪಕ್ಷಗಳ ಹಾಜರಿ

೧. ಅರ್ಜಿಯನ್ನು ಸ್ವೀಕರಿಸಿದರೆ, ಅಧಿಕಾರಿಯು, ಮಾಲೀಕನಿಗೆ ನಮೂನೆ-ಡಿ ಪ್ರಕಾರ ತಿಳುವಳಿಕೆ ಪತ್ರ ನೀಡಿ, ನಿರ್ದಿಷ್ಟ ದಿನಾಂಕದಂದು ನಿಮ್ಮ ದಾಖಲೆಗಳೇನಾದರೂ ಇದ್ದರೆ, ದಾಖಲೆ ಸಹಿತ ಮತ್ತು ಇದ್ದರೆ ಸಾಕ್ಷಿ ಸಮೇತ, ತನ್ನ ಮುಂದೆ ಹಾಜರಾಗಬೇಕೆಂದು ನಿರ್ದಿಷ್ಟ ದಿನಾಂಕ ಸಹಿತ ತಿಳುವಳಿಕೆ ನೀಡುವುದು.

೨. ಮಾಲೀಕನಾಗಲೀ ಅಥವಾ ಅವನ ಪ್ರತಿನಿಧಿಯಾಗಲಿ ತಿಳಿಸಿದ ದಿನಾಂಕದಂದು ಹಾಜರಾಗಲು ತಪ್ಪಿದರೆ, ಆಗ ಅಧಿಕಾರಿಯು ಮಾಲೀಕನನ್ನು ಗೈರು ಹಾಜರೆಂದು ಪರಿಗಣಿಸಿ ಅರ್ಜಿಯ ವಿಚಾರಣೆ ನಡೆಸಿ ತೀರ್ಮಾನಿಸಬಹುದು.

೩. ಅರ್ಜಿದಾರನು ತಿಳಿಸಿದ ದಿನಾಂಕದಿಂದ ಹಾಜರಾಗದೇ ಹೋದ ಪಕ್ಷದಲ್ಲಿ, ಅಧಿಕಾರಿಯು ಅರ್ಜಿಯನ್ನು ವಜಾ ಮಾಡಬಹುದು. ಪರಂತು ಉಪ ನಿಯಮ ೨ ಅಥವಾ ೩ರ ಕೆಳಗೆ ಮಾಡಿದ ಆಜ್ಞೆಯನ್ನು ಕಳುಹಿಸಬಹುದು ಮತ್ತು ಆಜ್ಞೆಯಾದ ದಿನಾಂಕದಿಂದ ಒಂದು ತಿಂಗಳೊಳಗೆ ಸಕಾರಣವನ್ನು ತೋರಿಸಿದರೆ ಅರ್ಜಿಯ ಮರು ವಿಚಾರಣೆ ನಡೆಸಬಹುದು. ಆದರೆ ಪ್ರತಿವಾದಿಗೆ ತಿಳುವಳಿಕೆ ಪತ್ರ ನೀಡುವುದರ ಮೂಲಕ ಮರುವಿಚಾರಣೆ ದಿನಾಂಕ ತಿಳಿಸಿ ಅವಕಾಶ ನೀಡಿ ಮರುವಿಚಾರಣೆ ನಡೆಸುವುದು.

೯. ನಡವಳಿಕೆಗಳ ದಾಖಲೆ

೧. ಅಧಿಕಾರಿಯು ಎಲ್ಲಾ ವಿಷಯದಲ್ಲಿಯೂ ನಮೂನೆ “ಎಫ್” ನಲ್ಲಿ ತೋರಿಸಿರುವ ಎಲ್ಲಾ ವಿಷಯಗಳನ್ನು ದಾಖಲು ಮಾಡಿ, ಆಜ್ಞೆ ಮಾಡಿದ ವೇಳೆಯಲ್ಲಿ ಸಹಿ ಮಾಡತಕ್ಕದ್ದು ಹಾಗೂ ನಮೂನೆಯಲ್ಲಿ ದಿನಾಂಕವನ್ನು ಸೂಚಿಸತಕ್ಕದ್ದು.

೨. ಮೇಲ್ಮನವಿಗೆ ಅವಕಾಶವಿಲ್ಲದಿದ್ದರೆ ಮತ್ತೆ ದಾಖಲಿಸಬೇಕಾದ ಅವಶ್ಯಕತೆಯಿಲ್ಲ.

೩. ಮೇಲ್ಮನವಿಗೆ ಅವಕಾಶವಿದ್ದರೆ, ಅಧಿಕಾರಿಯು ಸಾಕ್ಷದ ಸಾರಾಂಶವನ್ನು ದಾಖಲಿಸತಕ್ಕದ್ದು ಮತ್ತು ಅದನ್ನು ತನ್ನ ಸಹಿಯೊಂದಿಗೆ ಆಜ್ಞೆ ಅಥವಾ ಆದೇಶಕ್ಕೆ ಕಳಿಸತಕ್ಕದ್ದು.

೧೦. ನಮೂನೆಗಳ ಮೇಲೆ ಸಹಿ

ಯಾವುದೇ ನಮೂನೆ ಆಜ್ಞೆ ಅಥವಾ ಆದೇಶದ ದಾಖಲೆ ಬಿಟ್ಟು ಯಾವುದಕ್ಕೆ ನಿಯಮಾನುಸಾರ ಅಧಿಕಾರಿ ಸಹಿ ಮಾಡಬೇಕೊ, ಅದನ್ನು ಅವನ ಆದೇಶದ ಮೇರೆಗೆ ಮತ್ತು ಅವನ ಪರವಾಗಿ ಲಿಖಿತ ಮೂಲಕ ಅವನಿಂದ ಇದಕ್ಕಾಗಿ ನೇಮಕ ಮಾಡಲ್ಪಟ್ಟ ಅಧಿಕಾರಿಯು ಸಹಿ ಮಾಡತಕ್ಕದ್ದು.

೧೧. ಅಧಿಕಾರಗಳ ಚಲಾವಣೆ

ಕಲಂ ೧೮ರಲ್ಲಿ ಪ್ರದತ್ತವಾದ ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಚಲಾಯಿಸುವಾಗ, ಸಿವಿಲ್ ಪ್ರಕ್ರಿಯೆ ಸಂಹಿತೆ ೧೯೦೮ರ ಮೊದಲು ಅನುಸೂಚಿಯಲ್ಲಿರುವ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡು, ಅಧಿಕಾರಿಗೆ ಸರಿಯೆನಿಸಿದಂತೆ ಮಾರ್ಪಾಡು ಮಾಡಿ ಮೂಲ ಅರ್ಥಕ್ಕೆ ಧಕ್ಕೆ ಬಾರದಂತೆ, ತನ್ನ ಮುಂದಿರುವ ವಿಷಯಕ್ಕನುಗುಣವಾಗಿ ಅಧಿನಿಯಮದ ಉಪಬಂಧಗಳ ಅಥವಾ ನಿಯಮಗಳ ಅರ್ಥಕ್ಕೆ ವಿರುದ್ಧವಾದವುಗಳನ್ನು ಹೊರತುಪಡಿಸಿ ಅಳವಡಿಸಿಕೊಳ್ಳುವುದು.

೧೨. ಮೇಲ್ಮನವಿಗಳು

೧. ಮೇಲ್ಮನವಿಗಳನ್ನು ದ್ವಿಪ್ರತಿಯಲ್ಲಿ ಬಿನ್ನವತ್ತಳೆ ರೂಪದಲ್ಲಿ ಸಲ್ಲಿಸಬೇಕು. ಒಂದು ನಕಲು ನಿಗದಿಪಡಿಸಿದ ನ್ಯಾಯಾಲಯ ಶುಲ್ಕವನ್ನು ಹೊಂದಿರಬೇಕು. ಸಂಕ್ಷಿಪ್ತವಾಗಿ ಆಧಾರ ಸಹಿತ ತಕರಾರನ್ನು ಕಲಂ ೧೫ ಉಪ ಕಲಂ (೨)ರ ಕೆಳಗೆ ಪೂರ್ಣವಾಗಿ ಅಥವಾ ಭಾಗಶಃ ವಜಾ ಆದ ಅಥವಾ ಉಪಕಲಂ (೩) ಅಥವಾ ಉಪಕಲಂ (೪)ರ ಅದೇ ಕಲಂನ ಕೆಳಗೆ ನೀಡಿರುವ ಆದೇಶ ಹೇಗಿರುತ್ತದೊ ಹಾಗೆ ಮತ್ತು ಆಜ್ಞೆಯ ಅಧಿಕೃತ ನಕಲನ್ನು ಲಗತ್ತಿಸಿರುವುದರೊಂದಿಗೆ ಸಲ್ಲಿಸತಕ್ಕದ್ದು.

೨. ಮೇಲ್ಮನವಿಯನ್ನು ದಾಖಲಿಸಿದ ಮೇಲೆ, ನಮೂನೆ “ಜಿ” ಪ್ರಕಾರ ತಿಳುವಳಿಕೆ ಪತ್ರವನ್ನು ನೀಡತಕ್ಕದ್ದು.

೩. ನ್ಯಾಯಾಲಯವು ಪಕ್ಷಗಳನ್ನು ಕೇಳಿದ ಮೇಲೆ ಮತ್ತು ಅವಶ್ಯವಿದ್ದ ಹೆಚ್ಚುವರಿ ವಿಚಾರಣೆ ನಡೆಸಿದ ಮೇಲೆ, ಯಾವ ಆಜ್ಞೆ ಅಥವಾ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೋ ಆ ಆಜ್ಞೆಯನ್ನು ಖಾಯಂಗೊಳಿಸಬಹುದು, ಮಾರ್ಪಾಡು ಮಾಡಬಹುದು ಅಥವಾ ರದ್ದುಪಡಿಸಿ ಅದರಂತೆ ಆಜ್ಞೆ ಮಾಡಬಹುದು.

೧೨. ಆಜ್ಞೆ ಅಥವಾ ಆದೇಶ ಯಾವಾಗ ಮಾಡಬಹುದು

ಅಧಿಕಾರಿ ಅಥವಾ ನ್ಯಾಯಾಲಯ ಯಾವುದಾದರೂ ಮೊಕದ್ದಮೆ ಬಗ್ಗೆ ಪಕ್ಷಗಳಿಂದ ವಾದ ಕೇಳಿದ ಮೇಲೆ ಆಜ್ಞೆ ಅಥವಾ ಆದೇಶವನ್ನು ಒಂದೇ ಬಾರಿಗೆ ಮಾಡಬಹುದು ಅಥವಾ ವಾಸ್ತವಿಕವಾಗಿ ಎಷ್ಟು ಬೇಗ ಮಾಡಲು ಸಾಧ್ಯವೊ ಅಷ್ಟು ಬೇಗ ಮುಂದಿನ ದಿನಾಂಕದಲ್ಲಿ ಮಾಡಬಹುದು. ಮುಂದಿನ ದಿನಾಂಕದಲ್ಲಿ ಆಜ್ಞೆ ಅಥವಾ ಆದೇಶಗಳನ್ನು ಮಾಡುವಾಗ, ಅದು ಯಾವಾಗ ಆಜ್ಞೆ ಅಥವಾ ಆದೇಶ ಮಾಡಲಾಗುವುದು ಎಂಬುದರ ಬಗ್ಗೆ ದಿನಾಂಕವನ್ನು ಗೊತ್ತುಪಡಿಸಿ ಪಕ್ಷಗಳಿಗೆ ಅಥವಾ ಅವರ ನ್ಯಾಯಾವಾದಿಗಳಿಗೆ ತಿಳುವಳಿಕೆ ಪತ್ರ ನೀಡತಕ್ಕದ್ದು.

೧೩. ದಾಖಲೆಗಳ ಪರಿಶೋಧನೆ:

ಯಾವುದೇ ಉದ್ಯೋಗಿ ಅಥವಾ ಮಾಲೀಕ ಅಥವಾ ಅವನ ಪ್ರತಿನಿಧಿ ಅಥವಾ ಯಾವುದೇ ವ್ಯಕ್ತಿ ಕಲಂ ೧೫ ಉಪ ಕಲಂ (೨)ರ ಕೆಳಗೆ ಆದೇಶಕ್ಕಾಗಿ ಅರ್ಜಿ ಹಾಕಲು ಅನುಮತಿ ಪಡೆದು ಹಾಕಿದ ಅರ್ಜಿ ಅಥವಾ ಮೇಲ್ಮನವಿ ಬಿನ್ನವತ್ತಳೆ ಅಥವಾ ಅಧಿಕಾರಿಯ ಮುಂದೆ ಅಥವಾ ನ್ಯಾಯಾಲಯಕ್ಕೆ ಹಾಕಿದ ದಾಖಲೆಗಳು ಯಾವುದೋ ಅದನ್ನು ಯಾವ ಮೊಕದ್ದಮೆಯಲ್ಲಿ ಪಕ್ಷವಾಗಿದ್ದಾನೋ ಅವನು ಅವುಗಳನ್ನು ಪರೀಕ್ಷಿಸಬಹುದು. ಅದರ ನಕಲುಗಳನ್ನು ನಿಗದಿಯಾದಷ್ಟು ಶುಲ್ಕ ನೀಡಿ ಪಡೆಯಬಹುದು.

ನಮೂನೆ “ಅ”

(ಕಲಂ ೧೫ ಉಪಕಲಂ (೩)ರ ಮಜೂರಿ ಸಂದಾಯ ಅಧಿನಿಯಮ-೧೯೩೬ರ ಪ್ರಕಾರ) ೧೯೩೬ (೪ರ ೧೯೩೬) ಮಜೂರಿ ಸಂದಾಯ ಅಧಿನಿಯಮದ ಕೆಳಗೆ ನೇಮಿಸಲ್ಪಟ್ಟ ಅಧಿಕಾರಿಯ ನ್ಯಾಯಾಲಯದಲ್ಲಿ. ಪ್ರದೇಶ……………………………

ಅರ್ಜಿ ಸಂಖ್ಯೆ : ……………………………………………………………………………………………….. : ೨೦೦೩

ಮಧ್ಯೆ

ಅ ಆ ಇ ……………………………………………………………………………………………………….. ಅರ್ಜಿದಾರ

(ಮೂಲಕ………………………………….. ನ್ಯಾಯವಾಧಿ : ವಕೀಲ : ಪದಾಧಿಕಾರಿಗಳಾದ …………………………………… ನೊಂದಾಯಿತ ಕಾರ್ಮಿಕ ಸಂಘ

ಮತ್ತು

ಹಳಕ…………………………………ಪ್ರತಿವಾದಿ : ಎದುರಾಳಿ ಪಕ್ಷ. (x y z) ಅರ್ಜಿದಾರನು ಈ ಕೆಳಕಂಡಂತೆ ಮನವಿ ಮಾಡುವುದೇನೆಂದರೆ :-

(೧) ಅ ಆ ಇ ಅರ್ಜಿದಾರನು : ಳು : ರು, ಕಾರ್ಖಾನೆ : ರೈಲ್ವೆ ಇಲಾಖೆಯಲ್ಲಿ : ಔದ್ಯೋಗಿಕರಣದಲ್ಲಿ ಉದ್ಯೋಗಿಯಾಗಿರುತ್ತಾನೆ : ಳೆ ಮತ್ತು ………………………… ವಿಳಾಸದಲ್ಲಿ ವಾಸವಾಗಿರುತ್ತಾನೆ : ಳೆ :ರೆ

ಈ ನ್ಯಾಯಾಲಯದಿಂದ ತಿಳುವಳಿಕೆ ಪತ್ರ ಮತ್ತು ಸಮನ್ಸ್ ಕಳುಹಿಸಲು ಮೇಲ್ಕಂಡ ವಿಳಾಸಗಳು ಸರಿಯಿರುತ್ತವೆ.

(೨) ಹಳಕ್ಷ ಪ್ರತಿವಾದಿಯು : ಎದುರಾಳಿ ಪಕ್ಷದವರು ಕಲಂ (೩)ರ ಪ್ರಕಾರ ಮಜೂರಿ ನೀಡುವ ಜವಾಬ್ದಾರಿ ಯುಳ್ಳವರಾಗಿರುತ್ತಾರೆ.

(೩) ಅರ್ಜಿದಾರನಿಗೆ ಈ ಕೆಳಕಂಡ ಮಾಸಗಳಿಗೆ ಮಜೂರಿಯನ್ನು ನೀಡಿರುವುದಿಲ್ಲ. (ತಿಂಗಳು, ದಿನಾಂಕ, ವರ್ಷ ಮತ್ತು ಮಜೂರಿ ಮೊತ್ತ ತಿಳಿಸುವುದು. ಯಾವ ಅವಧಿಗೆ ಎಂಬುದನ್ನು ಪೂರ್ಣವಾಗಿ ವಿವರಿಸುವುದು) (ಹೆಚ್ಚಿನ ವಿವರ ಇತ್ಯಾದಿ ತಿಳಿಸುವುದು)

(೪) ಅರ್ಜಿದಾರನಿಗೆ ಒಟ್ಟು ಬರಬೇಕಾದ ಮೊತ್ತ ಅಥವಾ ಮೌಲ್ಯ ………………………ರೂಪಾಯಿಗಳು.

(೫) ಅರ್ಜಿದಾರನು ಕಲಂ ೧೫ ಉಪಕಲಂ (೩)ರ ಕೆಳಗೆ ಕೆಳಕಂಡಂತೆ ಆದೇಶ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.

(ಅ) ಅಂದಾಜು ಮಾಡಿರುವ ಪ್ರಕಾರ ತಡಮಾಡಿದ ಮಜೂರಿಯನ್ನು ಅಥವಾ ಅಂಥ ಹೆಚ್ಚಿನ ಅಥವಾ ಕಡಿಮೆ ಮೊತ್ತವನ್ನು ಅಧಿಕಾರಿಗೆ ಸರಿಯೆನಿಸಿದ ಪ್ರಕಾರ ಬಾಕಿಯಿರುವ ಅಥವಾ ಕಾನೂನಿಗೆ ವಿರುದ್ಧವಾಗಿ ಕಡಿತ ಮಾಡಿರುವ ಮೊತ್ತವನ್ನು ನೀಡಲು ಆದೇಶಿಸಬೇಕು.

(ಆ) ಪರಿಹಾರ ಮೊತ್ತ…………………………………………………

ಅರ್ಜಿದಾರನ್ನು ಮೇಲ್ಕಂಡಂತೆ ಅರ್ಜಿಯಲ್ಲಿ ತಿಳಿಸಿರುವ ವಿಷಯಗಳೆಲ್ಲವೂ ಅವನಿಗೆ ತಿಳಿದಷ್ಟು ಮಟ್ಟಿಗೆ, ಗೊತ್ತಿರುವಷ್ಟು ಮಟ್ಟಿಗೆ ಸರಿಯಾಗಿದೆಯೆಂದು ದೃಢಪಡಿಸುತ್ತಾನೆ.

ಸ್ಥಳ : ಸಹಿ ಅಥವಾ ಅರ್ಜಿದಾರನ ಹೆಬ್ಬೆಟ್ಟಿನ ಗುರುತು ಅಥವಾ

ದಿನಾಂಕ : ನ್ಯಾಯವಾದಿಯದು ಅಥವಾ ನೋಂದಿತ ಕಾರ್ಮಿಕ ಸಂಘದ

ಅಧಿಕಾರಿ ಹೊಂದಿದ ಪದಾಧಿಕಾರಿಯದು.

 

ನಮೂನೆ “ಆ”

(ಸಮೂಹ ಅರ್ಜಿ)

(ಮಜೂರಿ ಸಂದಾಯ ಅಧಿನಿಯಮ ೧೯೩೬ರ ಕಲಂ ೧೫ರ ಉಪಕಲಂ (೩) ಮತ್ತು ಕಲಂ ೧೬ ನೋಡಿ)

ಮಜೂರಿ ಸಂದಾಯ ಅಧಿನಿಯಮ ೧೯೩೬ರ ಕೆಳಗೆ ನೇಮಕ ಮಾಡಲ್ಪಟ್ಟ ಅಧಿಕಾರಿಯ ನ್ಯಾಯಾಲಯದಲ್ಲಿ ಪ್ರದೇಶ ……………………………..ನ ವ್ಯಾಪ್ತಿಗೆ ಸೀಮಿತವಾಗಿ

ಅರ್ಜಿ ಸಂಖ್ಯೆ ……………………………………. : ೨೦೦೩

ಮಧ್ಯೆ

ಅ ಆ ಇ ಮತ್ತು ………………………………..ಅರ್ಜಿದಾರರು………………………

…………………ವಕೀಲರ ಮೂಲಕ : ನೋಂದಿತ ಕಾರ್ಮಿಕ ಸಂಘ) ಮತ್ತು

…………………ಪದಾಧಿಕಾರಿಗಳ ಮೂಲಕ)

ಹಳಕ್ಷ………………..ಪ್ರತಿವಾದಿಗಳು: ಎದುರಾಳಿಗಳು…………………………..

ವಕೀಲರ ಮೂಲಕ : ನೋಂದಿತ ಕಾರ್ಮಿಕ ಸಂಘ…………………ಪದಾಧಿಕಾರಿಗಳ

ಮೂಲಕ) ಅರ್ಜಿದಾರ : ರು ಈ ಕೆಳಕಂಡಂತೆ ಮಾಡಿಸುತ್ತಾರೆ.

೧. ಈ ಅನುಸೂಚಿಯಲ್ಲಿ ಹೆಸರು ಮತ್ತು ಖಾಯಂ ವಿಳಾಸದೊಂದಿಗೆ ವಿವರಿಸಿರುವ ಅರ್ಜಿದಾರರು ಕಾರ್ಖಾನೆ : ರೈಲ್ವೆ ಇಲಾಖೆಯಲ್ಲಿ ನೌಕರರಾಗಿರುತ್ತಾರೆ ಮತ್ತು ಅವರ ವಾಸದ ಮನೆಯ ವಿಳಾಸ …………………………………………………………………………………….

೨. ಹಳಕ್ಷರವರು ಪ್ರತಿವಾದಿಗಳು : ಎದುರಾಳಿಗಳು ಅಧಿನಿಯಮ ಕಲಂ (೩)ರ ಪ್ರಕಾರ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳವರಾಗಿದ್ದಾರೆ ಮತ್ತು ಅವರಿಗೆ ನ್ಯಾಯಾಲಯದ ತಿಳಿವಳಿಕೆ ಪತ್ರ ಅಥವಾ ಸಮನ್ಸ್ ಕಳುಹಿಸಲು ಅವರ ಮೇಲ್ಕಂಡ ವಿಳಾಸ : ಗಳು ಸರಿಯಿರುತ್ತದೆ.

೩. ಅರ್ಜಿದಾರರಿಗೆ ಈ ಕೆಳಕಂಡ ಅವಧಿಗೆ ಮಜೂರಿ ಸಂದಾಯ ಮಾಡಿರುವುದಿಲ್ಲ.

೪. ಅರ್ಜಿದಾರರ ಪ್ರಕಾರ ಅವರಿಗೆ ಸಂದಾಯವಾಗಬೇಕಾದ ಮೊತ್ತ…….ಗಳಾಗಿರುತ್ತದೆ.

೫. ಆದುದರಿಂದ ಕಲಂ ೧೫ರ ಉಪಕಲಂ (೩)ರ ಕೆಳಗೆ ಈ ಕೆಳಕಂಡ ಆದೇಶ ನೀಡಬೇಕಾಗಿ ಪ್ರಾರ್ಥಿಸುತ್ತೇವೆ.

ಅ) ತಡಮಾಡಿದ ಮಜೂರಿ ಮೊತ್ತ……………………….ರೂಪಾಯಿಗಳು ಅಥವಾ

ಹೆಚ್ಚಿರಬಹುದು ಅಥವಾ ಕಡಿಮೆಯಿರಬಹುದು ಅಧಿಕಾರಿಗೆ : ನ್ಯಾಯಾಲಯಕ್ಕೆ ಸಮರ್ಪಕವಾಗಿ ಕಂಡು  ಬಂದ ಮೊತ್ತವನ್ನು ಕೊಡುವಂತೆ ಆದೇಶಿಸುವುದು.

ಇ) ಪರಿಹಾರ ಮೊತ್ತ……………………………………………..ರೂ. ಗಳು.

ಮೇಲ್ಕಂಡ ವಿಷಯವು ಅರ್ಜಿದಾರರಿಗೆ ತಿಳಿದಂತೆ, ಗೊತ್ತಿರುವಂತೆ ಸರಿಯಾಗಿರುತ್ತದೆ.

ಸಹಿ ಅಥವಾ ಅರ್ಜಿದಾರನ ಹೆಬ್ಬೆಟ್ಟಿನ ಗುರುತು ಅಥವಾ

ವಕಿಲರ : ಕಾರ್ಮಿಕ ಸಂಘದ ಪದಾಧಿಕಾರಿಗಳ ಸಹಿ ಅಧಿಕಾರಯುತ.

ಅನುಸೂಚಿ

ಕ್ರಮಸಂಖ್ಯೆ                     ಅರ್ಜಿದಾರನ : ರ ಹೆಸರು                             ಖಾಯಂ ವಿಳಾಸ

 

ನಮೂನೆ “ಇ”

ಪರೀಕ್ಷನಿಂದ ಅಥವಾ ಅಧಿಕಾರಿಯಿಂದ ಅನುಮತಿ ಪಡೆದ ಅಥವಾ ಅಧಿಕಾರ ನೀಡಲ್ಪಟ್ಟ ವ್ಯಕ್ತಿ (ಮಜೂರಿ ಸಂದಾಯ ಅಧಿನಿಯಮ-೧೯೩೬ರ ಕಲಂ ೧೫ರ ಉಪಕಲಂ (೩)ರ ಮತ್ತು ಕಲಂ ೧೬ನ್ನು ನೋಡಿ)

ಮಜೂರಿ ಸಂದಾಯ ಅಧಿನಿಯಮ-೧೯೩೮ (೧೯೩೬ರ ೪) ರ ಕೆಳಗೆ………..ಪ್ರದೇಶಕ್ಕೆ ನೇಮಕ ಮಾಡಲ್ಪಟ್ಟ ಅಧಿಕಾರಿಯ ನ್ಯಾಯಾಲಯದಲ್ಲಿ.

ಅರ್ಜಿ ಸಂಖ್ಯೆ :……………………………………………………..: ೨೦೦

ಮಧ್ಯೆ

ಅ ಆ ಇ (ಹುದ್ದೆ…………………………..ಮಜೂರಿ ಸಂದಾಯ ಅಧಿನಿಯಮದ ಕೆಳಗೆ ಅಥವಾ ಅಧಿಕಾರಿಯು ಅನುಮತಿ ನೀಡಿದ ಅಥವಾ ಅಧಿಕಾರ ನೀಡಲ್ಪಟ್ಟ ಕಲಂ ೧೫ ಉಪಕಲಂ (೩)ರ ಪ್ರಕಾರ ಕಾರ್ಯ ನಿರ್ವಹಿಸಬೇಕಾದ ವ್ಯಕ್ತಿ) ಮತ್ತು

ಹಳಕ್ಷ…………………………….ಎದುರಾಳಿ ಪಕ್ಷ ಅರ್ಜಿದಾರನು ಈ ಕೆಳಕಂಡಂತೆ ಮಂಡಿಸುತ್ತಾನೆ.

೧. ಹಳಕ್ಷ, ಅಧಿನಿಯಮದ ಪ್ರಕಾರ ಎದುರಾಳಿಯು ಈ ಕೆಳಕಂಡ ವ್ಯಕ್ತಿಗಳಿಗೆ ಮಜೂರಿ ನೀಡಲು ಜವಾಬ್ದಾರನಾಗಿರುತ್ತಾನೆ. (ವ್ಯಕ್ತಿಗಳು ಹೆಸರು ಮತ್ತು ಖಾಯಂ ವಿಳಾಸಗಳು ಈ ಕೆಳಕಂಡಂತೆ ಇವೆ)

೧…………………………………….೩. ………………………………………..

೨……………………………………..೪…………………………………………

೨. ನ್ಯಾಯಾಲಯದಿಂದ ತಿಳುವಳಿಕೆ ಪತ್ರ ಮತ್ತು ಸಮನ್ಸ್ ನೀಡಲು ಮೇಲ್ಕಂಡ ವಿಳಾಸಗಳು ಸರಿಯಾಗಿರುತ್ತವೆ.

೩. ಈ ಕೆಳಕಂಡ ವ್ಯಕ್ತಿಗಳಿಗೆ ಕೆಳಕಂಡ ಮಜೂರಿ ಅವನಿಗೆ ಬಾಕಿ ಇದೆ : ಕಾನೂನು ಬಾಹಿರವಾಗಿ ಇವರ ಮಜೂರಿಯನ್ನು ಕಡಿತ ಮಾಡಲಾಗಿದೆ.

೪. ಈ ವ್ಯಕ್ತಿಗಳಿಗೆ ಬರಬೇಕಾದ ಪರಿಹಾರ ಮೊತ್ತವನ್ನು ………………………ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ.

೫. ಕಲಂ ೧೫ ಉಪಕಲಂ (೩)ರ ಪ್ರಕಾರ ಅರ್ಜಿದಾರನು ಈ ಕೆಳಕಂಡಂತೆ ಆದೇಶ ನೀಡಬೇಕೆಂದು ಕೋರುತ್ತಾನೆ.

(ಅ) ತಡಮಾಡಿದ ಮಜೂರಿಯ ಅಂದಾಜು ಮೊತ್ತ ಅಥವಾ ಹೆಚ್ಚಾದಷ್ಟು ಅಥವಾ ಕಡಿಮೆಯಾದಷ್ಟು ಅಧಿಕಾರಿಗೆ ಸರಿಯೆಂದು ತಿಳಿದ ಹಾಗೆ ಬಾಕಿ ಇರುವ ಅಥವಾ ಕಾನೂನು ಬಾಹಿರವಾಗಿ ಕಡಿತ ಮಾಡಿದ ಮೊತ್ತ)

(ಆ) ಪರಿಹಾರ ಮೊತ್ತ …………………………………………..ರೂಪಾಯಿಗಳು.

ಅರ್ಜಿದಾರನು ಮೇಲೆ ತಿಳಿಸಿದ ಎಲ್ಲಾ ವಿಷಯವು ಅವನಿಗೆ ತಿಳಿದ ಮಟ್ಟಿಗೆ ಗೊತ್ತಿರುವಷ್ಟು ಮಟ್ಟಿಗೆ ಸರಿಯಾಗಿದೆಯೆಂದು ದೃಢಪಡಿಸುತ್ತಾನೆ.

 

ನಮೂನೆ -ಈ

(ಅಧಿಕೃತಗೊಳಿಸಿದ್ದಕ್ಕೆ ಪ್ರಮಾಣ ಪತ್ರ)

 

ಮಜೂರಿ ಸಂದಾಯ ಅಧಿನಿಯಮ-೧೯೩೬ರ ಕಲಂ ೧೫ ಮತ್ತು ೧೭ರ ಕೆಳಗೆ ನಾನು:

ನಾವು ನೌಕರ  : ನೌಕರರುಗಳ ಈ ಮೂಲಕ ನ್ಯಾಯವಾದಿ : ನೋಂದಿತ ಕಾರ್ಮಿಕ ಸಂಘದ ಪದಾಧಿಕಾರಿಗಳಾದ…………………..ಗೆ

ಅಧಿಕಾರ ನೀಡಿ ನನ್ನ : ನಮ್ಮ ಪರವಾಗಿ …………………………….ವಿರುದ್ಧ ನಮಗೆ ಬರಬೇಕಾದ ತಡ ಮಾಡಿದ ಮಜೂರಿ ಅಥವಾ ನಮ್ಮ ಮಜೂರಿಯಲ್ಲಿ ಕಾನೂನು ಬಾಹಿರವಾಗಿ ಮಾಡಿದ ಕಡಿತದ ಮೊತ್ತವನ್ನು ಈ ಸಾಕ್ಷಿಗಳ ಮೊಕ್ತ ಅಧಿಕಾರ ನೀಡಿರುತ್ತೇನೆ / ವೆ.

 

ಸಾಕ್ಷಿಗಳು                                                                  ಸಹಿಗಳು

೧.         ೧.

೨.         ೨.

೩.         ೩.

೪.         ೪.

 

ಸ್ಥಳ :                            ಸಹಿ

ದಿನಾಂಕ :             ನ್ಯಾಯವಾದಿಗಳು : ಕಾರ್ಮಿಕ ಸಂಘದ ಪದಾಧಿಕಾರಿಗಳು

 


ನಮೂನೆ-ಉ

ಮಜೂರಿ ಸಂದಾಯ ಕಾಯಿದೆ ೧೯೩೬ರ ಪ್ರಕಾರ (೧೯೩೬ರ ೪) ನಿಮ್ಮ ವಿರುದ್ಧ ಹಕ್ಕು ಸಾಧನಾ ಪತ್ರವನ್ನು ನನಗೆ ನೀಡಲಾಗಿದೆ. ಅದರ ನಕಲನ್ನು ಇಲ್ಲಿ ಲಗತ್ತಿಸಿದ್ದೇನೆ. ಆದುದರಿಂದ ನೀವು ನನ್ನ ಮುಂದೆ ವೈಯಕ್ತಿಕವಾಗಿ ಆಗಲಿ ಅಥವಾ ತಿಳುವಳಿಕೆ ನೀಡಲ್ಪಟ್ಟ ಮತ್ತು ಅರ್ಜಿಯಲ್ಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲರ್ಹರಾದ ಯಾವುದೇ ವ್ಯಕ್ತಿಯಾಗಲಿ …………………………..ದ ದಿನ……………….ಮಾಸ………………………..೨೦೦೩………………………….ಘಂಟೆಗೆ ಸರಿಯಾಗಿ ಬೆಳ್ಳಿಗೆ : ಮಧ್ಯಾಹ್ನದ ನಂತರ ಈ ಎಲ್ಲಾ ಹಕ್ಕು ಸಾಧನೆಗೆ ಉತ್ತರಿಸಲು ಮತ್ತು ವಿಚಾರಣೆ ದಿನವನ್ನು ನಿಮ್ಮ ಹಾಜರಿಗಾಗಿ ಮತ್ತು ಅರ್ಜಿಯ ಅಂತಿಮ ತೀರ್ಮಾನಕ್ಕೆ ಗೊತ್ತು ಮಾಡಿರುವುದರಿಂದ, ನೀವು ಆ ದಿನ ನಿಮ್ಮ ಕೇಸಿನ ಪರವಾಗಿ ನೀವು ಅವಲಂಬಿಸಿರುವ ಸಾಕ್ಷಿಗಳು ಮತ್ತು ದಾಖಲೆಗಳನ್ನು ಒದಗಿಸುವುದು. ನೀವು ಮೇಲೆ ತಿಳಿಸಿದ ದಿನದಂದು ಹಾಜರಾಗದೆ ಹೋದ ಪಕ್ಷದಲ್ಲಿ ನಿಮ್ಮ ಅರ್ಜಿಯನ್ನು ನಿಮ್ಮ ಗೈರು ಹಾಜರಿಯಲ್ಲಿ ತೀರ್ಮಾನಿಸಲಾಗುವುದೆಂದು ಈ ಮೂಲಕ ನಿಮಗೆ ತಿಳಿಸಲಾಗಿದೆ.

……………….ದಿನಾಂಕ………………..ತಿಂಗಳು………………೨೦೦………ರಂದು ನನ್ನ ಮೊಹರು ಮತ್ತು ರುಜುವಿನೊಂದಿಗೆ …….ನೀಡಲಾಗಿದೆ.

 

ಮೊಹರು                                                                                                ಅಧಿಕಾರಿ

 

ನಮೂನೆ – ಊ

(ಆಜ್ಞೆ ಅಥವಾ ಆದೇಶ ದಾಖಲಿಸುವುದು)

 

೧. ಕ್ರಮ ಸಂಖ್ಯೆ : ……………………………………

೨. ಅರ್ಜಿಯ ದಿನಾಂಕ :……………………………….

೩. ಅರ್ಜಿದಾರನ ತಂದೆ ತಾಯಿಗಳ ಹೆಸರು ಮತ್ತು ವಿಳಾಸ ಅಥವಾ ಕೆಲವರ ಅಥವಾ ಮಜೂರಿ ಸಂದಾಯವಾಗದ ಒಟ್ಟಾರೆ ಎಲ್ಲಾ ಅರ್ಜಿದಾರರ ಗುಂಪಿಗೆ ಸೇರಿದವರುಗಳದು.

೪. ಮಾಲೀಕನ ಹೆಸರು ಮತ್ತು ವಿಳಾಸ

೫. ಕೇಳಿದ ಮೊತ್ತ

ಅ. ತಡಮಾಡಿದ ಮಜೂರಿ ………………………………………..ರೂಪಾಯಿಗಳು.

ಆ. ಮಜೂರಿಯಿಂದ ಕಡಿತ ಮಾಡಿದ್ದು…………………………………………….ರೂಪಾಯಿಗಳು.

೬. ಮಾಲೀಕನ ಮನವಿ ಮತ್ತು ಅವನ ವಿಚಾರಣೆ (ಇದ್ದರೆ)

೭. ನಿರ್ಣಯ ಮತ್ತು ಅದಕ್ಕೆ ಕಾರಣ ಕುರಿತು ಸಂಕ್ಷಿಪ್ತ ಹೇಳಿಕೆ

೮. ತೀರ್ಪಿನ ಮೊತ್ತ

ಅ. ತಡಮಾಡಿದ ಮಜೂರಿ…………………………………………..ರೂಪಾಯಿಗಳು.

ಆ. ಕಡಿತ ಮಾಡಿದ ಮಜೂರಿ………………………………………..ರೂಪಾಯಿಗಳು.

೯. ತೀರ್ಪಿನ ಪರಿಹಾರ ………………………………………………ರೂಪಾಯಿಗಳು.

೧೦. ವಿಧಿಸಿದ ದಂಡ …………………………………………………ರೂಪಾಯಿಗಳು.

೧೧. ತೀರ್ಪಿನ ಖರ್ಚುಗಳು :-

ಅ. ನ್ಯಾಯಾಲಯದ ವೆಚ್ಚಗಳು………………………………………ರೂಪಾಯಿಗಳು.

ಆ. ನ್ಯಾಯವಾದಿಯ ಶುಲ್ಕ……………………………………………ರೂಪಾಯಿಗಳು.

ಇ. ಸಾಕ್ಷಿಗಳ ವೆಚ್ಚಗಳು………………………………………………..ರೂಪಾಯಿಗಳು.

೧೨. ತೀರ್ಪಿನ ಮೊತ್ತವನ್ನು ಯಾವ ದಿನಾಂಕದೊಳಗೆ ನೀಡಬೇಕು.

ಸಹಿ
ದಿನಾಂಕ

 

ಸೂಚನೆ:- ಮೇಲ್ಮನವಿಗೆ ಅವಕಾಶವಿರುವ ವ್ಯಾಜ್ಯದಲ್ಲಿ ಸಾಕ್ಷವನ್ನು ಸಂಕ್ಷಿಪ್ತವಾಗಿ ಬೇರೆ ಹಾಳೆಯಲ್ಲಿ ತಿಳಿಸಿ ಲಗತ್ತಿಸಬೇಕು.

 

ನಮೂನೆ – ಋ

ವಿಚಾರಣೆ ದಿನಾಂಕ ತಿಳಿಸಿ ಪ್ರತಿವಾದಿಗೆ ನೀಡಿದ ತಿಳುವಳಿಕೆ ಪತ್ರ

ಕಲಂ ೧೭ರ ಮಜೂರಿ ಸಂದಾಯ ಅಧಿನಿಯಮ ೧೯೩೬ರ ಕೆಳಗೆ ಮೇಲ್ಮನವಿ :-

ದಿನಾಂಕ……………………….ಮಾಹೆ………………….ರ ಪ್ರದೇಶ ಅಧಿಕಾರಿಯ ತೀರ್ಪಿನ ವಿರುದ್ಧ ಮೇಲ್ಮನವಿ.

 

ಗೆ :

……………………………ಪ್ರದೇಶದ ಅಧಿಕಾರಿಯು ತೀರ್ಪಿನ ವಿರುದ್ಧ ಹಳಕ್ಷರವರು ಮೇಲ್ಮನವಿ ಸಲ್ಲಿಸಿರುತ್ತಾರೆ. ಅದರ ನಕಲನ್ನು ಇದರ ಜೊತೆಯಲ್ಲಿ ಲಗತ್ತಿಸಲಾಗಿದೆ. ಅದನ್ನು ಈ ನ್ಯಾಯಾಲಯದಲ್ಲಿ ನೋಂದಣಿ ಮಾಡಿಕೊಂಡಿದ್ದು, ವಿಚಾರಣೆಯನ್ನು ದಿನಾಂಕ………………….ಮಾಹೆ………………ರಂದು ನಿಗದಿ ಮಾಡಲಾಗಿದೆಯೆಂದು ಈ ಮೂಲಕ ತಿಳಿಸಲಾಗಿದೆ.

ಅಂದು ನೀವಾಗಲಿ ಅಥವಾ ಕಾನೂನು ಪ್ರಕಾರ ನಿಮ್ಮ ಪರವಾಗಿ ನಿಮ್ಮಿಂದ ಅಧಿಕಾರ ಪಡೆದ ಯಾರೇ ಆಗಲಿ ಈ ಮೇಲ್ಮನವಿಯ ವಿಚಾರಣೆಯಂದು ಹಾಜರಾಗದಿದ್ದ ಪಕ್ಷದಲ್ಲಿ, ನಿಮ್ಮ ಗೈರು ಹಾಜರಿಯಲ್ಲಿ ಮೇಲ್ಮನವಿಯ ವಿಚಾರಣೆ ನಡೆಸಿ ತೀರ್ಮಾನಿಸಲಾಗುತ್ತದೆ, ತಿಳಿಯುವುದು.

ನ್ಯಾಯಾಲಯದ ಮುದ್ರೆ ನನ್ನ ಸಹಿಯೊಡನೆ ದಿನಾಂಕ…………………ಮಾಹೆ………………….೦೩ ರಂದು ನೀಡಲಾಗಿದೆ.

ನ್ಯಾಯಾಧೀಶರು