ವ್ಯಾಖ್ಯಾನ        

ಮಜೂರಿ ವಸ್ತುವಿನ ರೂಪದಲ್ಲಿ ಹಣದ ಮೌಲ್ಯಕ್ಕೆ ಪರಿವರ್ತಿಸಿ ಸಂದಾಯ:

ಅಧಿನಿಯಮ ಕಲಂ ೬ರಲ್ಲಿ ಅರ್ಥೈಸುವಂತೆ, ಹಿಂದೆ ಈ  ಕಾಯಿದೆಯು ಜಾರಿಗೆ ಬರುವುದಕ್ಕೆ ಮಜೂರಿಯನ್ನು ವಸ್ತುವಿನ ರೂಪದಲ್ಲಿ ನೀಡಲಾಗುತ್ತಿತ್ತಾದರೂ, ಅದನ್ನು ಅದರ ಮೌಲ್ಯಕ್ಕನುಗುಣವಾಗಿ ಪರಿವರ್ತಿಸಿ ನಗದು ರೂಪದಲ್ಲಿ ಸಂದಾಯ ಮಾಡಬಹುದಿತ್ತೆಂಬುದು ತಿಳಿದು ಬರುತ್ತದೆ. ಈಗಲೂ ಸಹ ಇದನ್ನು ಮಾಲೀಕ  ಮತ್ತು ಅವನ ನೌಕರರು ಒಪ್ಪಂದ ಮಾಡಿಕೊಳ್ಳುವ ಮೂಲಕ ಮಾಡಬಹುದು. ಇದರಿಂದ ಕಲಂ ೬ ಮತ್ತು ೨೩ನ್ನು ಯಾವುದೇ ರೀತಿಯಲ್ಲಿ ಅಂದರೆ ಒಪ್ಪಂದ ಅಥವಾ ಕರಾರು ಮೂಲಕ ಆ ತರದ ನಗದಿಗೆ ಪರಿವರ್ತನೆಯನ್ನು ನಿಷೇಧಿಸಿದ ಹೊರತು ಉಲ್ಲಂಘಿಸಿದಂತಾಗುವುದಿಲ್ಲ.

ಮಜೂರಿ ಪದದ ವಿವರಣೆಯಂತೆ ಯಾವುದೇ ವಸ್ತುವನ್ನು ಕೊಡಲು ಒಪ್ಪಿದರೆ ಅದು ಮಜೂರಿ ವ್ಯಾಪ್ತಿಯಲ್ಲಿ ಬರುತ್ತದೆ. ಅಂದರೆ ಹಣದ ರೂಪದಲ್ಲಿ ಕೊಟ್ಟ ಅರ್ಥವನ್ನು ನೀಡುತ್ತದೆ. ಕಾಯಿದೆಯ ೬ ಪ್ರಕಾರ ಅದನ್ನು ಹಣದ ರೂಪದಲ್ಲಿ ಅದರ ಮೌಲ್ಯಕ್ಕನುಗುಣವಾಗಿ ಪರಿವರ್ತಿಸಿ ನಂತರ ನಾಣ್ಯ ಅಥವಾ ನೋಟುಗಳ ರೂಪದಲ್ಲಿ ಕೊಡಬೇಕು.

೭. ಮಂಜೂರಿಯಿಂದ ಮುರಿದುಕೊಳ್ಳಬಹುದಾದಂಥವುಗಳು

೧೮೯೦ (೯೦ರ ೧೮೯೦)ರ ಭಾರತೀಯ ರೈಲ್ವೆ ಅಧಿನಿಯಮ ಕಲಂ ೪೭ ಉಪ ಕಲಂ (೨)ರ ಬಂಧಗಳಿಗೆ ಮೀರದಂತೆ ನಿಯೋಜಿತ ವ್ಯಕ್ತಿಯ ಮಜೂರಿಯನ್ನು ಯಾವುದೇ ಕಡತವಿಲ್ಲದೆ ಕೆಲವು ಕಾಯಿದೆ ಪ್ರಕಾರ ಅಧಿಕಾರಿಯುತ ಕಡಿತಗಳನ್ನು ಹೊರತುಪಡಿಸಿ ಕೊಡಬೇಕಾಗುತ್ತದೆ.

ಸಮಜಾಯಿಸಿ ೧: ನಿಯೋಜಿತ ವ್ಯಕ್ತಿಯು ಮಾಲೀಕನಿಗೆ ಅಥವಾ ಅವನ ಪ್ರತಿನಿಧಿಗೆ ಮಾಡುವ ಎಲ್ಲಾ ಸಂದಾಯಗಳು, ಈ ಅಧಿನಿಯಮದ ಹಿನ್ನೆಲೆಯಲ್ಲಿ ಮಜೂರಿಯಿಂದ ಮುರಿದುಕೊಳ್ಳುವುಗಳಾಗುತ್ತದೆ.

ಸಮಜಾಯಿಸಿ ೨: ನಿಯೋಜಿತ ವ್ಯಕ್ತಿಗಳಿಗೆ ಸಕಾರಣಗಳಿಗಾಗಿ ವಿಧಿಸುವ ಈ ಕೆಳಕಂಡ ಶಿಕ್ಷೆಗಳಿಂದುಂಟಾಗುವ ಮಜೂರಿ ನಷ್ಟವು, ಅಂದರೆ,

ಅ. ತಡೆಹಿಡಿಯಲಾದ ವಾರ್ಷಿಕ ಹೆಚ್ಚುವರಿ ವೇತನ ಅಥವಾ ಬಡ್ತಿ ವೇತನ (ದಕ್ಷತಾ ತಡೆಮಟ್ಟದ ಹೆಚ್ಚುವರಿ ವೇತನ ಸೇರಿ)

ಆ. ಕೆಳದರ್ಜೆ ಹುದ್ದೆಗೆ ಇಳಿಸುವುದು ಅಥವಾ ಕಾಲವೇತನ ಪ್ರಮಾಣ ಅಥವಾ ಕೆಳದರ್ಜೆ ಕಾಲವೇತನಕ್ಕೆ ಇಳಿಸುವುದು ಅಥವಾ

ಇ. ಅಮಾನತ್ತಿನಲ್ಲಿಡುವುದು

ಇವುಗಳನ್ನು ಯಾವುದೇ ರೀತಿಯಲ್ಲಿ ಮಜೂರಿಯಿಂದ ಮುರಿದುಕೊಂಡವುಗಳೆಂದು ಪರಿಗಣೆಸಲಾಗದು. ಆದರೆ, ಇವು ಮಾಲೀಕರು ರೂಪಿಸಿದ ಶಿಕ್ಷಾ ಅಪರಾಧ ನಿಯಮಗಳಿಗನುಗುಣವಾಗಿರಬೇಕು ಮತ್ತು ಆ ನಿಯಮಗಳು ಸರಕಾರವು ಅಧಿಸೂಚನೆಯ ಮೂಲಕ ರಾಜ್ಯ ಪತ್ರದಲ್ಲಿ ಸೂಚಿಸಿದವುಗಳಿಗೊಳಪಟ್ಟಿರಬೇಕು.

೨. ನಿಯೋಜಿತ ವ್ಯಕ್ತಿಯ ಮಜೂರಿಯನ್ನು ಈ ಅಧಿನಿಯಮದ ಉಪಬಂಧಗಳಿಗನುಗುಣವಾಗಿ ಮುರಿದುಕೊಳ್ಳತಕ್ಕದ್ದು ಮತ್ತು ಅವುಗಳು ಈ ಕೆಳಕಂಡವುಗಳು ಮಾತ್ರ ಆಗಿರಬೇಕು.

ಅಂದರೆ,

ಅ. ಜುಲ್ಮಾನೆಗಳು

ಆ. ಕೆಲಸಕ್ಕೆ ಗೈರು ಹಾಜರಾಗಿದುದಕ್ಕೆ ಮುರಿದುಕೊಳ್ಳುವುದು

ಇ. ನಿಯೋಜಿತ ವ್ಯಕ್ತಿಯ ಸುಪರ್ದಿಗೆ ಅಧಿಕೃತವಾಗಿ ವಹಿಸಿದ್ದ ಸಾಮಾನುಗಳಿಗಾಗುವ ಹಾನಿಯಿಂದ ಅಥವಾ ಅವುಗಳು ಕಳೆದುಹೋಗುವಿಕೆಯಿಂದುಂಟಾದ ನಷ್ಟದ ಪರಿಹಾರ ರೂಪವಾಗಿ ಅಥವಾ ಅವನಿಗೆ ವಹಿಸಿದ್ದ ಹಣದಲ್ಲಿ ನಷ್ಟವುಂಟಾಗಿದ್ದಲ್ಲಿ ಮತ್ತು ಆ ಹಾನಿ ಮತ್ತು ನಷ್ಟ ಅವನ ಬೇಜವಾಬ್ದಾರಿಯಿಂದ ಅಥವಾ ತಪ್ಪಿನಿಂದ ಆಗಿರುವುದು ಕಂಡು ಬಂದಾಗ ಮಾತ್ರ.

ಈ. ಮಾಲೀಕ ಅಥವಾ ಸರಕಾರ ಅಥವಾ ಅಂದಿನ ಕಾಯಿದೆಗಳಗನುಗುಣವಾಗಿ ಯಾವುದೇ ವಸತಿ ಮಂಡಳಿಗಳು ಒದಗಿಸಿದ ವಸತಿ ಸೌಕರ್ಯಗಳ ಬಾಬ್ತು (ಸರಕಾರ ಅಥವಾ ಮಂಡಲಿ ಅಥವಾ ಮಾಲೀಕರಾಗಿರಲಿ ಅಥವಾ ಇಲ್ಲದಿರಲಿ) ಅಥವಾ ಇನ್ನಾವುದೇ ಅಧಿಕಾರ ವರ್ಗದ ಸಹಾಯಧನ ಆಧರಿತ ವಸತಿ ಸೌಕರ್ಯ ಒದಗಿಸುವ ವ್ಯವಹಾರದಲ್ಲಿ ಸರಕಾರವು ತನ್ನ ರಾಜ್ಯ ಪತ್ರದ ಅಧಿಸೂಚನೆಯಲ್ಲಿ ನಿರ್ದಿಷ್ಟವಾಗಿ ಗುರುತಿಸಲ್ಪಟ್ಟ ರೀತಿಯಲ್ಲಿ ಒದಗಿಸಿದ ಬಾಬ್ತು ಮುರಿದುಕೊಂಡದ್ದು.

ಉ. ಮತ್ತಿತರ ಸೌಲಭ್ಯ, ಸೌಕರ್ಯ ಮತ್ತು ಸೇವೆಗಾಗಿ ಸರಕಾರವಾಗಲಿ ಅಥವಾ ಸರಕಾರದಿಂದ ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೂಲಕ ನೇಮಿಸಲ್ಪಟ್ಟ ಅಧಿಕಾರಿಯಾಗಲಿ, ಮಾಲೀಕನಾಗಿ ಒದಗಿಸಿದ ಇತರೆ ಸೌಲಭ್ಯಗಳು ಅಥವಾ ಸೇವೆಗಳ ಬಾಬ್ತು ಮುರಿದುಕೊಂಡವುಗಳು.

ಸಮಜಾಯಿ ೩: ಇಲ್ಲಿ ಸೇವೆಗಳು ಎಂಬ ಪದದಲ್ಲಿ (ಈ ಖಂಡದಲ್ಲಿ) ಉಪಯೋಗಿಸಿದಂತೆ ನಿಯೋಜಿತ ಕೆಲಸಕ್ಕೆ ಬೇಕಾದ ಮತ್ತು ಒದಗಿಸಿದ ವಸ್ತುಗಳಾಗಲಿ ಅಥವಾ ಉಪಕರಣಗಳಾಗಲಿ ಸೇರಿರುವುದಿಲ್ಲ.

ಉ. ಯಾವುದೇ ವಿಧದಲ್ಲಿ ಮುಂಗಡವಾಗಿ ಕೊಟ್ಟ ಹಣದ ಬಾಬ್ತು (ಪಯಾಣಭತ್ಯೆ ಮತ್ತು ವಾಹನಭತ್ಯೆ ಸೇರಿ) ಮತ್ತು ಆ ಬಗ್ಗೆ ಬರಬೇಕಾದ ಬಡ್ಡಿ ಅಥವಾ ಹೊಂದಾಣಿಕೆ ಮಾಡಬಹುದಾದ ಹೆಚ್ಚುವರಿ ಮಜೂರಿ ಮುರಿದುಕೊಳ್ಳುವಿಕೆ.

ಊ. ಸರಕಾರದಿಂದ ಅಂಗೀಕರಿಸಲ್ಪಟ್ಟ ಕಾರ್ಮಿಕರ ಕಲ್ಯಾಣದ ದೃಷ್ಟಿಯಿಂದ ಸ್ಥಾಪಿಸಲ್ಪಟ್ಟು ಯಾವುದೇ ಕಲ್ಯಾಣ ನಿಧಿಗೆ ಹಿಂತಿರುಗಿಸಬೇಕಾದ ಸಾಲದ ಬಾಬ್ತು ಬಡ್ಡಿಯೂ ಸೇರಿ ಮುರಿದುಕೊಳ್ಳುವುದು. ಸರಕಾರದಿಂದ ಅಂಗೀಕರಿಸಲ್ಪಟ್ಟ ಮನೆ ನಿರ್ಮಾಣ ಅಥವಾ ಮತ್ತಾವುದೇ ಬಾಬ್ತಿನ ಬಗ್ಗೆ ನೀಡಿದ್ದ ಸಾಲ ಬಡ್ಡಿ ಸೇರಿ ಹಿಡಿದುಕೊಳ್ಳಬಹುದಾದುದರ ಬಾಬ್ತು ಮುರಿದುಕೊಂಡದ್ದು.

ಋ. ನಿಯೋಜಿತ ವ್ಯಕ್ತಿಯ ಅದಾಯ ತೆರಿಗೆ ಬಾಬ್ತು ಮುರಿದುಕೊಂಡದ್ದು

ೠ. ನ್ಯಾಯಾಲಯದ ಅಥವಾ ಬೇರೆ ಅಧಿಕಾರಯುತ ಸಂಬಂಧಪಟ್ಟ ವ್ಯಕ್ತಿಯ ಆದೇಶದ ಮೇರೆಗೆ ಮುರಿದುಕೊಳ್ಳಬಹುದಾದವುಗಳು.

ಎ. ಭವಿಷ್ಯನಿಧಿ ಅಧಿನಿಯಮ ೧೯೨೫ (೧೯೨೫ರ ೧೯ನೇಯದು) ಪ್ರಕಾರ ಭವಿಷ್ಯ ನಿಧಿಗೆ ನೀಡುವ ವಂತಿಕೆ ಮತ್ತು ಭವಿಷ್ಯ ನಿಧಿಯಿಂದ ಪಡೆದ ಮುಂಗಡ ಹಣದ ಬಾಬ್ತು ನೀಡುವ ಅಥವಾ (೧೯೨೨ರ ೧೧) ಆದಾಯ ತೆರಿಗೆ ಕಾಯಿದೆ ೧೯೨೨ ಕಲಂ ೫೮ಎ ಪ್ರಕಾರ ವಿವರಿಸಿರುವ (೧೯೨೨ರ್ ೧೧ನೇಯದು) ಪ್ರಕಾರ ಗುರುತಿಸಲ್ಪಟ್ಟ ಮತ್ತು ರಾಜ್ಯ ಸರಕಾರದಿಂದ ಅನುಮೋದಿಸಲ್ಪಟ್ಟ ಮತ್ತು ಅನುಮೋದನೆ ಜಾರಿಯಲ್ಲಿರುವವರೆಗಿನ ಭವಿಷ್ಯನಿಧಿ ಬಾಬ್ತು ಮುರಿದುಕೊಂಡದ್ದು.

ಏ. ರಾಜ್ಯ ಸರಕಾರದಿಂದ ಅಥವಾ ಸರಕಾರದಿಂದ ನಿಯೋಜಿಸಲ್ಪಟ್ಟ ಯಾವುದೇ ಅಧಿಕಾರಿಯಿಂದ ಅಂಗೀಕರಿಸಲ್ಪಟ್ಟ ಯಾವುದೇ ಸಹಕಾರಿ ಸಂಸ್ಥೆ ಅಥವಾ ಭಾರತೀಯ ಅಂಚೆ ಇಲಾಖೆ ನಡೆಸುತ್ತಿರುವ ಯಾವುದೇ ಯೋಜನೆ ಬಾಬ್ತು ಮುರಿದುಕೊಂಡವುಗಳು.

ಐ. ಜೀವವಿಮಾ ಸಂಸ್ಥೆ ಅಧಿನಿಯಮ ೧೯೫೬ (೧೯೫೬ರ ೩೧) ಪ್ರಕಾರ ಸ್ಥಾಪಿಸಿದ ಭಾರತೀಯ ಜೀವವಿಮಾ ಸಂಸ್ಥೆಗೆ ನೀಡಬೇಕಾದ ನಿಯೋಜಿತ ವ್ಯಕ್ತಿಯು ಲಿಖಿತವಾಗಿ ನೀಡಿದ ಅಧಿಕಾರದ ಮೇರೆಗೆ ವಿಮೆಯ ಕಂತನ್ನು ಅಥವಾ ಭಾರತ ಸರಕಾರದ ಭದ್ರತಾ ಪತ್ರಗಳನ್ನು ಕೊಳ್ಳುವುದಕ್ಕೋಸ್ಕರ ಅಥವಾ ಯಾವುದೇ ರಾಜ್ಯ ಸರಕಾರದ ಉಳಿತಾಯ ಯೋಜನೆಗಳಿಗನುಗುಣವಾಗಿ ಅಂಚೆ ಇಲಾಖೆ ಯೋಜನೆಯಲ್ಲಿ ತೊಡಗಿಸುವುದಕ್ಕೋಸ್ಕರ ಮುರಿದುಕೊಂಡವುಗಳು.

ಅಂ. ನಿಯೋಜಿತ ವ್ಯಕ್ತಿಯು ಲಿಖಿತವಾಗಿ ನೀಡಿದ ಅಧಿಕಾರದ ಮೇರೆಗೆ ಮಾಲೀಕರಾಗಲಿ ಅಥವಾ ಕಾರ್ಮಿಕ ಸಂಘಟನೆಗಳ ಅಧಿನಿಯಮ ೧೯೨೬ರ ಪ್ರಕಾರ ಸ್ಥಾಪಿಸಲ್ಪಟ್ಟ ಕಾರ್ಮಿಕ ಸಂಘ ಕಾರ್ಮಿಕರ ಅಥವಾ ಅವರ ಕುಟುಂಬ ಸದಸ್ಯರ ಇಲ್ಲವೇ ಇಬ್ಬರೂ ಸೇರಿ ರಾಜ್ಯ ಸರಕಾರದಿಂದ ಅಥವಾ ಸರಕಾರದ ಪರವಾಗಿ ಯಾವುದೇ ಅಧಿಕಾರಿ ಅನುಮೋದಿಸಿದ ಕಲ್ಯಾಣ ನಿಧಿಗೆ ಅನುಮೋದನೆ ಜಾರಿಯಲ್ಲಿರುವ ತನಕ ಮುರಿದುಕೊಂಡವುಗಳು.

ಅಃ. ಕಾರ್ಮಿಕ ಸಂಘಟನೆಗಳ ಕಾಯಿದೆ, ೧೯೨೬ರ ಪ್ರಕಾರ ಸ್ಥಾಪಿಸಿದ ಕಾರ್ಮಿಕ ಸಂಘಗಳ ಸದಸ್ಯತ್ವದ ಚಂದಾ ಬಾಬ್ತು ನಿಯೋಜಿತ ವ್ಯಕ್ತಿಯು ನೀಡಿದ ಲಿಖಿತ ಅಧಿಕಾರದ ಮೇರೆಗೆ ಮುರಿದುಕೊಂಡವುಗಳು.

ಕ. ವಿಮಾ ಯೋಜನೆಯ ಭದ್ರತಾ ಪತ್ರಗಳ ಬಾಬ್ತು ಸಂದಾಯ ಮಾಡುವ ಕಂತುಗಳಿಗೆ ಮುರಿದುಕೊಂಡವುಗಳು.

ಖ. ಖೋಟಾ ಅಥವಾ ಕೆಟ್ಟ ನಾಣ್ಯ ಅಥವಾ ಮುದ್ದೆಯಾದ ಅಥವಾ ಚಿಂದಿ ಅಥವಾ ಖೋಟಾ ನೋಟುಗಳನ್ನು ತೆಗೆದುಕೊಳ್ಳುವುದರ ಮೂಲಕ ರೈಲ್ವೆ ಆಡಳಿತಕ್ಕೆ ಆಗುವ ನಷ್ಟದ ಬಾಬ್ತು ಮುರಿದುಕೊಂಡವುಗಳು.

ಗ. ನಿಯೋಜಿತ ವ್ಯಕ್ತಿಯ ಕರ್ತವ್ಯ ಲೋಪದಿಂದ, ಸರಕುಪಟ್ಟಿ ಅಥವಾ ವಸೂಲಿ ಮಾಡಿದ್ದಕ್ಕೆ ಬೆಲೆಪಟ್ಟಿ ಅಥವಾ ರೈಲ್ವೆ ಆಡಳಿತಕ್ಕೆ ಬರಬೇಕಾದವುಗಳ ಬಗ್ಗೆ ಲೆಕ್ಕ ಇಡುವಲ್ಲಿ ಅಂದರೆ, ರೈಲ್ವೆ ಪ್ರಯಾಣದರ ವಸ್ತುಸಾಗಣಿದರ, ಸುಸ್ತಿಸುಂಕ, ಧಕ್ಕೆ ಮತ್ತು ತೆರಿಗೆ ಬಾಬ್ತು ಅಥವಾ ಫಲಹಾರ ಮಂದಿರಗಳಲ್ಲಿ ಮಾಡುವ ಆಹಾರ ಪದಾರ್ಥಗಳ ಅಥವಾ ದವಸಧಾನ್ಯಗಳನ್ನು ಮಾರಾಟ ಮಾಡಿದ ಅಥವಾ ಇತರೆ ಬಗ್ಗೆ ಉಂಟಾದ ನಷ್ಟದ ಬಾಬ್ತು ಮುರಿದುಕೊಂಡವುಗಳು.

ಘ. ನಿಯೋಜಿತ ವ್ಯಕ್ತಿಯ ಕರ್ತವ್ಯಲೋಪ ಅಥವಾ ಬೇಜವಾಬ್ದಾರಿಯಿಂದ ರೈಲ್ವೆ ಆಡಳಿತಕ್ಕೆ ಸರಿತಪ್ಪಿ ರಿಯಾಯಿತಿ ಅಥವಾ ಮರುಪಾವತಿಯನ್ನು ಮಾಡುವಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲು ಮುರಿದುಕೊಂಡವುಗಳು.

ಜ್. ನಿಯೋಜಿತ ವ್ಯಕ್ತಿಯ ಲಿಖಿತ ಅಧಿಕಾರ ನೀಡಿಕೆ ಆಧರಿಸಿ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರನಿಧಿಗೆ ಅಥವಾ ಕೇಂದ್ರ ಸರಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ಸೂಚಿಸುವ ಮತ್ತು ಯಾವುದೇ ನಿಧಿಗೆ ಸಂದಾಯ ಮಾಡುವುದನ್ನು ಮುರಿದುಕೊಂಡವುಗಳು.

ಚ. ಕೇಂದ್ರ ಸರಕಾರವು ತನ್ನ ನೌಕರರ ಹಿತದೃಷ್ಟಿಯಿಂದ ರೂಪಿಸುವ ಯಾವುದೇ ವಿಮಾ ಯೋಜನೆಗೆ ನೀಡುವ ಚಂದಾಗಳನ್ನು ಮುರಿದುಕೊಂಡದ್ದು.

೩. ಅಧಿನಿಯಮದಲ್ಲಿರುವ ಯಾವುದೇ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಕಲಂ (೨) ರ ಪ್ರಕಾರ ಮಜೂರಿ ಸಂದಾಯದ ಅವಧಿಯಲ್ಲಿ ನಿಯೋಜಿತ ವ್ಯಕ್ತಿಯು ಮಜೂರಿಯಿಂದ ಮುರಿದುಕೊಳ್ಳುವ ಒಟ್ಟು ಹಣ ಯಾವುದೇ ರೀತಿಯಲ್ಲೂ ಹೆಚ್ಚಾಗಬಾರದು.

೧. ಕೆಲವು ಸಂದರ್ಭಗಳಲ್ಲಿ ಉಪ ಕಲಂ (೨) ಖಂಡ (ಏ) ಪ್ರಕಾರ ಸಹಕಾರ ಸಂಘಗಳ ಬಾಬ್ತು ಪೂರ್ಣವಾಗಿ ಅಥವಾ ಭಾಗಶಃ ಮುರಿದುಕೊಳ್ಳುವ ಒಟ್ಟು ಮಜೂರಿಯ ಶೇಕಡಾ ಎಪ್ಪತ್ತೈದಕ್ಕಿಂತ. (೧೧) ಬೇರೆ ಮತ್ತಾವುದೇ ಸಂದರ್ಭಗಳಲ್ಲಿ ಒಟ್ಟು ಮಂಜೂರಿಯ ಶೇಕಡಾ ಐವತ್ತರಷ್ಟು.

ಪರಂತು ಉಪ ಕಲಂ (೨)ರ ಪ್ರಕಾರ ಮುರಿದುಕೊಳ್ಳುವ ಹಣ ಒಟ್ಟು ಮಜೂರಿಗಿಂತ ಶೇಕಡಾ ಎಪ್ಪತ್ತೈದಕ್ಕಿಂತ ಹೆಚ್ಚಾಗಿದ್ದರೆ ಅಥವಾ ಇದೇ ರೀತಿ ಶೇಕಡಾ ಐವತ್ತಕ್ಕಿಂತ ಹೆಚ್ಚಾಗಿದ್ದರೆ ಅಂತಹ ಹೆಚ್ಚುವರಿಯನ್ನು ನಿಗದಿತ ರೀತಿಯಲ್ಲಿ ವಸೂಲಿ ಮಾಡಿಕೊಳ್ಳುವುದು.

೪. ಈ ಕಲಂನಲ್ಲಿ ಒಳಗೊಂಡಿರುವ ಯಾವುದೂ ಸಹ, ಮಾಲೀಕನು ನಿಯೋಜಿತ ವ್ಯಕ್ತಿಯ ಮಜೂರಿಯಿಂದ ನ್ಯಾಯಬದ್ಧವಾಗಿ ವಸೂಲಿ ಮಾಡಿಕೊಳ್ಳುವುದನ್ನು ಅಥವಾ ಅವರು ಕೊಡಬೇಕಾದ್ದನ್ನು ಹಿಡಿದುಕೊಳ್ಳುವುದಕ್ಕೆ ಈಗಿರುವ ಕಾನೂನು ಪ್ರಕಾರ ಭಾರತೀಯ ರೈಲ್ವೆ ಕಾಯಿದೆ ೧೮೯೦ (೧೮೯೦ರ ೯) ಹೊರತುಪಡಿಸಿ ಅಡ್ಡಿಯಾಗುತ್ತದೆಂದು ಭಾವಿಸಬಾರದು.

ರಾಜ್ಯ ತಿದ್ದುಪಡಿಗಳು

ಬಿಹಾರ:ಮಜೂರಿ ಸಂದಾಯ ಅಧಿನಿಯಮ ೧೯೨೬ (೧೯೨೬ರ ೧) ರ ಕಲಂ ೭ ಉಪ ಕಲಂ (೨) ಖಂಡ (ಈ) ನ “ಮಾಲೀಕ” ಎಂಬ ಪದದ ನಂತರ “ಅಥವಾ ರಾಜ್ಯ ಸರಕಾರದಿಂದ ಅಥವಾ ಸ್ವಾಯತ್ತ ಗೃಹ ಮಂಡಲಿಯಿಂದ ಅಥವಾ ರಾಜ್ಯ ಸರಕಾರವು ನೇಮಿಸುವ ಯಾವುದೇ ಪ್ರತಿನಿಧಿಯಿಂದ ಎಂಬ ಪದಗಳನ್ನು ಅಳವಡಿಸಿಕೊಳ್ಳತಕ್ಕದ್ದು.

ಗುಜರಾತ: ಮೂಲ ಅಧಿನಿಯಮದ ಕಲಂ ೭, ಉಪ ಕಲಂ ೨, ಖಂಡ (೩) ರಲ್ಲಿ “ಯಾವುದೇ ಅಂಚೆ ಇಲಾಖೆಯ ಉಳಿತಾಯ ಬ್ಯಾಂಕ್” ಎಂಬ ಪದಗಳನ್ನು ತೆಗೆದುಹಾಕುವುದು.

ಕರ್ನಾಟಕ: ಕರ್ನಾಟಕ ರಾಜ್ಯದ ಮೈಸೂರು ಪ್ರದೇಶಕ್ಕೆ ಅನ್ವಯಿಸುವಂತೆ, ಅ) ಕಲಂ ೭, ಉಪ ಕಲಂ (೨) ಖಂಡ (೫) ರಲ್ಲಿ ಈ ಕೆಳಕಂಡ ಖಂಡಗಳನ್ನು ಸೇರಿಸಲಾಗಿದೆ. ಅಂದರೆ, ಅಂ) ಪುನರ್ ನಿಯೀಜಿತ ವ್ಯಕ್ತಿಯಿಂದ ಅವನ ಹಿಂದಿನ ಉದ್ಯೋಗದಿಂದ ತೆಗೆದುಹಾಕಿದಾಗ ಅವನಿಗೆ ಭವಿಷ್ಯ ನಿಧಿಯಿಂದ ಅಥವಾ ಉಪಧಾನ ನಿಧಿ (ಅಥವಾ ಪ್ರೋತ್ಸಾಹ ನಿಧಿ)ಯಿಂದ ಸಂದಾಯ ಮಾಡಿದ್ದನ್ನು ವಸೂಲಿ ಮಾಡಿಕೊಳ್ಳಲು ಮುರಿದುಕೊಳ್ಳುವುದು.

ಅ) ರಾಜ್ಯ ಸರಕಾರವು ನಿಯೋಜಿತ ವ್ಯಕ್ತಿಗಳ ಹಿತದೃಷ್ಟಿಯಿಂದ ನಿರ್ದಿಷ್ಟವಾಗಿ ಅಧಿಕಾರಕೊಟ್ಟವುಗಳನ್ನು ಮುರಿದುಕೊಳ್ಳಲು

ಆ) ಉಪ ಕಲಂ (೨) ರ ನಂತರ ಈ ಕೆಳಕಂಡ ಉಪ ಕಲಂಗಳನ್ನು ಸೇರಿಸಿ. ಅಂದರೆ:

೩. ಎಲ್ಲಿ ಉದ್ಯೋಗದ ಮಜೂರಿಯು ವೇತನ ಬಡ್ತಿಯನ್ನು ಅವಲಂಭಿಸಿರುತ್ತದೋ, ಉದ್ಯೋಗದ  ವೇತನ ಬಡ್ತಿಯನ್ನು ಶಿಕ್ಷಾರ್ಹ ಕಾರಣಗಳಿಗಾಗಿ ತಡೆಹಿಡಿಯಬಹುದು ಅಥವಾ ಅವನ ಮಜೂರಿಯನ್ನು ಅದೇ ರೀತಿಯ ಕಾರಣಗಳಿಗಾಗಿ ಕೆಳದರ್ಜೆ ವೇತನದ ಶ್ರೇಣಿಗೆ ಇಳಿಸಬಹುದು. ಪರಂತು, ಈ ರೀತಿಯ ಕೊನೆಯದಾದ ಕ್ರಮ ತೆಗೆದುಕೊಳ್ಳುವ ಮುನ್ನ ಉದ್ಯೋಗ ನಿಯಮದ ಷರತ್ತುಗಳಿಗನುಗುಣವಾಗಿ ಉದ್ಯೋಗದಿಂದ ತೆಗೆಯಬೇಕಾದ ಸಂದರ್ಭದಲ್ಲಿ ನೀಡಲಾಗುವ ನೋಟೀಸ್ ಪ್ರಕಾರ ಈ ವಿಷಯದಲ್ಲಿಯೂ ಸಹ ನೋಟೀಸು ಕೊಟ್ಟು ಈ ಕ್ರಮ ಜರುಗಿಸಬೇಕು.

೪. ಎಲ್ಲಿ ಉದ್ಯೋಗಿಯು ತನ್ನ ಉದ್ಯೋಗದ ಮಟ್ಟಕ್ಕಿಂತ ಕೆಳದರ್ಜೆಯ ಕುಶಲತೆ ಅಥವಾ ಜವಾಬ್ದಾರಿಯ ಕೆಲಸವನ್ನು ಸಮಯಕ್ಕೆ ತಕ್ಕಂತೆ ಮಾಡಬೇಕಾಗುವ ಸಂದರ್ಭದಲ್ಲಿ, ಆ ಕೆಳಮಟ್ಟದ ಅಥವಾ ಕಡಿಮೆ ಜವಾಬ್ದಾರಿಯ ಕೆಲಸ ಮಾಡಿದ್ದರಿಂದ ಮಜೂರಿಯಲ್ಲಿ ಕಡಿಮೆಯಾದುದನ್ನು ಮಜೂರಿಯಲ್ಲಿ ಮುರಿದುಕೊಂಡಂತೆ ಎಂದು ತಿಳಿದುಕೊಳ್ಳುವುದು.

೫. ಕಲಂ ೮ರ ಉಪ ಕಲಂಗಳಾದ ೧, ೨ ಮತ್ತು ೩ ತಡೆಹಿಡಿಯಬೇಕಾದ ವೇತನ ಬಡ್ತಿ ಅಥವಾ ಮುರಿದುಕೊಳ್ಳುವಿಕೆಯು ಉಪ ಕಲಂ ೪ರ ಪ್ರಕಾರ ಶಿಕ್ಷಾರ್ಹ ಅಪರಾಧಗಳಿಗೆ ಮತ್ತು ಅದೇ ರೀತಿಯ ದಂಡ ವಿಧಿಸಬಹುದಾದ ಕ್ರಮಗಳಿಗೆ ಅನ್ವಯಿಸತಕ್ಕವುಗಳು.

ಮೂಲ ಕಾಯಿದೆ ಕಲಂ ೭ ಉಪ ಕಲಂ ೨ ಖಂಡ (ಘ) ದಲ್ಲಿ ಈ ಕೆಳಕಂಡ ಖಂಡಗಳನ್ನು ಸೇರಿಸಲಾಗಿದೆ, ಅಂದರೆ, (ಜ್ಞ) ಪುನರ್ ನಿಯೋಜಿತ ವ್ಯಕ್ತಿಯಿಂದ, ಅವನ ಹಿಂದಿನ ಉದ್ಯೋಗದಿಂದ ವಸೂಲಿ ಮಾಡಲು ಮುರಿದುಕೊಳ್ಳುವುದು, ಪರಂತು ಅಂತಹ ವಸೂಲಿ ಮಾಡಿಕೊಳ್ಳುವಿಕೆಯು ಒಟ್ಟು ದುಡಿಮೆಯ ಶೇಕಡಾ ೩೦ಕ್ಕಿಂತ ಮೀರಬಾರದು. ಈ ಸಂದರ್ಭದಲ್ಲಿ ಮರುಉದ್ಯೋಗವೆಂದರೆ ಹಿಂದಿನ ಮಾಲೀಕನ ಬಳಿಯೇ ಪುನಃ ಉದ್ಯೋಗಕ್ಕೆ ಸೇರಿಕೊಳ್ಳುವುದು.

ಕೇರಳ: ಕಲಂ ೭ ಉಪ ಕಲಂ ೩ ಖಂಡ (ಘ) ದಲ್ಲಿ ಈ ಕೆಳಕಂಡ ಹೊಸ ಖಂಡವನ್ನು ಅಳವಡಿಸುವುದು. “ಘ” ಕೇರಳ ಆರ್ಥಿಕ ಸಹಾಯ (ವಿಮೋಚಿತರಾದ ಅಥವಾ) ವಜಾ ಮಾಡಲ್ಪಟ್ಟ ಕಾರ್ಮಿಕ ನಿಯಮಗಳು, ೧೯೫೮ರ ಪ್ರಕಾರ ಆರ್ಥಿಕ ಸಹಾಯ ಮಾಡಿದ ರಾಜ್ಯ ಸರಕಾರದ ಆರ್ಥಿಕ ಸಹಾಯ ನಿಧಿಗೆ ಸಂದಾಯವಾಗಬೇಕಾದುದನ್ನು ಮುರಿದುಕೊಳ್ಳುವುದು.

ಮಧ್ಯಪ್ರದೇಶ:(ಅ) ಕಲ (೭) ಉಪ ಕಲಂ (೨) ಖಂಡ  (ಈ)ನ್ನು ಈ ಕೆಳಕಂಡಂತೆ ಓದಿಕೊಳ್ಳುವುದು. ಈ ವಸತಿ ಸೌಲಭ್ಯವನ್ನು ಒದಗಿಸಿದ ಮಾಲೀಕರ ಅಥವಾ ರಾಜ್ಯ ಸರಕಾರದ ಅಥವಾ ಅರ್ಥ ರಾಜ್ಯ ಸರಕಾರವು ಸೂಚಿಸಿದ ಪ್ರತಿನಿಧಿ ಬಾಬ್ತು ಮುರಿದುಕೊಳ್ಳುವುದು.

ಅ) ಕಲಂ ೭ ಉಪ ಕಲಂ (೨) ಖಂಡ (ಉ) ನಂತರ ಕೆಳಕಂಡ ಖಂಡವನ್ನು ಅಳವಡಿಸಲಾಗಿದೆ. ಅಂದರೆ. (ಅಂ) ಉದ್ಯೋಗಿಯ ಲಿಖಿತ ಅಧಿಕಾರ ನೀಡಿಕೆ ಆಧಾರದ ಮೇರೆಗೆ ಸರಕಾರಿ ಭದ್ರತಾ ಠೇವಣಿಗಳು. ಅವುಗಳೆಂದರೆ, ಅಂಚೆ ಕಛೇರಿಯ ನಗದು ಅರ್ಹತಾ  ಪತ್ರಗಳು ಮತ್ತು ರಾಷ್ಟ್ರೀಯ ಉಳಿತಾಯ ಅರ್ಹತಾ ಪತ್ರಗಳು ಬಾಬ್ತು ಮುರಿದುಕೊಳ್ಳುವುದು.

ಇ. ಕಲಂ ೭, ಉಪ ಕಲಂ (೨) ಖಂಡ (ಉ) ಈ ಕೆಳಕಂಡ ಖಂಡವನ್ನು ಅಳವಡಿಸಲಾಗಿದೆ. ಅಂದರೆ, (ಊ) ಉದ್ಯೋಗಿಯ ಲಿಖಿತ ಅಧಿಕಾರ ನೀಡಿಕೆ ಮೇರೆಗೆ, ಕಾರ್ಮಿಕರು ಪ್ರಾರಂಭಿಸಿರುವ ಕಲ್ಯಾಣ ಯೋಜನೆಗೆ ನೀಡುವ ವಂತಿಗೆಗೆ ಅದರಲ್ಲಿ ಮಾಲೀಕರು ಇರಲಿ ಅಥವಾ ಇಲ್ಲದೇ ಇರಲಿ, ಅವುಗಳೆಂದರೆ, ಅಧಿಸೂಚಿತ ರೀತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದಿತವಾಗಿರುವ ನೌಕರರ ಮರಣ ಪರಿಹಾರ ಯೋಜನೆಗೆ ಮುರಿದುಕೊಳ್ಳುವುದು.

ಮಹಾರಾಷ್ಟ್ರ: ಕಲಂ ೭ ಉಪ ಕಲಂ (೨) ಖಂಡ (ಈ) ನಲ್ಲಿ “ಮಾಲೀಕ” ಎಂಬ ಪದದ ನಂತರ ಈ ಕೆಳಕಂಡವುಗಳನ್ನು ಸೇರಿಸತಕ್ಕದ್ದು. ಅಂದರೆ ಅಥವಾ ರಾಜ್ಯ ಸರಕಾರ ಅಥವಾ ಮುಂಬಯಿ ವಸತಿ ಮಂಡಲಿ ಅಥವಾ ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ನೇಮಿಸಿರುವ ಬೇರೆ ಯಾವುದೇ ಪ್ರತಿನಿಧಿಯ ನಿರ್ದೇಶನದಂತೆ ಕಲಂ ೭ (೨) ಖಂಡ (ಈ) ಯನ್ನು ಮುಂಬಯಿ ವಲಯಕ್ಕೆ ಅನ್ವಯಿಸುವ ರೀತಿಯಲ್ಲಿ ತಿದ್ದುಪಡಿ ಮಾಡಿರುವುದನ್ನು ಈ ಕೆಳಕಂಡಂತೆ  ಓದಿಕೊಳ್ಳತಕ್ಕದ್ದು. ಅಂದರೆ, “ಮಾಲೀಕನು ಒದಗಿಸಿದ ವಸತಿ ಸೌಕರ್ಯ ಅಥವಾ ಮುಂಬಯಿ ವಸತಿ ಮಂಡಲಿ ಅಧಿನಿಯಮ ೧೯೪೮ರ ಪ್ರಕಾರ ರಚಿಸಿರುವ ಮುಂಬಯಿ ವಸತಿ ಮಂಡಲಿ ಅಥವಾ ರಾಜ್ಯ ಸರಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸುವದರ ಮೂಲಕ ನೇಮಿಸುವ ಯಾವುದೇ ಪ್ರತಿನಿಧಿ ಆದೇಶದ ಬಾಬ್ತು” ಮುರಿದುಕೊಳ್ಳುವುದು.

ಮೂಲ ಅಧಿನಿಯಮ ಕಲಂ ೭, ಉಪ ಕಲಂ (೨) ಖಂಡ (೩)ರಲ್ಲಿ “ಯಾವುದೇ ಅಂಚೆ ಇಲಾಖೆ ಉಳಿತಾಯ ಬ್ಯಾಂಕ್ ನಲ್ಲಿ ಠೇವಣಿ ಇಡುವುದು” ಎಂಬುದನ್ನು ತೆಗೆದುಹಾಕುವುದು.

ಕಲಂ ೭ (೨)ರಲ್ಲಿ ಖಂಡ (೨) ಅಂತಿಮದಲ್ಲಿ “ಮತ್ತು” ಎಂಬ ಪದವನ್ನು ಬಿಡುವುದು ಮತ್ತು ಖಂಡ (ಐ) ನಂತರ ಈ ಕೆಳಕಂಡ ಹೊಸ ಖಂಡವನ್ನು ಸೇರಿಸುವುದು, ಅಂದರೆ,

“ಅಂ ಉದ್ಯೋಗಿಯ ಒಪ್ಪಿಗೆಯೊಡನೆ ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ಸೂಚಿಸಿರುವ ಯಾವುದೇ ಸಾರ್ವಜನಿಕ ಧಾರ್ಮಿಕ ಉದ್ದೇಶಕ್ಕೆ ಮುರಿದುಕೊಳ್ಳುವುದು”

ಒರಿಸ್ಸಾ: ಕಲಂ ೭ ಉಪ ಕಲಂ ೩ ಖಂಡವು (ಆ) ನಲ್ಲಿ ಮಾಲೀಕರಿಂದ ಒದಗಿಸಲ್ಪಟ್ಟ ಪದಗಳ ನಂತರ “ಅಥವಾ ರಾಜ್ಯ ಸರಕಾರದಿಂದ ಅಥವಾ ಯಾವುದೇ ಗೃಹ ಮಂಡಲಿ ಅಥವಾ ಈ ಬೆಗ್ಗೆ ರಾಜ್ಯ ಸರಕಾರವು ಅಧಿಸೂಚಿಸುವ ಪ್ರತಿನಿಧಿ” ಎಂಬ ಪದಗಳನ್ನು ಅಳವಡಿಸುವುದು.

ಪಾಂಡಿಚೇರಿ:ಕಲಂ ೭ ಉಪ ಕಲಂ (೩) ಖಂಡ (ಈ) ನಂತರ ಈ ಕೆಳಕಂಡ ಖಂಡವನ್ನು ಅಳವಡಿಸತಕ್ಕದ್ದು. ಅಂದರೆ, “ಈ ಈ ಉದ್ಯೋಗಿಗೆ ಪಾಂಡಿಚೇರಿ ಸರಕಾರದ ವಿದ್ಯುಚ್ಛಕ್ತಿ ಮಂಡಲಿಯಿಂದ ಒದಗಿಸಿದ ವಿದ್ಯುಚ್ಛಕ್ತಿ ಬಾಬ್ತು ಮುರಿದುಕೊಳ್ಳುವುದು”

 ತಮಿಳುನಾಡು : ಕಲಂ ೭ ಉಪ ಕಲಂ (೩) ಖಂಡ (ಈ) ನಂತರ ಈ ಕೆಳಕಂಡ ಖಂಡವನ್ನು ಅಳವಡಿಸಲಾಗಿದೆ. ಅಂದರೆ : ಈ ಉದ್ಯೋಗಿಗೆ ಮದ್ರಾಸು ರಾಜ್ಯ ವಿದ್ಯುಚ್ಛಕ್ತಿ (ಒದಗಿಸುವಿಕೆ) ಅಧಿನಿಯಮ ೧೯೪೮ (ಕೇಂದ್ರ ಕಾಯಿದೆ ೪೪ರ ೪೮) ಇನ್ನು ಮುಂದೆ ರಾಜ್ಯ ವಿದ್ಯುಚ್ಛಕ್ತಿ ಮಂಡಲಿಯು ಒದಗಿಸಿದ ವಿದ್ಯುಚ್ಛಕ್ತಿ ಬಾಬ್ತು ಹಿಡಿದುಕೊಳ್ಳುವುದು. ಮಜೂರಿ ಸಂದಾಯ ಕಾಯಿದೆ-೧೯೩೬ (ಕೇಂದ್ರ ಕಾಯಿದೆ ೧೯೩೬ರ ೪) ರ ಕಲಂ ೭ ಉಪ ಕಲಂ (೩) ಖಂಡ (ಖು) ನಂತರ ಈ ಕೆಳಕಾಣಿಸಿದವನ್ನು ಅಳವಡಿಸತಕ್ಕದ್ದು. ಅಂದರೆ:

“ಎ ಉದ್ಯೋಗಿಯು ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ವೃತ್ತಿ ತೆರಿಗೆಯನ್ನು ಹಿಡಿಯುವುದು”

ಪಶ್ಚಿಮ ಬಂಗಾಲ : ಮೂಲ ಕಾಯಿದೆ ಕಲಂ ೭ ಉಪ ಕಲಂ ೩ ಖಂಡ (ಖು) ನಲ್ಲಿ ಈ ಕೆಳಕಂಡ ಖಂಡವನ್ನು ಅಳವಡಿಸಲಾಗಿದೆ. ಅಂದರೆ:

“ಉ ರಾಜ್ಯ ಸರಕಾರದಿಂದ ಅನುಮೋದಿಸಲ್ಪಟ್ಟ ಮತ್ತು ನಿಧನ ಹೊಂದಿದ ಉದ್ಯೋಗಿಯು ನಿಯಮಾನುಸಾರ ನಾಮ ನಿರ್ದೇಶನ ಮಾಡಿದ ನಿರ್ದೇಶಕರಿಗೆ ಹಣಕಾಸಿನ ಸಹಾಯ ಒದಗಿಸುವ ಉದ್ದೇಶದಿಂದ ಸೃಷ್ಟಿಸಿದ ಮರಣಾಂತಿಕ ಪ್ರಯೋಜನ ಯೋಜನೆಗೆ ಉದ್ಯೋಗಿಯು ಆ ಯೋಜನೆಯ ಸದಸ್ಯನಾಗಿದ್ದರೆ ವಂತಿಗೆಗೆ ಬಾಬ್ತು ಹಿಡಿದುಕೊಳ್ಳುವುದು.

ಪರಂತು, ಉದ್ಯೋಗಿಯಿಂದ ಆ ಯೋಜನೆಯಲ್ಲಿ ನಿಗದಿಪಡಿಸಿರುವಂತೆ ಲಿಖಿತ ಅಧಿಕಾರ ಪಡೆಯದೆ ಯಾವುದೇ ಕಡತವನ್ನು ಮಾಡಬಾರದು.

ವಿವರಣೆ : ೧. ಉದ್ಯೋಗಿಯು ಸಂಸಾರವನ್ನು ಹೊಂದಿದ್ದರೆ, ಆ ಸಂಸಾರದ ಸದಸ್ಯರೊಬ್ಬರನ್ನು ನಾಮ ನಿರ್ದೇಶನ ಮಾಡತಕ್ಕದ್ದು.

೨. ಉದ್ಯೋಗಿಗೆ ಸಂಸಾರವಿಲ್ಲದಿದ್ದರೆ ಯಾವುದೇ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡಬಹುದು.

ವಿವರಣೆ -೧, ಮೊದಲನೇ ವಿವರಣೆಗೋಸ್ಕರ (೧) ಪುರುಷ ಉದ್ಯೋಗಿಯ ಸಂಸಾರವೆಂದರೆ ಅವನ ಹೆಂಡತಿ, ನ್ಯಾಯಬದ್ಧವಾದ ತಂದೆತಾಯಿಗಳನ್ನು ಅವಲಂಬಿಸಿರುವ ಮಕ್ಕಳು, ವಿಧವೆ ಮತ್ತು ನ್ಯಾಯಬದ್ಧವಾದ ನಿಧನ ಹೊಂದಿದ ಅವನ ಮಗನ ಮಕ್ಕಳು,

ಪರಂತು : ಆ ಉದ್ಯೋಗಿಯು ಅವನಿಗೆ ಅನ್ವಯಿಸುವ ವೈಯಕ್ತಿಕ ಕಾನೂನು ಪ್ರಕಾರ ಅಥವಾ ಸತಿಪತಿಯರ ಸಮುದಾಯದ ಸಂಪ್ರದಾಯದ ಪ್ರಕಾರ ಸತಿಯ ಜೀವನಾಂಶಕ್ಕೆ ಅರ್ಹಳಾಗಿದ್ದರೆ, ಕಾನೂನಿನ ಪ್ರಕಾರ ಸತಿತ್ವವನ್ನು ಕಳೆದುಕೊಂಡಿದ್ದರೆ ಅಂತಹ ಸತಿಯನ್ನು ಸಂಸಾರದ ಸದಸ್ಯಳೆಂದು ಪರಿಗಣಿಸಬಾರದು.

ಪರಂತು ಪುನಃ ಅದೇ ಉದ್ಯೋಗಿಯು ನಂತರ ರಾಜ್ಯ ಸರಕಾರವು ಈ ದಿಸೆಯಲ್ಲಿ ಹೊರಡಿಸಿರುವ ಅಧಿಸೂಚನೆ ಪ್ರಕಾರ ಸಂಬಂಧಪಟ್ಟ ಅಧಿಕಾರಿಗೆ ಪತ್ರ ಬರೆದು ತನ್ನ ಹೆಂಡತಿಯು ತನ್ನ ಸಂಸಾರದ ಸದಸ್ಯಳೆಂದು ಘೋಷಿಸಬಹುದು.

೨. ಮಹಿಳಾ ಉದ್ಯೋಗಿಯ ಸಂಸಾರವೆಂದರೆ, ಅವಳ ಗಂಡ, ತಂದೆ, ತಾಯಿ ಅವಲಂಬಿತ ನ್ಯಾಯಬದ್ಧ ಮಕ್ಕಳು, ಗಂಡನ ಅವಲಂಬಿತ ತಂದೆ ತಾಯಿಗಳು, ನಿಧನ ಹೊಂದಿದ ಮಗನ ವಿಧವೆ ಮತ್ತು ಅವಲಂಬಿತ ಮಕ್ಕಳು.

ಪರಂತು, ಆ ಉದ್ಯೋಗಿಯು ರಾಜ್ಯ ಸರಕಾರವು ಅಧಿಕೃತವಾಗಿ ಸೂಚಿಸಿರುವ ರೀತಿ ಸಂಬಂಧಪಟ್ಟ ಅಧಿಕಾರಿಗೆ ತಿಳುವಳಿಕೆ ಪತ್ರ ನೀಡುವುದರ ಮೂಲಕ ತನ್ನ ಪತಿ ಮತ್ತು ಅವನ ತಂದೆ ತಾಯಿಗಳು ತನ್ನ ಸಂಸಾರದ ಸದಸ್ಯರಲ್ಲವೆಂದು ಘೋಷಿಸಬಹುದು. ಪರಂತು ಪುನಃ ಅದೇ ಉದ್ಯೋಗಿಯು ನಂತರ ತಿಳುವಳಿಕೆ ಪತ್ರ ನೀಡುವುದರ ಮೂಲಕ ಹಿಂದೆ ಕಳುಹಿಸಿದ ಪತ್ರವನ್ನು ರದ್ದು ಮಾಡಬಹುದು ಮತ್ತು ೩. ಉದ್ಯೋಗಿಯ ನಿಧನ ಹೊಂದಿದ ಮಗನ ನ್ಯಾಯಬದ್ಧ ಮಗುವನ್ನು ಬೇರೊಬ್ಬರು ಆಗಿನ ಕಾನೂನಿನ್ವಯ ದತ್ತವಾಗಿ ಸ್ವೀಕರಿಸಿದ್ದರೆ, ಆ ಮಗುವು ಉದ್ಯೋಗಿಯ ಸಂಸಾರದ ಸದಸ್ಯನಾಗಿರುವುದಿಲ್ಲ.

ವ್ಯಾಖ್ಯಾನ:

ಹಿಡಿದುಕೊಳ್ಳುವಿಕೆ : ಕಲಂ ೭ನ್ನು ಓದುವುದರಿಂದ ತಿಳಿದು ಬರುವುದೇನೆಂದರೆ, ಮಾಲೀಕನಾಗಲೀ ಅಥವಾ ಅವನ ಪ್ರತಿನಿಧಿಯಾಗಲಿ, ಉದ್ಯೊಗಿಯ ವೇತನದಲ್ಲಿ ಏನನ್ನೂ ಹಿಡಿದುಕೊಳ್ಳುವ ಹಾಗಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಅವನ ಒಪ್ಪಿಗೆ ಅಥವಾ ಅನುಮತಿ ಪಡೆದು ಅವನ ವೇತನದಲ್ಲಿ ಹಿಡಿದುಕೊಳ್ಳಬಹುದೆಂಬುದು ಮನವರಿಕೆಯಾಗುತ್ತದೆ. ಆದರೆ ಮಜೂರಿ ಸಂದಾಯ ಅಧಿನಿಯಮ ಕಲಂ ೭, ಸಂಪೂರ್ಣವಾಗಿ ಕಡಿತವನ್ನು ನಿಷೇಧಿಸುವುದಿಲ್ಲ. ಆದರೆ ಉದ್ಯೋಗಿಯ ಅನುಮತಿಯ ಮೇರೆಗೆ ಕೆಲವೊಂದು ಕಡಿತಗಳನ್ನು ಮಾಡಬಹುದೆಂಬುದು ತಿಳಿದುಬರುತ್ತದೆ.

ಮನಸುಖಗೋಪಿನಾಥ ಜಾಧವ “ವಿ” ಡಬ್ಲ್ಯೂ. ಎಂ. ಬಪತ್ (೧೯೮೨-(೧)- ಎಲ್ ಎಲ್ ಜೆ ೧೪೪ ಪುಟ ೧೫೦-೫೧ರಲ್ಲಿ) ಈ ಕೇಸಿನಲ್ಲಿ ಉದ್ಯೋಗಿಗಳು ಕಡಿತವನ್ನು ಅನುಮೋದಿಸಿದ್ದಾರೆ. ಕಾರಣ ಪ್ರತಿನಿಧಿ ಸಂಘವು ಆ ಭಾಗದ ಸಕ್ಕರೆ ಕಾರ್ಖಾನೆ ಕಾರ್ಮಿಕರನ್ನು ಪ್ರತಿನಿಧಿಸಬಹುದು. ಆ ಪ್ರತಿನಿಧಿ ಸಂಘವು ಕಾರ್ಮಿಕರ ಕೆಲವು ಬೇಡಿಕೆಗಳನ್ನು ಅಂದರೆ, ವೇತನ ನಿಗಧಿ, ತುಟ್ಟಿಭತ್ಯೆ, ವಾರ್ಷಿಕ ವೇತನ ಬಡ್ತಿ, ಉಪಾದಾನ ಇತ್ಯಾದಿ ಮತ್ತು ಅನುಕೂಲತೆಗಳನ್ನು ಪಡೆದುಕೊಂಡು, ಉದ್ಯೋಗಿಗಳು ತಮ್ಮ ಪ್ರತಿನಿಧಿ ಸಂಘದ ಮೂಲಕ ತಮಗೆ ಈ ಬಾಬ್ತು ಬರಬೇಕಾದ ಹಿಂದಿನ ಬಾಕಿ ನಿವ್ವಳ ಹಣದಲ್ಲಿ ಶೇಕಡಾ ಏಳರಷ್ಟನ್ನು ಸಂಘದ ಚಟುವಟಿಕೆಗೋಸ್ಕರ ಕೊಡಬೇಕೆಂದು ಒಪ್ಪಿದಾಗ ಅಂತಹ ವಂತಿಕೆಯನ್ನು ಹಿಡಿದುಕೊಂಡು ನೇರವಾಗಿ ಸಂಘಕ್ಕೆ ನೀಡಬಹುದು. ಇಂತಹ ಒಂದು ಒಪ್ಪಂದವನ್ನು ಮಾಲೀಕರು ಮತ್ತು ಸಂಘ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಅಂತಹ ಒಪ್ಪಂದದ ಷರತ್ತಿನ ಖಂಡಗಳು ಮಜೂರಿ ಸಂದಾಯ ಅಧಿನಿಯಮ ಕಲಂ ೭ಕ್ಕೆ ವಿರುದ್ಧವಾಗುವುದಿಲ್ಲ. ಒಂದು ಬಾರಿ ಪ್ರತಿನಿಧಿಗಳು ತೀರ್ಮಾನಕ್ಕೆ ಬಂದು ಔದ್ಯೋಗಿಕ ನ್ಯಾಯಾಲಯದ ಅನುಮೋದನೆ ದೊರೆತರೆ, ಆ ಒಪ್ಪಂದದ ಪ್ರಕಾರ ಮಾಡುವ ಕಡಿತಗಳು ಮಜೂರಿ ಸಂದಾಯ ಅಧಿನಿಯಮ ಕಲಂ ೭ ಮತ್ತು ಖಂಡ (ಎ) ವ್ಯಾಪ್ತಿಯೊಳಗೆ ಸಮರ್ಪಕವಾಗಿ ಒಳಪಡುತ್ತವೆ. ಸ್ಟೇಟ್ ಬ್ಯಾಂಕ್ ಸ್ಟಾಫ್ ಯೂನಿಯನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫೀಸರ್ಸ್ ಅಸೋಸಿಯೇಷನ್ ಇತ್ಯಾದಿ “ವಿ” ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇತ್ಯಾದಿ ೧೯೮೯ (೧) ಎಲ್.ಎಲ್.ಜೆ. ೫೫೪ ಪು ೫೬೧ (ಮದ್ರಾಸ್). ಈ ಕೇಸಿನ ತೀರ್ಮಾನದ ಪ್ರಕಾರ, ಮಜೂರಿ ಸಂದಾಯ ಅಧಿನಿಯಮ ೧೯೩೬ರ ಕಲಂ (೭) (೨) (ಐಐಐ) ಪ್ರಕಾರ ವಂತಿಗೆ ಕಡಿತ ಅನುಕೂಲವನ್ನು ಕೇವಲ ಮನ್ನಣೆ ಪಡೆದ ಸಂಘದ ಸದಸ್ಯರಿಗೆ ಮಾತ್ರ ಸೀಮಿತಗೊಳಿಸಲಾಗದು ಎಂಬ ಪ್ರತಿವಾದಿಗಳ ವಾದವನ್ನು ನ್ಯಾಯಾಲಯವು ಒಪ್ಪಲು ಇಚ್ಚಿಸುತ್ತದೆ. ಪ್ರತಿಯೊಬ್ಬ ನೌಕರನು ಕೊಡತಕ್ಕ ಶೈಲಿ ಪತ್ರವು ಮಜೂರಿ ಸಂದಾಯ ಅಧಿನಿಯಮದ ಉಪಬಂಧಗಳಿಗನುಗುಣವಾಗಿದೆ. ಆದುದರಿಂದ ಇದನ್ನು ನಿಜವಾಗಿಯೂ ನೌಕರರ ಇಚ್ಚೆಗೆ ಬಿಟ್ಟಿದ್ದರೆ, ಕೇವಲ ಈ ಅನುಕೂಲವನ್ನು ಮನ್ನಣೆ ಪಡೆದ ಅಥವಾ ಪಡೆಯಲು ಸಂಘದ ಅರ್ಜಿದಾರರಿಗೆ ಈ ನ್ಯಾಯಾಲಯದಿಂದ ಪರಮಾದೇಶ ಅಥವಾ ಉಚ್ಚ ಆಜ್ಞೆ ಪಡೆಯಲು ಆಧಾರಿಸಿಲ್ಲ. ರಾಜಾಸ್ಥಾನ ಸ್ಟೇಟ್ ವೇರ್ ಹೌಸಿಂಗ್ ಕಾರ್ಪೋರೇಷನ್ “ವಿ” ಅಥಾರಿಟಿ ಅಂಡರ್ ದಿ ಮಜೂರಿ ಸಂಧಾನ ಅಧಿನಿಯಮ, ಜಯಪುರ, ೧೯೮೮ ಲ್ಯಾಬ್ ಐಸಿ ೭೩೪೦ ಪುಟ ೭೪೦ (ರಾ) ನ ತೀರ್ಪಿನ ಪ್ರಕಾರ, ಮಜೂರಿ ಸಂದಾಯ ಅಧಿನಿಯಮ, ಕಲಂ ೭ (೨) (ಊ) ಪ್ರಕಾರ ಯಾವುದೇ ಕಡಿತವು ಅಧಿಕೃತ ಕಡಿತವಾಗಬೇಕಾದರೆ, ಆ ಕಡಿತವು ನ್ಯಾಯಾಲಯದ ಆದೇಶದ ಮೇರೆಗೆ ಇಲ್ಲದೆ ಸಂಬಂಧಪಟ್ಟ ಅಧಿಕಾರಿಯ ಆದೇಶದ ಮೇರೆಗೆ ಇರಬೇಕು. ಈ ಪ್ರಸ್ತುತ ವ್ಯಾಜ್ಯದಲ್ಲಿ ಅಧಿಕೃತ/ಅರ್ಹತಾ ಅಧಿಕಾರಿಯು ಮಂಡಲಿ ನಿರ್ದೇಶಕರು, ವೇತನ ಕಡಿತಕ್ಕೆ ಯಾವುದೇ ರೀತಿಯ ಆಜ್ಞೆ ಮಾಡಿರುವುದು ರಾಜ್ಯ ಸರಕಾರ, ಆದರೆ ಅಧಿನಿಯಮದ ಅಥವಾ ನಿಬಂಧನೆಗಳ ಪ್ರಕಾರ ಅಧಿಕೃತ/ಅರ್ಹತಾ ಅಧಿಕಾರಿ ಅಲ್ಲ.

ಓರಿಯಂಟ್ ಪೇಪರ್ ಮಿಲ್ಸ್ ಕಾಂಕಾಂಗ್ರೇಸ್, ಬ್ರಜರಾಜನಗರ “ವಿ” ವೈಸ್ ಪ್ರೆಸಿಡೆಂಟ್, ಓರಿಯಂಟ್ ಪೇಪರ್ ಮಿಲ್ಸ್, ಬ್ರಜರಾಜನಗರ, ೧೯೮೮ ಲ್ಯಾಬ್ ಐ) ೮೬೨ ಪು. ೮೬೪, ೮೬೫ (ಒರಿಸ್ಸ) ತೀರ್ಪಿನ ಪ್ರಕಾರ ಮಜೂರಿ ಸಂದಾಯ ಅಧಿನಿಯಮ ಕಲಂ ೭ (೧)ರ ಪ್ರಕಾರ ಉದ್ಯೋಗಿಯ ವೇತನವನ್ನು ಯಾವುದೇ ರೀತಿಯ ಕಡಿತ ಮಾಡದೆ ಕೊಡಬೇಕು. ಆದರೆ ಅಧಿನಿಯಮ ಅಥವಾ ಅಧಿಕೃತವಾಗಿರುವುದನ್ನು ಹೊರತುಪಡಿಸಿ, ಕಲಂ ೭ (೨) ಅಧಿನಿಯಮದ ಉಪಬಂಧಗಳು ಮತ್ತು ಉಪಬಂಧ (ಅ) ಯಿಂದ (ಜ) ರಲ್ಲಿ ಪ್ರಸ್ತಾಪಿಸಿರುವುಗಳ ಪ್ರಕಾರ ಮಾತ್ರ ಉದ್ಯೋಗಿಯ ವೇತನ ಕಡಿತಕ್ಕೆ ಅಧಿಕಾರ ನೀಡಿರುತ್ತಾನೆ. ಸ್ಪನ್ ಸಿಲ್ಕ್ ಮಿಲ್ಸ್ “ವಿ” ಪಾರ್ಥಸಾರಥಿ ೧೯೩೬. ಐ.ಎಲ್.ಆರ್. ೧೧೩೨ ಪು. ೧೧೩೩ (ಕರ್ನಾಟಕ) ತೀರ್ಪಿನ ಪ್ರಕಾರ.

ಈ ವ್ಯಾಜ್ಯದ ವಿಷಯ ಮತ್ತು ಸಂದರ್ಭಗಳ ಪ್ರಕಾರ ಆಡಳಿತ ವರ್ಗವು ಮಾಡಿರತಕ್ಕ ಕಡಿತಗಳು ಮಜೂರಿ ಸಂದಾಯ ಅಧಿನಿಯಮ, ೧೯೩೬ರ ಕಲಂ ೭ (೨) (ಊ) ಗೆ ಒಳಪಟ್ಟಿರುತ್ತದೆ. ಆದುದರಿಂದ ಈ ವ್ಯಾಜ್ಯವು ಔದ್ಯೋಗಿಕ ವ್ಯಾಜ್ಯದ ಅಧಿನಿಯಮದ ಕಲಂ ೩೩ (ಇ) (೨) ವ್ಯಾಪ್ತಿಗೆ ಒಳಪಡುವುದಿಲ್ಲ. ಕಾರಣ ಖಾಸಗಿ ಒಡಂಬಡಿಕೆಯಂತೆ ಅವರು ದೂರದರ್ಶಕ ಸಮುಚ್ಛಯವನ್ನು ಕೊಳ್ಳಲು ಮತ್ತು ಅದರ ಬೆಲೆಯನ್ನು ಕೊಡಲಾಗಿದೆ. ಆದುದರಿಂದ ಅವರು ಖಾಸಗಿ ಆರ್ಥಿಕ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದಕ್ಕೆ ಬದ್ಧರು. ಇದು ಅವರ ಸ್ವ-ಇಚ್ಛೆಯಿಂದ ದೂರದರ್ಶಕ ಸಮುಚ್ಚಯವನ್ನು ಬಾಡಿಗೆ ಕ್ರಯ ಆಧಾರಿತ ಒಪ್ಪಂದದ ಸೌಲಭ್ಯವನ್ನು ಪಡೆದಿರುತ್ತಾರೆ. ರೆಸ್ಟ್ ಕಂಟ್ರೋಲ್ (ಇಂಡಿಯಾ) ಲಿಕ್ “ವಿ” ಸಿ.ಡಿ. ಕೊನಾಲೆ, ೧೯೯೮ (೮೦) ಐಎಲ್ ಆರ್. ೬೨೬, ೬೨೯, ೬೩೦ ಪುಟದಲ್ಲಿ. ಜನರಲ್ ಮ್ಯಾನೇಜರ್, ಪಂಜಾಬ್ ರೋಡ್ ಲೈನ್ಸ್, ಹೊಸಿಯಾರಪುರ “ವಿ” ಅಜಿತ್ ಸಿಂಗ್, ೧೯೯೫ (೫) ಎಸ್.ಎಲ್.ಆರ್. ೬೫೭ ಪು ೬೫೭ ಪು ೬೫೯ರಲ್ಲಿ. ಈ ತೀರ್ಪಿನ ಪ್ರಕಾರ.

ಮಾಲೀಕನು, ಉದ್ಯೋಗಿಯು ಕೆಲಸಕ್ಕೆ ಗೈರು ಹಾಜರಾದ ವೇಳೆ ಅಥವಾ ದಿನಗಳ ವೇತನವನ್ನು ಕಡಿತ ಮಾಡಲು ಅವಕಾಶವಿರುತ್ತದೆ. ಆದರೆ ಈ ಪ್ರಸ್ತುತ ಕೇಸಿನ ಪ್ರಕಾರ ಉದ್ಯೋಗಿಯೂ ಕೆಲವು ಗಂಟೆಗಳ ಕೆಲಸಕ್ಕೆ ಗೈರು ಹಾಜರಾದರೂ ದಿನದ ಪೂರ್ತಿ ವೇತನವನ್ನು ಕಡಿತ ಮಾಡಲು ಅವಕಾಶವಿರುತ್ತದೆ. ೨ನೇ ಪ್ರತಿವಾದಿಯು ಪ್ರಧಾನ ಕಾರ್ಯದರ್ಶಿಯವರನ್ನು ಪರಿಗಣಿಸಿ, ನಂತರ ನೀಡಿದ ಸ್ಟಷ್ಟೀಕರಣ ವೇತನವನ್ನು ಕಡಿತ ಮಾಡಲು ಆಜ್ಞೆ ಮಾಡಲಾಗಿದೆ. ಈ ಒಂದು ಪರಿಸ್ಥಿತಿಯಲ್ಲಿ, ಔದ್ಯೋಗೀಕರಣ ನ್ಯಾಯಮಂಡಳಿಯು ಈ ವಿಷಯದಲ್ಲಿ ಪೂರ್ಣ ಪ್ರಮಾಣದ ವಿಚಾರಣೆಯನ್ನು ಮಾಡಬೇಕಾಗಿತ್ತು ಎಂದು ಹೇಳುವುದರ ಮೂಲಕ ತಪ್ಪೆಸಗಿದೆ ಎಂದಿದ್ದಾರೆ.

ವೇತನದಲ್ಲಿ ಮಾಡುವ ಕಡಿತವು ಒಟ್ಟು ಮಜೂರಿಯ ಶೇ. ೫೦ರಷ್ಟುಕ್ಕಿಂತ ಹೆಚ್ಚಿರಬಾರದು : ಚಂದ್ರಶೇಖರ್ ಬ್ಯಾನರ್ಜಿ “ವಿ” ಯೂನಿಯನ್ ಆಫ್ ಇಂಡಿಯಾ ೧೯೯೫ ಲ್ಯಾಬ್ ಐ.ಸಿ.೧೩೦೫ ಪುಟ ೧೩೦೭, (ಕಲ್ಕತ್ತ)ರ ತೀರ್ಪಿನ ಪ್ರಕಾರ ಈ ಪ್ರಸ್ತುತ ಕೇಸಿನಲ್ಲಿ ಅಸಮಂಜಸವಾಗಿ ಹಿಡಿದುಕೊಂಡಿರುವುದನ್ನು ಪ್ರಶ್ನಿಸಿರುವುದರಿಂದ ಇದು ಸಂವಿಧಾನದ ಅನುಚ್ಛೇದ ೧೪ಕ್ಕೆ ಅನ್ವಯಿಸುತ್ತದೆ ಮತ್ತು ಈ ಕ್ರಮವನ್ನು ನ್ಯಾಯಾಲಯವು ಪುನರ್ ವಿಮರ್ಶಿಸಬಹುದಾಗಿದೆ. ಅರ್ಜಿದಾರನ ವೇತನದಲ್ಲಿ ಹಿಡಿದುಕೊಳ್ಳುತ್ತಿರುವ ಪ್ರಮಾಣ ಎಷ್ಟೆಂದರೆ ಅವನ ಪೂರ್ತಿ ಮಾಸಿಕ ವೇತನ ಅವನಿಗೆ ಸಿಗದಂತಾಗುತ್ತದೆ. ಪ್ರತಿನಿಧಿಗಳ ಈ ಕ್ರಮ ಅಸಮಂಜಸವಾಗಿದೆ. ಮಜೂರಿ ಸಂದಾಯ ಅಧಿನಿಯಮದ ಕಲಂ ೭ನ್ನು ಗಣನೆಗೆ ತೆಗೆದುಕೊಂಡು, ಪ್ರತಿವಾದಿಯು ಅರ್ಜಿದಾರನ ವೇತನದಲ್ಲಿ ಶೇ ೫೦ರಷ್ಟಕ್ಕೆ ಮೀರಿ ಕಡಿತವನ್ನು ಅವನ ಮಾಸಿಕ ವೇತನದಲ್ಲಿ ಅವರ ಸಾಲದ ಬಾಬ್ತು ಮಾಡಬಾರದೆಂದು ಆದೇಶಿಸಲಾಗಿದೆ.

ಜೀವವಿಮಾ ಸಂಸ್ಥೆ ವಂತಿಗೆಗೆ ಮಾಲೀಕರು ಮಾಡಿದ ಕಡಿತದ ಹಣವನ್ನು ವಿಮಾ ಸಂಸ್ಥೆಗೆ ಜಮಾ ಮಾಡದಿರುವುದು, ಜೀವವಿಮಾ ಸಂಸ್ಥೆಯ ಜವಾಬ್ದಾರಿಯಲ್ಲ.

ಸೊವಾಸ್ರಿ ದಲಾಯಿ “ವಿ” ಡಿವಿಜನಲ್ ಮ್ಯಾನೇಜರ್ ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್, ೧೯೯೯ (೫) ಎಲ್.ಎಲ್.ಆರ್. ೩೯೦ ಪು ೩೯೩ (ಒರಿಸ್ಸ).

ಈ ಕೇಸಿನಲ್ಲಿ ವೇತನದಲ್ಲಿ ಕಡಿತ ಮಾಡಿ ಅದನ್ನು ಪಾವತಿ ಮಾಡುವುದು ಮಾಲೀಕನ ಕರ್ತವ್ಯವಾಗಿತ್ತು. ಕಡಿತ ಮಾಡಲು ಆಗಸ್ಟ್ ೪, ೧೯೯೦ ರಂದು ತೆಗೆದುಕೊಂಡ ಕ್ರಮದಂತೆ ನೀಡಬೇಕಾದುದನ್ನು  ಎಲ್.ಐ.ಸಿ.ಗೆ ನೀಡಿ ಅವನ ಜವಾಬ್ದಾರಿಯಿಂದ ಮುಕ್ತ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರಕಾರ ವಾದಿಸುವುದು ಅವರಿಗೆ ಯಾವ ರೀತಿಯಿಂದಲೂ ಸಹಾಯವಾಗದು. ಕಾರಣ, ಮಾಲೀಕರು ಕಡಿತ ಮಾಡಿ ಅದನ್ನು ಎಲ್.ಐ.ಸಿ.ಗೆ ನೀಡಲು ಜವಾಬ್ದಾರಿ ತೆಗೆದುಕೊಂಡಿರುವುದರಿಂದ ಆ ರೀತಿ ಮಾಡುವುದು ಅವರ ಜವಾಬ್ದಾರಿ. ಆದರೆ, ಈ ಜವಾಬ್ದಾರಿಯನ್ನು ಮಾಲೀಕರು ಸರಿಯಾಗಿ ನಿರ್ವಹಿಸಿರುವುದಿಲ್ಲ. ಹಣಪಾವತಿ ಮಾಡುವುದು ಅವರಿಗೆ ಸಂಬಂಧಪಟ್ಟದ್ದಾಗಿದೆ.

(೧) ಕಲಂ ೭ (೨) ಎಫ್ (ಕುಮಾರ ರಾಜರತ್ನಂ ನ್ಯಾ)

“ನೌಕರನ ಕೋರಿಕೆಯ ಮೇರೆಗೆ ಟಿ.ವಿ. ಸೆಟ್ ಬಾಬ್ತು ಮಜೂರಿಯಿಂದ ಹಣ ಕಡಿತ ಮಾಡಿದ ಬಗ್ಗೆ ಮುಂಗಡ ಹಣ ಹಿಡಿದುಕೊಳ್ಳಲು-ಮಜೂರಿಯಲ್ಲಿ ಕಡಿತ ಮಾಡಿರುವುದು ಕಾನೂನುಬದ್ಧವಾಗಿದೆ. ಐ.ಎಲ್.ಆರ್. ೧೯೯೬ (೩) ಕರ್ನಾಟಕ ೨೪೯೭: ೧೯೯೬ (೫) ಕೆ.ಎಲ್.ಜೆ. (ಸಪ್ಲಿಮೆಂಟರಿ) ೪೮೭.

೮. ಜುಲ್ಮಾನೆಗಳು : ಮಾಲೀಕನು ಉದ್ಯೋಗಿಯು ಮಾಡಿದ ಯಾವುದೇ ಕೃತ್ಯ ಅಥವಾ ಕರ್ತವ್ಯ ಲೋಪಕ್ಕಾಗಿ ರಾಜ್ಯ ಸರಕಾರದ ಅಥವಾ ಈ ಸಂಬಂಧವಾಗಿ ಉಪ ಕಲಂ (೨)ರ ಪ್ರಕಾರ ಅಧಿಸೂಚನೆ ಮೇರೆಗೆ ಸರಕಾರ ಗೊತ್ತುಪಡಿಸಿದ ಅಧಿಕಾರಿಯ ಪೂರ್ವಾನುಮತಿಯಿಲ್ಲದೆ ಯಾವ ಜುಲ್ಮಾನೆಯನ್ನು ವಿಧಿಸಕೂಡದು.

೨. ನಿರ್ದಿಷ್ಟ ಕೃತ್ಯ ಮತ್ತು ಲೋಪಗಳನ್ನೊಳಗೊಂಡ ನಮೂದಿತ ತಿಳುವಳಿಕೆ ಪತ್ರವನ್ನು ಉದ್ಯೋಗದ ಯಾವುದೇ ಭಾಗದಲ್ಲಿ ಅಥವಾ ನೌಕರನು ರೈಲ್ವೆ ಇಲಾಖೆಯ (ಕಾರ್ಖಾನೆಯಲ್ಲದ) ನೌಕರನಾಗಿದ್ದರೆ, ಆ ಇಲಾಖೆಯ ನಿಗದಿಪಡಿಸಿದ ಸ್ಥಳದಲ್ಲಿ ಪ್ರದರ್ಶಿಸಬೇಕು.

೩. ಯಾವುದೇ ಉದ್ಯೋಗಿಗೆ ಜುಲ್ಮಾನೆಯನ್ನು ಏಕೆ ವಿಧಿಸಬಾರದೆಂಬ ಬಗ್ಗೆ ಸಕಾರಣವನ್ನು ತೋರಿಸಲು ಅವಕಾಶ ಕೊಡದೆ ಅಥವಾ ಈ ಜುಲ್ಮಾನೆ ವಿಧಿಸಲು ನಿಗದಿಪಡಿಸಿರುವ ಕಾರ್ಯ ವಿಧಾನವನ್ನು ಅನುಸರಿಸದೆ ಜುಲ್ಮಾನೆಯನ್ನು ವಿಧಿಸಕೂಡದು.

೪. ಉದ್ಯೋಗಿಗೆ ವಿಧಿಸುವ ಜುಲ್ಮಾನೆಯು, ಆ ವೇತನ ಅವಧಿಯಲ್ಲಿ ಸಂದಾಯವಾಗಬೇಕಾದ ಒಟ್ಟು ವೇತನದ ಶೇ. ಮೂರಕ್ಕಿಂತ ಹೆಚ್ಚಿರಬಾರದು.

೫. ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಉದ್ಯೋಗಿಗಳಿಗೆ ಯಾವ ಜುಲ್ಮಾನೆಯನ್ನೂ ವಿಧಿಸಬಾರದು.

೬. ಉದ್ಯೋಗಿಗೆ ವಿಧಿಸಿದ ಜುಲ್ಮಾನೆಯನ್ನು ಅವನಿಂದ ಕಂತುಗಳಲ್ಲಿ ಅಥವಾ ಜುಲ್ಮಾನೆಯನ್ನು ವಿಧಿಸಿದ ಅರವತ್ತು ದಿನಗಳ ನಂತರ ಹಿಡಿದುಕೊಳ್ಳಬಾರದು.

೭. ಉದ್ಯೋಗಿಗೆ ವಿಧಿಸಿದ ಎಲ್ಲಾ ಜುಲ್ಮಾನೆಯು, ಉದ್ಯೋಗಿಯು ಎಸಗಿದ ಕೃತ್ಯ ಅಥವಾ ಲೋಪವೆಸಗಿದ ದಿನದಂದು ವಿಧಿಸಲಾಗಿದೆಯೆಂದು ತಿಳಿಯತಕ್ಕದ್ದು.

೮. ಈ ರೀತಿಯ ಎಲ್ಲಾ ಜುಲ್ಮಾನೆಗಳು ಮತ್ತು ಎಲ್ಲಾ ವಸೂಲಿಗಳನ್ನು ಮಜೂರಿ ಸಂದಾಯ ಅಧಿಕಾರಿಯು ಇಟ್ಟುಕೊಂಡಿರುವ ದಾಖಲಾತಿ ಪುಸ್ತಕದಲ್ಲಿ ಕಲಂ ೩ರಲ್ಲಿ ನಮೂದಿಸಿರುವಂತೆ ದಾಖಲಿಸುವುದು ಮತ್ತು ಅಂಥ ಎಲ್ಲಾ ವಸೂಲಾತಿಯನ್ನು ಆ ಕಾರ್ಖಾನೆಯಲ್ಲಿ ಅಥವಾ ಉದ್ಯೋಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಅನುಕೂಲತೆಗೆ ಸಂಬಂಧಪಟ್ಟ ಅಧಿಕಾರಿಯು ನಿಗದಿಪಡಿಸಿದಂತೆ ಉಪಯೋಗಿಸುವುದು.

ಸೃಷ್ಟೀಕರಣ: ವ್ಯಕ್ತಿಗಳು ಉದ್ಯೋಗದಲ್ಲಿದ್ದಾಗ ಅಥವಾ ಯಾವುದೇ ರೈಲ್ವೆ, ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಇತರೆ ಔದ್ಯೋಗಿಕ ಸಂಸ್ಥೆಯ, ಒಂದೇ ಆಡಳಿತ ವರ್ಗದ ಕೆಳಗೆ ಕೆಲಸ ಮಾಡುವ ನೌಕರ ವರ್ಗಕ್ಕೆ ಸೇರಿದವರು, ಅವರಿಂದ ವಸೂಲಿಯಾದದ್ದನ್ನು ಆ ನೌಕರರಿಗೆ ಸೇರಿದ ಸಾಮಾನ್ಯ ನಿಧಿಗೆ ಜಮಾಯಿಸತಕ್ಕದ್ದು. ಆದರೆ ಆ ನಿಧಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ ಉದ್ದೇಶಗಳಿಗೆ ಮಾತ್ರ ಉಪಯೋಗಿಸತಕ್ಕದ್ದು