ಕೃಷಿ ಅಭಿವೃದ್ಧಿಗೆ ಹಾಗೂ ಮಾನವನ ಸಂಪನ್ಮೂಲ ಅಭಿವೃದ್ಧಿಗೆ ಮಣ್ಣಿನ ನಿರ್ವಹಣೆ ಅತ್ಯಾವಶ್ಯಕ. ಮಣ್ಣಿನ ಸಮರ್ಥವಾದ ನಿರ್ವಹಣೆಯೇ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮೂಲ. ಮಣ್ಣನ್ನು ಸೂಕ್ತ ರೀತಿಯಿಂದ ನಿರ್ವಹಿಸದಿದ್ದಾಗ ಹಲವಾರು ಬಗೆಯ ದುಷ್ಪರಿಣಾಮಗಳುಂಟಾಗಿ ಫಲವತ್ತತೆ ಕುಸಿದು ಇಳುವರಿಯಲ್ಲಿ ಏರುಪೇರಾಗುತ್ತದೆ. ಈ ದಿಸೆಯಲ್ಲಿ ಮಣ್ಣಿನ ಮೂಲ ಗುಣಧರ್ಮಗಳು ಹಾಗೂ ಅವುಗಳ ನಿರ್ವಹಣೆಯ ಮೂಲಕ ಮಣ್ಣು ಸುಧಾರಣೆ ಅಂಶಗಳು ಮುಖ್ಯವಾಗುತ್ತವೆ.

ಪ್ರಸ್ತುತ ಮಣ್ಣು ನಿರ್ವಹಣೆ ಪುಸ್ತಕದಲ್ಲಿ ಮಣ್ಣಿನ ನಿರ್ವಹಣೆಯನ್ನು ಕುರಿತಂತೆ ಮಣ್ಣು ಮತ್ತು ಮಣ್ಣು ನಿರ್ವಹಣೆ, ಮಣ್ಣಿನ ನಿರ್ಮಾಣ, ಮಣ್ಣುಗಳ ವರ್ಗೀಕರಣ ಮತ್ತು ಸಮೀಕ್ಷೆ, ಮಣ್ಣಿನ ಘಟಕಗಳು, ಮಣ್ಣಿನ ಭೌತಿಕ ಗುಣಧರ್ಮಗಳು, ಸಸ್ಯಪೋಷಕಗಳು ಮತ್ತು ಅವುಗಳ ನಿರ್ವಹಣೆ, ಆಮ್ಲ ಮಣ್ಣು ಮತ್ತು ಅದರ ನಿರ್ವಹಣೆ ಮತ್ತು ಮಣ್ಣಿನಲ್ಲಿರುವ ಜೀವಿಗಳು ಹೀಗೆ ಎಂಟು ಅಧ್ಯಾಯಗಳಲ್ಲಿ ವಿಷಯವನ್ನು ಮಂಡಿಸಲಾಗಿದೆ.

ಈ ಕೃತಿಯ ಮೂಲ ಆವೃತ್ತಿಯನ್ನು ಡಾ|| ಎಸ್.ವಿ. ಪಾಟೀಲ್ ಹಾಗೂ ಡಾ|| ಲ.ಅ. ದೀಕ್ಷಿತ ಅವರು ರಚಿಸಿದ್ದು, ಡಾ|| ಲ.ಅ. ದೀಕ್ಷಿತ ಅವರು ಸಮಗ್ರವಾಗಿ ಪರಿಷ್ಕರಿಸಿದ್ದಾರೆ. ಪ್ರಸ್ತುತ ಕೃತಿಯನ್ನು ಹೆಚ್ಚಿನ ಬೇಡಿಕೆ ಮೇರೆಗೆ ಮರು ಮುದ್ರಣ ಮಾಡಲಾಗಿದೆ.

ಈ ಪುಸ್ತಕ ಪ್ರಕಟಣೆಯಲ್ಲಿ ವಿಸ್ತರಣಾ ನಿರ್ದೆಶಕರಾದ ಡಾ. ಆರ್.ಎಸ್. ಕುಲಕರ್ಣಿಯವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲಗಳಿಗಾಗಿ ಅವರಿಗೆ ಆದರದ ಕೃತಜ್ಞತೆಗಳು ಸಲ್ಲುತ್ತವೆ.

ಮಣ್ಣು ನಿರ್ವಹಣೆ ಕೃತಿಯು ದ್ವಿತೀಯ ಮುದ್ರಣವಾಗಿ ಹೊರ ಬರುತ್ತಿದ್ದು, ಎಲ್ಲ ರೈತರು, ಬೋಧಕರು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳಿಗೆ ಸದುಪಯೋಗವಾಗುವುದೆಂದು ಆಶಿಸಲಾಗಿದೆ.

 

ಡಾ. ಉಷಾಕಿರಣ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹಾಗೂ ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ – ಬೆಂಗಳೂರು – ೨೪