ಲಾಭದಾಯಕ ಇತರೆ ಪೋಷಕಗಳು :

ಇಲ್ಲಿಯವರೆಗೆ ವಿವರಿಸಿದ ಅಗತ್ಯ ಪೋಷಕಗಳಲ್ಲದೆ ಇನ್ನೂ ಹಲವು ಮೂಲಧಾತುಗಳಿಂದ ಕೆಲವು ಸಸ್ಯಗಳಿಗೆ ಪ್ರಯೋಜನವಾಗುವುದೆಂದು ಕಂಡುಬಂದಿದೆ. ಕ್ಯಾಲಿಪೋರ್ನಿಯಾದ ಅರ್ನಾನ್‌ ಎಂಬುವರ ವ್ಯಾಖ್ಯೆಯ ಪ್ರಕಾರ, ಈ ಮೂಲಧಾತುಗಳು ಅವಶ್ಯ ಪೋಷಕಗಳ ಪರಿಧೀಯಲ್ಲಿ ಬರುತ್ತಿಲ್ಲವಾದರೂ ಇವು ಸಸ್ಯಗಳಿಗೆ ಲಾಭದಾಯಕವೆನಿಸಿವೆ. ಇಂತಹ ನಾಲ್ಕು ಮೂಲಧಾತುಗಳ ಪ್ರಮುಖ ವಿವರಗಳು ಕೆಳಗಿನಂತಿವೆ:

i) ಸೋಡಿಯಂ

 • ಭೂ ಕವಚದಲ್ಲಿ ಸೋಡಿಯಂ ಸಾಕಷ್ಟು ಪ್ರಮಾಣದಲ್ಲಿದ್ದರೂ ಮಣ್ಣಿನ ನಿರ್ಮಾಣ ಕಾರ್ಯದಲ್ಲಿ ಸೋಡಿಯಂ ಮಣ್ಣಿನ ಮೂಲದ್ರವ್ಯದಿಂದ ಹೊರಬಂದು ಅದರ ಪ್ರಮಾಣವು ಕುಗ್ಗುತ್ತದೆ.
 • ಅಧಿಕ ಮಳೆ ಬೀಳುವ ಪ್ರದೇಶಗಳ ಮಣ್ಣಿನಲ್ಲಿ ಸೋಡಿಯಂದ ಪ್ರಮಾಣವು ಕಡಮೆ ಇರುತ್ತದೆಯಾದರೆ, ಒಣ ಪ್ರದೇಶದ ಮಣ್ಣಿನಲ್ಲಿ ಸೋಡಿಯಂ ಪ್ರಾಬಲ್ಯಿರುವುದನ್ನು ಕಾಣಬಹುದು.
 • ಮಣ್ಣಿನಲ್ಲಿ ಸೋಡಿಯಂ ಕೆಳಗಿನ ಮೂರು ರೂಪಗಳಲ್ಲಿರುತ್ತದೆ:
  • ನೀರಿನಲ್ಲಿ ಕರಗದ ಸಿಲಿಕೇಟ್ ಖನಿಜಗಳಲ್ಲಿ ಸ್ಥಿರಗೊಂಡ
  • ವಿನಿಮಯ ಸೋಡಿಯಂ ಮತ್ತು
  • ಮಣ್ಣಿನ ದ್ರಾವಣದಲ್ಲಿ ಅಯಾನ್‌ ರೂಪದಲ್ಲಿ
  • ಮಣ್ಣಿನ ಸೂಕ್ಷ್ಮ ಕಣಗಳ ಮೇಲೆ ವಿನಿಮಯ ರೂಪದಲ್ಲಿರುವ ಮತ್ತು ಮಣ್ಣಿನ ದ್ರಾವಣದಲ್ಲಿರುವ ಸೋಡಿಯಂ ಮಣ್ಣಿನ ಭೌತಿಕ ಗುಣಧರ್ಮಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ವಿನಿಮಯ ಸೋಡಿಯಂನ ಪ್ರಮಾಣವು ಒಟ್ಟು ವಿನಿಮಯ ಅಯಾನ್‌ಗಳ ಶೇಕಡಾ ೧೫ ಕ್ಕಿಂತ ಅಧಿಕಗೊಂಡರೆ, ಸಸ್ಯದ ಬೆಳವಣಿಗೆಯು ಅಸಾಧ್ಯವಾಗುತ್ತದೆ.
  • ಸಸ್ಯಗಳು ಸೋಡಿಯಂ ಅನ್ನು ಅದರ ಅಯಾನ್‌ರೂಪದಲ್ಲಿ (Na+) ಹೀರಿಕೊಳ್ಳುತ್ತವೆ.
  • ಸಸ್ಯಗಳಿಗೆ ಸೋಡಿಯಂ ಹಲವು ರೀತಿಗಳಿಂದ ಪ್ರಯೋಜನಕಾರಿ ಎನಿಸಿದೆ. ಉದಾಹರಣೆಗೆ:
   • ಮಣ್ಣಿನ ಪೋಟ್ಯಾಸಿಯಂನ ಪ್ರಮಾಣವು ಅವಶ್ಯಕತೆಗಿಂತ ಕಡಮೆ ಇದ್ದಾಗ ಇದು ಪೋಟ್ಯಾಸಿಯಂ ಕೊರತೆಯನ್ನು ನಿವಾರಿಸಬಲ್ಲದು.
   • ಸಕ್ಕರೆ ಬೀಟನಂತಹ ಬೆಳೆಗಳಿಗೆ ಅವಶ್ಯವಿರುವಷ್ಟು ಪೋಟ್ಯಾಸಿಯಂ ಅನ್ನು ಪೂರೈಸಿದರೂ ಸೋಡಿಯಂ ಅನ್ನು ಒದಗಿಸಿದರೆ ಈ ಬೆಳೆಗಳ ಇಳುವರಿಯು ಅಧಕಗೊಳ್ಳುತ್ತದೆ.
   • ಕ್ಯಾಬೇಜ್, ಹತ್ತಿ ಆಲೂಗಡ್ಡೆ, ಓಟ್ಸ್, ತೆಂಗು, ರಬ್ಬರ, ಇತ್ಯಾದಿ ಬೆಳೆಗಳಿಗೂ ಸೋಡಿಯಂ ನಿಂದ ಪ್ರಯೋಜನವಾಗುವುದೆಂದು ಕಂಡುಬಂದಿದೆ.
   • ಬಾರ್ಲಿ, ಗೋಧಿ, ಮುಸುಕಿನ ಜೋಳ, ಸೋಯಾ, ಅವರೆ ಮುಂತಾದ ಬೆಳೆಗಳು ಸೋಡಿಯನ್ನು ಅತಿ ಕಡಮೆ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತವೆ.
   • ಸೋಡಿಯಂ ನೈಟ್ರೇಟ್ ಅಥವಾ ಸೋಡಿಯಂ ನ ಇತರೆ ಲವಣಗಳನ್ನು ಮಣ್ಣಿಗೆ ಸೇರಿಸಿ ಸೊಡಿಯಂನ ಕೊರತೆಯನ್ನು ನಿವಾರಿಸಬಹುದು.

ii) ಕೋಬಾಲ್ಟ್ :

 • ಸೂಕ್ಷ್ಮ ಜೀವಾಣುಗಳು ಮೇಲ್ವರ್ಗದ ಸಸ್ಯಗಳೊಡನೆ ಸಹಬಾಳ್ವೆಯನ್ನು ಮಾಡಿ ಹವೆಯೊಳಗಿನ ಸಾರಜನಕವನ್ನು ಸ್ಥಿರೀಕರಿಸುವ ಕಾರ್ಯಕ್ಕೆ ಕೋಬಾಲ್ಟ್ ಅವಶ್ಯಕವೆಂದು ಕಂಡುಬಂದಿದೆ. ಆದರೆ, ಮೇಲ್ವರ್ಗದ ಸಸ್ಯಗಳಿಗೆ ಕೋಬಾ‌ಲ್ಟ್ ಅವಶ್ಯಕವೇ ಎಂಬುವುದು ಇನ್ನೂ ಖಚಿತಗೊಂಡಿಲ್ಲ.
 • ಹತ್ತಿ, ಅವರೇ ಮತ್ತು ಸಾಸಿವೆ ಬೆಳೆಗಳಿಗೆ ಕೋಬಾಲ್ಟನ್ನು ಪೂರೈಸಿದರೆ ಇಳುವರಿಯು ಅಧಿಕಗೊಳ್ಳುತ್ತದೆಯೆಂದು ರಷ್ಯಾ ದೇಶದಿಂದ ವರದಿಯಾಗಿದೆ.
 • ಪ್ರಾಣಿಗಳಿಗೆ ಕೋಬಾಲ್ಟ್ ಅತ್ಯವಶ್ಯ. ಸಸ್ಯಗಳ ಮೂಲಕವೇ ಕೋಬಾಲ್ಟ್ ಪ್ರಾಣಿಗಳಿಗೆ ದೊರೆಯುವುದರಿಂದ ಈ ಧಾತುವಿಗೆ ಅತಿ ಮಹತ್ವವಿದೆ.
 • ಮಣ್ಣಿನಲ್ಲಿರುವ ಸ್ಪಟಿಕ ರೂಪದ ಮ್ಯಾಂಗನೀಸ್ ಆಕ್ಸೈಡ್, ಕೋಬಾಲ್ಟನ್ನುತನ್ನ ಹೊರಮೈಸುತ್ತ ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ ಮಣ್ಣಿನಲ್ಲಿರುವ ಮತ್ತು ಹೊರಗಿನಿಂದ ಪೂರೈಸಿದ ಕೋಬಾಲ್ಟ್ ಸಸ್ಯಗಳಿಗೆ ದೊರೆಯದಂತಾಗಿ ಈ ಧಾತುವಿನ ಕೊರತೆಯುಂಟಾಗಬಹುದು.
 • ನೀರಿನಲ್ಲಿ ಕರಗುವ ರೂಪದಲ್ಲಿರುವ ಮ್ಯಾಂಗನೀಸ್ ಅಯಾನ್‌ (MN+2)ಗಳನ್ನು ನೀರಿನಲ್ಲಿ ಕರಗದ ಆಕ್ಸೈಡ್ ರೂಪಕ್ಕೆ ಪರಿವರ್ತಿಸಿದರೆ ಸಸ್ಯಗಳಿಗೆ ಕೋಬಾಲ್ಟ್ ಸಿಗದಂತಾಗುತ್ತದೆ. ಆದ್ದರಿಂದಲೇ ಮಣ್ಣಿಗೆ ಸುಣ್ಣವನ್ನು ಸೇರಿಸಿದರೆ ಅಥವಾ ಮಣ್ಣಿನಲ್ಲಿರುವ ಹೆಚ್ಚಾದ ನೀರು ಬಸಿಯುವಂತೆ ಮಾಡಿ ಮ್ಯಾಂಗನೀಸ್‌ನ ಉತ್ಕರ್ಷಣೆಗೆ ಅನುಕೂಲವುಂಟಾದರೆ ಕೋಬಾಲ್ಟ್ ನ ಕೊರತೆಯಾಗುವ ಸಾಧ್ಯತೆಗಳು ಹೆಚ್ಚುತ್ತವೆ.
 • ಪ್ರಾಣಿಗಳಲ್ಲಿ ಕಂಡುಬರುವ ಕೋಬಾಲ್ಟ್ ನ ಕೊರತೆಯನ್ನು ನಿವಾರಿಸಲು, ಈ ಮೂಲ ಧಾತುವನ್ನು ನೇರವಾಗಿ ಪ್ರಾಣಿಗಳಿಗೆ ಕೊಡುವ ಬದಲು ಅವುಗಳ ಮೇವಿನ ಬೆಳೆಗಳ ಮುಖಾಂತರ ದೊರೆಯುವಂತೆ ಮಾಡಬಹುದು.
 • ಮಣ್ಣಿನ ಕೊರತೆಯನ್ನು ದೂರ ಮಾಡಲು ಪ್ರತಿ ಹೆಕ್ಟೇರಿಗೆ ೧೦೦ರಿಂದ ೨೦೦ ಗ್ರಾಂನಷ್ಟು ಕೋಬಾಲ್ಟ್ ಸಾಕಾಗುತ್ತದೆ. ಕೋಬಾಲ್ಟ್ ನ್ನು ಅದರ ಸಲ್ಫೇಟ್ ರೂಪದಲ್ಲಿ ಪೂರೈಸಬಹುದು.

iii) ಸೆಲೀನಿಯಂ

 • ಸಸ್ಯಗಳಿಗೆ ಸೆಲೀನಿಯಂ ನಿಂದ ಎದ್ದು ಕಾಣುವ ಯಾವುದೇ ಪ್ರಯೋಜನವು ಇದ್ದಂತಿಲ್ಲ. ಆದರೆ ಸಾಕು ಪ್ರಾಣಿಗಳು ತಿನ್ನುವ ಮೇವಿನಲ್ಲಿ ಈ ದ್ರವ್ಯವು ಅವಶ್ಯವಾಗಿ ಇರಲೇಬೇಕಾಗುತ್ತದೆ.
 • ಮಣ್ಣಿನಲ್ಲಿ ಸೆಲೀನಿಯಂ ಮೂಲ ಧಾತುವಿನ ರೂಪದಲ್ಲಿ ಇರುವುದಲ್ಲದೇ ಸೆಲೀನಾಯ್ಡ್, ಸೆಲೇನೈಟ್ ಮತ್ತು ಸೆಲೆನೇಟ್ ರೂಪಗಳಲ್ಲಿ ಕಂಡುಬರುತ್ತದೆ. ಸಾವಯವ ವಸ್ತುಗಳೊಡನೆ ಸಂಯೋಜನೆ ಹೊಂದಿಯೂ ಸೆಲೀನಿಯಂ ಮಣ್ಣಿನಲ್ಲಿ ಕಾಣಸಿಗುತ್ತದೆ.
 • ಸೆಲೀನಿಯಂ ಅನ್ನು ವಿವಿಧ ಬೆಳೆಗಳು ವಿಭಿನ್ನ ಪ್ರಮಾಣಗಳಲ್ಲಿ ತೆಗೆದುಕೊಳ್ಳುತ್ತವೆ. ಕೆಲವು ಬೆಳೆಗಳು ಸೆಲೀನಿಯಂ, ಅನ್ನು ಬಹುದೊಡ್ಡ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆಯಾದರೆ ಕ್ಯಾಬೇಜ್, ಸಾಸಿವೆ, ಈರುಳ್ಳಿ ಇತ್ಯಾದಿ ಬೆಳೆಗಳು ಈ ಧಾತುವನ್ನು ಮಧ್ಯಮ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತವೆ. ಹುಲ್ಲು ಮತ್ತು ತೃಣ ಧಾನ್ಯಗಳಿಗೆ ಅಲ್ಪ ಅಥವಾ ಮಧ್ಯಮ ‌ಪ್ರಮಾಣದ ಸೆಲೀನಿಯಂ ಸಾಕಾಗುತ್ತದೆ.
 • ಸೆಲೀನಿಯಂ ಕೊರತೆಯಿಂದ ಸಾಕು ಪ್ರಾಣಿಗಳಲ್ಲಿ ಉಂಟಾಗುವ ಪೋಷಕಗಳ ನ್ಯೂನತೆಯ ರೋಗವನ್ನು ತಡೆಗಟ್ಟಲು, ಅವು ಸೇವಿಸುವ ಮೇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೆಲೀನಿಯಂ ಇರುವಂತೆ ನೋಡಿಕೊಳ್ಳುವುದು ಉತ್ತಮ.
 • ಕೊರತೆಯನ್ನು ನಿವಾರಿಸಲು ಅತ್ಯಲ್ಪ ಪ್ರಮಾಣದಲ್ಲಿ ಸೆಲೀನಿಯಂ ಅನ್ನು ಮಣ್ಣಿಗೆ ಸೇರಿಸಬೇಕು. ಪ್ರತಿ ಹೆಕ್ಟೇರು ಪ್ರದೇಶಕ್ಕೆ ೭೦ ರಿಂದ ೭೫ಗ್ರಾಂ ಸೆಲೀನಿಯಂ ಸಾಕು.
 • ಎಲೆಗಳ ಮೇಲೆ ಸಿಂಪಡಿಸುವುದಾದರೆ ಸೋಡಿಯಂ ಸೆಲೆನೈಟನ್ನು ಬಳಸಬೇಕು. ಪ್ರತಿಹೆಕ್ಟೇರಿಗೆ ೧೫ ಗ್ರಾಂ. ಸೆಲೀನಿಯಂ ಸಾಕಾಗುತ್ತದೆ.

iv) ಸಿಲಿಕಾನ್‌

 • ಸಿಲಿಕಾನ್‌ ಭೂ ಕವಚದಲ್ಲಿ ಅತಿ ದೊಡ್ಡ ‌ಪ್ರಮಾಣದಲ್ಲಿರುವ ಧಾತುಗಳಲ್ಲಿ ಎರಡನೆಯ ಸ್ಥಾನದಲ್ಲಿದೆ.
 • ಸಿಲಿಕಾ (SiO2), ಕ್ವಾರ್ಜ್ (quartz), ಓಪೆಲ್ ಇತ್ಯಾದಿ ಆರು ಬಗೆಯ ಖನಿಜಗಳಲ್ಲಿ ಸಿಲಿಕಾನ್‌ ಕಂಡುಬರುತ್ತದೆ.
 • ಮಣ್ಣಿನಲ್ಲಿ ಕಬ್ಬಿಣ ಮತ್ತು ಅಲ್ಯೂಮಿನಿಯಂ ಆಕ್ಸೈಡ್‌ಗಳ ಪ್ರಮಾಣವು ಅಧಿಕಗೊಂಡಂತೆ ಮಣ್ಣಿನ ದ್ರಾವಣದಲ್ಲಿರುವ ಸಿಲಿಕಾನ್‌ ಪ್ರಮಾಣವು ಕಡಮೆಯಾಗುವುದರಿಂದ ಸಸ್ಯಗಳಿಗೆ ದೊರೆಯುವ ಸಿಲಿಕಾನ್‌ ಪ್ರಮಾಣವು ಕುಗ್ಗುತ್ತದೆ.
 • ಮಣ್ಣಿಗೆ ಸುಣ್ಣವನ್ನು ಪೂರೈಸಿದರೆ ಸಸ್ಯಗಳು ಸಿಲಿಕಾನ್ನನ್ನು ಹಿರಿಕೊಳ್ಳುವ ಪ್ರಮಾಣವು ಕಡಮೆಯಾಗುತ್ತದೆ.
 • ಸಾರಜನಕವನ್ನು ಬಹು ದೊಡ್ಡ ಪ್ರಮಾಣದಲ್ಲಿ ಪೂರೈಸಿದರೆ, ಬತ್ತದ ಬೆಳೆಯ ಹುಲ್ಲಿನ ಭಾಘದಲ್ಲಿರುವ ಸಿಲಿಕಾನ್‌ನ ಪ್ರಮಾಣವು ಕಡಮೆಯಾಗಿ ಬೆಳೆಯು ಹಲವು ರೋಗಗಳಿಗೆ ಸುಲಭವಾಗಿ ತುತ್ತಾಗಬಹುದು.
 • ವಿವಿಧ ಬೆಳೆಗಳು ಸಿಲಿಕಾನನ್ನು ವಿವಿಧ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ. ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳಿಗಿಂತ ಹುಲ್ಲಿನ ವರ್ಗಕ್ಕೆ ಸೇರಿದ ಬೆಳೆಗಳು ೧೦ ರಿಂದ ೨೦ ಪಟ್ಟು ಹೆಚ್ಚು ಸಿಲಿಕಾನನ್ನು ತೆಗೆದುಕೊಳ್ಳುತ್ತವೆ. ನಾಟಿ ಪದ್ಧತಿಯಿಂದ ಬೆಳೆದು ಬತ್ತದ ಬೆಳೆಯು ಹುಲ್ಲಿನ ಭಾಗದಲ್ಲಿ ಶೇಕಡಾ ೫ ರಿಂದ ೭ ಸಿಲಿಕಾನ್‌ ಇರುತ್ತದೆ.
 •  ಸಿಲಿಕಾನ್‌ ಕೊರತೆಯನ್ನು ನಿವಾರಿಸಲು ಕ್ಯಾಲ್ಸಿಯಂ ಸಿಲಿಕೇಟ್ (೩೧ % ಸಿಲಿಕಾನ್) ಅಥವಾ ಸೋಡಿಯಂ ಮೆಟಾ ಸಿಲಿಕೇಟ್ (೨೩% ಸಿಲಿಕಾನ್) ಗಳಲ್ಲಿ ಒಂದನ್ನು ಮಣ್ಣಿಗೆ ಸೇರಿಸಬೇಕು.
 • ಮಣ್ಣಿನ ಗುಣಧರ್ಮ ಮತ್ತು ಬೆಳೆಯ ಸ್ವಭಾವ ಇವುಗಳ ಮೇಲಿಂದ ಪೂರೈಸಬೇಕಾದ ಸಿಲಿಕಾನ್‌ನ ಪ್ರಮಾಣವನ್ನು ನಿರ್ಧರಿಸಬೇಕು. ಉದಾಹರಣೆಗೆ, ಪ್ರತಿ ಹೆಕ್ಟೇರಿಗೆ ೫ ರಿಂದ ೮ ಟನ್ನುಗಳಷ್ಟು ಕ್ಯಾಲ್ಸಿಯಂ ಸಿಲಿಕೇಟನ್ನು ಪೂರೈಸುವುದರಿಂದ ಕಬ್ಬಿನ ಇಳುವರಿಯು ಗಣನೀಯವಾಗಿ ಹೆಚ್ಚುತ್ತದೆಂದು ಕಂಡು ಬಂದಿದೆ.

ರಸಾಯನಿನ ಗೊಬ್ಬರಗಳ ಆಯ್ಕೆ : ವಿವಿಧ ಪೋಷಕಗಳನ್ನೊಳಗೊಂಡ ಹಲವು ಬಗೆಯ ರಾಸಾಯನಿಕ ಗೊಬ್ಬರಗಳು, ಗೊಬ್ಬರಗಳ ಮಿಶ್ರಣಗಳು ಮತ್ತು ಸಂಯುಕ್ತ ಗೊಬ್ಬರಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳಲ್ಲಿ ಯಾವ ಗೊಬ್ಬರವನ್ನು ಆರಿಸಿಕೊಳ್ಳಬೇಕು ಎಂಬುವುದನ್ನು ನಿರ್ಧರಿಸುವಾಗ ಕೆಳಗಿನ ಸಂಗತಿಗಳನ್ನು ಪರಿಗಣಿಸಬೇಕು.

. ಗೊಬ್ಬರದಲ್ಲಿರುವ ಪೋಷಕಗಳ ಪ್ರಮಾಣ : ರಾಸಾಯನಿಕ ಗೊಬ್ಬರಗಳಲ್ಲಿರುವ ಪೋಷಕಗಳ ಪ್ರಮಾಣವು ಕಡಮೆಯಿದ್ದರೆ, ನಿಗದಿಪಡಿಸಿದ ಪೋಷಕವನ್ನು ಪೂರೈಸಲು ಹೆಚ್ಚು ಗೊಬ್ಬರವು ಬೇಕಾಗುತ್ತದೆ. ಉದಾಹರಣೆಗೆ, ಒಂದು ಪ್ರದೇಶಕ್ಕೆ ೩೦ ಕಿ.ಗ್ರಾಂ. ಸಾರಜನಕವನ್ನು ಪೂರೈಸಬೇಕೆಂದಿದ್ದರೆ ಶೇಕಡಾ ೨೦ ಸಾರಜನಕವಿರುವ ಅಮೋನಿಯಂ ಸಲ್ಫೇಟನ್ನು ಬಳಸುವುದಾದರೆ ೧೫೦ ಕಿ.ಗ್ರಾಂ. ರಾಸಾಯನಿಕ ಗೊಬ್ಬರವು ಬೇಕಾಗುತ್ತದೆ. ಆದರೆ ಅದರ ಬದಲು ಶೇಕಡಾ ೪೫ ಸಾರಜನಕವಿರುವ ಯೂರಿಯಾ ಗೊಬ್ಬರವನ್ನು ಬಳಸುವುದಾದರೆ ಸುಮಾರು ೬೭ ಕಿ.ಗ್ರಾಂ. ಸಾಕಾಗುತ್ತದೆ. ಆದ್ದರಿಂದ ಪೋಷಕಗಳ ಪ್ರಮಾಣವು ಕಡಮೆ ಇರುವ ಗೊಬ್ಬರವನ್ನು ಬಳಸಿದರೆ ಸಾಗಾಣಿಕೆಯ ಮತ್ತು ಸಂಗ್ರಹದ ಖರ್ಚು ಹೆಚ್ಚಾಗುತ್ತದೆ.

. ಗೊಬ್ಬರದಿಂದ ಮಣ್ಣಿನ ಮೇಲೆ ಆಗುವ ಪರಿಣಾಮಗಳು : ಸೋಡಿಯಂ ನೈಟ್ರೇಟ್‌ನಂತಹ ಗೊಬ್ಬರವನ್ನು ಕಡಮೆ ಮಳೆ ಬೀಳುವ ಪ್ರದೇಶದ ಎರೆ ಮಣ್ಣಿಗೆ ಪೂರೈಸಿದರೆ, ಸೊಡಿಯಂ ಮಣ್ಣಿನಲ್ಲಿ ಸಂಗ್ರಹಗೊಂಡು ಕೆಲವೇ ವರ್ಷಗಳಲ್ಲಿ ಮಣ್ಣಿನ ಭೌತಿಕ ಗುಣಧರ್ಮಗಳು ಹಾಳಾಗುತ್ತವೆ. ಅದರಂತೆಯೇ ಅಮೋನಿಯಂ ನೈಟ್ರೇಟ್ ಗೊಬ್ಬರವನ್ನು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಉಪಯೋಗಿಸಿದರೆ ಮಣ್ಣಿನ ಆಮ್ಲತೆಯು ಹೆಚ್ಚುತ್ತದೆ. ಈ ಸಮಯದಲ್ಲಿ ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಗೊಬ್ಬರವನ್ನು ಪೂರೈಸುವುದು ಉತ್ತಮ.

. ಸಸ್ಯಗಳ ಮೇಲೆ ಆಗುವ ಪರಿಣಾಮಗಳು : ಮ್ಯೂರಿಯೇಟ್ ಆಫ್ ಪೋಟ್ಯಾಷ್ ಗೊಬ್ಬರವನ್ನು ತಂಬಾಕು ಮತ್ತು ಆಲೂಗಡ್ಡೆ ಬೆಳೆಗಳಿಗೆ ಉಪಯೋಗಿಸಿದರೆ ಉತ್ಪತ್ತಿಯ ಗುಣಮಟ್ಟವು ಕುಗ್ಗುತ್ತದೆ. ಇಂತಹ ಬೆಳೆಗಳಿಗೆ ಕ್ಲೋರೀನ್‌ ಉಪಯೋಗಿಸಿದರೆ ಉತ್ಪತ್ತಿಯ ಗುಣಮಟ್ಟವು ಕುಗ್ಗುತ್ತದೆ. ಇಂತಹ ಬೆಳೆಗಳಿಗೆ ಕ್ಲೋರಿನ್‌ ಇಲ್ಲದ ಗೊಬ್ಬರವನ್ನು ಪೂರೈಸಬೇಕು. ಆದರೆ ತೆಂಗಿನ ಬೆಳೆಗೆ ಕ್ಲೋರಿನ ಇರುವ ಗೊಬ್ಬರಗಳು ಲಾಭದಾಯಕ ವಾಗಿವೆ.

. ಪೋಷಕಗಳ ಲಭ್ಯತೆ ಮತ್ತು ನಷ್ಟ : ಡೈ ಅಮೋನಿಯಂ ಫಾಸ್ಫೇಟ್‌ನಲ್ಲಿ ರಂಜಕವು ನೀರಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಹೀಗಾಗಿ ಈ ಗೊಬ್ಬರವನ್ನು ಹಲವು ಸನ್ನಿವೇಶಗಳಲ್ಲಿ ಬಳಸಬಹುದು. ಅದರೆ ಶಿಲಾರಂಜಕದಲ್ಲಿ ಬಹಳಷ್ಟು ರಂಜಕವು ನೀರಿನಲ್ಲಿ ಕರಗದ ರೂಪದಲ್ಲಿದ್ದು, ಸ್ವಲ್ಪ ಭಾಗವು ಮಾತ್ರ ಸಿಟ್ರೇಟಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಆದ್ದರಿಂದ ಈ ಗೊಬ್ಬರವು ಆಮ್ಲ ಮಣ್ಣಿಗೆ ಮತ್ತು ದೀರ್ಘಾವಧಿ ಬೆಳೆಗಳಿಗೆ ಉಪಯುಕ್ತವಾಗಿದೆ.

ಕೆಸರು ಪದ್ಧತಿಯಿಂದ ಬೇಸಾಯವನ್ನು ಮಾಡುವ ಬತ್ತದ ಬೆಳೆಗೆ ಅಮೋನಿಯಂ ರೂಪದಲ್ಲಿರುವ ಅಥವಾ ಶೀಘ್ರವೇ ಅಮೊನಿಯಂ ರೂಪಕ್ಕೆ ಪರಿವರ್ತನೆಯನ್ನು ಹೊಂದಬಲ್ಲ (ಉದಾಹರಣೆಗೆ ಯೂರಿಯಾ) ಸಾರಜನಕ ಗೊಬ್ಬರವು ಮಾತ್ರ ಸೂಕ್ತವೆನಿಸಿದೆ. ನೈಟ್ರೇಟ್ ರೂಪದಲ್ಲಿ ಸಾರಜನಕವಿರುವ ಗೊಬ್ಬರವನ್ನು ಪೂರೈಸಿದರೆ, ಅದು ಭೂಮಿಯೊಳಗೆ ಬಸಿದು ಹೋಗಿ ಇಲ್ಲವೇ ವಾಯು ರೂಪಕ್ಕೆ ಪರಿವರ್ತನೆ ಹೊಂದಿ ಸಾರಜನಕವು ಬತ್ತದ ದೃಷ್ಟಿಯಿಂದ ನಷ್ಟ ಹೊಂದಿದಂತಾಗುತ್ತದೆ.

. ಸಂಗ್ರಹಿಸಲು ಮತ್ತು ಉಪಯೋಗಿಸಲು ಇರುವ ಸೌಲಭ್ಯ ಮತ್ತು ಸಮಸ್ಯೆಗಳು : ಈ ಮೊದಲೇ ಹೇಳಿದಂತೆ ಗೊಬ್ಬರದಲ್ಲಿಯು ಪೋಷಕಗಳ ಪ್ರಮಾಣವು ಕಡಮೆ ಇದ್ದರೆ, ಸಾಗಾಣಿಕೆ ಮತ್ತು ಸಂಗ್ರಹದ ಖರ್ಚು ಹೆಚ್ಚಾಗುತ್ತದೆ. ಅಮೋನಿಯಂ ನೈಟ್ರೇಟ್ ಗೊಬ್ಬರವು ಸಂಗ್ರಹದಲ್ಲಿ ಸ್ಪೋಟಗೊಳ್ಳಬಹುದು. ಕೆಲವು ಗೊಬ್ಬರಗಳು ಹವೆಯಲ್ಲಿಯ ಆರ್ದ್ರತೆಯನ್ನು ಶೀಘ್ರವಾಗಿ ಹೀರಿಕೊಂಡು, ರಾಡಿಯಂತಾಗಿ ಗೊಬ್ಬರವನ್ನು ಹಾಕುವುದೇ ಒಂದು ದೊಡ್ಡ ಸಮಸ್ಯೆಯಾಗಬಹುದು. ಅತಿ ಜಿನುಗು ಪುಡಿಯಾದರೆ ಮಣ್ಣಿಗೆ ಪೂರೈಸುವಾಗ ಗಾಳಿಗೆ ಹಾರಿ ಎಲ್ಲೆಡೆ ಸಮಾನವಾಗಿ ಪಸರಿಸುವುದು ಕಷ್ಟದಾಯಕವೆನಿಸಬಹುದು. ಅಲ್ಲದೇ ಪುಡಿಯ ಹಾರಿ ಬಂದು ಕೆಲಸಗಾರರ ಕಣ್ಣು ಮೂಗುಗಳಿಗೆ ಬೀಳಬಹುದು. ಅದರ ಬದಲು, ಗೊಬ್ಬರವು ಹರಳು ಇಲ್ಲದೇ ಕಾಳಿನ ರೂಪದಲ್ಲಿದ್ದರೆ, ಗೊಬ್ಬರವನ್ನು ಮಣ್ಣಿಗೆ ಪೂರಯಸುವ ಕಾರ್ಯವು ಸುಲಭವೆನಿಸುವುದು. ದ್ರವ ರೂಪದಲ್ಲಿರುವ ಅಮೋನಿಯಾ ಗೊಬ್ಬರವನ್ನು ಸಂಗ್ರಹಿಸಡಲು ಮತ್ತು ಮಣ್ಣಿನೊಳಗೆ ಸೇರಿಸಲು ವಿಶಿಷ್ಟ ರೀತಿಯ ಸಾಧನ ಸಲಕರಣೆಗಳು ಬೇಕು.

. ಬೆಲೆಗಳು : ರಾಸಾಯನಿಕ ಗೊಬ್ಬರವನ್ನು ಆರಿಸುವಾಗ, ಬೆಲೆಯು ಬಹು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಸಂದರ್ಭದಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಬೆಲೆಯನ್ನು ಪರಿಶೀಲಿಸುವಾಗ ಪ್ರತಿ ಕಿ.ಗ್ರಾಂ. ಅಥವಾ ಪ್ರತಿ ಕ್ವಿಂಟಾಲ್ ಗೊಬ್ಬರದ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳದೇ, ಆ ಗೊಬ್ಬರದಲ್ಲಿರುವ ಪ್ರತಿ ಕಿ.ಗ್ರಾಂ. ಪೋಷಕಗಳ ಬೆಲೆಯನ್ನು ಪರಿಗಣಿಸಬೇಕು.

ಬಳಕೆಯಲ್ಲಿರುವ ಕೆಲವು ರಾಸಾಯನಿಕಗೊಬ್ಬರಗಳ ಬೆಲೆಗಳನ್ನು ಕೋಷ್ಟಕ ೨೬ರಲ್ಲಿ ಕೊಡಲಾಗಿದೆ.

ಕೋಷ್ಟಕ : ೨೬: ಬಳಕೆಯಲ್ಲಿರುವ ಕೆಲವು ರಾಸಾಯನಿಕ ಗೊಬ್ಬರಗಳ ಬೆಲೆ

. ಸಂ.

ರಾಸಾಯನಿಕ ಗೊಬ್ಬರದ ಹೆಸರು

ಶೇಕಡಾವಾರು

ಬೆಲೆ ಪ್ರತಿ ಕ್ವಿಂಟಾಲ್ ರೂ.

ಸಾರಜನಕ

ರಂಜಕದ ಪೆಂಟಾಕ್ಸೈಡ್

ಪೊಟ್ಯಾಶ್

೧. ಯೂರಿಯಾ

೪೫

೦೦

೦೦

೪೭೪

೨. ಡೈ ಅಮೋನಿಯಂ ಫಾಸ್ಪೇಟ್

೧೮

೪೬

೦೦

೯೨೦

೩. ಸಿಂಗಲ್ ಸೂಪರ ಫಾಸ್ಪೇಟ್

೦೦

೧೬

೦೦

೩೪೮

೪. ಮ್ಯೂರಿಯೇಟ್ ಆಫ್ ಪೊಟ್ಯಾಶ್

೦೦

೦೦

೬೦

೪೪೦

೫. ಕಾಂಪ್ಲೆಕ್ಸ್ ಗೊಬ್ಬರ

೧೫

೧೫

೧೫

೬೮೪

೬. ಕಾಂಪ್ಲೆಕ್ಸ್ ಗೊಬ್ಬರ

೧೭

೧೭

೧೭

೭೯೦

೭. ಕಾಂಪ್ಲೆಕ್ಸ್ ಗೊಬ್ಬರ

೧೭

೧೭

೧೭

೭೮೦

೮. ಕಾಂಪ್ಲೆಕ್ಸ್ ಗೊಬ್ಬರ ೧೯ ೧೯ ೧೯ ೮೧೦
೯. ಕಾಂಪ್ಲೆಕ್ಸ್ ಗೊಬ್ಬರ ೧೦ ೨೬ ೨೬ ೮೧೨
೧೦. ಶಿಲಾ ರಂಜಕ  ೦೦ ೨೫ ೦೦ ೨೩೦

ಯೂರಿಯಾ ಗೊಬ್ಬರದ ಬೆಲೆ ೧೦೦ ಕಿ.ಗ್ರಾಂಗಳಿಗೆ ರೂ.೪೭೪. ಅಂದರೆ ಆ ಗೊಬ್ಬರದಲ್ಲಿರುವ ೪೫ ಕಿ.ಗ್ರಾಂ. ಸಾರಜನಕದ ಬೆಲೆಯು ೪೭೪ ರೂಪಾಯಿಗಳೆಂದಾಯಿತು. ಆದ್ದರಿಂದ ಯೂರಿಯಾದಲ್ಲಿರುವ ಪ್ರತಿ ಕಿ.ಗ್ರಾಂ. ಸಾರಜನಕದ ಬೆಲೆಯನ್ನು ಕೆಳಗಿನಂತೆ ಕಂಡುಕೊಳ್ಳಬಹುದು.

೪೭೪/ ೪೫ = ೧೦.೫೨ ರೂಪಾಯಿಗಳು.

ಇದೇ ವಿಧಾನವನ್ನು ಅನುಸರಿಸಿ, ಕೇವಲ ಸಾರಜನಕ ಪೋಷಕವು ಮಾತ್ರ ಇರುವ ಗೊಬ್ಬರದಲ್ಲಿ ಪ್ರತಿ ಕಿ.ಗ್ರಾಂ. ಸಾರಜನಕದ ಬೆಲೆಯನ್ನು ಕಂಡುಹಿಡಿದು ವಿವಿದ ಸಾರಜನಕ ಗೊಬ್ಬರಗಳ ಬೆಲೆಗಳನ್ನು ತುಲನೆ ಮಾಡಬಹುದು.

ಸೂಪರ್ ಫಾಸ್ಪೇಟಿನಲ್ಲಿರುವ ಪ್ರತಿ ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ ಬೆಲೆಯನ್ನು ಮೇಲಿನ ವಿಧಾನವನ್ನುಸರಿಸಿ ಲೆಕ್ಕ ಮಾಡಬಹುದು.

೩೪೮/೧೬ = ೨೧.೭೫ ರೂಪಾಯಿಗಳು

ಅದರಂತೆಯೆ, ಮ್ಯುರಿಯೇಟ್ ಆಫ್ ಪೊಟ್ಯಾಶ್‌ನಲ್ಲಿರುವ ಪ್ರತಿ ಕಿಗ್ರಾಂ. ಪೊಟ್ಯಾಶ್ (K2O)ನ ಬೆಲೆಯು

೪೪೦/೬೦ = ೭.೭೩ ರೂಪಾಯಿಗಳು.

ಮೇಲಿನಂತಹ ವಿವರಗಳ ಸಹಾಯದಿಂದ ಒಂದಕ್ಕಿಂತ ಹೆಚ್ಚು ಪೋಷಕಾಂಶಗಳಿರುವ ಗೊಬ್ಬರದಲ್ಲಿನ ಪ್ರತಿ ಕಿ.ಗ್ರಾಂ. ಪೋಷಕ ಬೆಲೆಯನ್ನು ಕಂಡುಕೊಳ್ಳಲು೮ ಸಾಧ್ಯ.

ಉದಾಹರಣೆಗೆ ೧೫ – ೧೫ – ೧೫ ಕಾಂಪ್ಲೆಕ್ಸ್ ಗೊಬ್ಬರದ ಬೆಲೆಯು ಒಂದು ಕ್ವಿಂಟಾಲ್ ಗೆ ೬೮೪ ರೂ.ಗಳು. ಇದರೊಳಗಿನ ಪ್ರತಿ ಕಿ.ಗ್ರಾಂ. ರಂಜಕದ ಬೆಲೆಯನ್ನು ಕೆಳಗಿನಂತೆ ಕಂಡುಹಿಡಿಯಬಹುದು.

648 – (10.52 x 15 + 7.33 x 15) = 684 – (157.95 + 1.09.95)
15

= 27.74 ರೂಪಾಯಿಗಳು.

ಸೂಚನೆ :

೧) ಕಾಂಪ್ಲೆಕ್ಸ್ ಗೊಬ್ಬರದೊಳಗಿನ ಸಾರಜನಕದ ಬೆಲೆಯು ಯೂರಿಯಾದೊಳಗಿರುವ ಸಾರಜನಕದ ಬೆಲೆಗೆ ಸಮಾನವೆಂದು (ರೂ. ೧೦.೫೩) ಪೋಟ್ಯಾಶನ ಬೆಲೆಯು ಮ್ಯುರಿಯೆಟ್ ಆಫ್ ಪೊಟ್ಯಾಶ್ ದೊಳಗಿನ ಪೋಟ್ಯಾಷಗೆ (ರೂ. ೭.೩೩) ಸಮಾನವೆಂದೂ ಗ್ರಹಿಸಲಾಗಿದೆ.

೨) ಪುಸ್ತಕವನ್ನು ಬರೆಯುವಾಗಿನ ಬೆಲೆಯನ್ನು ಇಲ್ಲಿ ಪರಿಗಣಿಸಲಾಗಿದೆ. ಸಮಯಕ್ಕೆ ಅನುಗುಣವಾಗಿ ಬೆಲೆಯಲ್ಲಿ ಅವಶ್ಯವಿರುವ ಬದಲಾವಣೆಯನ್ನು ಮಾಡಿಕೊಳ್ಳಬೇಕು.

ರಾಸಾಯನಿಕಗೊಬ್ಬರಗಳಮಿಶ್ರಣಗಳು

ಸಾರಜನಕ, ರಂಜಕ, ಪೋಟ್ಯಾಸಿಯಂ ಮತ್ತು ಇತರೆ ಪೋಷಕಗಳನ್ನು ಮಣ್ಣಿಗೆ ಪೂರೈಸುವಾಗ ಒಂದಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಹಾಕಬೇಕಾಗುತ್ತದೆ. ಪ್ರತಿಯೊಂದು ಗೊಬ್ಬರವನ್ನು ಪ್ರತ್ಯೇಕವಾಗಿ ಹಾಕಿದರೆ ಶ್ರಮ, ಹಣ ಮತ್ತು ಸಮಯ ವ್ಯರ್ಥವಾಗುವವು. ಆದ್ದರಿಂದ ಎಲ್ಲ ರಾಸಾಯನಿಕ ಗೊಬ್ಬರಗಳನ್ನು ಮಿಶ್ರಮಾಡಿ ಒಂದೇ ಬಾರಿ ಹಾಕುವುದು ಉತ್ತಮ. ರಾಸಾಯನಿಕ ಗೊಬ್ಬರಗಳ ಮಿಶ್ರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳು ಕೆಳಗಿನಂತಿವೆ.

ರಾಸಾಯನಿಕ ಗೊಬ್ಬರಗಳ ಮಿಶ್ರಣದ ವಿಷಯವನ್ನು ವಿವರಿಸುವಾಗ ಕೆಲವು ಪಾರಿಭಾಷಿಕ ಪದಗಳನ್ನು ಬಳಸಲಾಗುತ್ತದೆ. ಅವುಗಳ ವಿವರಣೆಯು ಕೆಳಗಿನಂತಿದೆ.

i) ಮಿಶ್ರಗೊಬ್ಬರಗಳು : ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಭೌತಿಕವಾಗಿ ಮಿಶ್ರಮಾಡಿದ ವಸ್ತುವಿಗೆ ಮಿಸ್ರಗೊಬ್ಬರವೆನ್ನುತ್ತಾರೆ. ಇದು ಸಂಯುಕ್ತ ಗೊಬ್ಬರದಿಂದ ಭಿನ್ನವಾಗಿದೆ.

ii) ಮಿಶ್ರಣದ ಮಟ್ಟ :ಮೂರು ಅಂಕಿಗಳುಳ್ಳ ಈ ಪದವು ಮಿಶ್ರಣದಲ್ಲಿರುವ ಸಾರಜನಕ ರಂಜಕದ ಪೆಂಟಾಕ್ಸೈಡ್ ಮತ್ತು ಪೋಟಾಶ್‌ಗಳ ಶೇಕಡಾ ಪ್ರಮಾಣವನ್ನು ಅದೇ ಅನುಕ್ರಮದಲ್ಲಿ ತೋರಿಸುತ್ತದೆ. ಉದಾಹರಣೆಗೆ ಒಂದು ಮಿಶ್ರಣದ ಮಟ್ಟವು ೧೫ – ೧೫ – ೧೦ ಇದೆ. ಅಂದರೆ ಪ್ರತಿ ೧೦೦ ಕಿ.ಗ್ರಾಂ. ಮಿಶ್ರಣದಲ್ಲಿ ೧೫ ಕಿ.ಗ್ರಾಂ. ಸಾರಜನಕ, ೧೫ ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ್ ಮತ್ತು ೧೦ ಕಿ.ಗ್ರಾಂ. ಪೋಟ್ಯಾಷ್ ಇವೆ ಎಂದರ್ಥ.

iii) ಮಿಶ್ರಣದ ಪ್ರಮಾಣ : ಮೂರು ಅಂಕಿಗಳ ಈ ಪದದಿಂದ, ಸಾರಜನಕ, ರಂಜಕದ ಪೆಂಟಾಕ್ಸೈಡ್ ಮತ್ತು ಪೊಟಾಶ್‌ಗಳು ರಾಸಾಯನಿಕ ಗೊಬರಗಳ ಮಿಶ್ರಣದಲ್ಲಿ ಯಾವ ಪ್ರಮಾಣದಲ್ಲಿವೆ ಎಂಬುದನ್ನು ತಿಳಿಸುತ್ತವೆ. ಮೇಲಿನ ಮಟ್ಟದ ಮಿಶ್ರಣದಲ್ಲಿ ಪೋಷಕಗಳು ೩-೩-೨ ಈ ಪ್ರಮಾಣದಲ್ಲಿರುತ್ತವೆ.

iv) ಗಾತ್ರವನ್ನು ಸರಿ ಹೊಂದಿಸುವ ವಸ್ತುಗಳು (ಫಿಲ್ಲರಗಳು) : ಅಪೇಕ್ಷಿತ ಮಟ್ಟ ಮತ್ತು ಪ್ರಮಾಣದ ಮಿಶ್ರಣವನ್ನು ತಯಾರಿಸಲು ಬಳಸಿದ ವಿವಿಧ ರಾಸಾಯನಿಕ ಗೊಬ್ಬರಗಳ ಮೊತ್ತವು ನಿಗದಿತ ಪ್ರಮಾಣಕ್ಕಿಂತ ಕಡಮೆಯಾದರೆ ಆ ಕೊರತೆಯನ್ನು ಸರಿ ಹೊಂದಿಸಲು ಸಾರಜನಕ, ರಂಜಕ ಅಥವಾ ಪೋಟ್ಯಾಸಿಯಂ, ಇರದ ಬೇರೆ ಯಾವುದಾದರೂ ವಸ್ತುವನ್ನು ಬಳಸಬೇಕಾಗುತ್ತದೆ. ಉದಾಹರಣೆಗೆ, ೧೦೦೦ ಕಿ.ಗ್ರಾಂ. ಗೊಬ್ಬರದ ಮಿಶ್ರಣವನ್ನು ತಯಾರಿಸಲು ಬಳಸಿದ ರಾಸಾಯನಿಕ ಗೊಬ್ಬರಗಳ ತೂಕವು ೮೬೦ ಕಿ.ಗ್ರಾಂ. ಆಯಿತೆಂದು ತಿಳಿದರೆ : ೧೪೦ ಕಿ.ಗ್ರಾಂ. (೧೦೦೦ – ೮೬೦) ತೂಕವನ್ನು ಸರಿ ಹೊಂದಿಸಲು ಈ ಮೂರು ಪೋಷಕಗಳನ್ನು ಒದಗಿಸದ ವಸ್ತುವನ್ನು ಉಪಯೋಗಿಸಲಾಗುತ್ತದೆ.

ಮನೆಯಲ್ಲಿ ತಯಾರಿಸಿದ ಮಿಶ್ರಣ : ರಾಸಾಯನಿಕ ಗೊಬ್ಬರಗಳ ಮಿಶ್ರಣವನ್ನು ಮಾರುಕಟ್ಟೆಯಿಂದ ಕೊಂಡು ತರಬಹುದು. ಇಲ್ಲವೇ ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಬಹುದು. ಮಿಶ್ರಣವನ್ನು ಮನೆಯಲ್ಲಿಯೆ ಸಿದ್ಧಪಡಿಸಿಕೊಂಡರೆ ಆಗುವ ಅನುಕೂಲತೆಗಳು ಮತ್ತು ಅನಾನುಕೂಲತೆಗಳು ಕೆಳಗಿನಂತಿವೆ.

) ಅನುಕೂಲತೆಗಳು

i) ಸಂಬಂಧಿಸಿದ ಮೆಣ್ಣಿನ ಗುಣಧರ್ಮಗಳು ಮತ್ತು ಬೆಳೆಯ ಸ್ವಭಾವ ಇವುಗಳಿಗೆ ಅನುಗುಣಾಗಿ ಹೆಚ್ಚು ಪ್ರಯೋಜನಕಾರಿಯಾದ ಗೊಬ್ಬರಗಳನ್ನು ಅವಶ್ಯವಿರುವ ಪ್ರಮಾಣದಲ್ಲಿ ಮಿಶ್ರಣ ಮಾಡಲು ಸಾಧ್ಯವಿದೆ. ಈ ಅನುಕೂಲತೆಯು ಮಾರುಕಟ್ಟೆಯಲ್ಲಿ ದೊರೆಯುವ ಮಿಶ್ರಣಗಳಿಂದ ದೊರೆಯುವುದಿಲ್ಲ.

ii) ನಮ್ಮ ಕಣ್ಣೆದುರಿಗೆ ಮಿಶ್ರಣವು ಸಿದ್ಧವಾಗುವುದರಿಂದ, ಮಿಶ್ರಣದಲ್ಲಿರುವ ಗೊಬ್ಬರಗಳು ಮತ್ತು ಪೋಷಕಗಳ ಪ್ರಮಾಣದ ಬಗ್ಗೆ ಸಂದೇಹವಿರುವುದಿಲ್ಲ.

iii) ಮಾರುಕಟ್ಟೆಯಲ್ಲಿಯ ಮಿಶ್ರಣಕ್ಕಿಂತ ಕಡಿಮೆ ಬೆಲೆಯಲ್ಲಿ ಮಿಶ್ರಣವನ್ನು ಮನೆಯಲ್ಲಿ ಮಾಡಿಕೊಳ್ಳಲು ಸಾಧ್ಯವಿದೆ.

) ಅನಾನುಕೂಲತೆಗಳು

i) ಮಾರುಕಟ್ಟೆಯಲ್ಲಿ ಯಂತ್ರದಿಂದ ಮಿಶ್ರಮಾಡಿದ ಮಿಶ್ರಣದಷ್ಟು ಮನೆಯಲ್ಲಿ ಮಾಡಿದ ಮಿಶ್ರಣವು ಏಕ ರೂಪವಾಗಿರುವುದಿಲ್ಲ. ಮಿಶ್ರಣದ ಭೌತಿಕ ರೂಪವೂ ಅಷ್ಟು ಉತ್ತಮವಾಗಿರುವುದಿಲ್ಲ.

ii) ಮಿಶ್ರಣವನ್ನು ತಯಾರಿಸಲು ನಮಗೆ ಬೇಕೆನಿಸಿದ ರಾಸಾಯನಿಕ ಗೊಬ್ಬರಗಳು ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವುದಿಲ್ಲ.

iii) ವಿವಿಧ ರಾಸಾಯನಿಕ ಗೊಬ್ಬರಗಳ ಗುಣಧರ್ಮಗಳು ಮತ್ತು ಸರಿಯಾದ ಮಿಶ್ರಣವನ್ನು ಸಿದ್ಧಪಡಿಸಲು ಇರಬೇಕಾದ ತಾಂತ್ರಿಕ ಪರಿಜ್ಞಾನದ ಕೊರತೆ ಇರಬಹುದು.

ರಾಸಾಯನಿಕ ಗೊಬ್ಬರಗಳ ಪರಸ್ಪರ ಹೊಂದಾಣಿಕೆ : ರಾಸಾಯನಿಕ ಗೊಬ್ಬರಗಳ ಮಿಶ್ರನವನ್ನು ತಯಾರಿಸುವಾಗ ಬಳಸಬೇಕಾದ ಗೊಬ್ಬರಗಳು ಪರಸ್ಪರ ಹೊಂದಿಕೊಳ್ಳುವಂತಿರಬೇಕು. ಮಿಶ್ರಣವನ್ನು ತಯಾರಿಸುವಾಗ ಮತ್ತು ತಯಾರಿಸಿದ ನಂತರ ಅವುಗಳಲ್ಲಿ ಯಾವುದೇ ರೀತಿಯ ಅನಪೇಕ್ಷಿತ ರಾಸಾಯನಿಕ ಅಥವಾ ಭೌತಿಕ ಕ್ರಿಯೆಗಳು ನಡೆಯುವಂತಿರಬಾರದು. ಮಿಶ್ರಣವನ್ನು ತಯಾರಿಸಲು ಬಳಸುವ ಗೊಬ್ಬರಗಳು ಪರಸ್ಪರ ಹೊಂದಿಕೊಳ್ಳಬಲ್ಲವೇ ಎಂಬುವುದನ್ನು ತಿಳಿಯಲು ಚಿತ್ರ ೧೧ನ್ನು ಬಳಸಬಹುದು. 

ಚಿತ್ರ ೧೧ . ರಾಸಾಯನಿಕ ಗೊಬ್ಬರಗಳ ಪರಸ್ಪರ ಹೊಂದಾಣಿಕೆಯ ಸೂಚನಾ ಪಟ್ಟಿ

 ಯಾವುದೇ ಎರಡು ರಾಸಾಯನಿಕ ಗೊಬ್ಬರಗಳನ್ನು ಮಿಶ್ರಮಾಡಬಹುದೇ ಅಥವಾ ಮಾಡಬಾರದೆ ಎಂಬುವುದನ್ನು ಚಿತ್ರ ೧೧ರ ಸಹಾಯದಿಂದ ತಿಳಿದುಕೊಳ್ಳಲು ಕೆಳಗಿನ ಉದಾಹರಣೆಗಳು ಸಹಾಯವನ್ನೀಯುತ್ತವೆ.

೧) ಅಮೋನಿಯಂ ಸಲ್ಫೇಟ್ ಗೊಬ್ಬರವನ್ನು ಕ್ಯಾಲ್ಸಿಯಂ ಕಾರ್ಬೊನೇಟ್‌ದ ಸಂಗಡ ಮಿಶ್ರ ಮಾಡಬಹುದೇ ಎಂದು ತಿಳಿಯಬೇಕಾಗಿದೆ ಎನ್ನೋಣ.

ಚಿತ್ರದ ಮೂರನೆಯಸಾಲಿನೊಂದಿಗೆ ಎಡದಿಂದ ಬಲಕ್ಕೆ ಸಾಗಿ ೧೨ನೆಯ ಕಾಲಂನಲ್ಲಿ ತೋರಿಸಿದ ಕ್ಯಾಲ್ಸಿಯಂ ಕಾರ್ಬೊನೇಟ್ ಮುಟ್ಟಿದಾಗ ಇಲ್ಲಿ X ಈ ಗುರುತು ಸಿಗುತ್ತದೆ. ಈ ಎರಡು ಗೊಬ್ಬರಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲವೆಂದು ಇದರ ಅರ್ಥ. ಆದ್ದರಿಂದ, ಇವೆರಡನ್ನು ಮಿಶ್ರಮಾಡಬಾರದು.

೨) ಮ್ಯುರಿಯೇಟ್ ಆಫ್ ಪೊಟ್ಯಾಶ್ ಗೊಬ್ಬರವನ್ನು ಡಿ.ಎ.ಪಿ.ಯೊಡನೆ ಮಿಶ್ರಮಾಡಬಹುದೇ ಎಂದು ಅರಿಯಬೇಕೆಂದು ಕಲ್ಪನೆ ಮಾಡೋಣ

ಒಂದನೆಯ ಸಾಲಿನಲ್ಲಿ ಬಲ ದಿಕ್ಕಿನಲ್ಲಿ ಸಾಗುತ್ತ ೧೦ನೆಯ ಕಾಲಂ ತಲುಪಬೇಕು. ಅಲ್ಲಿ ಯಾವುದೇ ಗುರುತು ಇಲ್ಲ. ಈಗೊಬ್ಬರಗಳನ್ನು ಮಿಶ್ರಮಾಡಬಹುದು.

ಇದಲ್ಲದೇ ಕೆಳಗಿನ ಕೆಲವು ಸಾಮಾನ್ಯ ನಿಯಿಮಗಳನ್ನು ನೆನಪಿನಲ್ಲಿಡಬೇಕು.

i) ಅಮೋನಿಯಂ ರೂಪದಲ್ಲಿ ಸಾರಜನಕವಿರುವ ಗೊಬ್ಬರಗಳನ್ನು ಕ್ಷಾರಯುತ ಗೊಬ್ಬರಗಳಾದ ಬೇಸಿಕ್ ಸ್ಲ್ಯಾಗ್, ಶಿಲಾರಂಜಕ, ಸುಣ್ಣ ಇತ್ಯಾದಿಗಳೊಡನೆ ಮಿಶ್ರ ಮಾಡಬಾರದು. ಒಂದೊಮ್ಮೆ ಮಿಶ್ರಮಾಡಿದರೆ ಸಾರಜನಕವು ಅಮೋನಿಯಾ ರೂಪದಲ್ಲಿ ಹೊರ ಬಂದು ವಾಯು ಮಂಡಲವನ್ನು ಸೇರುತ್ತದೆ.

ii) ನೀರಿನಲ್ಲಿ ಕರಗುವ ರೂಪದಲ್ಲಿ ರಂಜಕವಿರುವ ಸಿಂಗಲ್ ಸೂಪರ ಫಾಸ್ಫೇಟ್, ಟ್ರಿಪಲ್ ಸೂಪರ ಫಾಸ್ಪೇಟ್, ಅಮೋನಿಯಂ ಫಾಸ್ಪೇಟ್ ಇತ್ಯಾದಿ ಗೊಬ್ಬರಗಳನ್ನು ಸುಣ್ಣದೊಡನೆ ಇಲ್ಲವೇ ಸುಣ್ಣವಿರುವ ಗೊಬ್ಬರಗಳೊಡನೆ ಮಿಶ್ರಮಾಡಬಾರದು. ಮಿಶ್ರಮಾಡಿದರೆ ರಂಜಕವು ನೀರಿನಲ್ಲಿ ಕರಗದ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ.

 • ಹವೆಯಿಂದ ಆರ್ದ್ರತೆಯನ್ನು ಹೀರಿಕೊಳ್ಳುವ ಗೊಬ್ಬರಗಳನ್ನು ಇತರೆ ಗೊಬ್ಬರಗಳೊಡನೆ ಮಿಶ್ರಮಾಡಿಟ್ಟರೆ ಇಡೀ ಮಿಶ್ರಣವೇ ಗಂಟಾಗಬಹುದು, ಇಲ್ಲವೇ ಗಟ್ಟಿಯಾಗಬಹುದು. ಆದ್ದರಿಂದ ಇಂತಹ ಗೊಬ್ಬರಗಳನ್ನು ಉಪಯೋಗಿಸುವುದಕ್ಕಿಂತ ಸ್ವಲ್ಪ ಮೊದಲು ಮಿಶ್ರ ಮಾಡಿ ಬಳಸಬೇಕು.
 • ಆಮ್ಲದ ಅಂಶವು ಉಳಿದಿರುವ ರಂಜಕ ಗೊಬ್ಬರಗಳನ್ನು, ನೈಟ್ರೇಟ್ ಇಲ್ಲವೇ ಕ್ಲೋರೈಡ್ ಇರುವ ಗೊಬ್ಬರಗಳೊಡನೆ ಮಿಶ್ರಮಾಡಬಾರದು. ಮಿಶ್ರಮಾಡಿದರೆ ನೈಟ್ರಿಕ್ ಆಮ್ಲ ಇಲ್ಲವೇ ಹರಿತ ಪೀತಾಮ್ಲದಂತಹ ಆಮ್ಲಗಳು ನಿರ್ಮಾಣಗೊಂಡು ತುಂಬಿಟ್ಟ ಚೀಲವನ್ನು ನಾಶಮಾಡಬಹುದು.
 • ರಂಜಕ ಮತ್ತು ಸತುವಿನ ಗೊಬ್ಬರಗಳನ್ನು ಮಿಶ್ರ ಮಾಡಬಾರದು.

ಮಿಶ್ರಣಕ್ಕೆ ಬೇಕಾಗುವ ರಾಸಾಯನಿಕ ಗೊಬ್ಬರಗಳನ್ನು ಲೆಕ್ಕ ಮಾಡುವ ವಿಧಾನ : ಮೊಟ್ಟ ಮೊದಲು, ತಯಾರಿಸಬೇಕೆಂದಿರುವ ಮಿಶ್ರಣದ ಪ್ರಮಾಣ ಮತ್ತು ಅದರ ಮಟ್ಟವನ್ನು ನಿರ್ಧರಿಸಬೇಕು. ಅನಂತರ ಈ ಮಿಶ್ರಣಕ್ಕೆ ಉಪಯೋಗಿಸಬೇಕೆಂದಿರುವ ರಾಸಾಯನಿಕ ಗೊಬ್ಬರಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಕೊನೆಯ ಹಂತದಲ್ಲಿ ಪ್ರತಿಯೊಂದು ಗೊಬ್ಬರಗಳ ಪ್ರಮಾಣವನ್ನು ಲೆಕ್ಕ ಮಾಡಬೇಕು. ಕೆಳಗೆ ತಿಳಿಸಿದ ಉದಾಹರಣೆಗಳಿಂದ ವಿವಿಧ ಹಂತಗಳು ಸ್ಪಷ್ಟವಾಗುತ್ತವೆ :

i) ತಯಾರಿಸಬೇಕೆಂದಿರುವ ಮಿಶ್ರಣದ ಪ್ರಮಾಣ : ೨ ಟನ್ನುಗಳು (೨೦೦೦ ಕಿ.ಗ್ರಾಂ.)

ii) ಅಪೇಕ್ಷಿತ ಪೋಷಕಗಳ ಮಟ್ಟ ೨೦ – ೧೦ – ೨೦.

iii) ಉಪಯೋಗಿಸಬೇಕೆಂದಿರುವ ರಾಸಾಯನಿಕ ಗೊಬ್ಬರಗಳು :

* ಯೂರಿಯಾ * ಟ್ರಿಪಲ್ ಸೂಪರ್ ಫಾಸ್ಪೇಟ್ * ಮ್ಯೂರಿಯೇಟ್ ಆಫ್ ಪೊಟ್ಯಾಶ್

iv)  ಈ ಗೊಬ್ಬರಗಳು ಪರಸ್ಪರ ಹೊಂದಾಣಿಕೆಯಾಗುತ್ತವೆಯೇ ಎಂಬುವುದನ್ನು ನೋಡಬೇಕು. ಈ ಉದಾಹರಣೆಯಲ್ಲಿ ಮೂರು ಗೊಬ್ಬರಗಳು ಪರಸ್ಪರ ಹೊಂದಾಣಿಕೆಯಾಗುತ್ತದೆಯಾದರೂ ಮಿಶ್ರಣವನ್ನು ಕೂಡಲೇ ಬಳಸಬೇಕು ಎಂದು ಚಿತ್ರ ೧೧ ರಿಂದ ಗೊತ್ತಾಗುತ್ತದೆ.

v)  ಪ್ರತಿಯೊಂದು ಗೊಬ್ಬರದ ಪ್ರಮಾಣವನ್ನು ಲೆಕ್ಕ ಮಾಢುವ ವಿಧಾನ. ಇದಕ್ಕಾಗಿ ಕೆಳಗಿನ ಸೂತ್ರವನ್ನು ಬಳಸಬಹುದು.

ಅಂದರೆ ೨೦೦೦ ಕಿ.ಗ್ರಾಂ. ಮಿಶ್ರಣಕ್ಕೆ (೨೦೦೦ – ೧೯೯೦.೧ = ೯.೯) ೯.೯ ಕಿ.ಗ್ರಾಂ. ಕಡಮೆ ಬೀಳುತ್ತದೆ. ಮೇಲಿನ ೧೯೯೦.೧ ಕಿ.ಗ್ರಾಂ. ಮಿಶ್ರಣಕ್ಕೆ ೯.೯ ಕಿ.ಗ್ರಾಂ. ತೂಕದ ಗಾತ್ರವನ್ನು ಸರಿಪಡಿಸುವ ವಸ್ತುವನ್ನು ಸೇರಿಸಿದರೆ ೨೦ – ೧೦ – ೨೦ರ ಮಟ್ಟದ ೨೦೦೦ ಕಿ.ಗ್ರಾಂ. (೨ ಟನ್) ಮಿಶ್ರಣಕ್ಕೆ ಸಾಮಗ್ರಿಗಳನ್ನು ತಯಾರಿಸಿದಂತಾಗುತ್ತದೆ. ಈ ಗಾತ್ರವನ್ನು ಸರಿಪಡಿಸುವ ವಸ್ತುವಿನಲ್ಲಿ ಸಾರಜನಕ, ರಂಜಕ ಅಥವಾ ಪೋಟ್ಯಾಸಿಯಂ ಇರಬಾರದು ಮತ್ತು ಅದರಿಂದ ಮಿಶ್ರಣಕ್ಕೆ ಯಾವುದೇ ರೀತಿಯ ಅನಾನುಕೂಲವಾಗಬಾರದು. ಮೊದಲು ಮರಳನ್ನು ಬಳಸುತ್ತಿದ್ದರು. ಇತ್ತೀಚೆಗೆ ಕ್ಯಾಲ್ಸಿಯಂ ಕಾರ್ಬೊನೇಟಿನ ಪುಡಿಯನ್ನು ಉಪಯೋಗಿಸುವುದುಂಟು.

ರಾಸಾಯನಿಕ ಗೊಬ್ಬರಗಳನ್ನು ಮಿಶ್ರ ಮಾಡುವ ವಿಧಾನಗಳು : ಮೇಲೆ ವಿವರಿಸಿದ ಲೆಕ್ಕಾಚಾರದ ಪ್ರಕಾರ ಗೊಬ್ಬರಗಳನ್ನು ಮತ್ತು ಗಾತ್ರವನ್ನು ಸರಿಪಡಿಸಲು ಅವಶ್ಯವಿರುವ ವಸ್ತುವನ್ನು ತೂಕ ಮಾಡಿಕೊಂಡು, ಗಟ್ಟಿ ನೆಲದ ಮೇಲೆ ಪದರು ಪದರುಗಳಾಗಿ ಹರಡಬೇಕು. ಸನಿಕೆಯ ಸಹಾಯದಿಂದ ಎಲ್ಲ ವಸ್ತುಗಳೂ ಒಂದಾಗಿ ಸೇರಿಕೊಳ್ಳುವಂತೆ ಕಲಸಬೇಕು.

ಮಾನವ ಚಾಲಿತ ಅಥವಾ ಯಂತ್ರ ಚಾಲಿತ ಮಿಶ್ರಣ ಯಂತ್ರವನ್ನು ಉಪಯೋಗಿಸಿ ಮಿಶ್ರಣವು ಏಕ ರೂಪವಾಗುವಂತೆ ಮಾಡಬಹುದು. ಗೃಹ ನಿಮಾಣಕ್ಕಾಗಿ ಉಪಯೋಗಿಸುವ ಸಿಮೆಂಟ್ ಕಾಂಕ್ರೀಟ್ ಮಿಶ್ರಮಾಡುವ ಸಲಕರಣೆಯನ್ನು ಈ ಕೆಲಸಕ್ಕೆ ಬಳಸಬಹುದು.

ವಿವಿಧ ಬೆಳೆಗಳಿಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳ ಮಿಶ್ರಣವನ್ನು ಲೆಕ್ಕ ಮಾಡುವ ವಿಧಾನ : ಶಿಫಾರಸ್ಸು ಮಾಡಿದ ಪೋಷಕಗಳ ಆಧಾರದ ಮೇಲೆ ರೈತನು ಬೆಳೆಯಬೇಕೆಂದಿರುವ ಬೆಳೆಯ ಅಥವಾ ಬೆಳೆಗಳ ಭೂ ಪ್ರದೆಶಕ್ಕೆ ಬೇಕಾಗುವ ವಿವಿಧ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಹಂಗಾಮಿಗಿಂತ ಮೊದಲೆಲೆಕ್ಕ ಮಾಡಿಕೊಂಡರಿಬೇಕಾಗುತ್ತದೆ.

ಉದಾ : ನಾಲ್ಕು ಹೆಕ್ಟೇರು ಪ್ರದೇಶದಲ್ಲಿ ಬೆಳೆಯಬೇಕೆಂದಿರುವ ಬತ್ತಕ್ಕೆ, ಪ್ರತಿ ಹೆಕ್ಟೇರಿಗೆ ೧೦೦ ಕಿ.ಗ್ರಾಂ. ಸಾರಜನಕ ೫೦ ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ್ ಮತ್ತು ೫೦ ಕಿ.ಗ್ರಾಂ. ಪೊಟ್ಯಾಶ್ ಪೋಷಕಗಳನ್ನು ಒದಗಿಸಬೇಕಾಗಿದೆ ಎಂದುಕೊಳ್ಳೋಣ.

ಈ ಪೋಷಕಗಳನ್ನು ಯೂರಿಯಾ, ಡೈ ಅಮೋನಿಯಂ ಫಾಸ್ಪೇಟ್ ಮತ್ತು ಮ್ಯೂರಿಯೇಟ್ ಆಫ್ ಪೊಟ್ಯಾಶ್ ಇವುಗಳ ಮೂಲಕ ಪೂರೈಸುವುದಾದರೆ ಪ್ರತಿಯೊಂದು ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ಕೆಳಗೆ ತಿಳಿಸಿದಂತೆ ಲೆಕ್ಕ ಮಾಡಬಹುದು.

i) ನಾಲ್ಕು ಹೆಕ್ಟೇರು ಪ್ರದೇಶಕ್ಕೆ ಬೇಕಾಗುವ ಪೋಷಕಗಳ ಪ್ರಮಾಣವನ್ನು ನಿರ್ಧರಿಸಬೇಕು.

ಪ್ರತಿ ಹೆಕ್ಟೇರಿಗೆ

(ಕಿಗ್ರಾಂ)

ನಾಲ್ಕು ಹೆಕ್ಟೇರುಗಳಿಗೆ (ಕಿ.ಗ್ರಾಂ)

ಅ. ಸಾರಜನಕ

100

100×4=400

ಆ. ರಂಜಕದ ಪೆಂಟಾಕ್ಸೈಡ್

50

50×4=200

ಇ. ಪೊಟ್ಯಾಶ್

50

50×4=200

ii)  ಈಪೋಷಕಗಳನ್ನು ಒದಗಿಸಲು ಬೇಕಾಗುವ ರಾಸಾಯನಿಕ ಗೊಬ್ಬರಗಳನ್ನು ಲೆಕ್ಕ ಮಾಡಬೇಕು. ಮೇಲೆ ತಿಳಿಸಿದ ಮೂರು ಗೊಬ್ಬರಗಳಲ್ಲಿ ಡೈ ಅಮೋನಿಯಂ ಫಾಸ್ಪೇಟ್, ಇದು, ಸಾರಜನಕದ ಮತ್ತು ರಂಜಕ ಈ ಎರಡೂ ಪೋಷಕಗಳನ್ನು ಒದಗಿಸುವುದರಿಂದ ಆ ಗೊಬ್ಬರದ ಪ್ರಮಾಣವನ್ನು ಮೊದಲು ಲೆಕ್ಕ ಮಾಡಬೇಕು.

 • ನಾಲ್ಕು ಹೆಕ್ಟೇರು ಪ್ರದೇಶಕ್ಕೆ ಬೇಕಾಗುವ ೨೦೦ ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ್ ನ್ನು ಪೂರೈಸಲು ಬೇಕಾಗುವ ಡೈ ಅಮೋನಿಯಂ ಫಾಸ್ಪೇಟ ನ್ನು ಕೆಳಗಿನಂತೆ ಲೆಕ್ಕ ಮಾಡಬೇಕು.

200 x 100 / 46 =434.7 ಕಿ.ಗ್ರಾಂ.

ಅಂದರೆ, ಅಂದಾಜು 535 ಕಿ.ಗ್ರಾಂ ಬೇಕಾಗುತ್ತದೆ.

ಒಟ್ಟು ೪೩೫ ಕಿ.ಗ್ರಾಂ. ಡಿ.ಎ.ಪಿಯಿಂದ ೪ ಹೆಕ್ಟೇರು ಭೂ ಪ್ರದೇಶಕ್ಕೆ ಬೇಕಾಗುವ ೨೦೦ ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ್ನ ಪೂರೈಕೆಯಾಗುತ್ತದೆಯಲ್ಲದೇ ಕೆಳಗೆ ತೋರಿಸಿದಂತೆ ೭೮ ಕಿ.ಗ್ರಾಂ. ಸಾರಜನಕದ ಪೂರೈಕೆಯು ಆಗುತ್ತದೆ.

435 x 18 / 100  78 ಕಿ.ಗ್ರಾಂ. ಸಾರಜನಕ

ನಾಲ್ಕು ಹೆಕ್ಟೇರುಗಳಿಗೆ ೪೦೦ ಕಿ.ಗ್ರಾಂ. ಸಾರಜನಕವು ಬೇಕು. ಅದರಲ್ಲಿ ೭೮ ಕಿ.ಗ್ರಾಂ. ಸಾರಜನಕವು ಡಿ.ಎ.ಪಿ.ಯಿಂದ ದೊರೆಯುವುದರಿಂದ , ೪೦೦ – ೭೮ = ೩೨೨ ಕಿ.ಗ್ರಾಂ. ಸಾರಜನಕವನ್ನು ಯೂರಿಯಾದ ಮೂಲಕ ಪೂರೈಸಬೇಕು.

 • ಮೇಲೆ ವಿವರಿಸಿದಂತೆ ೩೨೨ ಕಿ.ಗ್ರಾಂ. ಸಾರಜನಕವನ್ನು ಯೂರಿಯಾದ ಮೂಲಕ ಪೂರೈಸಬೇಕಾಗಿದೆ. ಬೇಕಾಗುವ ಯೂರಿಯಾ ಗೊಬ್ಬರವನ್ನು ಕೆಳಗಿನಂತೆ ಲೆಕ್ಕ ಮಾಡಬೇಕು.

ಬೇಕಾಗುವ ಯೂರಿಯಾದ ಪ್ರಮಾಣ (ಕಿ.ಗ್ರಾಂ.) =

322 x 100 / 45 —-> 715.5 —-> 716

 • ನಾಲ್ಕು ಹೆಕ್ಟೇರು ಭೂ ಪ್ರದೇಶಕ್ಕೆ ಬೇಕಾಗುವ ೨೦೦ ಕಿ.ಗ್ರಾಂ. ಪೋಟ್ಯಾಶನ್ನು ಪೂರೈಸಲು ಬೇಕಾಗುವ ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಕಿ.ಗ್ರಾಂ)= 100 x 200 / 60 =333 ಕಿ.ಗ್ರಾಂ.

ಆದ್ದರಿಂದ ನಾಲ್ಕು ಹೆಕ್ಟೇರು ಪ್ರದೇಶಕ್ಕೆ ಬೇಕಾಗುವ ಗೊಬ್ಬರಗಳು ಕೆಳಗಿನಂತಿವೆ :

ಯೂರಿಯಾ  = ೭೧೬ ಕಿ.ಗ್ರಾಂ.

ಡೈ ಅಮೋನಿಯಂ ಫಾಸ್ಪೇಟ್ = ೪೩೫ ಕಿ.ಗ್ರಾಂ.

ಮ್ಯೂರಿಯೇಟ್ ಆಫ್ ಪೊಟ್ಯಾಶ್ = ೧೩೩ ಕಿ.ಗ್ರಾಂ.

ಚಿತ್ರ ೧೧ರ ಪ್ರಕಾರ, ಈ ಮಿಶ್ರಣವನ್ನು ತಯಾರಿಸಿದ ನಂತರ ಆದಷ್ಟು ಬೇಗ ಮಣ್ಣಿಗೆ ಪೂರೈಸಬೇಕು.

ನೇರ ಗೊಬ್ಬರ, ಸಂಕೀರ್ಣ ಗೊಬ್ಬರ ಮತ್ತು ಮಿಶ್ರ ಗೊಬ್ಬರಗಳ ಬೆಲೆಯ ತುಲನೆ: ಕೋಷ್ಟಕ ೨೬ರಲ್ಲಿ೯ ಕೆಲವು ಗೊಬ್ಬರಗಳ ಬೆಲೆಗಳನ್ನು ಕೊಡಲಾಗಿದೆ. ಆದರೆ ಪ್ರತಿ ಗೊಬ್ಬರದಲ್ಲಿರುವ ಪೋಷಕಗಳು ಮತ್ತು ಅವುಗಳ ಪ್ರಮಾಣ ಇವುಗಳಲ್ಲಿ ಅಂತರವಿರುವುದರಿಂದ ಈ ಗೊಬ್ಬರಗಳ ಬೆಲೆಗಳನ್ನು ನೇರವಾಗಿ ತುಲನೆ ಮಾಡಲು ಬರುವುದಿಲ್ಲ. ಆದ್ದರಿಂದ ಬೆಲೆಯ ದೃಷ್ಟಿಯಿಂದ ಯಾವ ಗೊಬ್ಬರದ ಬೆಲೆ ಅಗ್ಗ ಮತ್ತು ಯಾವ ಗೊಬ್ಬರದ ಬೆಲೆ ಅಧಿಕ ಬೆಲೆಯ ದೃಷ್ಟಿಯಿಂದ ಯಾವ ಗೊಬ್ಬರದ ಬೆಲೆ ಅಗ್ಗ ಮತ್ತು ಯಾವ ಗೊಬ್ಬರದ ಬೆಲೆ ಅಧಿಕ ಎಂಬುಉದನ್ನು ಕಂಡುಹಿಡಿಯಲು ನಿರ್ಧಿಷ್ಟ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಈ ಬಗ್ಗೆ ಕೆಳಗಿನ ಉದಾಹರಣೆಯನ್ನು ಗಮನಿಸಬಹುದು.

ಒಂದು ಹೆಕ್ಟೇರ್‌ ಬತ್ತದ ಬೆಳೆಗೆ ೧೦೦ ಕಿ.ಗ್ರಾಂ. ಸಾರಜನಕ, ೫೦ ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ್ ಮತ್ತು ೫೦ ಕಿ.ಗ್ರಾಂ. ಪೊಟ್ಯಾಶ್ ಒದಗಿಸಬೇಕಾಗಿದೆ. ನೇರ ಗೊಬ್ಬರಗಳಾದ ಯೂರಿಯಾ, ಡಿ.ಎ.ಪಿ. ಮತ್ತು ಮ್ಯುರಿಯೆಟ್ ಆಫ್ ಪೊಟ್ಯಾಶ್ ಗಳ ಮೂಲಕ ಪೋಷಕಗಳನ್ನು ಪೂರೈಸಿದರೆ ಖರ್ಚು ಕಡಮೆಯಾದೀತೇ ಅಥವಾ ಸಂಯುಕ್ತ ಗೊಬ್ಬರ (ಉದಾಹರಣೆಗೆ ೧೫ – ೧೫ – ೧೫ )ಗಳನ್ನು ಪೂರೈಸುವುದರಿಂದಲೇ ಎಂಬುವುದನ್ನು ಕಂಡುಹಿಡಿಯಬೇಕಾಗಿದೆ. ಇದಕ್ಕೆ ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.

೪ ಹೆಕ್ಟೇರ್ ಬತ್ತದ ಬೆಳೆಗೆ ಪೂರೈಸಬೇಕಾದ ಯೂರಿಯಾ, ಡಿ.ಎ.ಪಿ. ಮತ್ತು ಮ್ಯೂರಿಯೇಟ್ ಆಫ್ ಪೊಟ್ಯಾಶ್ ಗಳ ಪ್ರಮಾಣವನ್ನು ಈಗಾಗಲೆ ತಿಳಿಸಲಾಗಿದೆ. ಈ ಅಂಕಿಗಳನ್ನು ೪ ರಿಂದ ಭಾಗಿಸಿದರೆ ಪ್ರತಿ ಹೆಕ್ಟೇರಿಗೆ ಬೇಕಾಗುವ ಗೊಬ್ಬರಗಳ ಪ್ರಮಾಣವು ಗೊತ್ತಾಗುತ್ತದೆ. ಮುಂದಿನ ವಿವರಗಳನ್ನು ಗಮನಿಸಿರಿ.

ಅ. ಸಂ.

ಗೊಬ್ಬರದ ಹೆಸರು

ಒಂದು ಹೆಕ್ಟೇರ್ ಪ್ರದೇಶಕ್ಕೆ ಬೇಕಾಗುವ ಗೊಬ್ಬರದ ಪ್ರಮಾಣ (ಕಿ.ಗ್ರಾಂ.)

ಗೊಬ್ಬರದ ಬೆಲೆ ಪ್ರತಿ ಕ್ವಿಂಟಾಲ್‌ಗೆ ರೂ.ಗಳಲ್ಲಿ

ಹಣದ ಮೊತ್ತ ರೂ.ಗಳಲ್ಲಿ

೧. ಯೂರಿಯಾ ೧೭೮.೭೫ ೪೭೪ ೮೪೭.೨೮
೨. ಡಿ.ಎ.ಪಿ. ೧೦೮.೭೫ ೯೨೦ ೧೦೦೦.೫೦
೩. ಮ್ಯುರಿಯೇಟ್ ಆಫ್ ಪೊಟ್ಯಾಶ್ ೮೩.೨೫ ೪೪೦ ೩೬೬.೩೦
ಒಟ್ಟು ೨೨೧೪.೦೮

ಮೇಲೆ ಹೇಳಿದ ರಾಸಾಯನಿಕ ಗೊಬ್ಬರಗಳ ಬದಲು ೧೫ – ೧೫ – ೧೫ ಸಂಯುಕ್ತ ಗೊಬ್ಬರ ಮತ್ತು ಕಡಮೆ ಬೆಲೆಗೆ ಸಿಗುವ ಸಾರಜನಕವನ್ನು ಪೂರೈಸಲು ಯೂರಿಯಾ ಗೊಬ್ಬರವನ್ನು ಪೂರೈಸಿದರೆ ಬೇಕಾಗುವ ಗೊಬ್ಬರಗಳ ಪ್ರಮಾಣಗಳು ಕೆಳಗಿನಂತಿವೆ.

ಬತ್ತಕ್ಕೆ ಬೇಕಾಗುವ ೫೦ ಗ್ರಾಂ. ಕಿ.ಗ್ರಾಂ. ರಂಜಕದ ಪೆಂಟಾಕ್ಸೈಡ್ ಮತ್ತು ೫೦ ಕಿ.ಗ್ರಾಂ. ಪೋಟ್ಯಾಶ ಪೋಷಕಗಳನ್ನು ಒದಗಿಸಲು 50 x 100 / 15  = 333 ಕಿ.ಗ್ರಾಂ.

ಸಂಯುಕ್ತ ಗೊಬ್ಬರವು ಬೇಕಾಗುತ್ತದೆ. ಇದರಿಂದ ಬತ್ತಕ್ಕೆ ೫೦ ಕಿ.ಗ್ರಾಂ. ಸಾರಜನಕವೂ ದೊರೆಯುತ್ತದೆ. ಕಡಮೆ ಬೀಳುವ ೧೦೦ – ೫೦ ಅಂದರೆ ೫೦ ಕಿ

.ಗ್ರಾಂ. ಸಾರಜನಕವನ್ನು ಯೂರಿಯಾದ ಮೂಲಕ ಒದಗಿಸಬಹುದು.

ಅ. ಸಂ.

ಗೊಬ್ಬರದ ಹೆಸರು

ಹೆಕ್ಟೇರಿಗೆ ಬೇಕಾಗುವ ಗೊಬ್ಬರದ ಪ್ರಮಾಣ (ಕಿ.ಗ್ರಾಂ)

ಪ್ರತಿ ಕ್ವಿಂಟಾಲ್ ಬೆಲೆ ರೂ.

ಹಣದ ಒಟ್ಟು ಮೊತ್ತ ರೂ.

೧. ಸಂಯುಕ್ತ ಗೊಬ್ಬರ ೧೫-೧೫-೧೫

೩೩೩

೬೮೪

೨೨೭೭.೭೨

೨. ಯೂರಿಯಾ (೫೦ ಕಿ.ಗ್ರಾಂ) ಸಾರಜನಕವನ್ನು ಪೂರೈಸಲು

೧೧೧

೪೭೪

೫೨೬.೧೧

ಒಟ್ಟು

೨೮೦೩.೮೬

ಮೇಲಿನ ಅಂಕಿ ಸಂಖ್ಯೆಗಳಿಂದ

 • ಸಂಯುಕ್ತ ಗೊಬ್ಬರ (೧೫ – ೧೫ – ೧೫) ಮತ್ತು ಯೂರಿಯಾವನ್ನು ಬಳಸಿದಾಗ ಪ್ರತಿ ಹೆಕ್ಟೇರಿಗೆ ಬೇಕಾಗುವ ಹಣ ರೂ.೨೮೦೩.೮೬
 • ನೇರ ಗೊಬ್ಬರಗಳನ್ನು ಪೂರೈಸಿದಾಗ ಪ್ರತಿ ಹೆಕ್ಟೇರಿಗೆ ಬೇಕಾಗುವ ಹಣ ರೂ.೨೨೧೪.೦೮
 • ಉಳಿತಾಯವಾಗುವ ಹಣ ರೂ. ೦೫೮೯.೭೮

ನೇರ ಗೊಬ್ಬರಗಳನ್ನು ಬಳಸುವುದರಿಂದ ಒಂದು ಹೆಕ್ಟೇರಿಗೆ ಸುಮಾರು ೫೯೦ ರೂ.ಗಳ ಉಳಿತಾಯವಾಗುತ್ತದೆ.

ಮೇಲಿನ ವಿಧಾನದಿಂದ ಇತರೆ ಬಗೆಯ ನೇರ ಮತ್ತು ಸಂಯುಕ್ತ ಗೊಬ್ಬರಗಳಿಗೆ ಖರ್ಚಾಗುವ ಹಣದ ಮೊತ್ತವನ್ನು ಲೆಕ್ಕ ಮಾಡಬಹುದು.

ಸೂಚನೆ :ಮೇಲಿನ ಲೆಕ್ಕಾಚಾರವನ್ನು ಮಾಡುವಾಗ ನೇರ ಗೊಬ್ಬರಗಳಲ್ಲಿ ಮತ್ತು ಸಂಯುಕ್ತ ಗೊಬ್ಬರಗಳಲ್ಲಿ ಇರುವ ಪೋಷಕಗಳು ಸಮಾನ ರೂಪಗಳಲ್ಲಿ ಇವೆಯೆಂದು ಪರಿಗಣಿಸಲಾಗಿದೆ. ಆದರೆ ಈ ಗ್ರಹಿಕೆಯು ಪೂರ್ತಿಯಾಗಿ ಸರಿ ಇರಲಿಕ್ಕಿಲ್ಲ. ಉದಾಹರಣೆಗೆ, ಮೇಲೆ ಉಪಯೋಗಿಸಿದ ರಾಸಾಯನಿಕ ಗೊಬ್ಬರಗಳಲ್ಲಿ, ಸಾರಜನಕವು ಅಮೋನಿಯಂ ಮತ್ತು ಅಮೈಡ್ ರೂಪಗಳಲ್ಲಿದ್ದರೆ, ಸಂಯುಕ್ತ ಗೊಬ್ಬರದಲ್ಲಿ ಆ ಪೋಷಕವು ಅಮೋನಿಯಂ ಮತ್ತು ನೈಟ್ರೇಟ್ ರೂಪಗಳಲ್ಲಿದೆ. ಇತರೆ ಬೆಲೆಗಳಲ್ಲಿ ಇದರಿಂದ ವಿಶೇಷ ಅಂತರವಾಗದಿದ್ದರೂ, ಬತ್ತದ ಬೆಳೆಗೆ ನೈಟ್ರೇಟ್ ರೂಪದ ಸಾರಜನಕವು ಸಲ್ಲದು ಮತ್ತು ಇದರಂತೆಯೇ, ರಂಜಕವು ಡಿ.ಎ.ಪಿ.ಯಲ್ಲಿ ನೀರಿನಲ್ಲಿ ಕರಗುವ ರೂಪದಲ್ಲಿದೆಯಾದರೆ, ಸಂಯುಕ್ತ ಗೊಬ್ಬರಗಳಲ್ಲಿದೆ. ಇದರಿಂದ ಬತ್ತದ ಬೆಳೆಗೆ ಗಣನೀಯ ಅಂತರವಾಗಲಾರದಾದರೂ, ಇತರ ಕೆಲವು ಬೆಳೆಗಳಲ್ಲಿ ಅಂತರವುಂಟಾಗಬಹುದು.