ಗೊಬ್ಬರದತಯಾರಿಕೆ

. ಮಲಮೂತ್ರಗಳ ಸಂಗ್ರಹ : ಮಲಮೂತ್ರಗಳನ್ನು ಸರಿಯಾಗಿ ಸಂಗ್ರಹಿಸುವ ಕಾರ್ಯವು ಬಹು ಮುಖ್ಯವಾದುದೆನ್ನಬಹುದು. ಈ ದಿಸೆಯಲ್ಲಿ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕ.

i) ಕೊಟ್ಟಿಗೆಯ ನೆಲವನ್ನು ಕಲ್ಲು ಹಾಸಿಗೆಯಿಂದ ತಯಾರಿಸಬೇಕು. ಇಲ್ಲವೇ ಸಿಮೆಂಟ್ ಕಾಂಕ್ರೀಟ್ ನಿಂದ ನಿರ್ಮಿಸಿ, ಸಿಮೆಂಟಿನ ಗಿಲಾಯವನ್ನು ಮಾಡುವಾಗ ಗೆರೆಗಳನ್ನು ನಿರ್ಮಿಸಿ ದನಕರುಗಳ ಕಾಲುಗಳು ಜಾರದಂತೆ ಮಾಡಬೇಕು. ಕೊಟ್ಟಿಗೆಯ ಕೆಳಭಾಗದಲ್ಲಿ ಹರಿಗಾಲುವೆಯನ್ನು ನಿರ್ಮಿಸಿ, ಮೂತ್ರವು ಹರಿದು ಗುಂಡಿಯೊಂದರಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು.

ii) ದನಕರುಗಳ ಕಾಲುಗಳ ಕೆಳಗೆ ಮೇವಿಗೆ ಉಪಯೋಗಿಸಲು ಬಾರದ ಹುಲ್ಲು, ದರಕಲು (ಒಣಗಿದ ಎಲೆ) ಅಥವಾ ದನಕರುಗಳಿಗೆ ಅನಾನುಕೂಲವನ್ನುಂಟು ಮಾಡದ ಸಾವಯವ ಪದಾರ್ಥಗಳನ್ನು ಹಾಸಬೇಕು.

iii) ಮೂತ್ರದಲ್ಲಿ ಇರುವ ಯೂರಿಯಾ ಎಂಬ ರಾಸಾಯನಿಕ ವಸ್ತು ಯೂರಿಯೆಸ್ ಎಂಬ ಇನ್ನೊಂದು ರಾಸಾಯನಿಕದ ಸಾನಿಧ್ಯದಲ್ಲಿ ಕೆಳಗೆ ತಿಳಿಸಿದ ರೀತಿಯಲ್ಲಿ ಅಮೋನಿಯಾ ರೂಫಕ್ಕೆ ಪರಿವರ್ತನೆಯನ್ನು ಹೊಂದಿ ವಾತಾವರಣದಲ್ಲಿ ಲೀನವಾಗುತ್ತದೆ:

ಯೂರಿಯಾ + ನೀರು ಯೂರಿಯೇಸ್> ಅಮೋನಿಯಂ ಕಾರ್ಬೊನೇಟ್

CO(NH2)2 + 2H2O Urese >       (NH4)2 CO3

ಅಮೋನಿಯಂ ಕಾರ್ಬೊನೇಟ್    ಅಮೋನಿಯಾ + ಇಂಗಾದ ಡೈ ಆಕ್ಸೈಡ್ + ನೀರು

(NH4)2 CO3 —->  2NH3 + CO2 + H2O

ಸಿಂಗಲ್ ಸೂಪರ್ ಫಾಸ್ಫೇಟನ್ನು ಕೊಟ್ಟಿಗೆಯಲ್ಲಿ ತೆಳುವಾಗಿ ಹರಡಿದರೆ (ಪ್ರತಿ ಆಕಳು ಅಥವಾ ಎಮ್ಮೆಗೆ ಸುಮಾರು ೦.೫ ಗ್ರಾಂನಷ್ಟು) ಮೇಲೆ ತೊರಿಸಿದ ರಾಸಾಯನಿಕ ಕ್ರಿಯೆಗೆ ತಡೆಯುಂಟಾಗುತ್ತದೆ.

ಮೋನೋಕ್ಯಾಲ್ಸಿಯಂಫಾಸ್ಫೇಟ್ (ನೀರಿನಲ್ಲಿ ಕರಗುತ್ತದೆ + ಕ್ಯಾಲ್ಸಿಯಂ ಸಲ್ಫೇಟ್  + ಅಮೋನಿಯಂ ನೀರಿನಲ್ಲಿ ಕರಗದ ಕಾರ್ಬೋನೇಟ್ —-> ಟ್ರೈಕ್ಯಾಲ್ಸಿಯಂ ಫಾಸ್ಪೆಟ್

ಸಿಂಗಲ್ ಸೂಪರ ಫಾಸ್ಫೇಟ್‌ನಲ್ಲಿರುವ ವಸ್ತು + ಅಮೋನಿಯಂ ಸಲ್ಫೇಟ್  + ಇಂಗಾಲದ ಡೈ ಆಕ್ಸೈಡ್ + ನೀರು

Ca(H2PO4)2+2CaSO4+2(NH4)2 CO3 —-> Ca3(PO4)2 + 2(NH4)2SO4 + 2CO2 + 2H2O

ಈ ಸಂಧರ್ಭದಲ್ಲಿ ಕೆಳಗಿನ ಸಂಗತಿಗಳನ್ನು ತಿಳಿದಿರುವುದು ಉತ್ತಮ:

 • ಪ್ರಾಣಿಗಳ ಮೂತ್ರವು ನೆಲವನ್ನು ಸ್ಪರ್ಶಿಸುವಲ್ಲಿ ಸೂಪರ್ ಫಾಸ್ಫೇಟನ್ನು ಹಾಕುವುದು ಅನುಕೂಲ. ಪ್ರಾಣಿಗಳ ಚರ್ಮಕ್ಕೆ ಅದು ತಗಲದಿರುವುದೇ ಉತ್ತಮ.
 • ಸೂಪರ ಫಾಸ್ಫೇಟನ್ನು ಬಳಸುವುದರಿಂದ ಮೂತ್ರದಲ್ಲಿಯೆ ಸಾರಜನಕವು ಅಮೋನಿಯಂ ರೂಪದಲ್ಲಿ ನಷ್ಟವಾಗುವುದು ತಪ್ಪುವುದಲ್ಲದೇ ಗೊಬ್ಬರದಲ್ಲಿಯ ರಂಜಕದ ಪ್ರಮಾಣವು ಅಧಿಕಗೊಳ್ಳುತ್ತದೆ.
 • ಸೂಪರ್ ಫಾಸ್ಫೇಟನ್ನು ಬಳಸುವುದರಿಂದ ರಂಜಕವು ನೀರಿನಲ್ಲಿ ಕರಗದ ಟ್ರೈಕ್ಯಾಲ್ಸಿಯಂ ರೂಪಕ್ಕೆ ಪರಿವರ್ತನೆ ಹೊಂದುತ್ತದೆಯಾದರೂ ಅದು ಸಾವಯವ ವಸ್ತುವಿನ ಸಂಪರ್ಕದಲ್ಲಿರುವುದರಿಂದ ಸಸ್ಯಗಳು ಈ ರಂಜಕದ ಉಪಯೋಗವನ್ನು ಮಾಡಿಕೊಳ್ಳಬಲ್ಲವು.

iv) ಗುಂಡಿಯಲ್ಲಿ ಸಂಗ್ರಹವದ ಮೂತ್ರದ ಮೇಲ್ಬಾಗದಿಂದ, ಸಾರಜನಕವು ಅಮೋನಿಯಾ ರೂಪದಲ್ಲಿ ಹೊರಹೋಗುತ್ತದೆ. ಇದನ್ನು ತಡೆಯಲು ಗುಂಡಿಗೆ ಕೆಲವು ಹನಿ ಡಿಸೇಲ್ ಹಾಕಬೇಕು.

v) ಗುಂಡಿಯಲ್ಲಿ ಸಂಗ್ರಹವಾದ ಮೂತ್ರವನ್ನು ಪ್ರತಿ ದಿನ ಹೊರತೆಗೆದು ಗೊಬ್ಬರದ ಗುಂಡಿಯಲ್ಲಿ ಸಾವಯವ ಪದಾರ್ಥದ ಮೇಲೆ ಸಿಂಪಡಿಸಬೇಕು.

. ಗೊಬ್ಬರ ಗುಂಡಿಯನ್ನು ತುಂಬುವ ವಿಧಾನ :

 •  ಇಡೀ ಗುಂಡಿಯನ್ನು ತುಂಬಲು ಕೆಲವು ತಿಂಗಳುಗಳೇ ಬೇಕಾಗುವುದರಿಂದ, ಉದ್ಧದಲ್ಲಿ ಮೊದಲಿನ ಸುಮಾರು ಒಂದು ಮೀಟರಿನಷ್ಟು ಭಾಗವನ್ನು ಆರಿಸಿಕೊಂಡು, ಅದನ್ನು ತುಂಬಲು ಪ್ರಾರಂಭಿಸಬೇಕು. ಅನುಕೂಲತೆಗೆ ಗುಂಡಿಗೆ ಅಡ್ಡಲಾಗಿ, ತಟ್ಟಿಯನ್ನೋ ಅಥವಾ ಇತರೆ ತಡೆಗಳನ್ನೋ ಇಡಬೇಕು.
 • ದನಕರುಗಳು ಮಲಗುವಲ್ಲಿ ಹಾಸಿದ ಹುಲ್ಲು, ಕಸಕಡ್ಡಿ ಇತ್ಯಾದಿ ಸಾವಯವ ವಸ್ತುಗಳನ್ನು ಮತ್ತು ಸಗಣಿಯನ್ನು ಸರಿಯಾಗಿ ಮಿಶ್ರಮಾಡಿ ಮೇಲೆ ಸೂಚಿಸಿದಂತೆ ಆರಿಸಿಕೊಂಡು ಒಂದು ಮೀಟರ್ ಸ್ಥಳದಲ್ಲಿ ಪಸರಿಸಬೇಕು.
 • ಸುಮಾರು ೩೦ ಸೆಂ.ಮೀ.ನಷ್ಟು ಎತ್ತರಕ್ಕೆ ತುಂಬಿದ ನಂತರ, ಅದರ ಮೇಲೆ ಸುಮಾರು ೧.೫ ಸೆಂ.ಮೀ. ದಪ್ಪ ಪುಡಿಮಣ್ಣನ್ನು ಹರಡಬೇಕು. ಇದಕ್ಕೆ ಮೊದಲು ಮೂತ್ರದ ಗುಂಡಿಯಲ್ಲಿ ಸಂಗ್ರಹವಾದ ಮೂತ್ರವನ್ನು ಸಿಂಪಡಿಸಬೇಕು.
 • ಸಾವಯವ ಪದಾರ್ಥಗಳು ಕಳಿಯುವಾಗ ಕೆಲವು ಸಾವಯವ ಆಮ್ಲಗಳ ನಿರ್ಮಾಣವಾಗುತ್ತವೆ. ಇದರಿಂದ ಬ್ಯಾಕ್ಟೀರಿಯಾಗಳ ಚಟುವಟಿಕೆಗಳಿಗೆ ತೊಂದರೆಯುಂಟಾಗುತ್ತದೆ. ಇದನ್ನು ನಿವಾರಿಸಲು ಮಣ್ಣಿನ ಸ್ತರದ ಮೇಲೆ ಬೂದಿ ಇಲ್ಲವೇ ಸ್ವಲ್ಪ ಸುಣ್ಣವನ್ನು ಉದುರಿಸಬೇಕು.
 • ಮೇಲೆ ವಿವರಿಸಿದಂತೆ ಒಂದರ ಮೇಲೆ ಒಂದು ಪದರವನ್ನು ತುಂಬುತ್ತ, ನೆಲದಿಂದ ಸುಮಾರು ಅರ್ಧ ಮೀ. ಎತ್ತರದವರೆಗೆ ತುಂಬುವ ಕೆಲಸವನ್ನು ಮುಂದುವರೆಸಬೇಕು.
 • ನೆಲದ ಮೇಲಿರುವ ಭಾಗವನ್ನು ಗೋಲಾಕಾರವಾಗಿ ಮಾಡಿ ಅದರ ಮೇಲೆ ಸಗಣಿ ಮತ್ತು ಮಣ್ಣಿನ ರಾಡಿಯಿಂದ ಸಾರಿಸಬೇಕು.

ಮೊದಲಿನ ಒಂದು ಮೀಟರ್ ಉದ್ದದ ಜಾಗವನ್ನು ತುಂಬಿ ಮುಗಿಸಲು ೮ – ೧೦ ದಿನಗಳು ಬೇಕಾಗಬಹುದು. ದನಗಳ ಸಂಖ್ಯೆ ಮತ್ತು ಹಾಸಲು ಉಪಯೋಗಿಸಿದ ಸಾವಯವ ವಸ್ತುಗಳ ಪ್ರಮಾಣದ ಮೇಲಿಂದ ಈ ಸಮಯವು ಹೆಚ್ಚು ಕಡಮೆಯಾಗುತ್ತದೆ. ಇದಾಧ ನಂತರ ತಟ್ಟೆಯನ್ನು ಸರಿಸಿ ಮುಂದಿನ ಒಂದು ಮೀಟರಿನಷ್ಟು ಸ್ಥಳವನ್ನು ತುಂಬಲು ಆರಿಸಿಕೊಳ್ಳಬೇಕು. ಮತ್ತು ಮೇಲೆ ವಿವರಿಸಿದಂತೆ ತುಂಬಿ ಮುಗಿಸಬೇಕು.

ಒಂದು ಗುಂಡಿಯನ್ನು ತುಂಬಲು ಸುಮಾರು ಮೂರು ತಿಂಗಳು ಸಮಯ ಬೇಕಾಗಬಹುದು. ಆ ಗುಂಡಿಯನ್ನು ಹಾಗೆಯೇ ಇರಗೊಟ್ಟು ಹೊಸ ಗುಂಡಿಯನ್ನು ತುಂಬಲು ಪ್ರಾರಂಭಿಸಬೇಕು. ಎರಡನೆಯ ಗುಂಡಿಯನ್ನು ತುಂಬಿ ಮುಗಿಸುವುದರೊಳಗೆ ಮೊದಲ ಗುಂಡಿಯಲ್ಲಿ ಗೊಬ್ಬರವು ಸಾಮಾನ್ಯವಾಗಿ ಸಿದ್ಧವಾಗಿರು‌ತ್ತದೆ. ಅದರೊಳಗಿನ ಗೊಬ್ಬರವನ್ನು ಹೊರತೆಗೆದು ಆ ಗುಂಡಿಯನ್ನು ತುಂಬಲು ಪುನಃ ಉಪಯೋಗಿಸಬಹುದು ಇಲ್ಲವೆ ಮೂರನೆಯ ಗುಂಡಿಯನ್ನು ಇದಕ್ಕಾಗಿ ಬಳಸಬಹುದು.

ನಾಲ್ಕೈದು ದನಗಳಿರುವ ರೈತನಿಗೆ ಸಗಣಿ ಗೊಬ್ಬರವನ್ನು ತಯಾರಿಸಲು ಎರಡು ಗುಂಡಿಗಳು ಸಾಕು. ಇವುಗಳಿಂದ ವರ್ಷಕ್ಕೆ ೫ ರಿಂದ ೬ ಟನ್ನು (೧೦ ರಿಂದ ೧೨ ಗಾಡಿ) ಗೊಬ್ಬರವು ಸಿದ್ಧವಾಗುತ್ತದೆ.

. ಗೊಬ್ಬರದಗುಂಡಿಯಲ್ಲಿಆಗುವಬದಲಾವಣೆಗಳು

ಗುಂಡಿಯನ್ನು ತುಂಬಿದ ನಂತರ ಅಲ್ಲಿ ಹಲವು ಬಗೆಯ ಜೈವಿಕ ಕ್ರಿಯೆಗಳು ನಡೆಯುತ್ತವೆ. ಪ್ರಮುಖವಾದವುಗಳು ಕೆಳಗಿನಂತಿವೆ:

 • ಆಮ್ಲಜಕವಿರುವಲ್ಲಿ ಮಾತ್ರ ತಮ್ಮ ಕಾರ್ಯವನ್ನು ನಿರ್ವಹಿಸಬಲ್ಲ ಸೂಕ್ಷ್ಮ ಜೀವಿಗಳು ಮೊಟ್ಟ ಮೊದಲು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸುತ್ತವೆ. ಇದರ ಪರಿಣಾಮವಾಗಿ ಗುಂಡಿಯಲ್ಲಿರುವ ಸಾವಯವ ಪದಾರ್ಥಗಳಲ್ಲಿ ತೀವ್ರ ಪರಿವರ್ತನೆಯಾಗಲು ಆರಂಭವಾಗುತ್ತದೆ.
 • ಸೂಕ್ಷ್ಮ ಜೀವಿಗಳು ಸಾವಯವ ಇಂಗಾಲವನ್ನು ತಮ್ಮ ಶಕ್ತಿಗೆ ಮೂಲವೆಂದು ಬಳಸಿಕೊಳ್ಳುತ್ತವೆ. ಇಂಗಾಲವು ಉತ್ಕರ್ಷಗೊಂಡು ಇಂಗಾಲದ ಡೈ ಆಕ್ಸೈಡ್ ಆಗಿ ಹೊರಬರುತ್ತದೆ.
 •  ಸೂಕ್ಷ್ಮ ಜೀವಿಗಳ ಉಸಿರಾಟದಿಂದ ಉಷ್ಣತೆಯು ಅಧಿಕವಾಗುತ್ತದೆ.
 • ಗುಂಡಿಯಲ್ಲಿ ಆಮ್ಲಜನಕದ ಪ್ರಮಾಣವು ಕಡಮೆಯಾದಂತೆ ಆಮ್ಲಜನಕ ರಹಿತ ವಾತಾವರಣದಲ್ಲಿ ಕಾರ್ಯವನ್ನು ನಡೆಸುವ ಸೂಕ್ಷ್ಮ ಜೀವಿಗಳು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸುತ್ತವೆ.
 • ಗುಂಡಿಯಲ್ಲಿರುವ ವಸ್ತುಗಳ ಗಾತ್ರವು ಕಡಮೆಯಾದಂತೆ, ವಸ್ತುಗಳು ಕೆಳಗೆ ಕುಸಿಯತೊಡಗುತ್ತವೆ.
 • ಗೊಬ್ಬರದ ಗುಂಡಿಯಲ್ಲಿರುವ ಸಾವಯವ ವಸ್ತುಗಳ ಸಾರಜನಕ : ಇಂಗಾಲದ ಅನುಪಾತವು ಕಡಮೆಯಾಗಿ, ಗೊಬ್ಬರವು ಪೂರ್ತಿಯಾಗಿ ಸಿದ್ಧವಾದಾಗ ೧:೧೫ ರಿಂದ ೧:೧೬ ರ ಸನಿಹಕ್ಕೆ ಬಂದಿರುತ್ತದೆ. ಈ ಸಮಯದಲ್ಲಿ ಸೂಕ್ಷ್ಮ ಜೀವಿಗಳ ಚಟುವಟಿಕೆಗಳು ಕುಗ್ಗಿ, ಉಷ್ಣತಾಮಾನವು ಯಥಾಸ್ಥಿತಿಗೆ ಬಂದಿರುತ್ತದೆ.

ಉತ್ತಮಗೊಬ್ಬರವುಸಿದ್ಧವಾಗಲುಇರಬೇಕಾದಅವಶ್ಯಕತೆಗಳು
ಗುಂಡಿಯಲ್ಲಿ ತುಂಬಿದ ಸಾವಯವ ಪದಾರ್ಥಗಳು ಸರಿಯಾಗಿ ಕಳಿತು ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರವು ಸಿದ್ಧವಾಗಬೇಕಾದರೆ ಮುಂದಿನ ಅವಶ್ಯಕತೆಗಳು ಇರಬೇಕಾಗುತ್ತವೆ:

i)  ಸೂಕ್ಷ್ಮ ಜೀವಿಗಳಿಗೆ ಸೂಕ್ತವಾದ ಆಹಾರ : ಸಾವಯವ ಪದಾರ್ಥಗಳು ಕಳಿಯುವಂತೆ ಮಾಡುವ ಸೂಕ್ಷ್ಮ ಜೀವಿಗಳಿಗೆ ಅನುಕೂಲವಾಗುವಂತಹ ಆಹಾರವು ಇರುವಂತೆ ನೋಡಿಕೊಳ್ಳಬೇಕು. ಇವುಗಳ ಚಟುವಟಿಕೆಗೆ ಬೇಕಾಗುವ ಶಕ್ತಿಯ ಮೂಲವಾದ ಇಂಗಾಲವು ಅವಶ್ಯವಿರುವಂತೆ ಅವುಗಳ ದೇಹದ ಬೆಳವಣಿಗೆಗೆ ಅವಶ್ಯವಿರುವ ಇತರೆ ಪೋಷಕಗಳು ಅದರಲ್ಲಿಯೂ ಸಾರಜನಕವು ಪೂರೈಕೆಯಾಗಬೇಕು. ಗುಂಡಿಯಲ್ಲಿರುವ ಸಾವಯವ ಪದಾರ್ಥಗಳಲ್ಲಿ ಇಂಗಾಲದ ಪ್ರಮಾಣವೇ ಅಧಿಕವಾಗಿದ್ದಲ್ಲಿ ಅವು ಕಳಿತು ಗೊಬ್ಬರವಾಗಲು ಬಹಳ ಸಮಯ ಬೇಕಾಗುತ್ತದೆ. ಸಾವಯವ ಪದಾರ್ಥಗಳ ಸಾರಜನಕ ಮತ್ತು ಇಂಗಾಲ ಇವು ೧:೪೦ ಅನುಪಾತದಲ್ಲಿದ್ದರೆ ಕಳಿಯುವ ಕ್ರಿಯೆಯು ಅಪೇಕ್ಷಿತ ವೇಗದಲ್ಲಿ ಸಾಗುವುದಾಗಿ ಕಂಡುಬಂದಿದೆ. ಒಂದೊಮ್ಮೆ ಈ ಪ್ರಮಾಣವು ಇದಕ್ಕಿಂತ ವಿಶಾಲವಾಗಿದ್ದರೆ, ಸಸಾರಜನಕದ ಅಧಿಕವಿರುವ ವಸ್ತುಗಳನ್ನು ಮಿಶ್ರಮಾಡಿಯೇ ಗುಂಡಿಯನ್ನು ತುಂಬಬೇಕು.

ii) ಆರ್ದ್ರತೆ : ಸೂಕ್ಷ್ಮ ಜೀವಿಗಳ ಚಟುವಟಿಕೆಗೆ, ಸಾವಯವ ಪದಾರ್ಥಗಳಲ್ಲಿ ಆರ್ದ್ರತೆಯು ಸರಿಯಾದ ಪ್ರಮಾಣದಲ್ಲಿ ಇರಬೇಕು. ಸಾವಯವ ಪದಾರ್ಥಗಳ ಒಟ್ಟು ಒಣ ತೂಕದ ಶೇಕಡಾ ೫೦ ರಿಂದ ೬೦ ರಷ್ಟು ಆರ್ದ್ರತೆಯಿದ್ದರೆ ಉತ್ತಮ ಆರ್ದ್ರತೆಯು ಇದಕ್ಕಿಂತ ಕಡಮೆ ಇದ್ದರೆ ಅವಶ್ಯವಿರುವಷ್ಟು ನೀರನ್ನು ಸಿಂಪಡಿಸಬೇಕು. ಆರ್ದ್ರತೆಯು ಅಧಿಕವಾಗಿದ್ದರೆ ಕಡಮೆ ಆರ್ದ್ರತೆಯಿರುವ ಒಣ ಸಾವಯವ ಪದಾರ್ಥಗಳನ್ನು ಸೇರಿಸಿ ಸರಿಯಾದ ಪ್ರಮಾಣದಲ್ಲಿ ಹಸಿಯು ಇರುವಂತೆ ಮಾಡಬೇಕು.

iii) ಆಮ್ಲಜನಕ : ಈ ಮೊದಲೇ ಸೂಚಿಸಿದಂತೆ ಸಾವಯವ ವಸ್ತುಗಳು ಕಳಿತು ಉತ್ತಮ ಗೊಬ್ಬರವು ಸಿದ್ಧವಾಗಬೇಕಾದರೆ, ಆಮ್ಲಜನಕವಿರುವ ವಾತಾವರಣದಲ್ಲಿ ಜೀವಿಸುವ ಸೂಕ್ಷ್ಮ ಜೀವಿಗಳು ಮತ್ತು ಆಮ್ಲಜನಕ ರಹಿತ ವಾತಾವರಣದಲ್ಲಿ ಜೀವಿಸುವ ಸೂಕ್ಷ್ಮ ಜೀವಿಗಳೆರಡೂ ಕಾರ್ಯ ಪ್ರವೃತ್ತವಾಗಿರುತ್ತವೆ. ಆದ್ದರಿಂದ ಗುಂಡಿಯಲ್ಲಿ ಬೇಕಾಗುವಷ್ಟು ಪ್ರಮಾಣದಲ್ಲಿ ಆಮ್ಲಜನಕ ಇರುವಂತೆ ನೋಡಿಕೊಳ್ಳಬೇಕು. ಗೊಬ್ಬರದ ಗುಂಡಿಯನ್ನು ತುಂಬುವಾಗ ಸಾವಯವ ಪದಾರ್ಥಗಳಲ್ಲಿ ಬಹಳ ಪೊಳ್ಳು ಉಳಿಯುವಂತೆ ತುಂಬಬಾರದು. ಆದರೆ, ಆಮ್ಲಜನಕಕ್ಕೆ ಅಲ್ಲಿ ಆಸ್ಪದವೇ ಸಿಗದಂತೆ ಅತಿ ಗಟ್ಟಿಯಾಗುವಂತೆಯೂ ಮಾಡಬಾರದು.

iv) ಉಷ್ಣತೆ : ಕಳಿಯುವ ಕ್ರಿಯೆಯು ಮುಂದೆ ಸಾಗಿದಂತೆ ಸಾವಯವ ಪದಾರ್ಥದೊಳಗೆ ಉಷ್ಣತೆಯು ಏರತೊಡಗುತ್ತದೆ. ಸೂಕ್ಷ್ಮ ಜೀವಿಗಳ ಚಟುವಟಿಕೆಯು ಉನ್ನತ ಮಟ್ಟಕ್ಕೆ ಏರಿದಾಗ ಉಷ್ಣತಾಮಾನವು ೫೦ ಡಿಗ್ರಿಯಿಂದ ೬೦ ಡಿಗ್ರಿ ಸೆಲ್ಸಿಯೆಸ್ ಮುಟ್ಟುತ್ತದೆ. ಸಾಕಷ್ಟು ಆರ್ದ್ರತೆಯಿರುವಂತೆ ಮಾಡಿ ಸಾವಯವ ಪದಾರ್ಥಗಳನ್ನು ಮೆಲೆ ಸೂಚಿಸಿದಂತೆ ಸರಿಯಾಗಿ ತುಂಬಿದರೆ ಉಷ್ಣತಾಮಾನವು ತಾನಾಗಿಯೇ ಮೇಲೇರುತ್ತದೆ.

v) ಆಮ್ಲಕ್ಷಾರ ನಿರ್ದೆಶಕ : ಸಾವಯವ ಪದಾರ್ಥಗಳು ಕಳಿಯುತ್ತಿರುವಾಗ ಹಲವಾರು ಸಾವಯವ ಅಮ್ಲಗಳು ನಿರ್ಮಾಣವಾಗುತ್ತವೆ. ನಿರ್ಧಿಷ್ಟ ಪ್ರಮಾಣಕ್ಕಿಂತ ಆಮ್ಲತೆಯು ಹೆಚ್ಚಾಯಿತೆಂದರೆ ಸೂಕ್ಷ್ಮ ಜೀವಿಗಳ ಕಾರ್ಯ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಇದರ ನಿವಾರಹಣೆಗೆ ಕ್ಷಾರಯುತ ಪದಾರ್ಥವನ್ನು ಸಾವಯವ ಪರ್ದಾರ್ಥಗಳೊಡನೆ ಮಿಶ್ರಮಾಡಬೇಕು. ಬೂದಿಯ ಈ ಕೆಲಸವನ್ನು ಮಾಢಬಲ್ಲದು. ಬೂದಿಯು ಸಿಗದಿರುವಾಗ ಅದರ ಬದಲು ಸುಣ್ಣದ ಪುಡಿ ಇಲ್ಲವೇ ಸುಣ್ಣದ ಕಲ್ಲಿನ ಪುಡಿಯನ್ನು ಬಳಸಬಹುದು.

ಗೊಬ್ಬರವನ್ನುಸಂಗ್ರಹಿಸಿಟ್ಟ೨ಆಗಪೋಷಕಗಳನಷ್ಟ

ಗೊಬ್ಬರವು ಸಿದ್ಧವಾದ ನಂತರ ಅದನ್ನು ಗುಂಡಿಯಲ್ಲಿಯೇ ಇರಲು ಬಿಟ್ಟಾಗ ಅಥವಾ ಅದನ್ನು ಹೊರಗೆ ಸಂಗ್ರಹಿಸಿಟ್ಟಾಗ ಗೊಬ್ಬರದಲ್ಲಿರುವ ಕೆಲವು ಪೋಷಕಗಳು ನಷ್ಟವಾಗಬಹುದು. ಉದಾಹರಣೆಗೆ :

 • ಮಳೆಯು ದೊಡ್ಡ ಪ್ರಮಾಣದಲ್ಲಿ ಬಂದರೆ, ಗೊಬ್ಬರದಲ್ಲಿರುವ ಪೋಟ್ಯಾಸಿಯಂ ಮತ್ತು ನೈಟ್ರೇಟ್ ರೂಪದಲ್ಲಿರುವ ಸಾರಜನಕಗಳು ನೀರಿನೊಡನೆ ಬಸಿದು ಹೋಗಬಹುದು.
 • ಗೊಬ್ಬರವು ಒಣಗಿತೆಂದರೆ ಅದರಲ್ಲಿಯ ಅಮೋನಿಯಂ ರೂಪದಲ್ಲಿರುವ ಸಾರಜನಕವು ಅಮೋನಿಯಾ ರೂಪಕ್ಕೆ ಬದಲಾಗಿ ವಾಯು ಮಂಡಲವನ್ನು ಸೇರಬಹುದು.
 • ಗೊಬ್ಬರದಲ್ಲಿ ಅಧಿಕ ನೀರು ಸೇರಿಕೊಂಡಿತೆಂದರೆ, ಆಮ್ಲಜಕ ರಹಿತ ವಾತಾವರಣವು ನಿರ್ಮಾಣಗೊಂಡು ನೈಟ್ರೇಟ್ ರೂಪದಲ್ಲಿರುವ ಸಾರಜನಕವು ವಾಯು ರೂಪಕ್ಕೆ ಪರಿವರ್ತನೆಗೊಂಡು ಹವೆಯಲ್ಲಿ ಸೇರಿಕೊಳ್ಳಬಹುದು.

ಗೊಬ್ಬರದ ಗುಂಡಿಯಲ್ಲಿ ನೀರು ಸೇರಿಕೊಳ್ಳದಂತೆ ನೋಡಿಕೊಳ್ಳಬೇಕಲ್ಲದೇ ಗೊಬ್ಬರವನ್ನು ಗುಂಡಿಯ ಹೊರಗೆ ರಾಶಿ ಹಾಕುವ ಪ್ರಸಂಗವಿದ್ದಲ್ಲಿ ಅದು ಒಣಗಿದಂತೆ ಮಾಡಲು ಗೊಬ್ಬರದ ಮೇಲ್ಬಾಗವನ್ನು ೫ – ೬ ಸೆಂ.ಮೀ. ದಪ್ಪವಾಗುವಷ್ಟು ಪುಡಿ ಮಣ್ಣಿನಿಂದ ಮುಚ್ಚಬೇಕು.

ಉತ್ತಮಗೊಬ್ಬರದಲಕ್ಷಣಗಳು

ಸಿದ್ಧವಾದ ಗೊಬ್ಬರವನ್ನು ಗುಂಡಿಯಿಂದ ಹೊರತೆಗೆದಾಗ, ಮುಂದೆ ಬಳಸಿದ ಗುಣಧರ್ಮಗಳಿರುವ ಸಗಣಿ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಉತ್ತಮ ಗೊಬ್ಬರವೆಂದು ಪರಿಗಣಿಸಲಾಗುತ್ತದೆ :

i) ಗೊಬ್ಬರವನ್ನು ತಯಾರಿಸಲು ಬಳಸಿದ ಸಾವಯವ ವಸ್ತುಗಳು, ಗುರುತು ಸಿಗಲಾರದಷ್ಟು ಪೂರ್ತಿಯಾಗಿ ಕಳಿತಿರಬೇಕು.

ii) ಗೊಬ್ಬರಕ್ಕೆ ಕಪ್ಪು ಮಿಶ್ರೀತ ಕಂದು ಬಣ್ಣವಿರಬೇಕು. ಆಳವಾದ (ಅಚ್ಚ) ಕಪ್ಪು ಬಣ್ಣವಾಗಲೀ ಸೀಸದ ಬಣ್ಣವಾಗಲೀ ಇರಬಾರದು.

iii) ಗೊಬ್ಬರವು ಉಂಡೆ ಉಂಡೆಗಳಾಗಿ ಅಥವಾ ಧೂಳಿನಂತೆ ಇರಬಾರದು. ಮುಷ್ಟಿಯಲ್ಲಿ ಹಿಡಿದು ಒತ್ತಿದರೆ ಉಂಡೆಯಂತಾಗಿ, ಸ್ವಲ್ಪ ಒತ್ತಡದಿಂದಲೂ ಪುಡಿಯಾಗಿ ಕೆಳಗೆ ಉದುರುವಂತಿರಬೇಕು.

iv) ಗೊಬ್ಬರಕ್ಕೆ ಹೊಲಸು ವಾಸನೆಯಿರಬಾರದು.

v)  ಪೋಷಕಗಳು ನಿರೀಕ್ಷಿತ ಪ್ರಮಾಣದಲ್ಲಿರಬೇಕು. ಸಾಮಾನ್ಯವಾಗಿ, ಪ್ರತಿ ಕ್ವಿಂಟಾಲ ಹಸಿ ಗೊಬ್ಬರದಲ್ಲಿ ೫೦೦ ರಿಂದ ೭೫೦ ಗ್ರಾಂ ಸಾರಜನಕ, ೨೫೦ ಗ್ರಾಂ, ರಂಜಕದ ಪೆಂಟಾಕ್ಸೈಡ್ ಮತ್ತು ಒಂದು ಕಿ.ಗ್ರಾಂ. ಪೊಟ್ಯಾಶ್ ಇರುತ್ತದೆ.

ಕಾಂಪೋಸ್ಟ್ : ಹೊಲಗದ್ದೆಗಳಲ್ಲಿರುವ ಬೆಳೆಗಳ ಕೂಳೆ – ಕಸ – ಕಡ್ಡಿಗಳು, ಕಬ್ಬಿನ ರವದಿ (ಗರಿ) ಮತ್ತು ಇತರೆ ನಿರುಪಯೋಗಿ ಸಾವಯವ ವಸ್ತುಗಳನ್ನು ಬಳಸಿ ಉತ್ತಮ ಗೊಬ್ಬರವನ್ನು ತಯಾರಿಸಿದರೆ, ಸಾವಯವ ವಸ್ತುಗಳ ಸದುಪಯೋಗವನ್ನು ಪಡೆದುಕೊಂಡಾಂಗುತ್ತದೆ. ಇಂತಹ ಗೊಬ್ಬರಕ್ಕೆ ಕಸಕಡ್ಡಿ ಗೊಬ್ಬರ ಅಥವಾ ಕಾಂಪೋಸ್ಟ್ ಎಂದು ಹೆಸರು.

ಕಾಂಪೋಸ್ಟ್ತಯಾರಿಕೆಗೆಬೇಕಾಗುವಸಾಮಗ್ರಿಗಳು

i) ಸಾವಯವ ವಸ್ತುಗಳು: ಬೆಳೆಗಳ ಕೊಳೆಗಳು, ಕಸಕಡ್ಡಿಗಳೂ, ಕಬ್ಬಿನ ರವದಿ, ಸೇಂಗಾ ಕಾಯಿಅಯ ಸಿಪ್ಪೆ, ಗಿಡ – ಮರಗಳ ಎಲೆಗಳು, ಒಣಗಿದ ಎಲೆ (ದರಕು) ಇತ್ಯಾದಿ ಬೇರೆ ಉಪಯೋಗಕ್ಕೆ ಬಾರದ ಸಾವಯವ ವಸ್ತುಗಳು.

ii) ಕಳಿಯುವ ಕ್ರಿಯೆಯನ್ನು ಪ್ರಾರಂಭಿಸಲು ಬೇಕಾಗುವ ವಸ್ತುಗಳು : ಸಾವಯವ ವಸ್ತುಗಳು ಕಳಿಯಲು ಆರಂಭವಾಗಬೇಕಾದರೆ, ಸಗಣಿ, ಮೂತ್ರ, ಮಾನವನ ಮಲ, ಕಳಿತ ಸಗಣಿ ಗೊಬ್ಬರ, ಯೂರಿಯಾ ಇಲ್ಲವೇ ನೀರಿನಲ್ಲಿ ಕರಗುವ ರೂಪದಲ್ಲಿ ಸಾರಜನಕವಿರುವ ವಸ್ತುಗಳಲ್ಲಿ ಯಾವುದಾದರೂ ಒಂದು ಬೇಕು. ಈ ವಸ್ತುಗಳು ಸಣ್ಣ ಪ್ರಮಾಣದಲ್ಲಿದ್ದರೆ ಸಾಕುಕ.

iii) ನೀರು : ಒಟ್ಟು ಸಾವಯವ ಪದಾರ್ಥದ ಒಣ ತೂಕದ ಆಧಾರದ ಮೇಲೆ ಶೇಕಡಾ ೫೦ ರಿಂದ ೬೦ ರಷ್ಟು ತೇವಾಂಶ ಇರಬೇಕಾಗುತ್ತದೆ.

ಕಾಂಪೋಸ್ಟ್ತಯಾರಿಕೆಯಪ್ರಮುಖಪದ್ಧತಿಗಳು

) ಎಡ್ಕೋ ಪದ್ಧತಿ : ಇಂಗ್ಲೆಂಡಿನ ಹಚಿನ್‌ಸನ್‌ ಮತ್ತು ರಿಚರ್ಡ್ಸ ಎಂಬ ವಿಜ್ಞಾನಿಗಳೂ ೧೯೨೧ರಲ್ಲಿ ಈ ಪದ್ಧತಿಯನ್ನು ಪ್ರಾರಂಭಿಸಿದರು. ಸಾವಯವ ವಸ್ತುಗಳು ಕಳಿಯುವಂತೆ ಮಾಡಲು ಎಡ್ಕೋ ಎಂಬ ಹೆಸರಿನ ಮಿಶ್ರಣವನ್ನು ತಯಾರಿಸಿ ಬಳಸಿದರು. ಈ ಮಿಶ್ರಣದಲ್ಲಿ ಶೇಕಡಾ ೯ ರಷ