vii) ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ (CaNH4NO3) : ಅಮೋನಿಯಂ ನೈಟ್ರೇಟ್ನ ಸ್ಫೋಟಕ ಗುಣವನ್ನು ಹೋಗಲಾಡಿಸಿ ಹವೆಯೊಳಗಿನ ಅರ್ದ್ರತೆಯನ್ನು ಹೀರಿಕೊಳ್ಳುವ ಸ್ವಭಾವವನ್ನು ಕೆಲವು ಮಟ್ಟಿಗೆ ಕಡಮೆ ಮಾಡುವ ಉದ್ದೇಶದಿಂದ ಈ ಗೊಬ್ಬರದೊಡನೆ ಕ್ಯಾಲ್ಸಿಯಂ ಕಾರ್ಬೊನೇಟಿನ ಪುಡಿಯನ್ನು ಮಿಶ್ರಮಾಡಿ, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಗೊಬ್ಬರವನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಈ ಗೊಬ್ಬರವನ್ನು ಹೆಚ್ಚಾಗಿ ಆಮ್ಲ ಮಣ್ಣಿನಲ್ಲಿ ಬಳಸಲಾಗುತ್ತದೆ. ರೋರ್ಕೆಲಾ ಮತ್ತು ಗೊಬ್ಬರವನ್ನು ಹೆಚ್ಚಾಗಿ ಆಮ್ಲ ಮಣ್ಣಿನಲ್ಲಿ ಬಳಸಲಾಗುತ್ತದೆ. ರೂರ್ಕೆಲಾ ಮತ್ತು ಗೊಬ್ಬರವನ್ನು ಹೆಚ್ಚಾಗಿ ಆಮ್ಲ ಮಣ್ಣಿನಲ್ಲಿ ಬಳಸಲಾಗುತ್ತದೆ. ರೊರ್ಕೆಲಾಮತ್ತು ನಾಂಗಲ್ ಗಳಲ್ಲಿ ಈ ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ನ್ನು ತಯಾರಿಸಲಾಗುತ್ತದೆ.
ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟನ್ನು ಎರಡು ಬಗೆಗಳಲ್ಲಿ ತಯಾರಿಸಲಾಗುತ್ತದೆ. ಒಂದು ಬಗೆಯಲ್ಲಿ ಸಾರಜನಕದ ಪ್ರಮಾಣವು ಶೆ.೨೦.೫ ರಷ್ಟು ಆಗುವಷ್ಟು ಕ್ಯಾಲ್ಸಿಯಂ ಕಾರ್ಬೊನೇಟ್ದ ಪುಡಿಯನ್ನು ಮಿಶ್ರಮಾಡಲಾಗುತ್ತದೆ. ಇದರಲ್ಲಿ ಅಮೋನಿಯಂ ಅಮೋನಿಯಿಂ ನೈಟ್ರೇಟ್ ನಲ್ಲಿ, ಅಮೋನಿಯಂ ನೈಟ್ರೇಟ್ ನ ಪ್ರಮಾಣವು ಶೇ.೭೫ ರಷ್ಟು ಇದ್ದು, ಕ್ಯಾಲ್ಸಿಯಂ ಕಾರ್ಬೊನೇಟ್ ದ ಪ್ರಮಾಣವು ಕಡಮೆ ಇರುತ್ತದೆ. ಈ ಗೊಬ್ಬರದಲ್ಲಿ ಸಾರಜನಕದ ಪ್ರಮಾಣ ಶೇ.೨೬ ರಷ್ಟಿರುತ್ತದೆ.
ಗುಣಗಳು :
- ಮೇಲೆ ಸೂಚಿಸಿದಂತೆ ಕ್ಯಾಲ್ಸಿಯಂ ಕಾರ್ಬೊನೇಟ್ ಪುಡಿಯನ್ನು ಮಿಶ್ರ ಮಾಡುವುದರಿಂದ, ಅಮೋನಿಯಂ ನೈಟ್ರೇಟ್ನ ಸ್ಫೋಟಕದ ಗುಣವು ಇಲ್ಲದಂತಾಗುತ್ತದೆ. ಅಲ್ಲದೇ ಹವೆಯೊಳಗಿನ ಆರ್ದ್ರತೆಯನ್ನು ಹೀರಿಕೊಳ್ಳುವ ಸ್ವಭಾವವು ಸ್ವಲ್ಪ ಮಟ್ಟಿಗೆ ತಗ್ಗುತ್ತದೆ.
- ಈ ಗೊಬ್ಬರದಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದರಿಂದ ಇದನ್ನುಬಳಸಿದರೆ ಮಣ್ಣಿಗೆ ಆಮ್ಲತೆಯು ಅಧಿಕಗೊಳ್ಳುವುದಿಲ್ಲ.
- ಈ ಗೊಬ್ಬರದಲ್ಲಿ ಗುಳಿಗೆಗಳ ರೂಪದಲ್ಲಿ ತಯಾರಿಸುವುದರಿಂದ ಬಳಸಲು ಅನುಕೂಲಕರ.
- ಗೊಬ್ಬರದಲ್ಲಿರುವ ಅಮೋನಿಯಂ ನೈಟ್ರೇಟ್ ಅಂಶವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ.
- ಗೊಬ್ಬರದಲ್ಲಿರುವ ಸಾರಜನಕವು ಅಮೋನಿಯಂ ಮತ್ತು ನೈಟ್ರೇಟ್ ಇವೆರಡೂ ರೂಪಗಳಲ್ಲಿರುತ್ತದೆ. ಹೀಗಾಗಿ ಗೊಬ್ಬರವನ್ನು ಬೆಳೆಗೆ ಪೂರೈಸಿದೊಡನೆಯೇ ನೈಟ್ರೇಟ್ ರೂಪದ ಸಾರಜನಕವು ಬೆಳೆಗೆ ದೊರೆಯುತ್ತದೆ. ಅಮೋನಿಯಂ ರೂಪದ ಸಾರಜನಕವು ಕೆಲವು ದಿನಗಳಲ್ಲಿ ನೈಟ್ರೇಟ್ ರೂಪಕ್ಕೆ ಪರಿವರ್ತನೆ ಹೊಂದಿ ಸಾರಜನಕದ ಪೂರೈಕೆಯು ಮುಂದುವರೆಯುತ್ತದೆ.
ಅವಗುಣಗಳು :
- ಹವೆಯೊಳಗಿನ ಆರ್ದ್ರತೆಯನ್ನು ಹೀರಿಕೊಳ್ಳುವ ಅಮೋನಿಯಂ ನೈಟ್ರೇಟ್ ನ ಗುಣವು ಕೆಲವು ಮಟ್ಟಿಗೆ ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ನಲ್ಲಿಯೂ ಉಳಿದುಕೊಂಡಿರುವುದರಿಂದ ಒಮ್ಮೆ ಗೊಬ್ಬರದ ಚೀಲವನ್ನು ತೆರೆಯಿತೆಂದರೆ ಆ ದಿನವೇ ಚೀಲದೊಳಗಿರುವ ಎಲ್ಲ ಗೊಬ್ಬರವನ್ನು ಬಳಸಬೇಕಾಗುತ್ತದೆ. ಅದು ಸಾಧ್ಯವಾಗದಿದ್ದರೆ ಚೀಲವನ್ನು ಭದ್ರವಾಗಿ ಕಟ್ಟಿ, ಒಣ ಹವೆಯಿರುವ ಸ್ಥಳದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ.
- ಒಂದರ ಮೇಲೊಂದರಂತೆ ೮ – ೧೦ ಕ್ಕಿಂತಹೆಚ್ಚು ಚೀಲಗಳನ್ನು ಉಗ್ರಾಣದಲ್ಲಿ ಸಂಗ್ರಹಿಸಿಡಬಾರದು. ಇಲ್ಲವಾದರೆ ಅಧಿಕ ಭಾರತದಿಂದ ಕೆಳಗಿರುವ ಚೀಲದೊಳಗಿನ ಗೊಬ್ಬರವು ಗಟ್ಟಿಯಾಗಿ ಉಪಯೋಗಿಸಲು ತೊಂದರೆಯಾಗಬಹುದು.
viii) ಅಮೋನಿಯಂ ಸಲ್ಫೇಟ್ ನೈಟ್ರೇಟ್ : ಮೂರು ಭಾಗ ಅಮೋನಿಯಂ ಸಲ್ಫೇಟ್ ಮತ್ತು ಒಂದು ಭಾಗ ಅಮೋನಿಯಂ ನೈಟ್ರೇಟ್ ಇವುಗಳ ಮಿಶ್ರಣದಿಂದ ಅಮೋನಿಯಂ ಸಲ್ಫೇಟ್ ನೈಟ್ರೇಟ್ ಸಿದ್ಧವಾಗುತ್ತದೆ. ಇವೆರಡು ಗೊಬ್ಬರಗಳ ಬಿಸಿ ದ್ರಾವಣವನ್ನಾಗಲೀ, ಆರ್ದ್ರಮಾಢಿದ ಲವಣಗಳನ್ನಾಗಲೀ ಮಿಶ್ರಮಾಡಿ ಅಮೋನಿಯಂ ಸಲ್ಫೇಟ್ ನೈಟ್ರೇಟನ್ನು ತಯಾರಿಸಲಾಗುತ್ತದೆ.
ಅಮೋನಿಯಂ ಸಲ್ಫೇಟ್ ನೈಟ್ರೇಟ್ ಗೊಬ್ಬರದಲ್ಲಿ ಸಾರಜನಕದ ಪ್ರಮಾಣವು ಶೆ. ೨೬ ರಷ್ಟಿದೆ. ಇದರಲ್ಲಿಯ ಕಾಲು ಭಾಗವು (ಶೇ.೬.೫ ಸಾರಜನಕ) ನೈಟ್ರೇಟ್ ರೂಪದಲ್ಲಿಯೂ ಉಳಿದ ಮುಕ್ಕಾಲು ಭಾಗವು (ಶೇ.೧೯.೫ ಸಾರಜನಕ) ಅಮೋನಿಯಂ ರೂಪದಲ್ಲಿಯೂ ಇದೆ.
ಗುಣಗಳು :
- ಇದು ಗುಣಧರ್ಮಗಳಲ್ಲಿ ಅಮೋನಿಯಿಂ ಸಲ್ಫೇಟನ್ನು ಅಧಿಕವಾಗಿ ಹೋಲುತ್ತದೆ.
- ಈ ಗೊಬ್ಬರವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ.
- ಇದರಲ್ಲಿ ಸಾರಜನಕದ ಸ್ವಲ್ಪ ಭಾಗವು ನೈಟ್ರೇಟ್ ರೂಪಲದಲ್ಲಿಯೂ, ಉಳಿದ ಭಾಗವು ಅಮೋನಿಯಂ ರೂಪದಲ್ಲಿಯೂ ಇರುವುದರಿಂದ, ಸಾರಜನಕವು ನಿರಂತರವಾಗಿ, ಹೆಚ್ಚು ಸಮಯದವರೆಗೆ ಬೆಳೆಗೆ ಸಿಗುತ್ತಿರುತ್ತದೆ.
- ಈ ಗೊಬ್ಬರದ ಬಳಕೆಯಿಂದ ಮಣ್ಣು ಹುಳಿಯಾಗುತ್ತದೆಯಾದರೂ ಅಮೋನಿಯಂ ಸಲ್ಫೇಟ್ ನಷ್ಟು ಆಮ್ಲತೆಯನ್ನುಂಟು ಮಾಡುವುದಿಲ್ಲ. ಪ್ರತಿ ೧೦೦ ಕಿ.ಗ್ರಾಂ. ಆಮೋನಿಯಂ ಸಲ್ಫೇಟ್ ನೈಟ್ರೇಟನ್ನು ಹಾಕುವುದರಿಂದ ಮಣ್ಣಿನಲ್ಲಿ ಉಂಟಾಗುವ ಆಮ್ಲತೆಯನ್ನು ನಿವಾರಿಸಲು ೮೫ ಕಿ.ಗ್ರಾಂ. ನಷ್ಟು ಶುದ್ಧವಾದ ಕ್ಯಾಲ್ಸಿಯಂ ಕಾರ್ಬೊನೇಟಿನ ಪುಡಿಯು ಸಾಕಾಗುತ್ತದೆ.
ಅವಗುಣಗಳು :
- ಹವೆಯಿಂದ ಸ್ವಲ್ಪ ಮಟ್ಟಿಗೆ ಅರ್ದ್ರತೆಯನ್ನು ಹೀರಿಕೊಳ್ಳುತ್ತದೆ.
ix) ಕ್ಯಾಲ್ಸಿಯಂ ಸೈನಮೈಡ್ : ಕ್ಯಾಲ್ಸಿಯಂ ಸೈನಮೈಡ್ದ ಬಣ್ಣ ಕಪ್ಪು. ಇದರಲ್ಲಿ ಶೇ.೨೧ ರಷ್ಟು ಸಾರಜನಕವಿದೆ. ಯೂರೋಪ ಖಂಡದ ಕೆಲವು ದೇಶಗಳಲ್ಲಿ ಮತ್ತು ಅಮೇರಿಕ ದೆಶದಲ್ಲಿ ಕೆಲವೆಡೆ ಈ ಗೊಬ್ಬರಕ್ಕೆ ಬೇಡಿಕೆಯಿದೆ.
ಕ್ಯಾಲ್ಸಿಯಂ ಕಾರ್ಬೈಡ್ ನಲ್ಲಿ ಸಾರಜನಕದ ವಾಯುವನ್ನು ಹಾಯಿಸಿ, ಉಷ್ಣತೆಯನ್ನು ಏರಿಸಿದರೆ, ಕ್ಯಾಲ್ಸಿಯಂ ಸೈನಮೈಡನ್ನು ತಯಾರಿಸಬಹುದು.
ಕ್ಯಾಲ್ಸಿಯಂ ಕಾರ್ಬೈಡ್ + ಸಾರಜನಕ ವಾಯು → ಕ್ಯಾಲ್ಸಿಯಂ ಸೈನಮೈಡ್ +ಇಂಗಾಲ
CaC2+ N2 → CaCN2 + C
ಕ್ಯಾಲ್ಸಿಯಂ ಸೈನಾಮೈಡನ್ನು ಮಣ್ಣಿಗೆ ಪೂರೈಸಿದ ನಂತರ, ಕೆಳಗಿನ ಬದಲಾವಣೆಗಳು ನಡೆಯುತ್ತವೆ.
ಕ್ಯಾಲ್ಸಿಯಂ ಸೈನಾಮೈಡ್ + ನೀರು → ಕ್ಯಾಲ್ಸಿಯಂ ಹೈಡ್ರಾಕ್ಸೈಡ್ + ಕ್ಯಾಲ್ಸಿಯಂ ಹೈಡ್ರೋಜನ್ಸೈನಾಮೈಡ್
2CaCN2 + H2O → Ca (OH)2 + Ca(HCN)2
ಕ್ಯಾಲ್ಸಿಯಂ ಹೈಡ್ರೋಜನ್ ಸೈನಾಮೈಡ್ + ನೀರು → ಕ್ಯಾಲ್ಸಿಯಂ ಹೈಡ್ಟಾಕ್ಸೈಡ್ + ಹೈಡ್ರೋಜನ್ ಸೈನಾಮೈಡ್
Ca (HCN)2 + H2O → Ca (OH)2 + H2CN2
ಹೈಡ್ರೋಜನ್ ಸೈನಾಮೈಡ್ + ನೀರು → ಯೂರಿಯಾ
H2CN2 + H2O → CO (NH2)2
ಗುಣಗಳು :
- ಕ್ಯಾಲ್ಸಿಯಂ ಸೈನಮೈಡ್ ಮಣ್ಣಿನಲ್ಲಿರುವ ಆಮ್ಲತೆಯನ್ನು ಕಡಮೆ ಮಾಡುವುದರಿಂದ ಆಮ್ಲ ಮಣ್ಣಿಗೆ ಇದು ಪ್ರಯೋಜನಕಾರಿ.
- ಈ ರಾಸಾಯನಿಕವನ್ನು ಕಳೆನಾಶಕವೆಂದೂ ಬಳಸಬಹುದು.
ಅವಗುಣಗಳು :
- ಕ್ಯಾಲ್ಸಿಯಂ ಸೈನಾಮೈಡನ್ನು ಹವೆಗೆ ತೆರೆದಿಟ್ಟರೆ, ಹವೆಯೊಳಗಿನ ಆರ್ದ್ರತೆಯನ್ನು ಮತ್ತು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತದೆ.
- ಕ್ಯಾಲ್ಸಿಯಂ ಸೈನಾಮೈಡ್ ಇದು ಯೂರಿಯಾ ರೂಪಕ್ಕೆ ಪರಿವರ್ತನೆಯಾಗುವ ಪೂರ್ವದಲ್ಲಿ, ಮೊಳಕೆಯೊಡೆಯುತ್ತಿರುವ ಬೀಜಗಳು, ಎಳೆ ಸಸಿಗಳು ಮತ್ತು ಬೇರುಗಳು ಈ ರಾಸಾಯನಿಕದೊಡನೆ ಸಂಪರ್ಕವನ್ನು ಹೊಂದಿದರೆ ಅಪಾಯಕ್ಕೀಡಾಗುತ್ತವೆ. ಆದ್ದರಿಂದ, ಬಿತ್ತುವುದಕ್ಕಿಂತ ಸಾಕಷ್ಟು ಮೊದಲೇ ಕ್ಯಾಲ್ಸಿಯಂ ಸೈನಾಮೈಡನ್ನು ಮಣ್ಣಿಗೆ ಸೇರಿಸಬೇಕು.
- ಇದು ಮಣ್ಣಿನಲ್ಲಿರುವ ಕೆಲವು ಪ್ರಯೋಜನಕಾರಿ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ.
x) ಯೂರಿಯಾ ಯೂರಿಯಾದ ಇತಿಹಾಸ ಮತ್ತು ಇಂದಿನ ಸ್ಥಿತಿ : ಪ್ರಾಣಿಗಳ ಮೂತ್ರದಿಂದ ಯೂರಿಯಾ ಎಂಬ ರಾಸಾಯನಿಕ ದ್ರವ್ಯವನ್ನು ೧೭೭೩ರಲ್ಲಿ ಬೇರ್ಪಡಿಸಲಾಯಿತು. ಪ್ರಾಣಿಗಳಲ್ಲಿರುವ ಒಂದು ಜೈವಿಕ ಶಕ್ತಿಯಿಂದ, ಯೂರಿಯಾ ನಿರ್ಮಾಣಗೊಳ್ಳುತ್ತದೆಯೆಂದು ಮಾನವನು ಈ ರಾಸಾಯನಿಕ ದ್ರವ್ಯವನ್ನು, ನಿರವಯವ ವಸ್ತುಗಳಾದ ಅಮೋನಿಯಾ ಮತ್ತು ಇಂಗಾಲದ ಡೈ ಆಕ್ಸೈಡಗಳಿಂದ ಅಮೋನಿಯಂ ಸೈನೇಟ್ ಎಂಬ ಸಂಯುಕ್ತವನ್ನು ಸಿದ್ದಪಡಿಸಿ, ಈ ಸಂಯುಕ್ತವನ್ನು ಬಿಸಿ ಮಾಡಿದಾಗ ಯೂರಿಯಾ ಹೊರಬರುತ್ತದೆ ಎಂಬುವುದನ್ನು ೧೮೨೮ರಲ್ಲಿ ಜರ್ಮನಿಯ ರಸಾಯನ ಶಾಸ್ತ್ರಜ್ಞರಾದ ವ್ಹೋಲರ್ ಎಂಬುವರು ತೋರಿಸಿಕೊಟ್ಟರು. ಜರ್ಮನಿ, ಕೆನಡಾ ಮತ್ತು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ನಡೆಸಿದ ಸಂಶೋಧನೆಗಳಿಂದ, ಮಾರುಕಟ್ಟೆಗೆ ತರುವಷ್ಟು ಬೃಹತ್ ಪ್ರಮಾಣದಲ್ಲಿ ಯೂರಿಯಾವನ್ನು ಉತ್ಪಾದಿಸಲಾಯಿತು. ಈ ಮಹತ್ವದ ಕಾರ್ಯವು ೧೯೨೦ರಿಂದ ೧೯೩೨ರ ಮಧ್ಯದ ಸಮಯದಲ್ಲಿ ನಡೆಯಿತು. ಮೇಲೆ ತಿಳಿಸಿದಂತೆ, ಯೂರಿಯಾದ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಾದರೂ ಯೂರಿಯಾವನ್ನು ಕೃಷಿಯಲ್ಲಿ ಪ್ರಚುರಗೊಳಿಸಲು ಕೆಳಗೆ ಸೂಚಿಸಿದ ಕೆಲವು ತೊಡಕುಗಳಿದ್ದವು. ಅ. ಬಾಯ್ಯುರೇಟ್ನ ಪ್ರಮಾಣ : ಅಂದಿನ ದಿನಗಳಲ್ಲಿ ತಯಾರಿಸಿದ ಯೂರಿಯಾದಲ್ಲಿ, ಬಾಯ್ಯುರೇಟ್ ಎಂಬ ರಾಸಾಯನಿಕ ದ್ರವ್ಯವು ಉಳಿದುಕೊಳ್ಳುತ್ತಿತ್ತು. ಎರಡು ಯೂರಿಯಾ ಪರಮಾಣುಗಳನ್ನು NHನಿಂದ ಜೋಡಿಸಿದರೆ ಬಾಯ್ಯುರೇಟ್ (NH2 – CO – NH – CO – NH2) ನಿರ್ಮಾಣಗೊಳ್ಳುತ್ತದೆ. ಈ ದ್ರವ್ಯವು ಸಸಿಗಳಿಗೆ ಅಪಾಯಕಾರಿ. ಬಾಯ್ಯುರೇಟ್ನ ಪ್ರಮಾಣವು ಆಗ ತಾನೇ ತಯಾರಿಸಿದ ಯೂರಿಯಾದಲ್ಲಿ ಶೇಕಡಾ ೨ ಕ್ಕಿಂತ ಅಧಿಕವಾಗಿರುತ್ತಿತ್ತು. ಹೀಗಾಗಿ ಯೂರಿಯ, ಕೃಷಿಯಲ್ಲಿ ಗೊಬ್ಬರವೆಂದು ಬಳಸಲು ಸರಿ ಎನಿಸುತ್ತಿರಲಿಲ್ಲ. ಲಿಂಬೆ, ಅನಾನಸು ಮತ್ತು ಇತರೆ ಹಲವು ಬೆಳೆಗಳಲ್ಲಿ, ಪತ್ರ ಸಿಂಚನಗೆಂದು ಬಳಸುವಗ ಯೂರಿಯಾಧಲ್ಲಿಯ ಬಾಯ್ಯುರೇಟ್ನ ಪ್ರಮಾಣವು ಶೇಕಡಾ ೦.೨೫ ಕ್ಕಿಂತ ಕಡಮೆಯಿರಬೇಕಾಗುತ್ತದೆ. ಆದರೆ ೧೯೬೦ರಿಂದೀಚೆಗೆ, ಯೂರಯಾವನ್ನು ತಯಾರಿಸುವಾಗ ಉಷ್ಣತಾಮಾನವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಬಾಯ್ಯುರೇಟ್ ನಿರ್ಮಾಣಗೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ, ಯೂರಿಯಾ – ಗೊಬ್ಬರವನ್ನು ಮಣ್ಣಿಗೆ ಪೂರೈಸಲು ಮತ್ತು ಎಲೆಗಳ ಮೇಲೆ ಸಿಂಪಡಿಸಲು ಸುರಕ್ಷಿತವಾಗಿ ಬಳಸಬಹುದಾಗಿದೆ. ಆ. ಆರ್ದ್ರತೆಯನ್ನು ಹೀರಿಕೊಳ್ಳುವ ಗುಣ : ಯೂರಿಯಾ ಗೊಬ್ಬರವನ್ನು ಸಣ್ಣ ಗುಳಿಗೆ (ಪ್ರಿಲ್ಸ್)ಗಳ ರೂಪದಲ್ಲಿ ತಯಾರಿಸಲಾಗುತ್ತಿತ್ತು. ಯೂರಿಯಾವನ್ನು ಹವೆಗೆ ತೆರೆದಿಟ್ಟಡೊಡನೆಯೇ ಹವೆಯಲ್ಲಿರುವ ಆರ್ದ್ರತೆಯನ್ನು ಶೀಘ್ರವಾಗಿ ಹೀರಿಕೊಂಡು ನೀರೊಡೆದು ದ್ರಾವಣದಂತಾಗುತ್ತಿತ್ತು. ಇದರಿಂದಾಗಿ, ಯೂರಿಯಾ ಗೊಬ್ಬರವನ್ನು ಬಳಸುವ ಕಾರ್ಯವು ಕಷ್ಟದಾಯಕವಾಗುತ್ತಿತ್ತು. ಯೂರಿಯಾ ಗೊಬ್ಬರವನ್ನು, ಹರಳಿನ ರೂಪದಲ್ಲಿ ತಯಾರಿಸಲು ೧೯೬೫ ರಲ್ಲಿ ಆರಂಭ ಮಾಡಿದಾಗಿನಿಂದ, ಮೇಳಿನ ಸಮಸ್ಯೆಗೆ ಪರಿಹಾರವು ದೊರೆತಂತಾಗಿದೆ. ಈ ಹರಳುಗಳು ಮೊದಲಿನ ಗುಳಿಗೆಗಳಿಗಿಂತ ಆಕಾರದಲ್ಲಿ ದೊಡ್ಡವಾಗಿರುವುವಲ್ಲದೇ, ಹೆಚ್ಚು ಗಟ್ಟಿಯಾಗಿರುತ್ತವೆ. ಅವುಗಳ ದಾರ್ಢ್ಯತೆಯು ಅಧಿಕಗೊಂಡಿದೆ. ಯೂರಿಯಾದ ಹರಳುಗಳನ್ನು ತಯಾರಿಸುವಾಗ, ಸ್ವಲ್ಪ ಪ್ರಮಾಣದಲ್ಲಿ ಫಾರ್ಮಾಲ್ಡಿಹೈಯ್ಡ್ ನಂತಹ ರಾಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಇದರಿಂದ ಹರಳುಗಳು ಗಟ್ಟಿಯಾಗುತ್ತವೆಯಲ್ಲದೇ, ಗೋದಾಮಿನಲ್ಲಿ ಸಂಗ್ರಹಿಸಿಟ್ಟಾಗ ಯೂರಿಯಾ ಗೊಬ್ಬರವು ಗಟ್ಟಿಯಾಗುವುದಿಲ್ಲ. ಇ. ಯೂರಿಯಾವನ್ನು ಮಣ್ಣಿಗೆ ಸೇರಿಸಿದಾಗ ಬೀಜ ಮತ್ತು ಸಸ್ಯಗಳ ಮೇಲಾಗುವ ದುಷ್ಪರಿಣಾಮಗಳು : ಯೂರಿಯಾವನ್ನು ಮಣ್ಣಿಗೆ ಸೇರಿಸಿದ ನಂತರ ಸೂಕ್ತ ವಾತಾವರಣದಲ್ಲಿ, ಅಮೋನಿಯಾ ರೂಪಕ್ಕೆ ಪರಿವರ್ತನೆಯನ್ನು ಹೊಂದುತ್ತದೆ. ಈ ಅಮೋನಿಯಾದ ಪ್ರಮಾಣವು ಅಧಿಕಗೊಂಡರೆ, ಮೊಳಕೆಯೊಡೆಯುತ್ತಿರುವ ಬೀಜಗಳಿಗೆ ಮತ್ತು ಎಳೆಯ ವಯಸ್ಸಿನ ಸಸಿಗಳಿಗೆ, ಅಪಾಯವುಂಟಾಗುತ್ತದೆ. ಈ ಸಮಸ್ಯೆಯನ್ನು ಬೇಸಾಯದ ಸೂಕ್ತ ವಿಧಾನಗಳಿಂದ ನಿವಾರಿಸಿಕೊಳ್ಳಬಹುದು. ಉದಾಹರಣೆಗೆ : ಮೇಲೆ ಹೇಳಿದಂತೆ ವಿವಿಧ ಕ್ರಮಗಳನ್ನು ಅನುಸರಿಸಿದರೆ, ಅಮೋನಿಯಾದ ಅಧಿಕ್ಯದಿಂದ ಆಗಬಹುದಾದ ದುಷ್ಪರಿಣಾಮವನ್ನು ತಡೆಗಟ್ಟಬಹುದು. ಈ. ಮಣ್ಣಿನ ಮೇಲ್ಭಾಗದಲ್ಲಿ ಬಿದ್ದ ಯೂರಿಯಾದಿಂದ ಸಾರಜನಕದ ನಷ್ಟ : ಯೂರಿಯಾ ಗೊಬ್ಬರವನ್ನು ಮಣ್ಣಿನ ಮೇಲ್ಬಗದಲ್ಲಿ ಬೀಳುವಂತೆ ಹಾಕಿದರೆ, ಯೂರಿಯಾದಿಂದ ಹೊರಬಿದ್ದ ಅಮೋನಿಯಾ ವಾಯುಮಂಡಲವನ್ನು ಸೇರುತ್ತದೆ. ಇದರಿಂದ ಸಾರಜನಕವು ಬೆಳೆಯ ದೃಷ್ಟಿಯಿಂದ ನಷ್ಟವಾದಂತೆ. ಈ ಸಮಸ್ಯೆಯನ್ನು ಪರಿಹರಿಸಲು, ಯೂರಿಯಾವನ್ನು ಮೇಲೆ ತಿಳಿಸಿದಂತೆ, ಸುಮಾರು ೫ ಸೆಂ.ಮೀ. ಆಳದಲ್ಲಿ ಬೀಳುವಂತೆ ಪೂರೈಸಬೇಕು. ಅಲ್ಲದೇ, ಮಣ್ಣಿನಲ್ಲಿ ಆರ್ದ್ರತೆಯಿರುವಂತೆ ನೋಡಿಕೊಳ್ಳಬೇಕುಕ. ಯೂರಿಯಾ ಗೊಬ್ಬರದ ಗುಣಧರ್ಮಗಳು :ಯೂರಿಯಾ ಶುದ್ಧ ರೂಪದಲ್ಲಿದ್ದಾಗ, ಒಂದು ಸ್ಪಟಿಕ ರೂಪವಿರುವ ಬಿಳಿ ಬಣ್ಣದ ವಸ್ತು. ಇದು ನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ. ಗೊಬ್ಬರಕ್ಕೆಂದು ಬಳಸುವ ಯೂರಿಯಾದಲ್ಲಿ ಶೇಕಡಾ ೪೪ರಿಂದ ೪೬ ರಷ್ಟು ಸಾರಜನಕವಿರುತ್ತದೆ. ಎಲ್ಲ ಸಾರಜನಕವು ಅಮೈಡ್ ರೂಪದಲ್ಲಿರುತ್ತದೆ. ಬಳಕೆಯಲ್ಲಿರುವ ಘನರೂಪದ ರಾಸಾಯನಿಕ ಗೊಬ್ಬರಗಳಲ್ಲಿ, ಅತ್ಯಧಿಕ ಸಾರಜನಕವಿರುವುದು ಯೂರಿಯಾದಲ್ಲಿ ಮಾತ್ರ. ಈಗಾಗಲೇ ಹೇಳಿದಂತೆ, ಗೊಬ್ಬರಕ್ಕೆಂದು ಬಳಸುವ ಯೂರಿಯಾವನ್ನು ಹರಳಿನ ರೂಪದಲ್ಲಿ ತಯಾರಿಸಲಾಗುತ್ತದೆ. ದ್ರವ್ ರೂಫದಲ್ಲಿರುವ ಅಮೋನಿಯಾದೊಡನೆ ಇಂಗಾಲದ ಡೈ ಆಕ್ಸೈಡ್ ಅಧಿಕ ಒತ್ತಡದಲ್ಲಿ ಸಂಯೋಜಿಸಿದಾಗ ಯೂರಿಯಾ ನಿರ್ಮಾಣಗೊಳ್ಳುತ್ತದೆ. ಅಮೋನಿಯಾ + ಇಂಗಾಲದ ಡೈ ಆಕ್ಸೈಡ್ ಒತ್ತಡ > ಯೂರಿಯಾ + ನೀರು ಗುಣಗಳು : ಯೂರಿಯಾ + ನೀರು ಯೂರಿಯೇಸ್ > ಅಮೋನಿಯಂ ಕಾರ್ಬೊನೇಟ್ ಅಮೋನಿಯಂ ಕಾರ್ಬೊನೇಟ್ ಇದು ಅಸ್ಥಿರ ರಾಸಾಯನಿಕವಾದ್ದರಿಂದ ಅದರಿಂದ ಕೆಳಗೆ ತೋರಿಸಿದ ಅಮೋನಿಯಾ ಹೊರಬರುತ್ತದೆ. ಅಮೋನಿಯಂ ಕಾರ್ಬೊನೇಟ್ ಅಮೋನಿಯಾ + ಇಂಗಾಲಾಮ್ಲ ವಾಯು + ನೀರು ಯೂರಿಯೆಸ್ ಎಂಬ ಕಿಣ್ವವು ಸರ್ವ ವ್ಯಾಪಿ ಎನ್ನಬಹುದು. ಈ ದ್ರವ್ಯವು ಮಣ್ಣಿನಲ್ಲಿ ಬೃಹತ್ ಪ್ರಮಾಣದಲ್ಲಿರುತ್ತದೆ. ಇದಲ್ಲದೇ, ಹಲವು ಬಗೆಯ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಮತ್ತು ಆಕ್ಟನೋಮೈಸಿಟೀಸ್ ಗಳಲ್ಲಿಯೂ ಯೂರಿಯೇಸ್ ಇದೆ. ‘ಯೂರಿಯಾ ಬ್ಯಾಕ್ಟಿರಿಯಾ’ ಎಂಬ ಹೆಸರಿನ ಒಂದುಗುಂಪಿಗೆ ಸೇರಿದ ಸೂಕ್ಷ್ಮ ಜೀವಿಗಳೀಗೆ, ಯೂರಿಯಾವನ್ನು ಅಮೋನಿಯಾ ರೂಪಕ್ಕೆ ಪರಿವರ್ತಿಸುವ ವಿಶೇಷ ಸಾಮರ್ಥ್ಯವಿದೆಯೆಂದು ಕಂಡುಬಂದಿದೆ. ಸಾವಯವ ಪದಾರ್ಥದ ಪ್ರಮಾಣ ಮತ್ತು ಸೂಕ್ಷ್ಮ ಜೀವಿಗಳ ಸಂಖ್ಯೆ ಅಧಿಕವಾಗಿರುವಲ್ಲಿ, ಯೂರಿಯೇಜನ ಪ್ರಮಾಣವು ಅಧಿಕವಾಗಿರುತ್ತದೆ. ಮಣ್ಣಿನ ಪರಿಸ್ಥಿತಿಯು ಅನುಕೂಲಕರವಾಗಿದದರೆ ಮಣ್ಣಿಗೆ ಪೂರೈಸಿದ ಯೂರಿಯಾ ೪ – ೬ ದಿನಗಳಲ್ಲಿ ಅಮೋನಿಯಾ ರೂಪಕ್ಕೆ ಬದಲಾಗಿರುತ್ತದೆ. ಅವಗುಣಗಳು : ಇಲ್ಲಿಯವರೆಗೆ ವಿವರಿಸಿದ ಸಾರಜನಕ ಗೊಬ್ಬರಗಳ ಪ್ರಮುಖ ಗುಣಧರ್ಮಗಳನ್ನು ಕೋಷ್ಟಕ ೨೪ರಲ್ಲಿ ಕೊಡಲಾಗಿದೆ. ಕೋಷ್ಟಕ ೨೪ : ಸಾರಜನಕದ ಗೊಬ್ಬರಗಳ ಪ್ರಮುಖ ಗುಣಧರ್ಮಗಳು * ತತ್ಸಮ ಆಮ್ಲತೆ : ಪ್ರತಿ ೧೦೦ ಕಿ.ಗ್ರಾಂ. ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಪೂರೈಸಿದಾಗ ನಿರ್ಮಾಣಗೊಳ್ಳುವ ಆಮ್ಲತೆಯನ್ನು ನಿವಾರಿಸಲು ಬೇಕಾಗುವ ಶುದ್ದ ಕ್ಯಾಲ್ಸಿಯಂ ಕಾರ್ಬೊನೇಟ್ ಪುಡಿ (ಕಿ.ಗ್ರಾಂ.ಗಳಲ್ಲಿ) ** ತತ್ಸಮ ಕ್ಷಾರ : ಪ್ರತಿ ೧೦೦ ಕಿ.ಗ್ರಾಂ. ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಪೂರೈಸಿದಾಗ ನಿರ್ಮಾಣಗೊಳ್ಳುವ ಕ್ಷಾರವು ಉತ್ಪನ್ನವಾಗಬೇಕಾದರೆ ಹಾಕಬೇಕಾಗುವ ಶುದ್ಧ ಕ್ಯಾಲ್ಸಿಯಂ ಕಾರ್ಬೊನೇಟ್ ಪುಡಿಯ ಪ್ರಮಾಣ (ಕಿ.ಗ್ರಾಂ.ಗಳಲ್ಲಿ) ಸಾರಜನಕವು ನಿಧಾನವಾಗಿ ವಿಮೋಚನೆಗೊಳ್ಳಲು ಕ್ರಮಗಳು : ಕೋಷ್ಟಕ ೨೪ರಲ್ಲಿ ತಿಳಿಸಿದಂತೆ ಸಾರಜನಕ ಗೊಬ್ಬರಗಳಲ್ಲಿ ಸಾರಜನಕವು ಅಮೋನಿಯಂ, ನೈಟ್ರೇಟ್ ಅಥವಾಅಮೈಡ್ ರೂಪದಲ್ಲಿದೆ. ಬತ್ತದ ಬೆಳೆಯು ಅಮೋನಿಯಂ ರೂಪದಲ್ಲಿರುವ ಸಾರಜನಕವನ್ನು ಹೀರಿಕೊಳ್ಳಬಲ್ಲದು. ಆದರೆ, ಇತರೆ ಬೆಳೆಗಳಿಗೆ ಈ ಸಾಮರ್ಥ್ಯವಿಲ್ಲ. ಮಣ್ಣಿನಲ್ಲಿರುವ ಸಾವಯವ ಮತ್ತು ನಿರವುವ ಸೂಕ್ಷ್ಮ ಕಣಗಳ ಮೇಲಿರುವ ಋಣ ಚಾರ್ಜ್ಗಳು ಅಮೋನಿಯಂ ರೂಪದ ಧನ ಅಯಾನ್ಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದ್ದರಿಂದ, ಅಮೋನಿಯಂ ರೂಪದ ಸಾರಜನಕವು, ನೀರಿನೊಡನೆ ಬಸಿದುಹೊಗುವುದಿಲ್ಲ. ಹೀಗಿದ್ದರೂ ಮಣ್ಣಿನಲ್ಲಿರುವ ಅಮೋನಿಯಂ ಅಯಾನ್ಗಳು ಅಲ್ಲಿಯೇ ಸ್ಥಿರವಾಗಿ ಉಳಿಯಲಾರವೆಂಬುವುದನ್ನು ಗಮನಿಸಬೇಕು. ಮಣ್ಣಿನಲ್ಲಿರುವ ನೈಟ್ರೋಜೋಮೊನಾಸ್ ಎಂಬ ಬ್ಯಾಕ್ಟೀರಿಯಾ ಅಮೋನಿಯಂ ಅಯಾನ್ಗಳನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುತ್ತವೆ. ತಕ್ಷಣವೇ ಮಣ್ಣಿನಲ್ಲಿರುವ ನೈಟ್ರೋಬ್ಯಾಕ್ಟರ್ ಎಂಬ ಇನ್ನೊಂದು ಗುಂಪಿಗೆ ಸೇರಿದ ಬ್ಯಾಕ್ಟೀರಿಯಾ, ನೈಟ್ರೇಟ್ ಅನ್ನು ನೈಟ್ರೇಟ್ ರೂಪಕ್ಕೆ ಪರಿವರ್ತಿಸುತ್ತವೆ. ಈ ನೈಟ್ರೇಟ್ನ ಕೆಲವು ಭಾಗಗಳನ್ನು ಬೆಳೆಗಳು ಹೀರಿಕೊಳ್ಳುತ್ತವೆ. ಉಳಿದ ನೈಟ್ರೇಟ್, ಬಸಿಯುವ ನೀರಿನೊಡನೆ ಸಾಗಿ ಬೆಳೆಗಳಿಗೆ ಸಿಗದಷ್ಟು ಆಳಕ್ಕೆ ಹೋಗುತ್ತದೆ. ಇದರಲ್ಲಿಯ ಸ್ವಲ್ಪ ಭಾಗವು ಸೋಡೋಮೊನಾಸ್ ನಂತರ ಬ್ಯಾಕ್ಟಿರಿಯಾದ ಕ್ರಿಯೆಗೆ ಸಿಕ್ಕು ವಾಯು ರೂಪಕ್ಕೆ ಪರಿವರ್ತನೆಗೊಂಡು ಬೆಳೆಗೆ ಸಿಗದಂತಾಗಬಹುದು. ಅಮೈಡ್ ರೂಪದಲ್ಲಿಸಾರಜನಕವಿರುವ ಯೂರಿಯ ಗೊಬ್ಬರವನ್ನು ಭೂಮಿಗೆ ಪೂರೈಸಿದಾಗ, ಸ್ವಲ್ಪ ಭಾಗವು ಬಸಿಯುವ ನೀರಿನೊಡನೆ ಭೂಮಿಯಾಳಕ್ಕೆ ಇಳಿದು ಹೋಗಬಹುದು. ಉಳಿದ ಭಾಗವು ಅಮೋನಿಯಂ ರೂಪಕ್ಕೆ ಪರಿವರ್ತನೆ ಹೊಂದಿ ಹಿಂದಿನ ಪರಿಚ್ಚೇದದಲ್ಲಿ ವಿವರಿಸಿದಂತೆ ವಿವಿಧ ರೀತಿಯಿಂದ ವಿನಿಯೋಗಗೊಳ್ಳಬಹುದು. ಮೇಲಿನ ವಿವರಣೆಯಿಂದ ಒಂದು ಮಾತು ಸ್ಪಷ್ಟವಾದಂತಾಯಿತು. ಬೆಳೆಯ ಉಪಯೋಗಕ್ಕೆಂದು ಮಣ್ಣಿಗೆ ಪೂರೈಸಿದ ರಾಸಾಯನಿಕ ಗೊಬ್ಬರಗಳ್ಲಲಿಯು ಎಲ್ಲ ಸಾರಜನಕವು ಬೆಳೆಗಳಿಗೆ ಪೂರ್ತಿಯಾಗಿ ದೊರೆಯುವುದಿಲ್ಲ. ಆದರೊಳಗಿನ ಕೆಲವು ಭಾಗಗಳು ನೀರಿನೊಡನೆ ಆಳಕ್ಕೆ ಬಸಿದುಹೋಗಿಯೇ ಅಥವಾ ವಾಯು ರೂಪಕ್ಕೆ ಬದಲಾಗಿಯೋ ಸಸ್ಯಗಳೀಗೆ ಸಿಗದಂತಾಗುತ್ತದೆ. ಹವಾಮಾನ, ಮಣ್ಣಿನ ಗುಣಧರ್ಮಗಳು, ಬೆಳೆಯ ಸ್ವಭಾವ ಮತ್ತು ಪೋಷಕಗಳ ನಿರ್ವಹಣೆಯ ಬಗೆ ಇತ್ಯಾದಿಗಳಿಗೆ ಅನುಗುಣವಾಗಿ, ಮಣ್ಣಿಗೆ ಪೂರೈಸಿದ ರಾಸಾಯನಿಕ ಗೊಬ್ಬರಗಳ ಶೇ.೩೫ ರಿಂದ ೭೦ ರಷ್ಟು ಮಾತ್ರ ಬೆಳೆಗಳಿಗೆ ದೊರೆತು, ಉಳಿದ ಶೇ. ೬೫ ರಿಂದ ೩೦ಪೋಷಕಗಳು ವ್ಯರ್ಥವಾಗುತ್ತವೆ. ಸಾರಜನಕ ಗೊಬ್ಬರಗಳನ್ನು ತಯಾರಿಸಲು, ಅಮೂಲ್ಯವಾದ ಶಕ್ತಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ವ್ಯಯ ಮಾಡಬೇಕಾಗುತ್ತದೆ. ಆದ್ದರಿಂದ ಈ ಗೊಬ್ಬರಗಳನ್ನು, ಹೆಚ್ಚು ಸಮರ್ಥವಾಗಿ ಬಳಸಬೇಕಾದುದು ರೈತನ ಹಿತ ಮತ್ತು ಜಗತ್ತಿನ ಒಳಿತಿನ ದೃಷ್ಟಿಯಿಂದ ಅತ್ಯವಶ್ಯಕ. ಈ ದಿಸೆಯಲ್ಲಿ ಕಳೆದ ೪ – ೫ ದಶಕಗಳಿಂದ, ಹಲವು ಪ್ರಯತ್ನಗಳು ನಡೆದಿವೆ. ಅವುಗಳ ಸಂಕ್ಷಿಪ್ತ ವಿವರಣೆಯು ಮುಂದಿನಂತಿದೆ. ಅ. ಸಾರಜನಕವನ್ನು ಪೂರೈಸುವ ಆದರ್ಶ ಗೊಬ್ಬರಗಳಲ್ಲಿ ಇರಬೇಕಾದ ಗುಣಗಳು : ಮಣ್ಣಿಗೆ ಪೂರೈಸಿದ ಸಾರಜನಕವೆಲ್ಲ, ಸಸ್ಯಗಳಿಗೆ ದೊರೆತು, ಸ್ವಲ್ಪವೂ ವ್ಯರ್ಥವಾಗಬಾರದೆಂದಾದರೆ, ಸಾರಜನಕ ಗೊಬ್ಬರವು ಸಸ್ಯದ ಬೆಳವಣಿಗೆಯ ಪೂರ್ತಿ ಅವಧಿಯಲ್ಲಿ ಪ್ರತಿ ದಿನ ಬೆಳೆಗೆ ಬೇಕಾಗುವಷ್ಟು ಸಾರಜನಕವನ್ನು ಬಿಡುಗಡೆ ಮಾಡುವ ಗುಣವುಳ್ಳದ್ದಾಗಿರಬೇಕು. ಇಂತಹ ಗೊಬ್ಬರಗಳನ್ನು ತಯಾರಿಸಿ ಬಳಸಿದರೆ ಎಲ್ಲ ಸಾರಜನಕವೂ ಬೆಳೆಗೆ ದೊರೆತು ಈ ಪೋಷಕಗಳ ನಷ್ಟವು ಇಲ್ಲದಂತಾಗುತ್ತದೆ. ಅಷ್ಟೇ ಅಲ್ಲದೆ ಕೆಳಗಿನ ಪ್ರಯೋಜನಗಳೂ ದೊರೆಯುತ್ತವೆ. ಆ. ಇಚ್ಛಿತ ಗುಣಧರ್ಮಗಳಿರುವ ಸಾರಜನಕ ಗೊಬ್ಬರಗಳ ಅವಿಷ್ಕಾರ : ಮೇಲೆ ಸೂಚಿಸಿದ ಗುಣಗಳು ಸಾರಜನಕ ಗೊಬ್ಬರಗಳಲ್ಲಿರುವಂತೆ ಮಾಡಲು ಹಲವು ರೀತಿಯ ಪ್ರಯತ್ನಗಳು ನಡೆದವು. i) ನೀರಿನಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಕರಗುವ, ಆದರೆ ಮಣ್ಣಿಗೆ ಸೇರಿಸಿದ ಮೇಲೆ ರಾಸಾಯನಿಕವಾಗಿ ಇಲ್ಲವೇ ಜೀವಾಣುಗಳಿಂದ ಬದಲಾವಣೆಯನ್ನು ಹೊಂದಬೇಕಾದ ವಸ್ತುಗಳು (ಗೊಬ್ಬರಗಳು): ನೀರಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಕರಗುವಂತೆ ಕೆಲವು ವಸ್ತುಗಳು ಈ ಗುಂಪಿಗೆ ಸೇರಿವೆ. ಇವುಗಳನ್ನು ಮಣ್ಣಿಗೆ ಸೇರಿಸಿದ ನಂತರ, ರಾಸಾಯನಿಕ ಕ್ರಿಯೆಗಳಿಂದ ಇಲ್ಲವೇ ಸೂಕ್ಷ್ಮ ಜೀವಾಣುಗಳು ಚಟುವಟಿಕೆಗಳಿಂದ, ಈ ವಸ್ತುಗಳಲ್ಲಿರುವ ಸಾರಜನಕವು ಮಂದಗತಿಯಿಂದ ಸಸ್ಯಗಳ ಉಪಯೋಗಕ್ಕೆ ಬೇಕಾಗುವ ರೂಪದಲ್ಲಿ ಬಿಡುಗಡೆಯಾಗುತ್ತದೆ. ಉದಾಹರಣೆಗೆ, ಯೂರಿಯಾ ಫಾರ್ಮಾಲ್ಡಿಹೈಡ್ :ಯೂರಿಯಾ ಮತ್ತು ಫಾಮಾಲ್ಡಿಹೈಡ್ಗಳ ಸಂಯೋಜನೆಯಿಂದ ನಿರ್ಮಿಸಿದ ಈ ವಸ್ತುವಿನಲ್ಲಿ ಶೇ.೩೮ ಸಾರಜನಕವಿರುತ್ತದೆ. ಈ ವಸ್ತುವಿನ ಬಣ್ಣ ಬಿಳೀ, ಇದಕ್ಕೆ ವಾಸನೆಯಿರುವುದಿಲ್ಲ. ಗೊಬ್ಬರವನ್ನು ಮಣ್ಣಿಗೆ ಸೇರಿಸಿದ ನಂತರ ಸಾರಜನಕವು ನಿಧಾನವಾಗಿ ಬಿಡುಗಡೆ ಹೊಂದುತ್ತದೆ. ಗೊಬ್ಬರಗಳ ಮಿಶ್ರಣವನ್ನು ತಯಾರಿಸುವಾಗ ರಂಜಕ ಮತ್ತು ಪೋಟ್ಯಾಷಿಯಂ ಗೊಬ್ಬರಗಳ ಸಂಗಡ ಯೂರಿಯಾ ಫಾರ್ಮಾಲ್ಡಿಹೈಡ್ ಅನ್ನು ಸೇರಿಸಬಹುದು. ಕ್ರೊಟೊನಿಲಿಡೀನ್ಡೈಯೂರಿಯಾ (CDU): ಯೂರಿಯಾ ಮತ್ತು ಕ್ರೋಟೋನಾಲ್ಡಿಹೈಟ್ ಇಲ್ಲವೇ ಎಸಿಟಾಲ್ಡಿಹೈಡ್ ಇವುಗಳ ಸಂಯೋಜನೆಯಿಂದ ತಯಾರಾದ ಈ ರಾಸಾಯನಿಕದಲ್ಲಿ ಶೇಕಡಾ ೩೦ ರಷ್ಟು ಸಾರಜನಕವಿದೆ. ಇದನ್ನು ಮಣ್ಣಿಗೆ ನೇರವಾಗಿ ಸೇರಿಸಬಹುದು. ಈ ವಸ್ತುವು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಇದರೊಳಗಿರುವ ಸಾರಜನಕವು ನಿಧಾನವಾಗಿ ಬಿಡುಗಡೆಯಾಗಿ , ಬೆಳೆಗಳಿಗೆ ದೊರೆಯುತ್ತದೆ. ಐಸೋಬ್ಯುಟಿಲಿಡಿನ್ ಡೈಯೂರಿಯಾ (IBDU) : ಇದನ್ನು ಯೂರಿಯಾ ಮತ್ತು ಐಸೋಬ್ಯುಟಿಲಾಲ್ಡಿ ಹೈಡ್ಗಳನ್ನು ೨:೧ ಪ್ರಮಾಣದಲ್ಲಿ ಸಂಯೋಜಿಸಿ ಜಪಾನ ದೇಶದಲ್ಲಿ ತಯಾರಿಸಲಾಯಿತು. ಗೊಬ್ಬರವೆಂದು ಬಳಸಬಹುದಾದ ಈ ವಸ್ತುವಿನಲ್ಲಿ ಶೇಕಡಾ ೩೦ ರಷ್ಟು ಸಾರಜನಕವಿರುತ್ತದೆ. ಇದು ನೀರಿನಲ್ಲಿ ಶೇಕಡಾ ೦.೦೧ ರಿಂದ ೦.೧ ರಷ್ಟು ಮಾತ್ರ ಕರಗುತ್ತದೆ ಸಸ್ಯಗಳ ಸರಿಯಾದ ಬೆಳವಣಿಗೆಗೆ ಅವಶ್ಯವಿರುವ ಮಣ್ಣಿನ ಆರ್ದ್ರತೆ, ಉಷ್ಣತೆ, ಆಮ್ಲ – ಕ್ಷಾರ ನಿರ್ದೆಶಕ ಇತ್ಯಾದಿಗಳು. ಈ ಗೊಬ್ಬರದಿಂದ ಸಾರಜನಕವನ್ನು ಬಿಡುಗಡೆ ಮಾಡುವ ಸೂಕ್ಷ್ಮ ಜೀವಿಗಳಿಗೂ ಅನುಕೂಲಕರವಾಗಿದೆ. ಹೀಗಾಗಿ, ಸಸ್ಯಗಳ ಬೆಳವಣಿಗೆಗೆ ಬೇಕಾಗುವ ವೇಗದಿಂದ ಸಾರಜನಕವು ಈ ವಸ್ತುವಿನಿಂದ ಬಿಡುಗಡೆಯನ್ನು ಹೊಂದುತ್ತವೆ. ಯೂರಿಯಾ ಝೆಡ್ : ಯೂರಿಯಾ ಮತ್ತು ಅಸಿಟಾಲ್ಡಿಹೈಡ್ಗಳಿಂದ ನಿರ್ಮಾಣಗೊಂಡ ವಸ್ತುಗಳಾದ ಇಥಿಲಿಡೀನ್ಡೈ ಯೂರಿಯಾ, ಡೈ ಇಥಿಲೀನ್ ಮತ್ತು ರಾಸಾಯನಿಕ ಕ್ರಿಯೆಗಳಿಗೊಳಗಾದ ಸ್ವಲ್ಪಪ್ರಮಾಣದ ಯೂರಿಯಾ ಇವುಗಳ ಮಿಶ್ರಣವೇ ಯೂರಿಯಾ – ಝೆಡ್. ಈ ಮಿಶ್ರಣದಲ್ಲಿ, ಶೇಕಡಾ ೩೩ ರಿಂದ ೩೮ ರಷ್ಟು ಸಾರಜನಕವಿದೆ. ಒಟ್ಟು ಸಾರಜನಿಕದ ಶೇಕಡಾ ೧೫ ರಷ್ಟು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಉಳಿದ ಸಾರಜನಕವು ಮಂದಗತಿಯಿಂದ ಬಿಡುಗಡೆಯನ್ನು ಹೊಂದುತ್ತದೆ. ಮೇಲೆ ವರ್ಣಿಸಿದ, ಮೂರು ಗೊಬ್ಬರಗಳಿಗಿಂತ ಯೂರಿಯಾ ಝೆಡ್ ಗೊಬ್ಬರದಿಂದ ಸಾರಜನಕವು ತುಲನಾತ್ಮಕವಾಗಿ ಹೆಚ್ಚು ವೇಗದಿಂದ ಹೊರಬರುತ್ತದೆ. ಗ್ಲೈಕೋಯೊರಿಲ್ ಮತ್ತು ಯೂರಿಯಾ ಹಾಗೂ ಫಾರ್ಮಾಲ್ಡಿಹೈಡ್ – ಅಸಿಟಾಲ್ಡಿಹೈಡ್ಗಳ ಮಿಶ್ರಣದಿಂದ ತಯಾರಿಸಿದ ವಸ್ತುಗಳು, ಮಂದಗತಿಯಿಂದ ಸಾರಜನಕವನ್ನು ಹೊರಬಿಡುವ ಇತರೆ ಗೊಬ್ಬರಗಳು, ಈ ಗೊಬ್ಬರಗಳು ಜಪಾನ್, ಜರ್ಮನಿ, ರಷ್ಯಾ ದೇಶಗಳಲ್ಲಿ ಪ್ರಯಾಗಿಕವಾಗಿ ನಿರ್ಮಾಣಗೊಂಡಿವೆಯಾದರೂ ಮಾರುಕಟ್ಟೆಗೆ ಬರುವಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೊಂಡಿಲ್ಲ. ಆಕ್ಸಮೈಡ್ : ಆಕ್ಸಾಲಿಕ್ ಆಮ್ಲದಲ್ಲಿರುವ ಹೈಡ್ರಾಕ್ಸಿಲ್ (OH) ಗುಂಪುಗಳಿರುವ ಸ್ಥಾನದಲ್ಲಿ, ಅಮೈಡ್ (NH2) ಗುಂಪುಗಳು ಬಂದು ಕುಳಿತರೆ ಆಕ್ಸಮೈಡ್ ನಿರ್ಮಾಣಗೊಳ್ಳುತ್ತದೆ. ಇದರ ರಾಸಾಯನಿಕ ಸೂತ್ರವನ್ನು ಮುಂದೆ ತೋರಿಸಿದಂತೆ ಬರೆಯಬಹುದು. NH2COCONH2 ಈ ಗೊಬ್ಬರದಲ್ಲಿ ಶೇಕಡಾ ೩೧.೮ ಸಾರಜನಕವಿರುತ್ತದೆ. ಕಣಗಳ ಆಕಾರವು ಸಣ್ಣವಿದ್ದಷ್ಟು ನೀರಿನಲ್ಲಿ ಕರಗುವ ಪ್ರಮಾಣವು ಹೆಚ್ಚಾಗುತ್ತದೆ. ಈ ವಸ್ತುವಿನಲ್ಲಿರುವ ಸಾರಜನಕವು, ಸೂಕ್ಷ್ಮಜೀವಿಗಳ ಕಾರ್ಯಚಟುವಟಿಕೆಗಳಿಂದ ಅಮೋನಿಯಂ ಕಾರ್ಬೊನೇಟ್ ರೂಪಕ್ಕೆ ಪರಿವರ್ತನೆ ಹೊಂದುತ್ತದೆ. ಇದ ಮಾರುಕಟ್ಟೆಗೆ ಬರುವಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿಲ್ಲ. ಆಕ್ಸಮೈಡ್ ನಿರ್ಮಾಣಕ್ಕೆ ತಗಲುವ ಖರ್ಚು ತುಲನಾತ್ಮಕವಾಗಿ ಅಧಿಕವಾಗಿರುವುದೂ ಇದರ ಉತ್ಪಾದನೆಯಲ್ಲಿರುವ ಒಂದು ತೊಡಕೆನ್ನಬಹುದು.
2NH3 + CO2 Pressure > CO(NH2)2 + H2O
CO (NH2)2 + H2O Urease > (NH4)2CO3
(NH4)2 CO3 → NH3 + CO2 + H2O
Leave A Comment