ಮಣ್ಣಿನಆಮ್ಲಕ್ಷಾರನಿರ್ದೇಶಕ (pH)

ನಿರ್ಧಿಷ್ಟ ಪ್ರಮಾಣದ ಮಣ್ಣನ್ನು ನೀರಿನಲ್ಲಿ ಕದಡಿ, ಸೂಕ್ತ ಉಪಕರಣಗಳ ಸಹಾಯದಿಂದ ಈ ರಾಡಿಯ ರಸಸಾರ (pH) ವನ್ನು ಕಂಡುಹಿಡಿಯಲಾಗುತ್ತದೆ. ಮಣ್ಣಿನ ರಸಸಾರ (pH)ವನ್ನು ೪.೫ – ೯ ರವರೆಗೆ ಇರುವುದು ಸಾಮಾನ್ಯ. ಆದರೆ ಕೆಲವು ಸಂದರ್ಭಗಳಲ್ಲಿ ರಸಸಾರ (pH) ವು ಎರಡೂ ಮಿತಿಗಳನ್ನು ದಾಟುವುದುಂಟು. ಉದಾಹರಣೆಗೆ ಕಬ್ಬಿಣದ ಸಲ್ಫೇಡ (ಕಬ್ಬಿಣದ ಪೈರೈಟ್ – FeS) ಇರುವ ಮೂಲ ದ್ರವ್ಯದಿಂದ ನಿರ್ಮಾಣಗೊಂಡ ಮಣ್ಣಿನ ರಸಸಾರ (pH) ವು ೨.೫ ರಷ್ಟು ಕಡಿಮೆ ಇರಬಲ್ಲದು. ಅದರಂತೆಯೆ ಸೋಡಿಯಂನ ಪ್ರಾಬಲ್ಯವಿರುವ ಮಣ್ಣಿನ ರಸಸಾರ (pH) ವು ೧೧ನ್ನು ಮೀರಬಾರದು. ರಸಸಾರ (pH) ವು ೬.೫ ಅಥವಾ ೭ ಕ್ಕಿಂತ ಕಡಮೆ ಇರುವ ಮಣ್ಣನ್ನು ಆಮ್ಲ ಅಥವಾ ಹುಳಿ ಮಣ್ಣು ಎನ್ನುತ್ತಾರೆ.

ಮಣ್ಣಿನಆಮ್ಲತೆಗೆಕಾರಣಗಳು

i) ಅಧಿಕ ಮಳೆಯಾಗುವ ಪ್ರದೇಶದಲ್ಲಿ ಮಳೆಯ ನೀರು ಮಣ್ಣಿನೊಳಗಿಂದ ಬಸಿದು ಹೋಗುವಾಗ ಪ್ರತ್ಯಾಮ್ಲ ಅಯಾನ್‌ಗಳಾದ ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಪೋಟ್ಯಾಸಿಯಂ ಗಳನ್ನು ಭೂಮಿಯಾಳಕ್ಕೆ ಒಯ್ಯುತ್ತದೆ. ಪ್ರತ್ಯಾಮ್ಲ ಅಯಾನ್‌ಗಳು ತೆರವು ಮಾಡಿದ ಸ್ಥಳಗಳನ್ನು ಜಲಜನಕ ಮತ್ತು ಅಲ್ಯೂಮಿನಿಯಂ ಅಯಾನ್‌ಗಳು ಆಕ್ರಮಿಸಿಕೊಳ್ಳುತ್ತವೆ. ಇವೆರಡೂ ಆಮ್ಲ ಅಯಾನ್‌ಗಳಾದ್ದರಿಂದ ಮಣ್ಣು ಹುಳಿಯಾಗುತ್ತದೆ.

ii) ಸಸ್ಯದ ಬೇರುಗಳು ಮತ್ತು ಮಣ್ಣಿನಲ್ಲಿ ವಾಸಿಸುತ್ತಿರುವ ಜೀವಿಗಳ ಉಸಿರಾಟದಿಂದ ಇಂಗಾಲದ ಡೈ ಆಕ್ಸೈಡ್ ಹೊರ ಬರುತ್ತದೆ. ಈ ವಾಯು ನೀರಿನಲ್ಲಿ ಕರಗಿ ಇಂಗಾಲಾಮ್ಲವು ನಿರ್ಮಾಣಗೊಳ್ಳುತ್ತದೆ. ಇದು ಮಣ್ಣಿನ ಆಮ್ಲತೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುತ್ತದೆ.

iii) ಮಣ್ಣಿನಲ್ಲಿರುವ ಸಾವಯವ ವಸ್ತುಗಳು, ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ಕಳಿಯುವಾಗ ಅಸೆಟಿಕ್, ಆಕ್ಸಾಲಿಕ್ , ಸಿಟ್ರಿಕ್, ಮಾಲಿಕ್ ಮುಂತಾದ ಸಾವಯವ ಆಮ್ಲಗಳು ನಿರ್ಮಾಣಗೊಳ್ಳುತ್ತವೆ. ಇವುಗಳ ಪ್ರಭಾವದಿಂದ ಮಣ್ಣು ಹುಳಿಯಾಗುತ್ತದೆ. ಆದರೆ ಈ ಆಮ್ಲಗಳು ಸ್ವಲ್ಪ ಸಮಯದವರೆಗೆ ಮಾತ್ರ ಮಣ್ಣಿನಲ್ಲಿರುತ್ತವೆಯಾದ್ದರಿಂದ ಇವುಗಳ ಪರಿಣಾಮವು ತಾತ್ಕಾಲಿಕವೆನ್ನಬಹುದು.

iv) ಮಿಂಚಿದಾಗ ಹೊರಬರುವ ಉಷ್ಣತೆಯಿಂದ ಗಾಳಿಯಲ್ಲಿರುವ ಸಾರಜನಕ ಮತ್ತು ಆಮ್ಲಜನಕಗಳು ಸಂಯೋಜನೆ ಹೊಂದಿ, ಸಾರಜನಕದ ಆಕ್ಸೈಡ್ ನಿರ್ಮಾಣಗೊಳ್ಳುತ್ತದೆ. ಇದು ನೀರಿನೊಡನೆ ಸೇರಿ ನೈಟ್ರೀಕ್ ಆಮ್ಲವು ಸಿದ್ಧವಾಗುತ್ತದೆ. ಆಮ್ಲವು ಮಳೆಯ ನೀರಿನ ಸಂಗಡ ಮಣ್ಣನ್ನು ಸೇರಿ ಅದನ್ನು ಆಮ್ಲಯುತವನ್ನಾಗಿ ಮಾಡುತ್ತದೆ.

v) ಮೇಲೆ (ii) ರಲ್ಲಿ ಸೂಚಿಸಿರುವಂತೆ ಹೊರ ಬಂದ ಇಂಗಾಲದ ಡೈ ಆಕ್ಸೈಡ ನೀರಿನೊಡನೆ ಸೇರಿ ಇಂಗಾಲಾಮ್ಲವಾಗಿ,. ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂಗಳೊಡನೆ ಪ್ರತಿಕ್ರಿಯೆ ಹೊಂದಿ, ಈ ಪ್ರತ್ಯಾಮ್ಲಗಳು ನೀರಿನೊಡನೆ ಆಳಕ್ಕೆ ಬಸಿದು ಹೋಗುವಂತೆ ಮಾಡುತ್ತವೆ.

vi) ಸಾವಯವ ವಸ್ತುಗಳು ಕಳಿಯುತ್ತಿರುವಾಗ ನೈಟ್ರೀಕ್ ಆಮ್ಲ, ಗಂದಕಾಮ್ಲ ಇತ್ಯಾದಿ ಪ್ರಬಲ ಆಮ್ಲಗಳೂ ಸಣ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತವೆ. ಇವುಗಳಿಂದಲೂ ಮಣ್ಣು ಆಮ್ಲ ಗೊಳ್ಳುತ್ತದೆ.

vii) ಉದ್ದಿಮೆಗಳಿಂದ ಹೊಗೆ ಬರುವ ಪ್ರದೇಶಗಳಲ್ಲಿ ಹೊಗೆಯಲ್ಲಿರುವ ಗಂಧಕದ ಆಕ್ಸೈಡ್ ಗಳು, ಅಮೋನಿಯಾ ಇತ್ಯಾದಿ ವಸ್ತುಗಳು ವಾತಾವರಣವನ್ನು ಸೇರಿಕೊಳ್ಳುತ್ತವೆ. ಈ ವಸ್ತುಗಳು ಮಳೆಯ ನೀರಿನೊಡನೆ ಮಣ್ಣಿನಲ್ಲಿ ಸೇರಿಕೊಂಡು ಆಮ್ಲತೆಯನ್ನು ಹೆಚ್ಚಿಸುತ್ತವೆ.

viii) ಹಿಂದಿನ ಅಧ್ಯಾದಲ್ಲಿ ವಿವರಿಸಿದಂತೆ ಕೆಲವು ಬಗೆಯ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಲೂ ಮಣ್ಣು ಹುಳಿಯಾಗುತ್ತದೆ.

ಮಣ್ಣಿನಆಮ್ಲತೆಯವರ್ಗೀಕರಣ

ಮಣ್ಣಿನ ಆಮ್ಲತೆಯಲ್ಲಿ ಮೂರು ಪ್ರಕಾರಗಳಿವೆಯೆಂದು ಹೇಳಬಹುದು.

. ಸಕ್ರಿಯೆ ಆಮ್ಲತೆ : ಮಣ್ಣಿನ ದ್ರಾವಣದಲ್ಲಿರುವ ಜನಜನಕ ಆಯಾನು (H+)ಗಳಿಂದ ಉಂಟಾಗುವ ಆಮ್ಲತೆಗೆ ಸಕ್ರಿಯ ಅಥವಾ ಕಾರ್ಯನಿರತ ಆಮ್ಲತೆ ಎನ್ನಬಹುದು. ಕೆಳಗೆ ವಿವರಿಸಿದ ಇನ್ನೆರಡು ಬಗೆಯ ಆಮ್ಲತೆಗಳೊಡನೆ ತುಲನೆ ಮಾಡಿದರೆ ಈ ಆಮ್ಲತೆಯ ಪ್ರಮಾಣವು ಅತ್ಯಂತ ಕಡಮೆ ಎನ್ನಬಹುದು. ಸಕ್ರಿಯ ಆಮ್ಲತೆಯನ್ನು ರಸಸಾರ (pH)ದಿಂದ ವ್ಯಕ್ತಪಡಿಸಬಹುದು.

. ವಿನಿಮಯ ಆಮ್ಲತೆ : ಮಣ್ಣಿನಲ್ಲಿರುವ ಅತಿ ಸೂಕ್ಷ್ಮ ಕಣಗಳ (ನಿರವಯವ ಮತ್ತು ಹ್ಯೂಮಸ್ ಕಣಗಳ) ಸುತ್ತಲಿರುವ ಋಣ ಚಾರ್ಜ್‌ಗಳಿಗೆ ಅಂಟಿಕೊಂಡಿರುವ ಜಲಜನಕ ಮತ್ತು ಅಲ್ಯೂಮಿನಿಯಂ ಅಯಾನ್‌ಗಳಿಂದ ಈ ಪ್ರಕಾರದ ಆಮ್ಲತೆಯುಂಟಾಗುತ್ತದೆ. ಪೋಟ್ಯಾಸಿಯಂ ಕ್ಲೋರೈಡ್ ನಂತಹ ಲವಣದ ದ್ರಾವಣವನ್ನು ಮಣ್ಣಿಗೆ ಸೇರಿಸಿದರೆ ಪೊಟ್ಯಾಸಿಯಂ ಅಯಾನ್‌ಗಳು ವಿನಿಮಯ ಕ್ರಿಯೆಯಿಂದ ಜಲಜನಕ ಮತ್ತು ಅಲ್ಯೂಮಿನಿಯಂ ಅಯಾನ್‌ಗಳನ್ನು ಹೊರಹಾಕುತ್ತವೆ. ಹೀಗಾಗಿ ಇವೆರಡು ಅಯಾನ್‌ಗಳು ಮಣ್ಣಿನ ದ್ರಾವಣದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಅಯಾನ್‌ಗಳಿಂದ ಉಂಟಾದ ಆಮ್ಲತೆಗೆ ವಿನಿಮಯ ಆಮ್ಲತೆ ಎಂದು ಹೆಸರು. ಇದು ಸಕ್ರಿಯ ಆಮ್ಲತೆಗಿಂತ ಪ್ರಮಾಣದಲ್ಲಿ ಅಧಿಕವಿರುತದೆಯಾದರೂ ಮುಂದೆ ವರ್ಣಿಸಿದ ಅವಶಿಷ್ಟ ಆಮ್ಲತೆಗಿಂತ ಅತಿ ಕಡಮೆಯೆಂದು ಹೇಳಬಹುದು.

ರಸಸಾರವು (pH) ವು ಒಂದೇ ಮಟ್ಟದಲ್ಲಿರುವ ಆಮ್ಲಯುತ ಮಣ್ಣುಗಳನ್ನು ತುಲನೆ ಮಾಡಿದರೆ ಮೊಂಟ್‌ಮೋರಿಲ್ಲೋನೈಟ್ ಖನಿಜವು ಅಧಿಕವಿರುವ ಮಣ್ಣಿನ ವಿನಿಮಯ ಆಮ್ಲತೆಯು, ಕೆಓಲಿನೈಟ್ ಖನಿಜದ ಪ್ರಾಭಲ್ಯವಿರುವ ಮಣ್ನಿಗೆ ವಿನಿಮಯ ಆಮ್ಲತೆಗಿಂತ ಅಧಿಕವಾಗಿರುತ್ತದೆ.

. ಅವಶಿಷ್ಟ ಆಮ್ಲತೆ : ಮಣ್ಣಿನ ಒಟ್ಟು ಆಮ್ಲತೆಯಿಂದ ಸಕ್ರಿಯ ಮತ್ತು ವಿನಿಮಯ ಆಮ್ಲತೆಗಳನ್ನು ಕಳೆದರೆ ಉಳಿಯುವ ಆಮ್ಲತೆಯೇ ಅವಶಿಷ್ಟ ಆಮ್ಲತೆ.

ಅವಶಿಷ್ಟ ಆಮದ್ಲತೆಯು ಎರಡು ಬಗೆಯ ಘಟಕಗಳಿಂದ ರೂಪುಗೊಂಡಿದೆ:

i) ಅಲ್ಯೂಮಿನಿಯಂ ಹೈಡ್ರಾಕ್ಸೀ ಅಯಾನ್‌ಗಳು

ii) ಸಾವಯವ ಪದಾರ್ಥ (ಹ್ಯೂಮಸ್ನಿಂದ) ಮತ್ತು ಸಿಲಿಕೇಟ್ ಖನಿಜಗಳಿಂದ ವಿನಿಮಯ ಹೊಂದದ ರೀತಿಯಲ್ಲಿ ಬಂಧಿಸಲ್ಪಟ್ಟ ಜಲಜನಕ ಮತ್ತು ಅಲ್ಯೂಮಿನಿಯಂ ಅಣುಗಳು.

ಅವಶಿಷ್ಟ ಆಮ್ಲತೆಯು ಮೇಲೆ ಹೇಳಿದ ಉಳಿದೆರಡು ಪ್ರಕಾರಗಳ ಆಮ್ಲತೆಗಳಿಗಿಂತ ಹಲವು ಪಟ್ಟು ಅಧಿಕವಾಗಿರುತ್ತದೆ. ಉದಾಹರಣೆಗೆ, ಮರಳು ಮಣ್ಣಿನಲ್ಲಿ ಅವಶಿಷ್ಟ ಆಮ್ಲತೆಯು ಸಕ್ರಿಯ ಆಮ್ಲತೆಗಿಂತ ಸುಮಾರು ೧೦೦ ಪಟ್ಟು ಅಧಿಕವಾಗಿರುತ್ತದೆ. ಆದರೆ, ಸೂಕ್ತ ಪ್ರಮಾಣದಲ್ಲಿ ಸಾವಯವ ಪದಾರ್ಥವಿರುವ ಎರೆಮಣ್ಣಿನಲ್ಲಿ, ಅವಶಿಷ್ಟ ಆಮ್ಲತೆಯು ಸಕ್ರಿಯ ಆಮ್ಲತೆಗಿಂತ ೫೦ ಸಾವಿರದಿಂದ ಒಂದು ಲಕ್ಷ ಪಟ್ಟು ಅಧಿಕವಾಗಿರುತ್ತದೆ.

ಮೇಲೆ ವಿವರಿಸಿದ ಮೂರು ಬಗೆಯ ಆಮ್ಲತೆಗಳು ಪರಸ್ಪರ ಸಮತೋಲನದಲ್ಲಿರುತ್ತವೆ. ಸ್ವಲ್ಪ ಪ್ರಮಾಣದಲ್ಲಿ ಮಣ್ಣಿಗೆ ಸುಣ್ಣವನ್ನು ಸೇರಿಸಿ ಸಕ್ರಿಯ ಆಮ್ಲತೆಯನ್ನು ನಿವಾರಿಸಿದರೆ ವಿನಿಮಯು ಆಮ್ಲತೆಯಿಂದ, ಆಮ್ಲತೆಯು ಹೊರ ಬಂದು ಸಕ್ರಿಯ ಆಮ್ಲತೆಯನ್ನು ಪೂರ್ವಸ್ಥಿತಿಗೆ ತಂದು ನಿಲ್ಲಿಸುತ್ತದೆ. ಅದರಂತೆಯೇ, ಬರಿದಾದ ಅವಶಿಷ್ಟ ಆಮ್ಲತೆಯು ಪೂರ್ತಿಯಾಗಿ ನಿವಾರಣೆಯಾಗುವಷ್ಟು ಸುಣ್ಣವನ್ನು ಹಾಕಿದಾಗ ಮಾತ್ರ ಮಣ್ಣಿನ ಆಮ್ಮಲತೆಯು ಇಲ್ಲದಂತಾಗುತ್ತದೆ.

ಮಣ್ಣಿನಆಮ್ಲತೆಕ್ಷಾರನಿರ್ದೆಶಕದಮೇಲೆಪ್ರಭಾವಬೀರುವಅಂಶಗಳು

ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳು ಮಣ್ಣಿನ ರಸಸಾರ (pH) ದ ಮೇಲೆ ಬೀರುವ ಪ್ರಭಾವಗಳು ಮುಂದಿನಂತಿವೆ:

. ಪ್ರತ್ಯಾಮ್ಲಗಳ ಶೇಕಡಾವಾರು ಸಂತೃಪ್ತಿ :ಮಣ್ಣಿನ ಪ್ರತ್ಯಾಮ್ಲಗಳ ಶೇಕಡಾವಾರು ಸಂತೃಪ್ತಿಯನ್ನು ಮುಂದಿನಂತೆ ಕಂಡು ಹಿಡಿಯಲಾಗುತ್ತದೆ.

ಪ್ರತ್ಯಾಮ್ಲಗಳ ಶೇಕಡಾವಾರು ಸಂತೃಪ್ತಿ = ಪ್ರತ್ಯಾಮ್ಲಗಳ ಒಟ್ಟು ಅಯಾನ್‌ಗಳು / ಧನ ಅಯಾನ್‌ವಿನಿಮಯ ಸಾಮರ್ಥ್ಯ x 100

ಸೂಚನೆ : ಮೇಲಿನ ಸಮೀಕರಣದಲ್ಲಿ ಭಾಜ್ಯ ಮತ್ತು ಭಾಜಕಗಳು ಪ್ರತಿ ೧೦೦ ಗ್ರಾಂ. ಮಣ್ಣಿಗೆ ಮಿಲಿಗ್ರಾಂ. ಈಕ್ವಿವ್ಯಾಲಂಟ್ ಗಳಲ್ಲಿದೆ.

ಆಮ್ಲ ಮಣ್ಣಿನಲ್ಲಿ ಶೇಕಡಾವಾರು ಪ್ರತ್ಯಾಮ್ಲದ ಸಂತೃಪ್ತಿಯು ಕೆಳಮಟ್ಟದಲ್ಲಿರುತ್ತದೆ. ಆಮ್ಲತೆಯು ಕಡಮೆಯಾದಂತೆಲ್ಲ ಪ್ರತ್ಯಾಮ್ಲದ ಸಂತೃಪ್ತಿಯು ಏರತೊಡಗುತ್ತದೆ. ಸೂಕ್ತ ಪ್ರಮಾಣದಲ್ಲಿ ಸಾವಯವ ಪದಾರ್ಥವಿರುವ ನಿರವಯವ ಮಣ್ಣಿಗೆ ಶೇಕಡಾವಾರು ಪ್ರತ್ಯಾಮ್ಲ ಸಂತೃಪ್ತಿಯು ೮೦ ಕ್ಕಿಂತ ಕಡಮೆ ಇರುವಾಗ ಸಾಮಾನ್ಯವಾಗಿ ಮಣ್ಣು ಹುಳಿಯಾಗಿಯೇ ಇರುತ್ತದೆ. ಆಮ್ಲತೆಯು ದೂರವಾಯಿತೆಂದರೆ ಮಣ್ಣಿನ ಶೇಕಡಾವಾರು ಪ್ರತ್ಯಾಮ್ಲ ಸಂತೃಪ್ತಿಯು ೮೦ ಅಥವಾ ಅದಕ್ಕಿಂತ ಅಧಿಕವಾಗಿರುತ್ತದೆ.

.  ಮಣ್ಣಿನ ಸೂಕ್ಷ್ಮ ಕಣಗಳ ಗುಣಧರ್ಮಗಳು: ಪ್ರತ್ಯಾಮ್ಲದ ಶೇಕಡಾವಾರು ಸಂತೃಪ್ತಿಯು ಒಂದೇ ಮಟ್ಟದಲ್ಲಿದ್ದರೂ ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳ ಪ್ರಕಾರಗಳ ಮೇಲಿಂದ ರಸಸಾರ (pH) ವು ವಿಭಿನ್ನವಾಗಿರುತ್ತದೆ. ಮೃತ್ತಿಕಾ ದ್ರಾವಣಕ್ಕೆ ಜಲಜನಕ ಅಯಾನ್‌ಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವು ಮೋಂಟ ಮೋರಿಲ್ಲೋ ನೈಟ್ ಖನಿಜಕ್ಕೆ, ಕೆಓಲಿನೈಟ್ ಖನಿಜಕ್ಕಿಂತ ಅಧಿಕವಿರುತ್ತದೆ. ಆದ್ದರಿಂದ ಶೇಕಡಾವಾರು ಪ್ರತ್ಯಾಮ್ಲದ ಸಂತೃಪ್ತಿಯು ಒಂದೇ ಮಟ್ಟದಲ್ಲಿದ್ರೂ, ಮೋಂಟ ಮೋರಿಲ್ಲೋನೈಟ್ ಖನಿಜದ ಪ್ರಾಬಲ್ಯವಿರುವ ಮಣ್ಣಿನ ರಸಸಾರ (pH)ವು ಕೆ ಓಲಿನೈಟ್ ಖನಿಜದ ಪ್ರಾಬಲ್ಯವಿರುವ ಮಣ್ಣಿಗಿಂತ ಕಡಮೆ ಇರುತ್ತದೆ (ಅಂದರೆ ಆಮ್ಲತೆಯು ಅಧಿಕವಾಗಿರುತ್ತದೆ)

. ಸೂಕ್ಷ್ಮ ಕಣಗಳ ಮೇಲಿರುವ ಪ್ರತ್ಯಾಮ್ಲಗಳ ಸ್ವಭಾವಗಳು : ಮಣ್ಣಿನಲ್ಲಿರುವ ಸೂಕ್ಷ್ಮ ಕಣಗಳ ಸುತ್ತಲೂ ಇರುವ ಪ್ರತ್ಯಾಮ್ಲ ಮತ್ತು ಅವುಗಳ ಸ್ವಭಾವಗಳು ಮಣ್ಣಿನ ರಸಸಾರ (pH)ದ ಮೇಲೆ ಪರಿಣಾಮವನ್ನು ಬೀರುತ್ತವೆ. ಉದಾಹರಣೆಗೆ ಪ್ರತ್ಯಾಮ್ಲದ ಶೇಕಡಾವಾರು ಸಂತೃಪ್ತಿಯು ಒಂದೇ ಮಟ್ಟದಲ್ಲಿದ್ದರೂ ಸೋಡಿಯಂ ಅಯಾನ್‌ಗಳ ಪ್ರಾಬಲ್ಯವಿರುವ ಮಣ್ಣಿನ ರಸಸಾರ (pH)ವು ಕ್ಯಾಲ್ಸಿಯಂ ಇಲ್ಲವೇ ಮೆಗ್ನಿಷಿಯಂ ಅಯಾನ್‌ಗಳ ಪ್ರಾಬಲ್ಯವಿರುವ ಮಣ್ಣಿಗಿಂತ ಅಧಿಕವಾಗಿರುತ್ತದೆ.

. ಮಣ್ಣಿನಲ್ಲಿರುವ ಲವಣಗಳ ಪ್ರಮಾಣ : ಪೋಟ್ಯಾಸಿಯಂ, ಸೋಡಿಯಂ, ಕ್ಯಾಲ್ಸಿಯಂ, ಇಲ್ಲವೇ ಮೆಗ್ನಿಷಿಯಂ ಗಳ ಕ್ಲೋರೈಡ್ ಇಲ್ಲವೇ ಸಲ್ಫೇಟ್ ಲವಣಗಳಿರುವ ಮಣ್ಣಿನ ರಸಸಾರ (pH) ವು ಲವಣಗಳಿಲ್ಲದ ಮಣ್ಣಿಗಿಂತ ಕಡಮೆ ಇರುತ್ತದೆ. ಈ ರೀತಿಯ ವ್ಯತ್ಯಾಸಗಳಿಗೆ ಕಾರಣಗಳನ್ನು ಕೆಳಗಿನ ರಾಸಾಯನಿಕ ಕ್ರಿಯೆಯಿಂದ ತಿಳಿದುಕೊಳ್ಳಬಹುದು.

 ಕ್ಯಾಲ್ಸಿಯಂ ಕ್ಲೋರೈಡ್ ಲವಣವನ್ನು ಮಣ್ಣಿಗೆ ಸೇರಿಸಿದ್ದರಿಂದ ಜಲಜನಕದ ಅಯಾನ್‌ಗಳು ಹೊರ ಬಂದು ಮಣ್ಣಿನ ದ್ರಾವಣವನ್ನು ಸೇರುತ್ತವೆ. ಹೀಗಾಗಿ, ರಸಸಾರ (pH)ವು ಕಡಮೆಯಾಗುತ್ತದೆ. ಇತರ ಧಾತುವಿನ ಲವಣಗಳನ್ನು ಮಣ್ಣಿಗೆ ಸೇರಿಸಿದಾಗ ಇದೇ ರೀತಿಯ ರಾಸಾಯನಿಕ ಕ್ರಿಯೆಯು ನಡೆಯುತ್ತದೆ.

ಮಣ್ಣಿನ ಆಮ್ಲತೆಯ ನಿವಾರಣೆ : ಮಣ್ಣಿನ ಆಮ್ಲತೆಯನ್ನು ನಿವಾರಿಸಿದರೆ ಸಸ್ಯದ ಸರಿಯಾದ ಬೆಳವಣಿಗೆಗೆ ಅನುಕೂಲವನ್ನು ಮಾಡಿಕೊಟ್ಟಂತಾಗುತ್ತದೆ. ಇದಕ್ಕಾಗಿ ಮಣ್ಣಿನ ಸೂಕ್ಷ್ಮ ಕಣಗಳ ಮೇಲಿರುವ ಜಲಜನಕ ಮತ್ತು ಅಲ್ಯೂಮಿನಿಯಂ ಅಯಾನ್‌ಗಳು, ಮಣ್ಣಿನ ಕಣಗಳನ್ನು ಬಿಟ್ಟು ಹೊರ ಬರುವಂತೆ ಮಾಡಬೇಕು ಮತ್ತು ಅವು ನಿಷ್ಕ್ರಿಯೆವಾಗುವಂತಾಗಬೇಕು. ಹಲವು ಪ್ರತ್ಯಾಮ್ಲಗಳು ಈ ಕ್ರಿಯೆಯನ್ನು ಮಾಡಬಲ್ಲವಾದರೂ ಸಸ್ಯದ ಬೆಳವಣಿಗೆಗೆ ಪ್ರಯೋಜನಕಾರಿಯಾದ ಮತ್ತು ಸಸ್ಯಗಳಿಗೆ ಅಪಾಯವನ್ನುಂಟು ಮಾಡದ ಪ್ರತ್ಯಾಮ್ಲಗಳನ್ನು ಬಳಸಬೇಕು. ಈ ದೃಷ್ಟಿಯಿಂದ ಕ್ಯಾಲ್ಸಿಯಂ ಪ್ರಶಸ್ತ್ಯವೆನ್ನಬಹುದು. ಮೆಗ್ನೀಷಿಯಂ ಸಹ ಈ ಕಾರ್ಯಕ್ಕೆ ಪ್ರಯೋಜನಕಾರಿ ಎನ್ನಬಹುದು. ಆದರೆ, ಸೋಡಿಯಂ ಪ್ರತ್ಯಾಮ್ಲವನ್ನು ಬಳಸಿದರೆ ಮಣ್ಣಿನ ಮತ್ತು ಸಸ್ಯದ ದೃಷ್ಟಿಯಿಂದ ಅಪಾಯಕಾರಿಯೆನಿಸುತ್ತದೆ.

ಮಣ್ಣಿನ ಆಮ್ಲತೆಯ ನಿವಾರಣೆಗೆ ಬಳಸುವ ವಸ್ತುಗಳಲ್ಲಿ ಇರಬೇಕಾದ ಗುಣಧರ್ಮಗಳು : ಈಗಾಗಲೇ ಸೂಚಿಸಿದಂತೆ ಮಣ್ಣಿನ ಆಮ್ಲತೆಯನ್ನು ಹೋಗಲಾಡಿಸಲು ಸೋಡಿಯಂ ಇರುವ ಸಂಯುಕ್ತಗಳು ಪ್ರಯೋಜನಕಾರಿಯಾಗುವುದಿಲ್ಲ. ಕ್ಯಾಲ್ಸಿಯಂ ಅಥವಾ ಮೆಗ್ನಿಸಿಯಂ ಇರುವ ಸಂಯುಕ್ತಗಳೇ ಪ್ರಶಸ್ತ. ಆದರೆ ಕ್ಯಾಲ್ಸಿಯಂ ಅಥವಾ ಮೆಗ್ನಿಸಿಯಂ ಇರುವ ಎಲ್ಲ ಸಂಯುಕ್ತಗಳೂ ಮಣ್ಣಿನ ಆಮ್ಲತೆಯನ್ನು ನಿವಾರಿಸಲಾರವು ಎಂಬುವುದನ್ನು ಗಮನಿಸಬೇಕು. ಆದ್ದರಿಂದ ಕೆಳಗಿನ ಗುಣಧರ್ಮಗಳಿರುವ ವಸ್ತುಗಳನ್ನೇ ಆರಿಸಿಕೊಳ್ಳಬೇಕು.

i) ಮಣ್ಣಿನ ಆಮ್ಲತೆಯನ್ನು ನಿವಾರಿಸುವ ಸಾಮರ್ಥ್ಯವು ಸೌಮ್ಯ ರೂಪದ್ದಾಗಿರಬೇಕು. ಈ ಸಾಮರ್ಥ್ಯವು ಅತಿ ತೀಕ್ಷ್ಣವಾಗಿದ್ದರೆ ಒಂದೊಮ್ಮೆ ಈ ವಸ್ತುವಿನ ಪ್ರಮಣವು ಸ್ವಲ್ಪ ಅಧಿಕಗೊಂಡರೂ ಮಣ್ಣಿಗೆ ಮತ್ತು ಬೆಳೆಗೆ ಅಪಾಯವುಂಟಾಗುತ್ತದೆ.

ii) ಆಮ್ಲ ಮಣ್ಣಿನ ಕಣಗಳ ಮೇಲಿರುವ ಜಲಜನಕ ಮತ್ತು ಅಲ್ಯೂಮಿನಿಯಿಂ ಅಯಾನ್‌ಗಳನ್ನು ಹೊರಹಾಕಿ, ಆ ಸ್ಥಳಗಳಲ್ಲಿ ಕ್ಯಾಲ್ಸಿಯಂ ಮತ್ತು ಕಡಮೆ ಸಂಖ್ಯೆಯಲ್ಲಿ ಮೆಗ್ನಿಷಿಯಂ ಅಯಾನ್‌ಗಳು ಸ್ಥಾಪಿತಗೊಳ್ಳಬೇಕು.

iii) ಮಣ್ಣಿನ ಕಣಗಳ ರಚನೆ ಉತ್ತಮಗೊಳ್ಳಬೇಕು.

iv) ಮಾರುಕಟ್ಟೆಯಲ್ಲಿ ಸುಲಭವಾಗಿ ಮತ್ತು ಸೂಕ್ತ ಬೆಲೆಯಲ್ಲಿ ದೊರೆಯುವ ವಸ್ತುವಾಗಿರಬೇಕು.

v) ಮಣ್ಣಿನ ಆಮ್ಲತೆಯನ್ನು ನಿವಾರಿಸುವ ಕಾರ್ಯವು ಪೂರ್ಣಗೊಳ್ಳಬೇಕು. ಈ ರಾಸಾಯನಿಕ ಕ್ರಿಯೆಯು ಕೆಲವು ಸಮಯದ ನಂತರ ಹಿಂಗಿರುಗಿ ಮಣ್ಣು ಮೊದಲಿನ (ಪೂರ್ವ)ಸ್ಥಿತಿಗೆ ಮರಳುವಂತಾಗಬಾರದು. ಇದು ಮಣ್ಣಿನ ಆಮ್ಲತೆಯನ್ನು ನಿವಾರಿಸುವ ವಸ್ತುಗಳಲ್ಲಿ ಇರಬೇಕಾದ ಒಂದು ಮಹತ್ವದ ಗುಣಧರ್ಮವೆನ್ನಬಹುದು.

ಆಮ್ಲ ಮಣ್ಣಿಗೆ ಕ್ಯಾಲ್ಸಿಯಂ ಕಾರ್ಬೊನೇಟನ್ನು ಸೇರಿಸಿದರೆ ನಡೆಯುವ ರಾಸಾಯನಿ ಕ್ರಿಯೆಯನ್ನು ಕೆಳಗಿನಂತೆ ಬರೆಯಬಹುದು. 

 ಮೇಲೆ ತೋರಿಸಿದ ಕ್ರಿಯೆಯಲ್ಲಿ ಆಮ್ಲ ಮಣ್ಣಿನ ಕಣಗಳ ಮೇಲಿರುವ ಜಲಜನಕ ಅಯಾನ್‌ಗಳು, ಕ್ಯಾಲ್ಸಿಯಂ ಕಾರ್ಬೊನೇಟ್ ನೊಂದಿಗೆ ಪ್ರತಿಕ್ರಿಯೆಗೊಂಡು, ಕ್ಯಾಲ್ಸಿಯಂ ಅಯಾನ್‌ಗಳು ಬಿಡುಗಡೆ ಹೊಂದಿ, ಜಲಜನಕ ಅಯಾನ್‌ಗಳಿರುವ ಸ್ಥಾನವನ್ನು ಆಕ್ರಮಿಸುತ್ತವೆ. ಕಾರ್ಬೊನೇಟ್ ನೊಳಗಿರುವ ಒಂದು ಆಮ್ಲಜನಕದ ಅಣುವಿನೊಡನೆ ಜಲಜನಕದ ಎರಡು ಅಣುಗಳು ಸೇರಿ ನೀರು ನಿರ್ಮಾಣವಾಗುತ್ತದೆಯಲ್ಲದೇ ಇಂಗಾಲದ ಡೈ ಆಕ್ಸೈಡ್ ವಿಮೋಚನೆಗೊಳ್ಳುತ್ತದೆ. ಈ ರೀತಿಯಿಂದ ರಾಸಾಯನಿಕ ಕ್ರಿಯೆಯು ಪೂರ್ಣಗೊಂಡಂತಾಯಿತು.

ಕ್ಯಾಲ್ಸಿಯಂ ಕಾರ್ಬೊನೇಟ್ ನ ಬದಲು ,ಕ್ಯಾಲ್ಸಿಯಂ ಇನ್ನೊಂದು ಸಂಯುಕ್ತವಾದ ಕ್ಯಾಲ್ಸಿಯಂ ಕ್ಲೋರೈಡ್ ನ್ನು ಮಣ್ಣಿಗೆ ಸೇರಿಸಿದರೆ ಕೆಳಗಿನಂತೆ ರಾಸಾಯನಿಕ ಕ್ರಿಯೆಯು ನಡೆಯುತ್ತದೆ.

 ಇಲ್ಲಿಯೂ ಆಮ್ಲಯುತ ಮಣ್ಣಿನ ಕಣಗಳ ಮೇಲಿರುವ ಜಲಜನಕ ಅಯಾನ್‌ಗಳನ್ನು ಹೊರದೋಡಿ,ಕ್ಯಾಲ್ಸಿಯಂ ಅಯಾನ್‌ಗಳು ಆ ಸ್ಥಳವನ್ನು ಆವರಿಸಿಕೊಂಡರೂ ಹೊರಬಿದ್ದ ಜಲಜನಕ ಅಯಾನ್‌ನಿಷ್ಕ್ರಿಯೆಗೊಳ್ಳದೆ ಮಣ್ಣಿನಲ್ಲಿಯೇ ಉಳಿದು ಕೊಳ್ಳುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಸಂಗ್ರಹಗೊಂಡ ಜಲಜನಕ ಅಯಾನ್‌ಗಳು ಕ್ಯಾಲ್ಸಿಯಂ ಅಯಾನ್‌ಗಳನ್ನು ಹೊರಹಾಕಿ ಆ ಸ್ಥಳವನ್ನು ಪುನಃ ಆವರಿಸಿಕೊಳ್ಳುತ್ತವೆ. ಅಂದರೆ ರಾಸಾಯನಿಕ ಕ್ರಿಯೆಯು ದಿಕ್ಕನ್ನು ಬದಲಿಸಿ, ಮಣ್ಣು ಮೊದಲಿನ (ಪೂರ್ವ) ಸ್ಥಿತಿಗೆ ಮರಳುವುದಿಂದ ಆಮ್ಲ ಮಣ್ಣೇ ಉಳಿದಂತಾಗುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಕ್ಲೋರೈಡ್, ಮಣ್ಣಿನ ಆಮ್ಲತೆಯನ್ನು ನಿವಾರಿಸಲು ಬಳಸಬಹುದಾದ ಕ್ಯಾಲ್ಸಿಯಂನ ಯೋಗ್ಯ ಸಂಯುಕ್ತ ವಸ್ತುವಾಗಲಾರದು. ಇದರಂತೆಯೇ ಮೆಗ್ನಿಸಿಯಂ ಕ್ಲೋರೈಡ್, ಕ್ಯಾಲ್ಸಿಯಂ ಸಲ್ಫೇಟ್,, ಮೆಗ್ನಿಸಿಯಂ ಸಲ್ಫೇಟ್ ಗಳೂ ಮಣ್ಣಿನ ಆಮ್ಲತೆಯನ್ನು ನಿವಾರಿಸುವ ವಸ್ತುಗಳಾಗಲಾರವು.

ಕೆಳಗೆ ತಿಳಿಸಿದ ವಸ್ತುಗಳನ್ನು ಬಳಸಿ ಮಣ್ಣಿನ ಆಮ್ಲತೆಯನ್ನು ದೂರ ಮಾಡಬಹುದು.

i) ಕ್ಯಾಲ್ಸಿಯಂ ಆಕ್ಸೈಡ್ (ಸುಟ್ಟ ಸುಣ್ಣ)

[CaO] : ಸುಣ್ಣದ ಕಲ್ಲು ಇಲ್ಲವೇ ಚಿಪ್ಪುಗಳನ್ನು ಬಟ್ಟೆಯಲ್ಲಿ ಸುಟ್ಟು, ಸುಣ್ಣದ ಆಕ್ಸೈಡನ್ನು ತಯಾರಿಸಲಾಗುತ್ತದೆ. ಈ ಪರಿವರ್ತನೆಯು ಆಗುವಾಗ ಕೆಳಗಿನ ಕ್ರಿಯೆಯು ನಡೆಯುತ್ತದೆ.

ಸುಟ್ಟ ಸುಣ್ಣವು, ಬಿಳಿ ಬಣ್ಣದ ಅತಿ ಜಿನುಗು ಪುಡಿ, ಚರ್ಮಕ್ಕೆ ಅಪಾಯಕಾರಿ . ಕಣ್ಣು ಮತ್ತು ಮೂಗುಗಳಿಗೆ ಬಿದ್ದರೆ ಉರಿಯ ಆರಂಭವಾಗುತ್ತದೆ. ಆದ್ದರಿಂದ ಸುಣ್ಣದ ಪುಡಿಯನ್ನು ಮಣ್ಣಿಗೆ ಪೂರೈಸುವ ಕೆಲಸವು ಕಷ್ಟಕರವೆನ್ನಬಹುದು.

ಆರ್ದ್ರತೆಯ ಸಂಪರ್ಕ ಪರಿವರ್ತನೆಯನ್ನು ಹೊಂದುತ್ತದೆ. ಗಾಳಿಯೊಳಗಿರುವ ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನ (ಆರ್ದ್ರತೆಯ) ಸನ್ನಿಧಿಯಲ್ಲಿ, ಸುಣ್ಣದ ಆಕ್ಸೈಡ್ ಸುಣ್ಣದ ಕಾರ್ಬೊನೇಟ್ ಆಗಿ ಪರಿವರ್ತನೆ ಹೊಂದುವುದರಿಂದ ಈ ರೀತಿಯ ಗುಳಿಗೆ ಅಥವಾ ಚೂರುಗಳು ನಿರ್ಮಾಣಗೊಳ್ಳುತ್ತವೆ. ಇವು ಗಟ್ಟಿಯಾಗಿ ಹಲವು ದಿನಗಳವರೆಗೆ ಅದೇ ಸ್ಥಿತಿಯಲ್ಲಿ ಉಳಿದುಕೊಳ್ಳುತ್ತವೆ.

ಮಣ್ಣಿನ ಆಮ್ಲತೆಯನ್ನು ನಿವಾರಿಸುವ ದೃಷ್ಟಿಯಿಂದ, ಸುಟ್ಟ ಸುಣ್ಣವು (ಸುಣ್ಣದ ಆಕ್ಸೈಡ) ಉಳಿದೆಲ್ಲ ಸುಣ್ಣದ ವಸ್ತುಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.ಆದರೆ ಇದರ ಬೆಲೆಯೂ ಅಧಿಕ.

ii) ಕ್ಯಾಲ್ಸಿಯಂ ಹೈಡ್ರಾಕ್ಸೈಡ್ [Ca(OH)2]: ಕ್ಯಾಲ್ಸಿಯಂ ಆಕ್ಸೈಡ್ ಗೆ ನೀರನ್ನು ಸೇರಿಸಿದರೆ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಸಿದ್ಧವಾಗುತ್ತದೆ. ನೀರಿನ ಸಂಪರ್ಕವು ಬಂದೊಡನೆ ಅಧಿಕ ಪ್ರಮಾಣದಲ್ಲಿ ಶಾಖವು ಉತ್ಪನ್ನವಾಗಿ ಕ್ಯಾಲ್ಸಿಯಂ ಆಕ್ಸೈಡಿಗೆ ಹಾಕಿದ ನೀರು ಕುದಿಯಲು ಆರಂಭಿಸುತ್ತದೆ. ತಣಿದ ನಂತರ ಒಣಗಿಸಿದರೆ ಸುಣ್ಣದ ಹೈಡ್ರಾಕ್ಸೈಡ್ ಆಗುತ್ತದೆ.

ಕ್ಯಾಲ್ಸಿಯಂ ಆಕ್ಸಯಡ್ + ನೀರು = ಕ್ಯಾಲ್ಸಿಯಂ ಹೈಡ್ರಾಕ್ಸೈಡ್
CaO + 2H2O = Ca (OH)2

ಕ್ಯಾಲ್ಸಿಯಂ ಆಕ್ಸೈಡ್ ನಂತೆ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಸಹ ಬಿಳಿ ಬಣ್ಣದ ನುಣುಪಾದ ಪುಡಿ. ಚರ್ಮಕ್ಕೆ ಅಪಾಯಕಾರಿ. ಕಣ್ಣು – ಮೂಗುಗಳಿಗೆ ಉರಿಯನ್ನುಂಟು ಮಾಡುತ್ತದೆ. ಇದರ ಬೆಲೆಯು ಅಧಿಕ.

iii) ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಕಾರ್ಬೊನೇಟ್ : ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಕಾರ್ಬೊನೇಟ್ ಗಳು ಪ್ರಕೃತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಮತ್ತು ಹಲವು ರೂಪಗಳಲ್ಲಿ ದೊರೆಯುತ್ತವೆ. ಸ್ಪಟಿಕ ರೂಪದಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್ಗೆ ಕ್ಯಾಲ್ಸೈಟ್ ಎಂಬ ಹೆಸರಿದೆ. ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಜೊತೆಗೆ ಇರುವ ಕಾರ್ಬೊನೇಟ್ ಗೆ ಡೋಲೋಮೈಟ್ ಎನ್ನುತ್ತಾರೆ.

ಕಾರ್ಬೊನೇಟ್ ಖಣಿಯ ಮೇಲ್ಬಾಗದಲ್ಲಿರುವ ಮಣ್ಣನ್ನು ಹೊರೆತೆಗೆದು ಸ್ವಚ್ಛಮಾಡಲಾಗುತ್ತದೆ. ಸ್ಫೊಟಕಗಳನ್ನಿಟ್ಟು ಕ್ಯಾಲ್ಸಿಯಂ ಕಾರ್ಬೊನೇಟ್ ಕಲ್ಲುಗಳನ್ನು ಒಡೆದು ಬೇರ್ಪಡಿಸಲಾಗುತ್ತದೆ. ಕಲ್ಲಿನ ದೊಡ್ಡ ತುಣುಕುಗಳನ್ನು ಯಂತ್ರದ ಸಹಾಯದಿಂದ ೨ – ೩ ಸೆಂ.ಮೀ. ವ್ಯಾಸದ ಚೂರುಗಳನ್ನಾಗಿ ಮಾಡಿ, ಬೀಸುವ ಯಂತ್ರದಲ್ಲಿ ಇವುಗಳನ್ನು ಹಾಕಿ ಅತಿ ನುಣುಪಾದ ಪುಡಿಯನ್ನಾಗಿ ಪರಿವರ್ತಿಸಲಾಗುತ್ತದೆ. ಜರಡಿಯಿಂದ ಜಾಲಿಸಿ, ಉರುಟು ತುಂಡುಗಳನ್ನು ಬೇರ್ಪಡಿಸಿ ಮಾರುಕಟ್ಟೆಗೆ ಸಿದ್ಧಮಾಡಲಾಗುತ್ತದೆ.

ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಗಳಿಗಿಂತ ಕ್ಯಾಲ್ಸಿಯಂ ಕಾರ್ಬೊನೇಟಿನಬೆಲೆ ಕಡಿಮೆ ಹಾಗೂ ಮಣ್ಣಿಗೆ ಪೂರೈಸುವ ಕಾರ್ಯವು ಕಡಮೆ ತೊಂದರೆದಾಯಕ.

iv) ಇತರ ವಸ್ತುಗಳು : ಕಬ್ಬಿಣವನ್ನು ತಯಾರಿಸುವಾಗ, ಕಬ್ಬಿಣದಿಂದ ಉಕ್ಕನ್ನು ನಿರ್ಮಿಸುವಾಗ, ಮತ್ತು ರಂಜಕದ ಶಿಲೆಯಿಂದ ರಂಜಕವನ್ನು ಹೊರತೆಗೆಯುವಾಗ ದೊರೆಯುವ ‘ನೊರೆ’ ಅಥವಾ ‘ಜೊಂಡ’ನ್ನು ಪುಡಿ ಪುಡಿ ಮಾಡಿ, ಮಣ್ಣಿನ ಆಮ್ಲತೆಯನ್ನು ನಿವಾರಿಸಲು ಬಳಸಬಹುದು. ಇವು ಪ್ರಮುಖವಾಗಿ ಕ್ಯಾಲ್ಸಿಯಂ ಸಿಲಿಕೇಟ್ ಗಳು, ಕೆಲವು ಜೊಂಡುಗಳಲ್ಲಿ ಮೆಗ್ನಿಷಿಯಂ ಸಿಲಿಕೇಟ್ ಸಹ ಇರುತ್ತದೆ.

ಮೇಲೆ ಹೇಳಿದ ವಸ್ತುಗಳೊಡನೆ ತುಲನೆ ಮಾಡಿದರೆ ಆಮ್ಲತೆಯನ್ನು ನಿವಾರಿಸುವ ಸಾಮರ್ಥ್ಯವು ಕ್ಯಾಲ್ಸಿಯಂ ಅಥವಾ ಮೆಗ್ನಿಸಿಯಂ ಸಿಲಿಕೇಟ್ ಗಳಿಗೆ ಕಡಮೆ.

ಆಮ್ಲತೆಯ ನಿವಾರಣಾ ಸಾಮರ್ಥ್ಯ : ಮಣ್ಣಿನ ಆಮ್ಲತೆಯನ್ನು ನಿವಾರಿಸುವ ಸಾಮರ್ಥ್ಯವು ಮೇಲೆ ಹೇಳಿದ ಎಲ್ಲ ವಸ್ತುಗಳಲ್ಲಿ ಒಂದೇ ಮಟ್ಟದಲ್ಲಿರುವುದಿಲ್ಲ. ಪ್ರತಿ ವಸ್ತವಿನ ರಾಸಾಯನಿಕ ರೂಪಕ್ಕೂ ಆಮ್ಲತೆಯನ್ನು ನಿವಾರಿಸುವ ಸಾಮರ್ಥ್ಯಕ್ಕೂ ನೇರ ಸಂಬಂಧವಿದೆ. ಪರಿಶುದ್ಧವಾದ ಕ್ಯಾಲ್ಸಿಯಂ ಕಾರ್ಬೊನೇಟ್ ನ ಆಮ್ಲ ನಿವಾರಣಾ ಸಾಮರ್ಥ್ಯವು ೧೦೦ ಎಂದು ಪರಿಗಣಿಸಿ, ಕ್ಯಾಲ್ಸಿಯಂ ಅಥವಾ ಮೆಗ್ನಿಸಿಯಂ ಇರುವ ವಸ್ತುಗಳ ಆಮ್ಲ ನಿವಾರಣಾ ಸಾಮರ್ಥ್ಯವನ್ನು ಲೆಕ್ಕ ಮಾಡಬಹುದು.

ಕೆಳಗಿನ ಉದಾಹರಣೆಯಲ್ಲಿ ಕ್ಯಾಲ್ಸಿಯಂ ಆಕ್ಸೈಡ್ ನ ಆಮ್ಲ ನಿವಾರಣ ಸಾಮರ್ಥ್ಯ ವನ್ನುಕಂಡುಹಿಡಿಯುವ ವಿಧಾನವನ್ನು ತೋರಿಸಿದೆ. ಕ್ಯಾಲ್ಸಿಯಂ, ಕಾರ್ಬೊನೇಟ್ ಮತ್ತು ಕ್ಯಾಲ್ಸಿಯಂ ಆಕ್ಸೈಡ್ ಪರಮಾಣು ತೂಕವನ್ನು ಮೊದಲು ಕಂಡುಹಿಡಿಯಬೇಕು.

ಕ್ಯಾಲ್ಸಿಯಂ ಕರ್ಬೊನೇಟ್ CaCO3

ಕ್ಯಾಲ್ಸಿಯಂ ಆಕ್ಸೈಡ್  CaO

ಕ್ಯಾಲ್ಸಿಯಂ (Ca) 1×40=40 ಕ್ಯಾಲ್ಸಿಯಂ (Ca) 1×40 = 40
ಇಂಗಾಲ್ (C) 1×12=12 ಆಮ್ಲಜನಕ (O) 1×16=16
ಆಮ್ಲಜನಕ (O) 3×16=48
100 50

ಕ್ಯಾಲ್ಸಿಯಂ ಕಾರ್ಬೊನೇಟಿನ ೧೦೦ ತೂಕವು ಮಾಡುವ ಕೆಲಸವನ್ನು ಕ್ಯಾಲ್ಸಿಯಂ ಆಕ್ಸೈಡ್ನ ೫೬ ತೂಕವು ಮಾಡಬಲ್ದೆಂದುಮೇಲಿನ ಅಂಕಿ ಅಂಶಗಳಿಂದ ಕಂಡುಬರುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಆಕ್ಸೈಡ್ನ ಆಮ್ಲ ನಿವಾರಣಾ ಸಾಮರ್ಥ್ಯವು ೧೦೦ x ೧೦೦ / ೫೬ ಅಂದರೆ ಶೇಕಡಾ ೧೭೯ ಎಂದಂತಾಯಿತು.

ಇದೇ ರೀತಿಯ ಲೆಕ್ಕವನ್ನು ಮಾಡಿ ಸುಣ್ಣದ ಇತರೆ ವಸ್ತುಗಳ ಆಮ್ಲ ನಿವಾರಣಾ ಸಾಮಾರ್ಥ್ಯವನ್ನು ಕಂಡುಹಿಡಿಯಬಹುದು. ವಿವರಗಳನ್ನು ಕೋಷ್ಟಕ ೨೭ರಲ್ಲಿ ಕೊಡಲಾಗಿದೆ.