ಮಣ್ಣು ಪರೀಕ್ಷೆ ಆಧರಿಸಿ ಪೋಷಕಾಂಶಗಳ ಸಿಫಾರಸು

ಮುಖ್ಯ ಪೋಷಕಾಂಶಗಳು ಯಾವ ಫಲವತ್ತತೆಯ ಗುಂಪಿಗೆ ಸೇರಿವೆ ಎಂದು ನಿರ್ಧರಿಸಿದ ನಂತರ ಶಿಫಾರಸು(ನಿಗದಿತ) ಮಾಡಿದ ರಾಸಾಯನಿಕ ಗೊಬ್ಬರಗಳನ್ನು ನಿಗದಿತ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಫಲವತ್ತತೆ ಮಧ್ಯಮ ವರ್ಗಕ್ಕೆ ಸೇರಿದ್ದರೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಯಾವ ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇಲ್ಲ. ಪೋಷಕಾಂಶಗಳು ಕಡಿಮೆ ಅಥವಾ ಅಧಿಕ ಫಲವತ್ತತೆ ವರ್ಗಕ್ಕೆ ಸೇರಿದ್ದರೆ, ಈ ಕೆಳಗಿನಂತೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಬದಲಾಯಿಸಿಕೊಳ್ಳಬಹುದು.

ಬೆಳೆಗೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರ (ಹೆಕ್ಟೇರ್‌ಗೆ) ಕಡಿಮೆ ಫಲವತ್ತತೆ ಮಣ್ಣಿನಲ್ಲಿನ ಶಿಫಾರಸಿನ ಮೇಲೆ ಹೆಚ್ಚಿಸಬೇಕಾದ ಪ್ರಮಾಣ (ಹೆಕ್ಟೇರಿಗೆ) ಅಧಿಕ ಫಲವತ್ತತೆ ಮಣ್ಣಿನಲ್ಲಿ ಶಿಫಾರಸಿನಲ್ಲಿ ಕಡಿಮೆ ಮಾಡಬೇಕಾದ ಪ್ರಮಾಣ (ಹೆಕ್ಟೇರಿಗೆ)
ಸಾರಜನಕ : (N)
೫೦ ಕಿ. ಗ್ರಾಂ ಗಿಂತ ಕಡಿಮೆ ಯಾವ ಬದಲಾವಣೆ ಮಾಡಬೇಕಿಲ್ಲ
೫೧-೧೦೦ ಕಿ.ಗ್ರಾಂ + ೧೨.೫ ಕಿ.ಗ್ರಾಂ – ೧೨.೫ ಕಿ.ಗ್ರಾಂ
೧೦೦-೧೭೫ ಕಿ.ಗ್ರಾಂ + ೨೫ ಕಿ.ಗ್ರಾಂ – ೨೫ ಕಿ.ಗ್ರಾಂ
೧೭೫-೨೫೦ ಕಿ.ಗ್ರಾಂ + ೩೭.೫ ಕಿ.ಗ್ರಾಂ – ೩೭.೫ ಕಿ.ಗ್ರಾಂ
೨೫೧-೩೨೫ ಕಿ.ಗ್ರಾಂ + ೫೦ ಕಿ.ಗ್ರಾಂ – ೫೦ ಕಿ.ಗ್ರಾಂ
ರಂಜಕ : (P205)
೨೫ ಕಿ. ಗ್ರಾಂ ಗಿಂತ ಕಡಿಮೆ ಯಾವ ಬದಲಾವಣೆ ಮಾಡಬೇಕಿಲ್ಲ
೨೬-೭೫ ಕಿ.ಗ್ರಾಂ + ೧೨.೫ ಕಿ.ಗ್ರಾಂ – ೧೨.೫ ಕಿ.ಗ್ರಾಂ
೭೬-೧೨೫ ಕಿ.ಗ್ರಾಂ + ೨೫ ಕಿ.ಗ್ರಾಂ – ೨೫ ಕಿ.ಗ್ರಾಂ
ಪೊಟ್ಯಾಶ್ : (K20)
೨೫ ಕಿ. ಗ್ರಾಂ ಗಿಂತ ಕಡಿಮೆ ಯಾವ ಬದಲಾವಣೆ ಮಾಡಬೇಕಿಲ್ಲ
೨೬-೫೦ ಕಿ.ಗ್ರಾಂ + ೧೨.೫ ಕಿ.ಗ್ರಾಂ – ೧೨.೫ ಕಿ.ಗ್ರಾಂ
೫೧-೧೦೦ ಕಿ.ಗ್ರಾಂ + ೨೫ ಕಿ.ಗ್ರಾಂ – ೨೫ ಕಿ.ಗ್ರಾಂ
೧೦೧-೧೭೫ ಕಿ.ಗ್ರಾಂ + ೩೭.೫ ಕಿ.ಗ್ರಾಂ – ೩೭.೫ ಕಿ.ಗ್ರಾಂ

ಉದಾಹರಣೆ : ತೊಗರೆ ಹಾಗೂ ಕಡಲೆಗೆ ಹೆಕ್ಟೇರಿಗೆ ೨೫ ಕಿ. ಗ್ರಾಂ ಸಾರಜನಕ ಶಿಫಾರಸ್ಸು ಮಾಡಲಾಗಿದೆ. ಇಂತಹ ಬೆಳೆಗಳಿಗೆ ಶಿಫಾರಸು ಮಾಡಿರುವ ಪ್ರಮಾಣ ೫೦ ಕಿ. ಗ್ರಾಂ ಗಿಂತ ಕಡಿಮೆ ಇರುವುದರಿಂದ ಮಣ್ಣಿನಲ್ಲಿ ಸಾರಜನಕ ಫಲವತ್ತತೆ ಯಾವುದೇ ವರ್ಗಕ್ಕೆ ಸೇರಿದ್ದರೂ ರಾಸಾಯನಿಕ ಗೊಬ್ಬರದ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಬೇಕಿಲ್ಲ.

ಭತ್ತಕ್ಕೆ ಮುಂಗಾರಿನಲ್ಲಿ ಹೆಕ್ಟೇರಿಗೆ ೧೦ ಕಿ. ಗ್ರಾಂ ಸಾರಜನಕ ಶಿಫಾರಸು ಮಾಡಲಾಗಿದೆ. ಮಣ್ಣಿನ ಫಲವತ್ತತೆ ಮಧ್ಯಮ ವರ್ಗಕ್ಕೆ ಸೇರಿದ್ದರೆ, ನಿಗದಿತ ಪ್ರಮಾಣ(೧೦೦ ಗ್ರಾಂ) ದಲ್ಲಿ ಯಾವುದೇ ಬದಲಾವಣೆ ಮಾಡಬೇಕಿಲ್ಲ. ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಕಡಿಮೆ ಫಲವತ್ತತೆ ವರ್ಗಕ್ಕೆ ಸೇರಿದ್ದರೆ, ಶಿಫಾರಸು ಮಾಡಿರುವ ಸಾರಜನಕದ ಜೊತೆಗೆ ೧೨.೫ ಕಿ.ಗ್ರಾಂ ಹೆಚ್ಚಿಗೆ ಸಾರಜನಕ ಕೊಡಬೇಕು. ಅಂದರೆ ಒಟ್ಟು ೧೧೨.೫ ಕಿ.ಗ್ರಾಂ. ಕೊಡಬೇಕು. ಆದರೆ ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಅಧಿಕ ಫಲವತ್ತತೆ ವರ್ಗಕ್ಕೆ ಸೇರಿದ್ದರೆ, ಶಿಫಾರಸು ಮಾಡಿದ ಸಾರಜನಕದಲ್ಲಿ ೧೨.೫ ಕಿ.ಗ್ರಾಂ ಕಡಿಮೆ ಮಾಡಿಕೊಳ್ಳಬೇಕು. ಹೀಗೆ ಮೂರು ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶ್‌ನಲ್ಲೂ ಮಣ್ಣಿನ ಫಲವತ್ತತೆ ಆಧಾರದ ಮೇಲೆ, ಮೇಲೆ ಹೇಳಿದ ಕೋಷ್ಟಕದ ಪ್ರಕಾರ ಕೊಡಬೇಕಾದ ರಾಸಾಯನಿಕ ಗೊಬ್ಬರಗಳಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ.

ಲಘು ಪೋಷಕಾಂಶಗಳ ವರ್ಗಿಕರಣ

ಲಘು ಪೋಷಕಾಂಶಗಳ ಪ್ರಮಾಣವನ್ನು ಆಧರಿಸಿ ಈ ಕೆಳಗಿನಂತೆ ವರ್ಗಿಕರಣ ಮಾಡಬಹುದು.

ಸೂಕ್ಷ್ಮ ಪೋಷಕಾಂಶಗಳು (ಮಿಲಿ.ಗ್ರಾಂ / ಕಿ.ಗ್ರಾಂ) ಕಡಿಮೆ ಮಧ್ಯಮ ಹೆಚ್ಚು
ಕಬ್ಬಿಣ <೨.೫ ೨.೫-೪.೫ >೪.೫
ಮ್ಯಾಂಗನೀಸ್ <೨.೦ ೨.೫-೫.೦ >೫.೦
ಸತು <೦.೬ ೦.೬-೧.೨ >೧.೨
ತಾಮ್ರ <೦.೩ ೦.೩-೦.೫ >೦.೫
ಬೊರಾನ್ <೦.೫ ೦.೫-೧.೦ >೧.೦
ಮಾಲಿಬ್ದನಂ <೦.೦೩ ೦.೦೩-೦.೦೬ >೦.೦೬

ಮಣ್ಣಿನ ಪರೀಕ್ಷಾ ಕಾರ್ಡ : ಸಮಾಚಾರ ಪತ್ರಿಕೆಯು ಮಣ್ಣಿನ ವಿಶ್ಲೇಷಣೆಯ ಮೇಲಿಂದ ಒಳ್ಳೆಯ ಶಿಫಾರಸ್ಸು ಮಾಡಲು ಸಹಾಯಕವಾಗುತ್ತದೆ. ಈ ಪತ್ರಿಕೆಯನ್ನು ಜಮೀನಿನ ಬಗ್ಗೆ ಎಲ್ಲ ಪೂರ್ವಭಾವಿ ಇತಿಹಾಸವನ್ನು ನಿವೇದಿಸುವಂತೆ ಬರೆಯಬೇಕು. ಆಗ ಮಣ್ಣಿನ ವಿಶ್ಲೇಷಣೆಯ ಜೊತೆಗೆ ಜಮೀನಿನ ಇತಿಹಾಸ ಪರಿಚಯ ಮಾಡಿಕೊಂಡು ಯಾವುದೇ ಒಂದು ಬೆಳೆಗಾಗಿ ರಾಸಾಯನಿಕ ಗೊಬ್ಬರಗಳ ಉಪಯೋಗದ ಬಗ್ಗೆ ಒಳ್ಳೆಯ ಶಿಫಾರಸ್ಸು ಮಾಡಬಹುದು. ಬಿತ್ತಬೇಕಾದ ಬೆಳೆಯ ಜಾತಿ, ಭೂಮಿಯ ಇಳಿಜಾರು, ನೀರಾವರಿ ಆಶ್ರಯ, ಮಣ್ಣಿನಲ್ಲಿ ನೀರು ಇಂಗುವಿಕೆಗೆ ಇರುವ ಅನುಕೂಲತೆಗಳು, ಮೊದಲಿನ ಬೆಳೆ ಹಾಗೂ ಅದಕ್ಕೆ ಹಾಕಿದ ಗೊಬ್ಬರ, ಹಿಂದಿನ ಮೂರು ವರ್ಷ ಅಥವಾ ಹಂಗಾಮುಗಳಲ್ಲಿ ಗೊಬ್ಬರ ಕೊಟ್ಟ ವಿವರ ಇವೆಲ್ಲವೂ ಒಂದು ಬೆಳೆಗೆ ನಿರ್ದಿಷ್ಟವಾಗಿ ಕೊಡಬೇಕಾದ ಗೊಬ್ಬರದ ಪರಿಣಾಮವನ್ನು ನಿರ್ಧರಿಸುತ್ತವೆ. ಮಣ್ಣಿನಲ್ಲಿ ಯಾವುದೇ ವಿಶಿಷ್ಟ ಗುಣವಿದ್ದರೆ ಅದನ್ನು ಕಾರ್ಡನಲ್ಲಿ ನಮೂದಿಸಬೇಕು. ಇದು ಇಲ್ಲದೇ ಹೋದರೆ ಮಣ್ಣಿನ ರಸಾಯನ ತಜ್ಞರು ಕೇವಲ ಮಣ್ಣಿನ ವಿಶ್ಲೇಷಣೆಯ ಮೇಲಿಂದ ಗೊಬ್ಬರ ಶಿಫಾರಸ್ಸು ಮಾಡಬೇಕಾಗುತ್ತದೆ. ಹೀಗಾಗಿ ಅನೇಕ ವೇಳೆ ರೈತನಿಗೆ ಗೊಬ್ಬರ ಹಾಕುವ ವಿವರದ ಬಗ್ಗೆ ಸರಿಯಾದ ಶಿಫಾರಸ್ಸು ದೊರೆಯದೇ ಹೋಗಬಹುದು.

ಮಣ್ಣಿನ ಪರೀಕ್ಷಾ ಕಾರ್ಡನ ತಿಳುವಳಿಕೆ : ಮೊದಲನೇ ಭಾಗದಲ್ಲಿ ಮಣ್ಣಿನ ಪಿ.ಎಚ್. ಲವಣಾಂಶ ಹಾಗೂ ಪೋಷಕಾಂಶಗಳ ಪ್ರಮಾಣದ ವರ್ಗೀಕರಣವನ್ನು ವಿವರಿಸಲಾಗುತ್ತದೆ. ಅದಲ್ಲದೆ, ಈ ವರ್ಗೀಕರಣದ ಆಧಾರದ ಮೇಲೆ, ಹೆಚ್ಚಿದ್ದರೆ ಕಡಿಮೆ, ಕಡಿಮೆ ಇದ್ದರೆ ಹೆಚ್ಚಿಗೆ ಮಾಡುವುದರ ಬಗ್ಗೆ ಮಾಹಿತಿ ಕೊಡಲಾಗುತ್ತದೆ.

ಒಂದನೇ ಭಾಗದಲ್ಲಿ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಬಂದ ಅಂಕಿಅಂಶಗಳನ್ನು ನಮೂದಿಸಿ ಅವುಗಳ ವರ್ಗವನ್ನು ಸೂಚಿಸಲಾಗುತ್ತದೆ. ಇದರ ಆಧಾರದ ಮೇಲೆ ಮುಂದಿನ ಹಂಗಾಮಿನಲ್ಲಿ ಬೆಳೆಯುವ ೩-೪ ಪ್ರಮುಖ ಬೆಳೆಗಳಿಗೆ ರಾಸಾಯನಿಕ ಗೊಬ್ಬರದ ಶಿಫಾರಸು ಕೊಡಲಾಗುತ್ತದೆ.

ಮೂರನೆಯ ಭಾಗದಲ್ಲಿ ಈ ರಸಾಯನ ಗೊಬ್ಬರಗಳನ್ನು ಹಾಕುವ ವಿಧಾನ, ಕಾಲ ಹಾಗೂ ಹೆಚ್ಚಿನ ಆಮ್ಲತೆ ಅಥವಾ ಕ್ಷಾರತೆ ನಿವಾರಿಸಲು ಮಣ್ಣಿನ ಸುಧಾರಕಗಳ ಉಪಯೋಗದ ಬಗ್ಗೆಯೂ ಶಿಫಾರಸ್ಸು ಮಾಡುತ್ತವೆ. ಇದಲ್ಲದೆ ಆ ಮಣ್ಣಿಗೆ ಸಂಬಂಧಪಟ್ಟ ವಿಶೇಷ ಸಲಹೆಗಳನ್ನು ಕೂಡ ಅಲ್ಲಿ ನಮೂದಿಸಲಾಗುವುದು. ಕೆಲವು ಪ್ರಸಂಗಗಳಲ್ಲಿ ಮಣ್ಣ ಪರೀಕ್ಷಾ ಕೇಂದ್ರಗಳು ಸೂಚಿಸಿದ ಗೊಬ್ಬರಗಳು ಪೇಟೆಯಲ್ಲಿ ದೊರೆಯದಿದ್ದರೆ ಅವುಗಳಿಗೆ ಸಮಾನಾರ್ಥಕವಾದ ಇತರ ಗೊಬ್ಬರಗಳನ್ನು ಹಾಕಬಹುದು.

ಮಣ್ಣಿನ ಪರೀಕ್ಷಾ ಮಾಹಿತಿ ಕಾರ್ಡ್ ನಮೂನೆ

07_241_MP-KUH

ಮಣ್ಣಿನ ಪರೀಕ್ಷಾ ಮಾಹಿತಿ ಕಾರ್ಡ್ ನಮೂನೆ

ಮಣ್ಣು ಪರೀಕ್ಷಾ ವರದಿ ವಿಶ್ಲೇಷಣೆ ಹಾಗೂ ಅನುಸರಣೆ1) ರಸಸಾರ        < 6.3 ಹುಳಿ ಜಮೀನು; 6.3 ರಿಂದ 8.3 ಸಾಮಾನ್ಯ (ಒಳ್ಳೆಯದು); > 8.3 ಕ್ಷಾರ ಜಮೀನು

 

 

2) ಲವಣಾಂಶ : < 1.00 ಒಳ್ಳೆಯದು; 1 ರಿಂದ 2 ಎಚ್ಚರಿಕೆ; > 2 ಕೆಡಕು

(dS/m) ಕಡಿಮೆ ಮಧ್ಯಮ ಹೆಚ್ಚಿಗೆ
3) ಸಾವಯವ ಇಂಗಾಲ (%) <0.50 0.50 ರಿಂದ 0.75 > 0.75
4) ರಂಜಕ (ಕಿ.ಗ್ರಾಂ / ಎಕರೆಗೆ) <9 9 ರಿಂದ 22.0 >22
5) ಪೊಟ್ಯಾಷ್ (ಕಿ.ಗ್ರಾಂ/ಎಕರೆಗೆ) <50 50 ರಿಂದ 120 >120

ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣಗಳ ಮೇಲೆ, ಪೋಷಕಾಂಶಗಳನ್ನು ಕೆಳಗಿನ ಕೊಷ್ಟಕದಲ್ಲಿ ನಮೂದಿಸಿದಂತೆ ಮಣ್ಣಿನ ಫಲಿತಾಂಶದ ಆಧಾರದ ಮೇಲೆ ಕಡಿಮೆ ಇದ್ದರೆ ಹೆಚ್ಚು, ಹೆಚ್ಚು ಇದ್ದರೆ ಕಡಿಮೆ ಮಾಡುವುದು. ಮಧ್ಯಮ ಪರಿಣಾಮ ಇದ್ದಲ್ಲಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಉಪಯೋಗಿಸುವುದು.

 

ಸಾರಜನಕ ರಂಜಕ ಪೊಟ್ಯಾಷ
0-20 ಬದಲಾವಣೆ ಇಲ್ಲ 0-10 ಬದಲಾವಣೆ ಇಲ್ಲ 0-10 ಬದಲಾವಣೆ ಇಲ್ಲ
21-40 + ಅಥವಾ -5 ಕಿಲೊ 11-30 + ಅಥವಾ -5 ಕಿಲೊ 11-20 + ಅಥವಾ -5 ಕಿಲೊ
41-70 + ಅಥವಾ -10 ಕಿಲೊ 31-50 + ಅಥವಾ -10 ಕಿಲೊ 21-40 + ಅಥವಾ -10 ಕಿಲೊ
71-100 + ಅಥವಾ -15 ಕಿಲೊ 51-70 + ಅಥವಾ -15 ಕಿಲೊ 41-70 + ಅಥವಾ -15 ಕಿಲೊ
101-130 + ಅಥವಾ -20 ಕಿಲೊ 71-100 + ಅಥವಾ -20 ಕಿಲೊ 71-100 + ಅಥವಾ -20 ಕಿಲೊ

 

 

 

ಮಣ್ಣಿನ ಪರೀಕ್ಷಾ ಮಾಹಿತಿ ಕಾರ್ಡ್ ನಮೂನೆ

ಮಣ್ಣು ಪರೀಕ್ಷೆಯ ಫಲಿತಾಂಶ:

ಪರೀಕ್ಷಿಸಲಾದ ಅಂಶಗಳು ವರದಿ ವರ್ಗೀಕರಿಸಲಾದ ಗುಂಪು
1. ರಸಸಾರ pH —– ಹುಳಿ / ತಟಸ್ಥ / ಕ್ಷಾರ ಮಣ್ಣು
2. ಲವಣಾಂಶ dS/m —– ಸಾಮಾನ್ಯ / ಅಪಾಯಕಾರಿ / ಅತೀಅಪಾಯಕಾರಿ
3. ಸಾವಯವ ಇಂಗಾಲ (ಶೇಕಡಾ) —– ಕಡಿಮೆ / ಮಧ್ಯಮ / ಅಧಿಕ
4. ದೊರೆಯುವ ರಂಜಕ (ಎಕರೆಗೆ ಕೆ.ಜಿ. ಗಳಲ್ಲಿ) —– ಕಡಿಮೆ / ಮಧ್ಯಮ / ಅಧಿಕ
5. ದೊರೆಯುವ ಪೊಟ್ಯಾಷ್ (ಎಕರೆಗೆ ಕೆ.ಜಿ. ಗಳಲ್ಲಿ) —– ಕಡಿಮೆ / ಮಧ್ಯಮ / ಅಧಿಕ
2) ಲಘು ಪೋಷಕಾಂಶಗಳು:
ಕಬ್ಬಿಣ (ಪಿ.ಪಿ.ಎಮ್) —– ಕಡಿಮೆ / ಮಧ್ಯಮ / ಅಧಿಕ
ಸತುವು (ಪಿ.ಪಿ.ಎಮ್) —– ಕಡಿಮೆ / ಮಧ್ಯಮ / ಅಧಿಕ

3) ರಸಗೊಬ್ಬರಗಳ ಶಿಫಾರಸ್ಸು : (ಸಸ್ಯ ಪೋಷಕಾಂಶಗಳು ಎಕರೆಗೆ ಕೆ.ಜಿ.ಗಳಲ್ಲಿ)

ಹಂಗಾಮು : ವರ್ಷ ಮುಂಗಾರು ಹಿಂಗಾರು/ಬೇಸಿಗೆ
ಬೆಳೆ :
ಸಾರಜನಕ (N)
ರಂಜಕ (P2O5)
ಪೊಟ್ಯಾಷ್ (K2O)
ಸಾವಯವ ಗೊಬ್ಬರ

 

 

ಮಣ್ಣಿನ ಪರೀಕ್ಷಾ ಮಾಹಿತಿ ಕಾರ್ಡ್ ನಮೂನೆ

ಸಲಹೆಗಳು1. ಜೈವಿಕ ಗೊಬ್ಬರ ಬಳಕೆ

2. ತಿಪ್ಪೆ ಗೊಬ್ಬರ / ಕಾಂಪೋಸ್ಟ್ / ಹಸಿರೆಲೆ ಗೊಬ್ಬರ / ಎರೆಗೊಬ್ಬರ ಬಳಕೆ

3. ಜಿಪ್ಸಂ ಬಳಕೆ

4. ಸುಣ್ಣ ಬಳಕೆ

 

 

 

 

 

 

 

 

 

 

 

ಮಣ್ಣಿನ ಆರೋಗ್ಯ

ಮಣ್ಣಿನ ಫಲವತ್ತತೆಯ ವಿವರಗಳನ್ನು ನೀಡುವುದು ಮಾತ್ರ ಮಣ್ಣಿನ ಆರೋಗ್ಯವಲ್ಲ. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಆರೋಗ್ಯದ ಒಂದು ಭಾಗ ಮಾತ್ರ. ಮಣ್ಣಿನ ರಾಸಾಯನಿಕ ಗುಣಧರ್ಮಗಳ ಜೊತೆ ಅದರ ಭೌತಿಕ ಮತ್ತು ಜೈವಿಕ ಗುಣಧರ್ಮ ವಿವರಣೆ ಇದ್ದರೆ ಮಣ್ಣಿನ ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಸಿಗುವುದು.

ಶುದ್ಧ ಗಾಳಿ, ನೀರು, ಹುಲುಸಾದ ಬೆಳೆ, ಅರಣ್ಯ ಮತ್ತು ಹುಲ್ಲುಗಾವಲು ಒದಗಿಸುವ ಸಾಮರ್ಥ್ಯವಿದ್ದಲ್ಲಿ ಅದನ್ನು ನಾವು ಆರೋಗ್ಯಕರ ಮಣ್ಣೆಂದು ಕರೆಯಬಹುದು. ಇದನ್ನು ಮಣ್ಣು ಈ ಕೆಳಕಂಡ ಚಟುವಟಿಕೆಗಳ ಮೂಲಕ ನೆರವೇರಿಸುತ್ತದೆ.

  • ನೀರನ್ನು ಕ್ರಮಬದ್ಧವಾಗಿ ಪೂರೈಸುವುದು
  • ಸಸ್ಯ ಮತ್ತು ಪ್ರಾಣಿ ಜೀವನದ ಸುಸ್ಥಿರತೆ ಕಾಪಾಡುವುದು
  • ಪರಿಸರ ಮಾಲಿನ್ಯಗೊಳಿಸುವ ಪದಾರ್ಥಗಳ ಸೋಸುವಿಕೆ ತಡೆಯಬಹುದು
  • ಪೋಷಕಾಂಶಗಳ ಚಕ್ರ

ಮಣ್ಣಿನ ಗುಣಮಟ್ಟ ಮೇಲಿನ ಎಲ್ಲ ಕಾರ್ಯಗಳನ್ನು ಅದು ಹೇಗೆ ನಿರ್ವಹಿಸುತ್ತದೆ ಎಂಬ ಸಮೀಕ್ಷೇ ಮೇಲೆ ಹೇಳಬಹುದು. ಅದನ್ನು ಕೇವಲ ಬೆಳೆಯ ಇಳುವರಿ, ನೀರಿನ ಗುಣಮಟ್ಟ ಅಥವಾ ಇನ್ನಿತರ ಯಾವುದೇ ಒಂದು ಅಂಶದ ಆಧಾರದ ಮೇಲೆ ಅಳತೆ ಮಾಡಲು ಸಾಧ್ಯವಿಲ್ಲ. ಮಣ್ಣು ಪ್ರಸ್ತುತ ಸಂದರ್ಭದಲ್ಲಿ ಮತ್ತು ಭವಿಷ್ಯದಲ್ಲಿ ಹೇಗೆ ತನ್ನ ಕಾರ್ಯವನ್ನು ನಿರ್ವಹಿಸುವುದು ಎಂಬುದರ ಮೇಲೆ ಅದರ ಗುಣಮಟ್ಟದ ಅಂದಾಜು ಮಾಡಬಹುದು.

ಮಣ್ಣಿನ ಗುಣಮಟ್ಟದ ಸೂಚ್ಯಂಕಗಳು

ಸೂಚ್ಯಂಕಗಳು ಆರೋಗ್ಯಕರ ಮಣ್ಣಿಗಿರುವ ಸಂಬಂಧ
ಮಣ್ಣಿನಲ್ಲಿ ಸಾವಯವ ಪ್ರಮಾಣ ಮಣ್ಣಿನ ಫಲವತ್ತತೆ, ರಚನೆ, ಪೋಷಕಾಂಶಗಳ ಹಿಡಿದಿಡುವಿಕೆ, ಮಣ್ಣಿನ ಸವಕಳಿ ತಡೆದುಕೊಳ್ಳುವಿಕೆ
ಭೌತಿಕ ಗುಣಧರ್ಮಗಳು: ಮಣ್ಣಿನ ರಚನೆ, ಮಣ್ಣಿನ ಆಳ, ನೀರು ಹಿಡಿದಿಡುವ ಸಾಮರ್ಥ್ಯ, ನೀರಿನ ಬಸಿಯುವಿಕೆ ನೀರು ಮತ್ತು ಪೋಷಕಾಂಶಗಳ ಹಿಡಿದಿಟ್ಟುಕೊಳ್ಳುವಿಕೆ ಮತ್ತು ವರ್ಗಾವಣೆ, ಸೂಕ್ಷ್ಮಾಣುಜೀವಿಗಳಿಗೆ ವಾಸಸ್ಥಾನ, ಬೆಳೆ ಉತ್ಪಾದನಾ ಸಾಮರ್ಥ್ಯ, ಗಡಸುತನ, ನೀರಿನ ಇಂಗುವಿಕೆ, ನೀರಿನ ಚಲನೆ ಇತ್ಯಾದಿ.
ರಾಸಾಯನಿಕ ಗುಣಧರ್ಮಗಳು: ರಸಸಾರ ವಿದ್ಯುತ ವಾಹಕತೆ, ಪೋಷಕಾಂಶಗಳ ಲಭ್ಯತೆ ಜೈವಿಕ ಮತ್ತು ರಾಸಾಯನಿಕ ಚಟುವಟಿಕೆಗಳ ಮಿತಿ, ಸಸ್ಯ ಮತ್ತು ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗಳ ಮಿತಿ, ಸಸ್ಯ ಲಭ್ಯ ಪೋಷಕಾಂಶಗಳು ಹಾಗೂ ಸಾರಜನಕ ಮತ್ತು ರಂಜಕದ ಪೋಲಾಗುವಿಕೆ.
ಜೈವಿಕ ಗುಣಧರ್ಮಗಳು: ಸೂಕ್ಷ್ಮಾಣುಜೀವಿ ಸಂಖ್ಯೆ, ಮಣ್ಣಿನ ಉಸಿರಾಟ, ಖನಿಜಯುಕ್ತ ಹೊಂದುವ ಸಾರಜನಕ, ಇಂಗಾಲ ಮತ್ತು ಸಾರಜನಕ ಅನುಪಾತ ಸೂಕ್ಷ್ಮಾಣು ಜೀವಿಗಳ ವಾಹಕ ಸಾಮರ್ಥ್ಯ ಮತ್ತು ಇಂಗಾಲ ಮತ್ತು ಸಾರಜನಕದ ಆಗರ, ಸಾರಜನಕ ಪೂರೈಕೆ ಸಾಮರ್ಥ್ಯ, ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗಳ ಪ್ರಮಾಣ
ಸುಧಾರಣಾ ಕ್ರಮಗಳು :
೧. ಪ್ರತಿಬಂಧಕ ಉಪಾಯಗಳು
೨. ನಿವಾರಣಾ ಉಪಾಯಗಳು
ಪ್ರತಿಬಂಧಕ ಉಪಾಯಗಳು :
೧. ಮಣ್ಣಿನ ಸವಕಳಿ ನಿರ್ವಹಣೆ
೨. ಸಮತಟ್ಟು ಮಾಡುವುದು
೩. ಸೂಕ್ತ ನೀರಾವರಿ ಪದ್ಧತಿ ಅಳವಡಿಸುವುದು
೪. ನೀರಿನ ಬಳಕೆ
ನಿವಾರಣಾ ಉಪಾಯಗಳು೧. ಕಾರಣ ಗುರುತಿಸಿ ಸುಧಾರಣಾ ಕ್ರಮ ನಿರೂಪಣೆ.

೨. ಸೂಕ್ತ ನೀರಾವರಿ ಪದ್ಧತಿಗಳ ಬಳಕೆ.

೩. ಕ್ಷೇತ್ರದ ಮಣ್ಣಿನ ಸಂಪೂರ್ಣ ಗುಣಮಟ್ಟ ತಿಳಿಯುವುದು.

೪. ಮಣ್ಣು ಆರೋಗ್ಯ ಕಾಡುಗಳ ನೀಲಿ ನಕ್ಷೆ ತಯಾರಿಕೆ.

೫. ಮಣ್ಣಿನ ವಿಶ್ಲೇಷಣೆ ಆಧಾರದ ಮೇಲೆ ಪೋಷಕಾಂಶ ನಿರ್ವಹಣೆ.

೬. ಹೊಬಳಿ ಮಟ್ಟದ ಮಣ್ಣಿನ ಆರೋಗ್ಯದ ನಿರಂತರ ಮೌಲ್ಯಮಾಪನ.

೭. ಹೊಬಳಿ ಮಟ್ಟದ ಕೃ ಚಟುವಟಿಕೆಗಳ ಯೋಜನೆ.

೮. ಗ್ರಾಮೀಣ ಮಟ್ಟದಲ್ಲಿ ನೀರು ಮತ್ತು ಮಣ್ಣಿನ ನಿರ್ವಹಣೆ ಬಗ್ಗೆ ತಿಳುವಳಿಕೆ ಮೂಡಿಸುವುದು.