ಐದನೇ ಸಂದು :
ಯಾರು ನೀವು ನಿಮ್ಮ ಹೆಸರೇನಿರುವದು
ಎನಗೆ ತಿಳಿಸಬೇಕಂದಾಳಿನ್ನು
ದೇವಿಯೆ ಎನಗೆ ನೀನ್ಯಾರೆಂದು ಕೇಳುವಿ
ಹೇಳುವೆ ಚಿತ್ತಗೊಟ್ಟು ಕೇಳು ನೀನು ||೧೩೫||
ಗಾಡಿಖೋರರ ಗಂಡ ಭರ್ಮನ ಸತಿ
ಸೂರಾವತಿ ಪುತ್ರಾನೊ
ಮೋಡಿಕಾರರ ಮಿಂಡ ವಿಷ್ಣುವಿನ ಅಳಿಯ
ಪುಂಡ ಪ್ರಚಂಡ ನಾನಿರುವೆನೊ ||೧೩೬||
ಮಾರಹರನ ಸುತನಿರುವೆನು
ಸಿದ್ಧರೇವಣನ ಶಿಷ್ಯನೊ
ಧರುಣಿಯಲ್ಲಿ ಶಿವಶಿದ್ದ ಬೀರ
ನಿನ್ನ ಪ್ರಾಣ ಪದವೆ ನಾನೆಂದಾನೊ ||೧೩೭||
ನಲ್ಲನೆ ಕೇಳು ಬಂಧನದೊಳಿರುವ
ಎನಗೆ ನೀ ಬಂದ ಸುದ್ದಿಯನೊ
ನಿಲ್ಲದೇ ಕೇಳಿ ಶ್ರೀ ಕೃಷ್ಣನು ನಿನ್ನನು
ಕೊಲ್ಲುವನೊ ಪಾರಾಗೊ ನೀನು ||೧೩೮||
ಕಾಂತೆ ಕೇಳು ಭೂಕಾಂತರೆಲ್ಲರು
ಬಂದರೆ ನಾ ಕೊಲ್ಲುವೆನೊ
ಚಿಂತೆ ಬಿಡು ನಿನ್ನೊಯ್ಯಲು ನಾ
ಬೇಕಂತೆ ಬಂದೆ ಸಿದ್ಧಳಾಗು ನೀನು ||೩೯||
ಓಡಿಸಿ ಆತನ ಮಗಳನ್ನು ಕರಕೊಂಡು
ಬಾಯೆಂದು ತಾನು ಹೋದಾನೊ
ಆಗ ಬೀರೇಶನು ಕದರಿ ರಾಹುತನ
ವೇಷ ಹಾಕಿ ಅಲ್ಲಿಗೆ ಹೋದಾನೊ ||೧೪೬||
ಬೇಗ ಭಟರ ಕೂಡಿ ಹರಿಯ ಸಭೆಗೆ ಹೋಗಿ
ಕೃಷ್ಣಗ ವಂದಿಸಿ ನಿಂತಾನೊ
ಮೀರಿದ ಕುದುರೆ ಏರಬಲ್ಲೆನು
ರಿಷುಗಳ ಯುದ್ಧದಿ ಗೆಲ್ಲುವೆನೊ ||೧೪೭||
ಶೂರನು ನಾನು ನಿಮ್ಮ ಬಳಿಯಲ್ಲಿ ಇರಲು
ಬಂದೆನೆಂದು ಹೇಳಿದನೊ
ಆಗ ಕೃಷ್ಣ ಇವನಾಕಾರ ನೋಡಿ
ನಮ್ಮಲ್ಲಿರು ಎಂದು ಹೇಳಿದನೊ ||೧೪೮||
ಚಾರಕರಿಂದ ಕುದುರೆಯ ತರಿಸಿ
ಇವನ ಮುಂದೆ ತಂದು ನಿಲ್ಲಿಸಿದನೊ
ಕುದುರೆಯು ಇವನನ್ನು ಕಂಡಕೂಡಲೇ
ಹೂಂಕರಿಸಿ ಒದರಿತಿನ್ನು
ಆಗ ಕರದಿ ಲಗಾಮು ತಕ್ಕೊಂಡು
ಕುದುರೆಯ ಮೇಲೆ ತಾನೇರಿದನೊ
ಹೋಗುತ ಕುದುರೆಯ ಅಂತಃರಿಕ್ಷಕೆ
ಕಾಮಾಲಿನಿ ಬಳಿಯಲಿ ಬಂದಾನೊ ||೧೫೦||
ಬೇಗ ಕಾಮಾಲಿನಿ ಪಿಡಿದೆತ್ತಿ
ಮುಂದೆ ಕೂಡ್ರಿಸಿಕೊಂಡು ತಾ ಬಂದಾನೊ
ಆಗ ಕೃಷ್ಣನ ಹತ್ತಿರ ಬಂದು
ಚನ್ನಾಗಿ ಅವನಿಗೆ ಹೇಳಿದನು ||೧೫೧||
ಇಂದು ಸಮಯದಿ ಎದುರಿಗೆ ನಿಂತವರ
ಗಂಡ ರಿಪುಗಳ ಮಿಂಡ ನಾನೊ
ಗಂಡುಗಲಿ ಭರ್ಮದೇವರ ಸತಿ
ಸೂರಾವತಿಯ ಮಗ ನಾನೊ ||೧೫೨||
ಎಲೋ ಕೃಷ್ಣನೇ ನಿನ್ನ ಮಗಳನ್ನು
ಎತ್ತಿಕೊಂಡು ಹೋಗುವೆ ನಾನೊ
ನೋಡಿ ಕೃಷ್ಣ ಪುಂಡರನ್ನು ಇವನನ್ನು
ಹಿಡಿಯಲು ಕಳಿಸಿದನೊ ||೧೫೩||
ಪುಂಡರು ಬಂದು ಶಿದ್ಧಗೆ ಹೇಳ್ಯಾರೊ
ಕಾಮಾಲಿಗೆ ಇಳಿಸಿಬಿಡೊ ನೀನು
ಕಾಮಾಲಿ ಕರಕೊಂಡು ಎಲ್ಲಿಗೆ ಹೋಗುವಿ
ಕೊಲ್ಲದೆ ಬಿಡೋದಿಲ್ಲ ನಿನ್ನನು ||೧೫೪||
ಪುಂಡರೆ ನಿಮ್ಮ ಮಾತಿಗೆಂಜುವವ ನಾನಲ್ಲ
ಕೊಲ್ಲುವೆ ನಿಮ್ಮೊಬ್ಬಬ್ಬರನು
ಚೆಂಡು ಹಾರಿಸುವೆ ಯಾಕೆ ಪ್ರಾಣವನು
ಕಳಕೊಳ್ಳುವಿರಿ ಹೋಗೆಂದಾನೊ ||೧೫೫||
ಕ್ರೂರ ಪುಂಡರು ಬೀರೇಶನ ಮೇಲೆ
ಹೊಡೆಯಲಿಕ್ಕೆ ಹೋದಾರಿನ್ನೊ
ಹರಹರನೋ ನನ್ನ ಕರಿಯದೇವರು
ಅಲ್ಲಿ ಏನು ಕಾರುಣ ಮಾಡ್ಯಾನು ||೧೫೬||
ಹೊಡಿಯಲಿಕ್ಕೆ ಬಂದ ಪುಂಡರ ಮೇಲೆ
ಅಂತರಲೆ ಕುದರಿ ಹಾರಿಸ್ಯಾನೊ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದು ಒಂದು ಸಂದೇಳೊ
ದೇವಾರು ಬಂದಾವು ಬನ್ನಿರೇs sss ||೧೫೭||
ಆರನೇ ಸಂದು :
ಪುಂಡರು ಇವನ ಮಹಿಮೆಯ ನೋಡಿ
ಹರಿಯ ಬಳಿಗೆ ಬಂದಾರಿನ್ನೋ
ಚಿಂತೆ ಮಾಡುತ ವೈಕುಂಠ ಪುರದೊಳು
ವಸನದಿ ಹರಿಯು ಕುಳಿತಿದ್ದಾನು ||೧೫೮||
ಆಗ ಬೀರೇಶನು ಹರುಷದಿಂದಲಿ
ಬೆಳ್ಳಿಗುತ್ತಿಗೆ ಬಂದಾನೊ
ಬೆಳ್ಳಿಗುತ್ತಿಯೊಳು ಅಕ್ಕ ಮಾಯವ್ವನ
ಪಾದಕ ಕಾಮಾಲಿ ಯರಿಗ್ಯಾಳಿನ್ನೂ ||೧೫೯||
ಬೆಳ್ಳಿಗುತ್ತಿಯಲಿ ಶಿದ್ಧಬಿರೈಯನು
ನಿತ್ಯದಿ ಶಿವಧ್ಯಾನ ಮಾಡುವನೊ
ಅದೇ ಊರಲ್ಲಿ ಹೇಮಣ್ಣನ ಮಗ
ಸಾಯಲಾ ಆಗ ಆ ಮಗನನ್ನೊ ||೧೬೦||
ಮೋಸದಿಂದಲಿ ಬೀರೇಶನ ಹತ್ತರ
ತಂದರು ಸತ್ತಮಗನನ್ನು
ಸಾನುರಾಗದಿ ಭಸ್ಮವ ಧರಿಸಿ
ಸತ್ತಮಗನ ಪ್ರಾಣ ಪಡಿದಾನೊ ||೧೬೧||
ಹೇಮಣ್ಣಾಗ ಹಿಂದೆ ನನ್ನ ಮಗಾ
ಹೋಮಣ್ಣನ ನಿಮಗೆ ಕೊಟ್ಟಿದ್ದೆನೊ
ಇನ್ನೊಬ್ಬ ಮಗ ಮಳಮಲ್ಲನನ್ನು
ಕೊಡುವೆನೆಂದು ಪಾದಕ ಹಾಕಿದನು ||೧೬೨||
ಮರುದಿವಸ ಕುಡುವಕ್ಕಲಿಗರ ಮಗ
ಮುದ್ದಣ್ಣನು ತಂದಾನೊ
ತತ್ತರಿಸುತ ಬೀರೇಶನ ಹತ್ತಿರ ತರಲು
ಪ್ರಾಣವನು ಪಡಿದಾನೊ ||೧೬೩||
ಶಿದ್ಧಬೀರನ ಸೇವೆ ಮಾಡಲಿಕ್ಕೆ
ಇಬ್ಬರು ಮಕ್ಕಳ ಕೊಟ್ಟಾರಿನ್ನೊ
ದಿನಾ ನಿತ್ಯದಿ ಇಬ್ಬರು ಶಿದ್ಧನ ಸೇವಾ
ಮಾಡುತಲಿದ್ದಾರಿನ್ನೂ ||೧೬೪||
ಇಬ್ಬರು ಸೇವಕರು ಸೇವಾ
ಮಾಡೂದ ಬಿಟ್ಟು ಓಡಿ ಹೋದಾರಿನ್ನೊ
ಹರಹರನೋ ನನ ಕರಿಯ ಶಿದ್ದನು
ಬಹಳ ಚಿಂತಿಯೊಳಗಾದಾನೊ ||೧೬೫||
ಆಗ ಸೇವಕರ ಎಲ್ಲಿ ಹುಡುಕಲೆಂದು
ಕೈಲಾಸಕ ತೆರಳಿದನೊ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದುವೆಂದು ಸಂದೇಳೊ ||೧೬೬||
ಸಂದಿನ ಪದಗಳ ವಂದಿಸಿ ಹೇಳುವೆ
ತಂದಿ ಕರಿಯ ಶಿದ್ದಾನೊ
ದೇವಾರು ಬಂದಾವು ಬನ್ನೀರೇssss ||೧೬೭||
ವೀರಗೊಲ್ಲಾಳ
ರುದ್ರ ಭಾರತ ಬ್ರಹ್ಮಾಂಡ ಪುರಾಣದೊಳು
ಇದ್ದ ಸಂಗತಿ ನಾ ತಿಳಿಸುವೆನು ||೧||
ಈರ ಬೀರನೆಂಬ ಸಾರುವ ಶೃತಿಗಳು
ವೀರಗೊಲ್ಲಾಳನ ಮಹಿಮೆಯನ ||೨||
ತೋರಿಕೆಯಲ್ಲಿ ತನ್ನ ತಾರುಮಂಡಲದಂತೆ
ಕೋರು ದೈತ್ಯರ ಕುಲ ಅಳಿಯವನು ||೩||
ಸಾನಂದ ಋಷಿಗಳು ಆನದಿಂದಮ
ಕೈಲಾಸ ಹೋಗಿದ್ದು ಮರೆತಿರಲು ||೪||
ಅಷ್ಟರೊಳಗ ಒಬ್ಬ ಸಾಹುಕಾರನು ಪೋಗಿ
ಕಾಶಿ ವಿಸ್ತಾರ ನೋಡಿ ಬರುತಿರಲು ||೫||
ಅಷ್ಟರೊಳಗ ಒಬ್ಬ ಸಾಹುಕಾರನು ಪೋಗಿ
ಕಾಶಿ ವಿಸ್ತಾರ ನೋಡಿ ಬರುತಿರಲು ||೬||
ಮದ ಹೆಚ್ಚಿ ಮನಸ್ಸಿಗೆ ಬಂದಂತೆ ನಡೆಯಲು
ಬೆನ್ನ ಬಿದ್ದ ತಾ ಲಿಂಗಕೆ ಪೋಗುವನು ||೭||
ಮನಗಂಡ ಮಾರ್ಗದೊಳು ಲಿಂಗಬರುವುದೆಂದು
ಅಂಗಾಸಿಗೊಂಡ ಅವ ಇರತಿಯೇನು ||೮||
ಬರುತ್ತಿದ್ದ ಜಂಗಮ ಎದೆ ಒಡೆದು ಎರಡಾಗಿ
ಹದಡದತ ಕುರಿ ಹಿಕ್ಕಿ ಪಿಡಿದಿದ್ದನು ||೯||
ಆಗು ಆಗಂದ ಈಶ್ವರನಾ ತನ್ನ ಕರುಣದಿ
ಕುರಿಯ ಹಿಕ್ಕಿಯ ಲಿಂಗವ ಮಾಡಿದನು ||೧೦||
ತುಸು ಮಾತ್ರ ಸಂಶೆ ಹಿಡಿಯದ ಮನದೊಳು
ಹೊಸ ವಸ್ತ್ರದೊಳು ಲಿಂಗ ಪೂಜೆಯೇನ ||೧೧||
ಪಂಚಮಾಂಬ ಬೂದಿಯೊಳು ಪ್ರಭುರಾಯ ಬರುವಾಗ
ಸ್ವಚ್ಛಾತ ಮನದಿಂದ ಇರುತಿಯೇನು ||೧೨||
ಅಚ್ಚ ಕುರಿಹಾಲು ನಿತ್ಯಾದಿ ನೈವೇದ್ಯ
ಅಚ್ಚುತ ಆ ಕುನಿಗೆ ಉಣಿಸುವೆನು ||೧೩||
ಮನೆಯೊಳು ಕಾವಡಿ ಹಾಲಿನ ಕೂಡಗಳು
ಬರುತಿರಲು ಒಂದಿನ ಕಾಣಿಸಿತು ||೧೪||
ಪಿತಮಾತೆ ಮನೆಯೊಳು ಸಂತನಿಗೆ
ಎಲ್ಲ ಬುದ್ಧಿ ಕೆಟ್ಟವನ್ನತ ಮನಕಂಬವನು ||೧೫||
ಬೆಳಗ ಮುಂಜೇಲೆ ಎದ್ದು ಕುರಿ ಹಿಂಡಿಗೆ ಬಂದ
ಜಳ ಜಳ ಜಾಗಿತ ನೋಡಿದನು ||೧೬||
ತಂದೆ ತಾಯಿ ನಿನೇ ಬಂಧು ಬಳಗ ನಿನೇ
ಇಂದಿಗೆ ಕುಲಸ್ವಾಮಿ ದೊರಕಿದನು ||೧೭||
ಎಂದಿಗೆ ಹಸಿವು ಇಂಗಿತ ಈ ಲಿಂಗಕ್ಕೆ
ತಂದು ಅರ್ಪಿಸ ಹಾಲು ಎರೆಯುವೆನು ||೧೮||
ಹರುಷಾದಿ ಸ್ವಾಮಿಗೆ ಸರಸದಿ ಹಾಲಿನ
ಕೊಡಗಳ ಎತ್ತಿ ತಾ ಎರೆಯುವನು ||೧೯||
ನಿಂತು ನಿಂತು ನೋಡಲು ಆ ಕ್ಷಣದಲ್ಲೇ
ತಂದಿ ಭ್ರಾಂತಿ ಮುಸಗಿ ಕಾಲಿಲೇ ಒದೆಯುವನು ||೨೦||
ಸತ್ತ ಶರಣರ ಶಿವಲಿಂಗವ ಕೆಡಿಸಿದನೆಂದು
ಮೃತಸ್ಥಾನದ ಕೊಡಲಿ ಎತ್ತಿದನು ||೨೧||
ಶಿರಸವು ಭೂಮಿಗೆ ಬೀಳಲು
ಭಕ್ತಿ ಭಾವ ಕೆಟ್ಟಿಲ್ಲಂತ ಹೇಳಿದನು ||೨೨||
ಅರಿಯದ ತಂದೆ ಶಿರವ ಕಡಿದು ಬಂದು
ಲಿಂಗದ ಸೇವಕ ನಿಂತಿರಲು ||೨೩||
ಆ ಕ್ಷಣದಲೇ ಎರಗಿ ಜಾಗಲಕ ಬರಲು
ಚಂಡನ ಶಿರ ನೋಡಿದನು ||೨೪||
ಮೆಚ್ಚಿದೆ ಏಳು ನಿನ್ನ ಭಕ್ತಿಗೆ ಬಂದೆನು
ಹೆಚ್ಚಿನ ಮುಕ್ತಿ ಬೇಡಂದಾನು ||೨೫||
ಮೆಚ್ಚಿದ್ದರ ಎನ್ನ ತಂದಿಯ ಬದಕಿಸು
ಪಂಚಮುಖ ನಂದಿಯ ತೋರಂದನು ||೨೬||
ಮೂಡರಾಯ ತನ್ನೋಳು ಉಡುಗರೆಸಾಯುತವಾಗಿ
ತೊಡೆಯಲ್ಲಿ ಪಾರ್ವತಿ ಕುಳಿತಿರಲು ||೨೭||
ಮುಡಿಯಲ್ಲಿ ಗಂಗೀ ಒಡೆಯ ಶ್ರೀಋಷಿ ಬಾ
ಪಿಡಿದು ಗಣರಾಜನ ಎತ್ತಿದಳು ||೨೮||
ನಂದಿ ಗಣಪ ಮುಕುಂದ ಪ್ರಮತಗಳು
ಬಂದಿಳಿದಾರು ಆನಂದದಲೇ ||೨೯||
ತಂದಿ ಶಿವನು ತನ್ನ ನಿಜರೂಪ ತೋರಿದರ
ಬಿದ್ದದು ಶ್ರವ ಎದ್ದು ಕುಳ್ಳಿರವದು ||೩೦||
ಶಿವರಾಯ ನಿಮ್ಮ ಪಾದಕ ಎರಗುವೆನು
ತವಕದಿ ಕೈಲಾಸಕೆ ಹೊಯೆಂದಾನು ||೩೧||
ಹೂಮಾಲೆ ಅರಿನ್ಯಾಳೋ ದೋ ಮಾಲೆ ಧರಿಸ್ಯಾನೇಳೊ
ಹುಬಯೇರ ಗಿರಿಗೆ ಏರ ಅಂದಾನೂ ||೩೨||
ಚಂಗ ಬಾಲನೆಂದು ಸಂಗನ ಶರಣರು
ಹೂಮಳೆ ಗರಿಚಾರು ತುರ್ತಿಲೆ ||೩೩||
ಲಿಂಗ ಫಲದಿಂದ ಅಂಗ ಪಾವನಾದ
ಮಂಗಳ ಚರಕ ಸೇರಿಯಾನು ||೩೪||
ದೇಶ ದೇಶಕ ಹೆಸರಾದ ಶಿರಪುರ
ಈಶನ ದಯದಿಂದ ಸಾರುವೆವು ||೩೫||
ದೋಶರ ಹಿತ ಕುಲ ದೇಶ ಗೆದೇನೆ
ಭಾಷೆಗೆ ಮುಂದಾಗಿ ಸಾರುವೆವು ||೩೬||
ಭಾಷೆಗೆ ಮುಂದಾಗಿ ಸಾರುವೆವು
ನಮ್ಮ ವೀರಗೊಲ್ಲಾಳನ ಚರಿತ್ರೆಯನ್ನು ||೩೭||
ರುದ್ರ ಭಾರತ ಬ್ರಹ್ಮಾಂಡ ಪುರಾಣದೊಳು
ಇದ್ದ ಸಂಗತಿ ನಾ ತಿಳಿಸುವೆನು ||೩೮||
ಸೈನ್ಯದೇವನ ಪದಾ
ಸೈನ್ಯದೇವನು ದ್ರೌಪದಿಯ ವಹಿಸಿದನು
ನಾ ವಿಸ್ತಾರ ಮಾಡಿ ಹೇಳುವೆನು ||೧||
ವಿಸ್ತಾರ ಮಾಡಿ ನಾ ಹೇಳುವೆನು
ಸರ್ವರೂ ಕೇಳರಿ ನೀವು ಇದನ್ನು ||೨||
ಮಧ್ಯ ಮಾರ್ಗದಲ್ಲಿ ಮದ್ಯ ಪಾಂಡವರು
ಯುದ್ಧ ಮಾಡಿ ತಂದರು ದ್ರೌಪದಿಯನ್ನು ||೩||
ಕೌರವರಾಜ ಕಾಶೀಯಾತ್ರೆಗೋಸ್ಕರವಾಗಿ
ಹೊರಟನು ನಿಶ್ಚಯಿಸಿ
ತಮ್ಮ ಸೈನ್ಯ ಸಿದ್ಧವನು ಏರೈಸಿ ||೪||
ಶೀಘ್ರದಲಿ ಹೊರಟನು ಮನದೊಳ ಕುಸಿ
ಚದುರಂಗ ಬಲ ಸಾಯಿತದಲಿ ಹೊರಟರು ||೫||
ವಾದ್ಯಗಳ ಘೊಳಡಿಸಿ ಆನೆ ಕುದುರೆ
ದಂಡು ಸಹಿತವಾಗಿ ಆರ್ಭಟಿಸುವರು ||೬||
ಮಾವುತರು ಚಿನಕಾಳಿ ಹೆಗ್ಗಾಳಿ
ಮುಂದ ಹಿಡಿಸಿದರು ಬರರರರರss ||೭||
ಮುಂದ ಹಿಡಸಿದ ಬರರss
ಹಿಂಗ ಸಾರಿದರು ಆರ್ಭಟರು ||೮||
ಅವನ ಆರ್ಭಟಕ ಭೂಮಿ ಬಿಚ್ಚಿ ತೆಗೆಯಿತು
ಆಗ ಬಿಚ್ಚಿ ಬಾಯಿ ತೆಗೆಯಿತು ||೯||
ಆಗ ಆದಿ ಶೇಷನ ಶಿರಕುಸಿತಿತ್ತು ಬ್ಯಾಗ
ಸೈನ್ಯ ಅಡಗಳಿಗೆ ಭೂಮಿ ಆಕಾಶದಂಗ ಹೆಳತೆವಿ ಈಗ ||೧೦||
ಬೇಗದಿಂದ ಹೋದಾರು ಕಾಶಿಗೆ
ಡೇರೆ ಹೊಡೆದರು ನದಿ ದಂಡೇಲಿ ||೧೧||
ನಮಸ್ಕಾರ ಈಶ್ವರನಾಥನಿಗೆ ಮಾಡಿದರು
ಹರಸಾ ಮನದಾಗ ಪೂಜೆ ಮಾಡಿಸಿದರು ||೧೨||
ಲಗು ಬೇಗ ತಿರುಗಿ ಬಂದರು ಮದ್ಯ ಮಾರ್ಗದಲಿ
ಮದ್ಯ ಪಾಂಡವರು ಯುದ್ಧಮಾಡಿ
ತಂದರು ದ್ರೌಪದಿಯ ||೧೩||
ಇಲ್ಲಿ ಇಂದ್ರವನವ ಕಂಡು
ಒಬ್ಬ ಹೊರಟ ಕೌರವ ತಾನು ||೧೪||
ವನ ಕಂಡು ಮನಸ್ಸಿಗೆ ಅಂದಾನು
ಪುಷ್ಪವನು ಕಂಡು ತಾ ಹಿಗ್ಯಾನು ||೧೫||
ವನದೊಳಗೆ ಇರುವ ಫಲಗಳನ್ನೆಲ್ಲ
ಆಜ್ಞೆ ಇಲ್ಲದೆ ಹರಕೊಂಡಾನು ||೧೬||
ಚಿತ್ರಸೇನ ಬಂದು ಅವನು ನಾಗ ಪಾಶದಿ
ಬಂಧನ ಮಾಡಿದನು ||೧೭||
ಸೆರೆಯಲ್ಲಿ ಸಿಕ್ಕು ಒದ್ದಾಡಿದನು
ಸೂಜಣದಿಂದ ಗೌಳಿ ತಿಳಿಸಿದಳು ||೧೮||
ವನದೊಳಗೆ ಇರುವ ಧರ್ಮಯ್ಯನನ್ನು
ಬಿಡಿಸಿತಾನು ಇಂದಿನ ದಿನ ನಿನ್ನ ಹಿಡಿದು ||೧೯||
ಬಾಣದಿಂದ ತಡೆದು ಕೇಳತಾನ
ಬಿಡರೀ ಅಣ್ಣ ಕೌರಯ್ಯನನ್ನು ||೨೦||
ಬಿಡದಿದ್ದರೆ ಕೊಡರೀ ನಮಗೆ ಯುದ್ಧವನು
ತಡೆಯಲಾರದೆ ಓಡಿ ಹೋದನಾಗ ಬಿಚ್ಚಲಿಕ್ಕೆ ||೨೧||
ಹೋದ ಫಾಲ್ಗುಣನಾಗ ಬಿಚ್ಚಲಿಲ್ಲ ಪಾಶಿ ಪಾರ್ಥನಿಗೆ
ತೊಕ್ಕಂಡು ಬಂದನು ಅಲ್ಲಿಂದ ||೨೨||
ಒಪ್ಪಿಸಿದ ಅಲ್ಲಿ ಅಣ್ಣ ಧರ್ಮಯ್ಯನಿಗೆ
ಧರ್ಮರಾಯ ಬಿಚ್ಚಂತೆ ಹೇಳಿದನು ||೨೩||
ಫಾಲ್ಗುಣನು ಬಿಚ್ಚುವಲ್ಲದು ಎಂದಾನು
ಇದ ನೋಡಿ ಧರ್ಮಜ ಅಂದಾನು ||೨೪||
ದ್ರೌಪದಿಯ ಕರಸಿದರು ಆ ಕ್ಷಣಕ
ದ್ರೌಪದಿಯ ಕರೆಯಲು
ನಗುತಲಿ ಬಂದು ಎಡಗಾಲಿನ ಚರಣ
ಅಂಗುಷ್ಠದಲ್ಲಿ ||೨೫||
ಬಿಚ್ಚಿದಳು ಆಶೆತನ ಮಾಡುತಲಿ
ಹಟ ಇಟ್ಟ ಕೌರವ ಮನಸ್ಸಿನಲಿ ||೨೬||
ವಿಷಾ ಇಟ್ಟ ಕೌರವರಾಜ ತಳಲಿಪೊದ
ತನ್ನ ಪಟ್ಟಣಕೂ ಹರನಗಳೆಯಲಾರೆ
ಎಂದ ಕೌರವ ||೨೭||
ಹೋದ ನದಿಯ ದಡದಲ್ಲಿ
ನದಿಯ ದಡದಲ್ಲಿ ಪ್ರಾಣಕೊಡುವೆ ತತ್ಕಾಲದಲಿ ||೨೮||
ಈ ವಾರ್ತೆ ಸೈಂದವನು ಕೇಳುತಲಿ
ತಡಮಾಡದೆ ಬಂದನು ಓಡುತಲಿ ||೨೯||
ಯಾಕೆ ಹೇಳಿ ನೀವು ಇಂದಿನಲ್ಲಿ
ಪ್ರಾಣ ಕೊಡತೆನಂತ ಬಂದೆನಿಲ್ಲಿ ||೩೦||
ಅಪಮಾನ ಆದದ್ದು ಎಲ್ಲ ಆಮ್ಯಾಗ
ಹೇಳಿದನು ಸರ್ವ ಉಳಿದಂಗ ||೩೧||
ಇದರ ಚಿಂತಿ ಬಿಡರೀ ನೀವು
ಈಗ ತರುವೆನು ಒಂದು ಗಳಿಗ್ಯಾಗ ||೩೨||
ದ್ರೌಪದಿಯ ಚಿಂತಿ ನಿಮಗ್ಯಾಕೆ
ತಂದು ಕುಂದರಿಸುವೆ ಎಡ ತೊಡಿಮ್ಯಾಕ ||೩೩||
ಇಷ್ಟು ಧೈರ್ಯ ಸೈನ್ಯದೇವ
ಕೌರವಗ ಹೇಳಿ ಹೊರಟ ವನಕ ತಾನು ||೩೪||
ಪಾಂಡವರು ಹೋಗಿದ್ದಾರು ಬೇಟೆಯನಾಡಕ
ಮಡಿಯ ಹಿಡಿಯಿರಿ ||೩೫||
ದ್ರೌಪದಿಯ ನೀನಂತ
ಬಡತನ ನೋಡಿ ನಾ ಬಂದೆನು ||೩೬||
ಗಂಡರಿಲ್ಲದ ಯ್ಯಾಳೆದಲ್ಲಿ
ತಕ್ಕೊಳದಿಲ್ಲ ಈ ಮಡಯಿನ್ನು ||೩೭||
ಇನ್ನು ತಾಸಿಗೆ ಐವರು ಬರುವರು
ಭಿನ್ನಹ ಇಲ್ಲವೇ ತಕ್ಕೊಳ್ಳುವೇ ನಾನು ||೩೮||
ಇಷ್ಟು ಮಾತು ಕೇಳಿದನು ಎಲ್ಲಾ
ತಡಕೋಪದಿಂದ ಎದ್ದಾನು ಕೈ ಹಿಡಿದು ||೩೯||
ಜೋಲಿಯಾ ಹೊಡಿದಾನು ಮುಡಿಯನ್ನು ಹಿಡಿದು
ಎಳೆದಾನು ಬೇಡ ಯಣ್ಣಾ ಯಾಕ ಇಂತಾದು ||೪೦||
ಭೀಮ ಕೇಳಿ ಬಡಿದು ಚಲ್ಲಾನು
ಮತ್ತೆ ಸೈಂದವ ಎತ್ತಿ ದ್ರೌಪದಿ ||೪೧||
ಚಿತ್ರದ ರಥದೊಳಗೆ ಕುಂಡರಿಸಿದನು
ಕುದುರೆ ಜಡಿಸಿ ರಥಕೆ ಮುಂದಕೆ ಹಾರಿಸಿದನು ||೪೨||
ಬೇಟೆ ಆಡುವದೊಳಗ ಪಾಂಡವರಿಗೆ
ವನದ ಕಡೆ ಹೋತು ದ್ಯಾಸವನು ||೪೩||
ವನದಕಡೆ ಹೋತು ದ್ಯಾಸವನು
ಈ ಸುದ್ದಿ ಭೀಮಸೇನ ಕೇಳುವನು ||೪೪||
ರಥ ಹೊಡಿಯತೀದಿ ಯತ ಮೂಳಿ
ಪರಿಹರಿಸುವೆ ನಿನ್ನ ಐಯ್ಯದೊಳಿ ||೪೫||
ರಥ ತಂದ ತಿರುಗಿ ಹೊಡ ಮರಳಿ
ಒಪ್ಪಿಸಿದ ಅಣ್ಣಗ ಹೇಳಿ ಕೇಳಿ ||೪೬||
ಮದ್ಯ ಮಾರ್ಗದಿ ಯುದ್ಧ ಮಾಡಿ
ತಂದರು ದ್ರೌಪದಿಯನ್ನು ||೪೭||
ಸೈನ್ಯದೇವನು ದ್ರೌಪದಿಯು ವಹಿಸಿದನು
ನಾ ವಿಸ್ತಾರ ಮಾಡಿ ತಿಳಿಸುವೆನು ||೪೮||
Leave A Comment