ಈಗ ಲಿಂಗದೇವ ಶಿವನು || ಪಲ್ಲವಿ ||
ಆತ ರಂಗಧಾಮ ವಿಷ್ಣು
ಮಾತನಾಡೋ ಮಂಕು ಮನುಜ
ಮನದ ಅಹಂಕಾರವನು ಬಿಟ್ಟು |

ಆದಯಗೊಲಿದ ಅಭವನೀತ
ಮಾಧವ ಮಧುಸೂಧನನೀತ
ಮದನ ನುರಿಹಿದಾತನೀತ
ಮದನ ಸುತನ ತಂದನಾಥ
ವೇದಕೆ ನಿಲ್ಕಿದಾತ ನೀತ
ವೇದ ನಾಲ್ಕನು ತಂದ ನಾಥ
ಬೂದಿ ಮೈಯ ಪೊತ್ತ ನೀತ
ಪೊದ ಗಿರಿಯ ಪೊತ್ತನಾಥ || ಈತ ||

ಗಂಗೆ ಪೊತ್ತ ತಾ ನೀತ
ಗರುಡ ವಾಹನ ನೇರಿದ ನಾಥ
ತುಂಗ ಎಳವನ ಕಟ್ಟೆಯ
ರಂಗನಾಥ ಲಿಂಗ ನೀತ ||