ಆನಂದ ಪುರದ ಅರಳಿ ಕಟ್ಟೆಯ ಮ್ಯಾನೆ
ಏನಂದ ಮಾವಯ್ಯ ನಿನ ಮಗ ಬಾಲಯ್ಯ
ಆನಂದ ಪುರವೇ ಅವನಿಗೆ
ಆನಂದ ಪುರವೇ ಆವನಿಗೆ ಕೊಟ್ಟಿರು ಮ್ಯಾನೆ
ನಿನ್ನಳಿಯ ಕಂದಯ್ಯಬಿಡುವಾನೆ
ಅಳಿಯ ಕಂದಯ್ಯ ಬಿಡದಿದ್ದ ಕಾಲಕ್ಕೆ
ನಾನಳೂ ರಾಜು ಅವನಿಗೆ
ನೀನಾಳು ರಾಜು ಅವನಿಗೆ ಕೊಟ್ಟೀರ ಮ್ಯಾನೆ
ಸೊಸಿಯೆ ತಂಗ್ಯಮ್ಮ ಬಿಡುವಾಳೆ
ಸೊಸಿಯೇ ತಂಗ್ಯಮ್ಮ ಬಿಡುವಾಳೆ
ಸೊಸಿಯೇ ತಂಗ್ಯಮ್ಮ ಬಿಡದಿದ್ದ ಕಾಲಕ್ಕೆ
ನಡುವಿನ ನ್ಯಾಗಳವೇ ಅವಳಿಗೆ