ಒಂದು  ಎಂದರೇನೇ ಜಾಣೆ ಕನ್ನಡವ ತಿಳಿದ್ಹೇಳೆ
ಒಂದು ಒಂದ್ ಎಂದೀರೆ ಅಡಿಕೆ ಕಣ್ಣಲ್ಲವೇನೆ
ಇನ್ನೇನು ಹೇಳಲಿ ಅರ್ಥವ
ಎರಡು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಎರಡು ಎರಡೆಂದರೆ ಗರುಡ ಪಕ್ಷಿಗಳಲ್ದ
ಇನ್ನೇನು ಹೇಳಲಿ ಅರ್ಥವ          
ಮೂರು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಮೂರು ಮೂರೆಂದರೆ ಕಾಯಿ ಕಣ್ಣಲ್ಲವೇ
ಇನ್ನೇಣು ಹೇಳಲಿ ಅರ್ಥವ
ನಾಲ್ಕು ಎಂದರೆ ಆಕಳ ಮಲಿಯಲ್ದಾ
ಇನ್ನೇನು ಹೇಳಲಿ ಅರ್ಥವ
ಐದು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಐದು ಐದೆಂದರೆ ಕೈ ಬೆರಳಲ್ಲವೇ
ಇನ್ನೇನು ಹೇಳಲಿ ಅರ್ಥವ
ಆರು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಆರು ಆರೆಂದರೆ ಕೊಳಲ ಕಣ್ಣಲ್ಲವೇನೆ
ಇನ್ನೇನು ಹೇಳಲಿ ಅರ್ಥವ
ಏಳು ಏಳೆಂದರೆ ಎಳೆ ನಾಗನಮರಿಯಲ್ದ
ಇನ್ನೇಣು ಹೇಳಲಿ ಅರ್ಥವ
ಎಂಟು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಎಂಟು ಎಂಟೆಂದರೆ ಗಂಟೆಯ ಮಣಿಯಲ್ದಾ
ಇನ್ನೇನು ಹೇಳಲಿ ಅರ್ಥವ
ಒಂಭತ್ತು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಒಂಭತ್ತು ಒಂಭತ್ತೆಂದರೆ ತುಂಬಿದ ಬಸ್ರಿಯಲ್ದಾ
ಇನ್ನೇನು ಹೇಳಳಿ ಅರ್ಥವ
ಹತ್ತು ಎಂದರೇನೆ ಜಾಣೆ ಕನ್ನಡವ ತಿಳಿದ್ಹೇಳೆ
ಹತ್ತು ಹತ್ತೆಂದರೆ ಹೊತ್ತಿನ ನೆರಳಲ್ದಾ
ಇನ್ನೇನು ಹೇಳಲಿ ಅರ್ಥವ….,